ನಮಸ್ತೆ ಪ್ರಿಯ ಓದುಗರೇ, ಭಾರತ ಯೋಗಿಗಳ ತಪೋಭೂಮಿ ಇಲ್ಲಿರುವ ಗುಡಿ ಗೋಪುರಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿ ಮುಕ್ಕೋಟಿ ದೇವರುಗಳನ್ನು ಪೂಜಿಸೋ ಹಿಂದೂಗಳು ದೇವರುಗಳಿಗೆ ಕಟ್ಟಿರೋ ದೇವಾಲಯಗಳು ಸಾಕಷ್ಟಿವೆ. ಶಿವ ಪಾರ್ವತಿ ಗಣೇಶ ಸುಬ್ರಮಣ್ಯ ಹೀಗೆ ನಾನಾ ದೇವಾಲಯ ಗಾಳನ್ನು ನಾವು ಭಾರತದಾದ್ಯಂತ ನೋಡಬಹುದು. ಆದ್ರೆ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಅವತಾರವಾದ ದತ್ತಾತ್ರೇಯ ಸ್ವಾಮಿಯನ್ನು ನೋಡ್ಬೇಕು ಅಂದ್ರೆ ನಾವು ಈ ಪುಣ್ಯ ಕ್ಷೇತ್ರಕ್ಕೆ ಬರಲೇಬೇಕು. ಬನ್ನಿ ಇವತ್ತಿನ ಲೇಖನದಲ್ಲಿ ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಗಾಣಗಾಪುರ ದ ಬಗ್ಗೆ ಕೆಲವೊಂದಿಷ್ಟು ಮಾಹಿತಿ ತಿಳಿದು ಪುನೀತ ರಾಗೋಣ. ಗುಲ್ಬರ್ಗ ಸಮೀಪ ಇರುವ ಈ ಗಾಣಗಾಪುರವೂ ಭೀಮ ಮತ್ತು ಅಮರಚ ನದಿಗಳ ಸಂಗಮ ಕ್ಷೇತ್ರವಾಗಿದೆ. ಶ್ರೀ ಗುರು ಚರಿತ್ರೆ ಗ್ರಂಥದಲ್ಲಿ ಈ ಕ್ಷೇತ್ರವನ್ನು ಗಾಣಗಾಪುರ, ಗಾಣಗಾ ಭವನ, ಗಂಧರ್ವ ಭವನ, ಗಂಧರ್ವ ಪುರ ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ದತ್ತವತಾರಿಗಳು ಎಂದೇ ಪ್ರಸಿದ್ಧವಾದ ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳು ನೆಲೆಸಿರುವ ಪುಣ್ಯ ಕ್ಷೇತ್ರ ಇದಾಗಿದೆ. ಇಲ್ಲಿನ ಸಂಗಮದಲ್ಲಿ ಮಿಂದೆದ್ದು ದೇವಸ್ಥಾನದ ಒಳಗಿರುವ ಪಾದುಕೆಯನ್ನು ದರ್ಶನ ಮಾಡಿದರೆ ಮನದ ಎಲ್ಲಾ ಅಭೀಷ್ಟೆಗಳು ಪೂರ್ಣ ಆಗುತ್ತೆ ಎಂದು ಹೇಳಲಾಗುತ್ತದೆ. ಗರ್ಭ ಗುಡಿ ಯೊಳಗೆ ಇರುವ ಪಾದುಕೆಯನ್ನ ನಾವು ಬೆಳ್ಳಿಯ ಕಿಂಡಿಗಳ ಮೂಲಕ ನೋಡಬಹುದಾ ಗಿ ದ್ದು.
