ಬೇಸಿಗೆ ಕಾಲದಲ್ಲಿ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುವುದರಿಂದ ಇಷ್ಟೊಂದು ಲಾಭವೇ????

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಬೇಸಿಗೆ ಕಾಲದಲ್ಲಿ ನಮಗೆ ತಂಪು ತಂಪು ಆಹಾರಗಳು ಪಾನೀಯಗಳು ಹಣ್ಣುಗಳು ಬೇಕಾಗುತ್ತವೆ. ಹಾಗೂ ನಮ್ಮ ದೇಹಕ್ಕೆ ತಂಪು ತಂಪು ಏನಾದ್ರೂ ಬೇಕು ಅನ್ನಿಸುತ್ತದೆ. ಹಳ್ಳಿಗಳಲ್ಲಿ ಜನರು ಬೇಸಿಗೆ ಕಾಲದಲ್ಲಿ ನೆಲದ ಮೇಲೆ ಜಾಪೆಯನ್ನು ಮಲಗುತ್ತಾರೆ. ಪ್ರತಿ ಕಾಲಕ್ಕೆ ಅನುಗುಣವಾಗಿ ನಾವು ಮಲಗಬೇಕು. ಈಗಂತೂ ಜನರು ಪ್ರತಿ ಹನ್ನೆರಡು ತಿಂಗಳು ಕೂಡ ಬೆಡ್ ಮೇಲೆ ಮಲಗುತ್ತಾರೆ. ಚಳಿಗಾಲದಲ್ಲಿ ಮಳೆಗಾಲದಲ್ಲಿ ಬೆಡ್ ಮೇಲೆ ಮಲಗಿ ಕೊಂಡರೆ ಆರೋಗ್ಯಕ್ಕೆ ಹಾಗೂ ದೈಹಿಕವಾಗಿ ಉತ್ತಮ. ಆದರೆ ಬೇಸಿಗೆ ಕಾಲದಲ್ಲಿ ಬೆಡ್ ಮೇಲೆ ಮಲಗುವುದು ಬಹಳ ಕಷ್ಟವಾಗುತ್ತದೆ. ಹಾಗೂ ಉಷ್ಣವು ಕೂಡ ಹೆಚ್ಚುತ್ತದೆ ಮತ್ತು ಅನೇಕ ಬಗೆಯ ಅನಾರೋಗ್ಯದ ಸಮಸ್ಯೆಗಳು ಶುರು ಆಗುತ್ತವೆ. ಕೆಲವರು ಏನು ಮಾಡುತ್ತಾರೆ ಅಂದರೆ ಬೇಸಿಗೆ ಕಾಲದಲ್ಲಿ ಫ್ಯಾನ್ ಎಸಿ ಹಾಕಿಕೊಂಡು ಚೆನ್ನಾಗಿ ಮಲಗಿಕೊಳ್ಳುತ್ತಾರೆ.

 

ಆದರೆ ಅಕ್ಕ ಪಕ್ಕ ಕಿಟಕಿಗಳನ್ನೂ ಮುಚ್ಚಿ ಗಾಳಿಯಾಡದಂತೆ ಮಲಗುತ್ತಾರೆ. ನಮ್ಮ ದೇಹಕ್ಕೆ ಹೊರಗಿನಿಂದ ಗಾಳಿ ಬರದೆ ಹೋದರೆ ನಮಗೆ ಇನ್ನಷ್ಟು ತೊಂದರೆಗಳು ಶುರು ಆಗುತ್ತವೆ. ದೇಹದಲ್ಲಿ ಉಷ್ಣ ಹೆಚ್ಚಾದರೆ ಪೈಲ್ಸ್ ಸಮಸ್ಯೆ ಶುರು ಆಗುತ್ತದೆ. ಮೈ ಎಲ್ಲ ಬೆವರು ಕೆಂಪು ಗುಳ್ಳೆಗಳು ಆಗುತ್ತವೆ. ಇದನ್ನು ನಾವೇ ಬೇಸಿಗೆ ಕಾಲದಲ್ಲಿ ನಮ್ಮ ಕೈಯಿಂದ ಮಾಡಿಕೊಳ್ಳುತ್ತೇವೆ ಅಂತ ಹೇಳಿದರೆ ತಪ್ಪಾಗಲಾರದು. ಹೀಗಾಗಿ ನಾವು ಆದಷ್ಟು ಬೇಸಿಗೆ ಕಾಲದಲ್ಲಿ ಬೆಡ್ ಮೇಲೆ ಮಲಗುವುದು ತಪ್ಪಿಸಬೇಕು. ಅದಕ್ಕಾಗಿ ಬೇಸಿಗೆ ಕಾಲದಲ್ಲಿ ನಾವು ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದ್ರೆ ನೆಲ ಬಹಳ ತಂಪು ಇರುತ್ತದೆ. ಹೀಗಾಗಿ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಿದರೆ ನಮ್ಮ ದೇಹವು ಸಂಪೂರ್ಣವಾಗಿ ಶಾಖವನ್ನು ಹೀರಿಕೊಳ್ಳುತ್ತದೆ. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ತೀವ್ರವಾದ ಶಾಖ ಅಥವಾ ಉಷ್ಣತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಜನರು ನೆಲದ ಮೇಲೆ ಸುಖಕರವಾದ ನಿದ್ರೆಯನ್ನು ಮಾಡಬಹುದು. ಹಾಗೆಯೇ ನೆಲದ ಮೇಲೆ ಮಲಗುವುದರಿಂದ ಇನ್ನೊಂದು ಮುಖ್ಯವಾದ ಅದ್ಭುತವಾದ ಉಪಯೋಗ ಏನೆಂದರೆ ನಮಗೆ ಬೆನ್ನು ನೋವು ಬರುವುದಿಲ್ಲ.

