ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಾವು ಆರೋಗ್ಯವಾಗಿ ಇರಬೇಕೆಂದರೆ ಪೋಷಕಾಂಶಗಳುಳ್ಳ ವಿಟಮಿನ್ಸ್ ಖನಿಜಗಳುಳ್ಳ ಆಹಾರಗಳನ್ನು ಸೇವನೆ ಮಾಡುವುದು ಬಹಳ ಅವಶ್ಯಕವಾಗಿರುತ್ತದೆ. ಅದರಲ್ಲಿ ವಿವಿಧ ಬಗೆಯ ವಿಟಮಿನ್ಸ್ ಗಳು ನಮ್ಮ ದೇಹಕ್ಕೆ ಬೇಕೆ ಬೇಕಾಗುತ್ತದೆ. ಸರಿಯಾದ ವಿಟಮಿನ್ಸ್ ಗಳು ನಮ್ಮ ದೇಹಕ್ಕೆ ಸಿಗದೇ ಹೋದಲ್ಲಿ ನಾವು ಅಶಕ್ತರು ಆಗುತ್ತೇವೆ ಬಲಹೀನರು ಆಗುತ್ತೇವೆ. ಅದರಲ್ಲಿ ವಿಟಮಿನ್ ಎ ಕೂಡ ಒಂದಾಗಿದೆ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ವಿಟಮಿನ್ ಎ ಯಾವೆಲ್ಲ ಆಹಾರದಲ್ಲಿ ಸಿಗುತ್ತದೆ ಹಾಗೂ ವಿಟಮಿನ್ ಎ ಕೊರತೆ ಇಂದ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅಂತ ತಿಳಿಯೋಣ ಬನ್ನಿ. ಇಂದಿನ ಆಧುನಿಕ ಕಾಲದಲ್ಲಿ ನಾವು ಸೇವನೆ ಮಾಡುವ ಆಹಾರ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ವಿಟಮಿನ್ ಗಳು ಕೂಡ ಅಷ್ಟೇ ಮುಖ್ಯವಾದ್ದದ್ದು. ಉತ್ತಮವಾದ ಆಹಾರವನ್ನು ಸೇವನೆ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಹೌದು ಕಣ್ಣುಗಳ ದೃಷ್ಟಿ ಕಾಣಬೇಕು ಅಂದ್ರೆ ನಮ್ಮ ದೇಹಕ್ಕೆ ವಿಟಮಿನ್ ಸಿಗಲೇ ಬೇಕು ಗೆಳೆಯರೇ.ಕಣ್ಣಿಗೆ ಸಂಭಂದ ಪಟ್ಟ ಕಾಯಿಲೆಗಳು ಬರದಂತೆ ತಡೆಯುತ್ತದೆ ಹಾಗೂ ಕಣ್ಣಿನ ಸುತ್ತಲೂ ಇರುವ ಸ್ನಾಯುಗಳನ್ನು ಬಲಪಡಿಸುತ್ತದೆ.ವಿಟಮಿನ್ ಎ ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿದೆ. ಮತ್ತು ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ. ಹಾಗೂ ನಮ್ಮ ಮೂಳೆಗಳನ್ನು ಸ್ನಾಯುಗಳನ್ನು ಬಲಪಡಿಸುತ್ತದೆ. ವಿಟಮಿನ್ ಎ ಕಡಿಮೆ ಆದರೆ ಇರುಳು ಅಂದತೆ ಬರುತ್ತದೆ. ಅಂದರೆ ಕಡಿಮೆ ಬೆಳಕಿನಲ್ಲಿ ಏನು ಕಾಣಿಸುವುದಿಲ್ಲ. ಕಣ್ಣಿನಿಂದ ನೀರು ಬರುವುದಿಲ್ಲ. ಕಣ್ಣುಗಳು ಒಣಗುತ್ತವೆ. ಇದೆಲ್ಲವೂ ವಿಟಮಿನ್ ಎ ಕೊರತೆ ಇಂದಾಗೀ ಬರುತ್ತದೆ. ಇನ್ನೂ ಪ್ರತಿ ಗರ್ಭಿಣಿಯರಿಗೆ ತಮ್ಮ ಮಗು ಆರೋಗ್ಯವಾಗಿ ದಷ್ಟ ಪುಷ್ಟವಾಗಿ ಬೆಳೆಯಬೇಕು ಅಂತ ಆಸೆ ಇರುತ್ತದೆ. ಇದಕ್ಕೆ ಕೇವಲ ಆಸೆ ಇದ್ದರೆ ಸಾಲದು ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಬೇಕು ಅವರ ಆರೋಗ್ಯ ಮತ್ತು ಊಟದ ಕಾಳಜಿಯನ್ನು ವಹಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ವೈದ್ಯರು ಹೇಳಿದ ಎಲ್ಲ ಬಗೆಯ ವಿಟಮಿನ್ಸ್ ಗಳ ಮಾತ್ರೆಗಳನ್ನು ಸೇವನೆ ಮಾಡಬೇಕು. ಏಕೆಂದ್ರೆ ಹುಟ್ಟುವ ಮಗುವಿನ ಆರೋಗ್ಯವೂ ಹಾಗೂ ಕಣ್ಣಿನ ದೃಷ್ಟಿ ಚೆನ್ನಾಗಿ ಬೆಳೆಯಬೇಕೆಂದು ವೈದ್ಯರು ವಿಟಮಿನ್ಸ್ ಗಳನ್ನೂ ಹೊಂದಿರುವ ಮಾತ್ರೆಗಳನ್ನು ನೀಡುತ್ತಾರೆ.
ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕ ಆಗಿದೆ. ವಿಟಮಿನ್ ಎ ಯಾವ ಆಹಾರದಲ್ಲಿ ಸಿಗುತ್ತದೆ ಅಂತ ಹೇಳುವುದಾದರೆ ಮಾಂಸಾಹಾರ ಮತ್ತು ಸಸ್ಯಾಹಾರ ಇವೆರಡರಲ್ಲಿ ಸಿಗುತ್ತದೆ. ಮೊದಲನೆಯದು ಸಸ್ಯಾಹಾರದಲ್ಲಿ ಹೇಳುವುದಾದರೆ, ಕ್ಯಾರೆಟ್, ಇದು ಕಣ್ಣಿನ ಆರೋಗ್ಯಕ್ಕೆ ಹಾಗೂ ತ್ವಚೆಯ ರಕ್ಷಣೆಗೆ ಸೂಕ್ತ ಆಹಾರ ಅಂತ ಹೇಳಬಹುದು. ಇನ್ನೂ ಸಿಹಿ ಗೆಣಸು. ಇದರಲ್ಲಿ ಹೇರಳವಾದ ಬೀಟಾ ಕ್ಯಾರೋಟಿನ್ ಇರುವುದರಿಂದ ಕಣ್ಣಿಗೆ ಅವಶ್ಯಕವಾದ ಬೀಟಾ ಕ್ಯಾರೋಟಿನ್ ಈ ಸಿಹಿ ಗೆಣಸು ತಿನ್ನುವುದರ ಮೂಲಕ ದೊರೆಯುತ್ತದೆ. ಜೀವಕೋಶಗಳು ಮತ್ತು ಅಂಗಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ.ಬೆಣ್ಣೆ ಹಣ್ಣಿನಲ್ಲಿ ಕೂಡ ವಿಟಮಿನ್ ಎ ಇದೆ.ಇನ್ನೂ ಎಲ್ಲ ಬಗೆಯ ಹಸಿರು ಸೊಪ್ಪು ಗಳಲ್ಲಿ ವಿಟಮಿನ್ ಎ ಇರುತ್ತದೆ. ಪಾಲಕ್ ಸೊಪ್ಪು ಮೆಂತ್ಯೆ ಸೊಪ್ಪಿನಲ್ಲಿ ನಿಮಗೆ ಬೇಕಾದಷ್ಟು ವಿಟಮಿನ್ ಎ ಸಿಗುತ್ತದೆ. ಖರ್ಬೂಜ ಹಣ್ಣು ಪಪ್ಪಾಯಿ ಬೆಣ್ಣೆ ಹಣ್ಣು ಮಾವಿನ ಹಣ್ಣು ಕುಂಬಳಕಾಯಿ ಸೀಬೆ ಹಣ್ಣು ಕಲ್ಲಂಗಡಿ ಟೊಮ್ಯಾಟೋ ಗೋಡಂಬಿ ಬಾಳೆಹಣ್ಣು ಹಲಸಿನ ಹಣ್ಣು ಎಲ್ಲ ಕೇಸರಿ ಹಳದಿ ಹಣ್ಣಿನಲ್ಲಿ ವಿಟಮಿನ್ ಎ ಅಂಶ ಇರುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಎ ಹೇರಳವಾಗಿ ಅಡಗಿದೆ.