ಪ್ರತಿನಿತ್ಯ ಪಾದುಕೆಗಳಿಗೆ ಕೇಸರಿ ಮತ್ತು ಅಷ್ಟ ಗಂಧಗಳಿಂದ ಪೂಜೆ ಮಾಡಲಾಗುತ್ತದೆ. ದೇವಸ್ಥಾನದ ಆವಣದಲ್ಲಿ ಶಂಖ ಚಕ್ರ ತ್ರಿಶೂಲ ಹಿಡಿದು ಕಾಮಧೇನು ವಿನ ಮುಂದೆ ನಿಂತಿರುವ ಹಾಲು ಬಿಳುಪಿನ ಅಮೃತ ಶಿಲೆಯ ದತ್ತಾತ್ರೇಯ ರ ವಿಗ್ರಹ ಇದೆ. ವಿಗೃಹದ ಮುಂದೆ ಶಿವ ಲಿಂಗ ಇದ್ದು, ಇಲ್ಲಿರುವ ಅಶ್ವತ್ಥ ವೃಕ್ಷದ ಪೋದರಿನಲ್ಲಿ ನಾಗನಾಥ ನ ವಿಗ್ರಹ ಇದೆ. ಇಲ್ಲಿರುವ ನರಸಿಂಹ ತೀರ್ಥ, ಭಾಗೀರಥಿ ತೀರ್ಥ, ಪಾಪ ವಿನಾಶಿನಿ ತೀರ್ಥ, ಕೋಟಿ ತೀರ್ಥ, ರುದ್ರ ಪಾದ ತೀರ್ಥ, ಚಕ್ರ ತೀರ್ಥ ಮತ್ತು ಮನ್ಮಥ ತೀರ್ಥ ಎಂಬ ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡಿ ದತ್ತ ಪಾದುಕೆಯನ್ನೂ ದರ್ಶನ ಮಾಡಿದ್ರೆ ಸಪ್ತ ಜನ್ಮಗಳಲ್ಲಿ ಮಾಡಿದ ಪಾಪಗಳು ಪರಿಹಾರ ಆಗುತ್ತೆ ಎಂದು ಹೇಳಲಾಗುತ್ತದೆ. ಹೀಗಾಗಿ ಪ್ರತಿ ಪೌರ್ಣಮಿ, ಗುರು ಪೌರ್ಣಮಿ ಹಾಗೂ ದತ್ತ ಜಯಂತಿ ಯಂದು ಅಸಂಖ್ಯಾತ ಭಕ್ತರು ಇಲ್ಲಿನ ದತ್ತ ಪಾದುಕೆ ಗೆ ಪೂಜೆ ಸಲ್ಲಿಸಿ ಕೃತರ್ಥರಾಗುತ್ತಾರೆ. ಇನ್ನೂ ಈ ದೇವಸ್ಥಾನದಲ್ಲಿ ಅತೀಂದ್ರಿಯ ಶಕ್ತಿಗಳು ಎಂದು ಕರೆಯುವ ದೆವ್ವ, ಭೂತ, ಪಿಶಾಚಿ ಗಳ ಸಮಸ್ಯೆ ಯಿಂದ ಬಳಲುತ್ತಿರುವ ವರಿಗೆ ಪರಿಹಾರ ಸಿಗುತ್ತದೆ. ಈ ಕ್ಷೇತ್ರದಲ್ಲಿ ಮನುಷ್ಯನಿಗೆ ಮೆತ್ತಿಕೊಂಡಿರುವ ಟ್ಟಿ ದೆವ್ವಗಳು ದೇವರಿಗೆ ಮುಖಾಮುಖಿ ಆಗುತ್ತವಂ ತೇ. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಅತೀ ಹೆಚ್ಚು ಜನರು ಈ ಕ್ಷೇತ್ರಕ್ಕೆ ಬರ್ತಾರೆ. ಇಲ್ಲಿ ನಡೆಯುವ ಮಂಗಳಾರತಿ ಸಮಯದಲ್ಲಿ ದುಷ್ಟ ಶಕ್ತಿಗಳು ದೇವಾಲಯದ ಒಳಗಡೆ ಇರುವ ಛಾ ವಣಿಗಳನ್ನ ಏರಿ ಕೋಗಾಡೋಡು, ಕಿರುಚಾಡೋದನ್ನು ನಾವು ಕಾಣಬಹುದಾಗಿದೆ. ಹೀಗಾಗಿ ಇಂತಹ ದೆವ್ವ ಭೂತ ಗಳ ಕಾಟದಿಂದ ಮನ ನೊಂದಿರುವ ವರು ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ದತ್ತ ಪಾರಾಯಣ ಮಾಡಿದ್ರೆ ಅವರ ಸಂಕಷ್ಟಗಳು ದೂರವಾಗುತ್ತದೆ ಎನ್ನುವುದು ಇಲ್ಲಿ ಬರುವ ಪ್ರತಿ ಭಕ್ತರ ನಂಬಿಕೆ. ಈ ಕ್ಷೇತ್ರಕ್ಕೆ ಬಂದು ಯಾರು ಮದಕ್ರಿ ಸೇವೆಯನ್ನು ಮಾಡ್ತಾರೋ ಅವರ ಎಲ್ಲ ಮನೋಭೀಲಾಷೆಗಳನ್ನು ಈಡೆರಿಸುತ್ತಾರೆ ಈ ದತ್ತ ಅವತಾರಿಗಳಾದ ಶ್ರೀ ನರಸಿಂಹ ಸರಸ್ವತಿ ಯವರು.