 

ಸಾಮಾನ್ಯವಾಗಿ ನೀವು ಗಮನಿಸಿರಬಹುದು ಬೆನ್ನು ನೋವಿನ ಸಮಸ್ಯೆ ಇರುವವರಿಗೆ ವೈದ್ಯರು ಏನು ಸಲಹೆಯನ್ನು ನೀಡುತ್ತಾರೆ ಅಂದರೆ, ಗಟ್ಟಿಯಾದ ಹಾಸಿಗೆ ಮೇಲೆ ಅಥವಾ ನೆಲದ ಮೇಲೆ ಮಲಗಿಕೊಳ್ಳಲು ಹೇಳುತ್ತಾರೆ. ಕೆಲವು ಜನರಿಗೆ ನೆಲದ ಮೇಲೆ ಮಲಗಿದರೆ ಬೆನ್ನು ನೋವು ಬರುತ್ತದೆ ಅನ್ನುತ್ತಾರೆ. ಹೌದು ಇದು ಕೆಲವರಿಗೆ ಅಭ್ಯಾಸವಾದರೆ ಇನ್ನೂ ಕೆಲವರಿಗೆ ಕಷ್ಟವಾಗುತ್ತದೆ. ಆದರೆ ಒಮ್ಮೆ ನೀವು ನೆಲದ ಮೇಲೆ ಮಲಗುವುದನ್ನು ರೂಢಿಸಿ ಕೊಂಡರೆ ಖಂಡಿತವಾಗಿ ನಿಮ್ಮ ಆರೋಗ್ಯವೂ ಬಹಳ ಉತ್ತಮವಾಗಿ ಇರುತ್ತದೆ. ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಆದರೆ ಒಂದು ಮಾತು ಗೆಳೆಯರೇ, ನೆಲದ ಮೇಲೆ ಮಲಗುವಾಗ ದಪ್ಪವಾದ ತಲೆ ದಿಂಬು ಇಟ್ಟುಕೊಳ್ಳಬೇಡಿ. ತೆಳ್ಳಗೆ ಹಾಗೂ ಮೆತ್ತಗೆ ಇರುವ ತಲೆದಿಂಬು ಇಟ್ಟುಕೊಂಡು ಮಲಗಿ ಇದರಿಂದ ನಿಮಗೆ ಸುಖ ನಿದ್ರೆ ಬರುತ್ತದೆ. ಹಾಗೂ ಬೆನ್ನು ಸಂಪೂರ್ಣವಾಗಿ ಭೂಮಿಗೆ ತಾಗುತ್ತದೆ. ಇದರಿಂದ ಬೆನ್ನು ನೋವು ಕೂಡ ಕಡಿಮೆ ಆಗುತ್ತದೆ. ಹಾಗೂ ಬೆನ್ನಿಗೆ ಆದಷ್ಟು ವಿಶ್ರಾಂತಿ ಸಿಗುತ್ತದೆ. ಶುಭದಿನ.

Leave a Reply

Your email address will not be published. Required fields are marked *