ಇಲ್ಲಿನ ಭೀಮಾ ಸಂಗಮದಲ್ಲಿ ಮಿಂದೆದ್ದು ನಂತರ ಗಾಣಗಾಪುರ ದಲ್ಲಿರುವ ಮನೆಗಳ ಪೈಕಿ ಕನಿಷ್ಟ ಐದು ಮನೆಗಳಲ್ಲೂ ಭಿಕ್ಷೆ ಬೇಡಿ ನಂತರ ಪಾದುಕೆಗೆ ಪೂಜೆ ಸಲ್ಲಿಸುವುದ ರಿಂದ ದತ್ತಾತ್ರೇಯ ರ ಕೃಪೆ ಉಂಟಾಗಿ ಭಕ್ತರ ಎಲ್ಲಾ ಬಯಕೆಗಳು ನಿಖರವಾಗಿ ನೆರವೇರುತ್ತದೆ ಎಂದು ಇಲ್ಲಿ ಬರುವ ಎಲ್ಲಾ ಯಾತ್ರಾರ್ಥಿಗಳ ಅಚಲವಾದ ನಂಬಿಕೆ. ಅಲ್ಲದೆ ಈ ಕ್ಷೇತ್ರಕ್ಕೆ ಬಂದು ದತ್ತಾತ್ರೇಯ ದೇವರ ಪಾರಾಯಣ ಮಾಡೋದ್ರಿಂದ ಮನಸ್ಸಿಗೆ ನೆಮ್ಮದಿ ಉಂಟಾಗಿ ಬಂದ ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ಸುಮಾರು ೫೦೦ ವರ್ಷಗಳಷ್ಟು ಪುರತನವಾದ ಇತಿಹಾಸ ಹೊಂದಿರುವ ಈ ದೇವಾಲಯವನ್ನು ಮರಾಠ ವಾಸ್ತು ಶಿಲ್ಪ ವಾದ ನಗರಾಖಾನ ಶೈಲಿಯಲ್ಲಿ ನಿರ್ಮಿಸಲಾಗಿದ್ದು ದೇವಾಲಯದ ಮುಖ್ಯ ದ್ವಾರ ಪಶ್ಚಿಮಾಭಮುಖವಾಗಿ ದೇ. ವಿಶಾಲವಾದ ಮುಖ ಮಂಟಪ ಹೊಂದಿರುವ ಈ ದೇವಾಲಯ ದ ಗರ್ಭ ಗೃಹವನ್ನು ಚಿಕ್ಕದಾಗಿ ಎರೆಡು ಭಾಗಗಳಾಗಿ ವಿಂಗಡಿಸ ಲಾಗಿದ್ದು, ಒಂದು ಭಾಗದಲ್ಲಿ ದತ್ತಾತ್ರೇಯ ರ ವಿಗ್ರಹ ಇನ್ನೊಂದು ಭಾಗದಲ್ಲಿ ದತ್ತ ಪಾದುಕೆ ಇದೆ. . ಬೆಳಿಗ್ಗೆ ಗಂಟೆಯಿಂದ ಮಧ್ಯಾಹ್ನ. ಗಂಟೆಯವರೆಗೆ ಸಂಜೆ ೭ ಗಂಟೆಯಿಂದ ರಾತ್ರಿ ೯ ಗಂಟೆ ವರೆಗೆ ದತ್ತ ಪಾದುಕೆಯನ್ನೂ ದರ್ಶನ ಮಾಡಬಹುದು. ಇಲ್ಲಿ ಬರುವ ಪ್ರತಿ ಭಕ್ತಾದಿಗಳಿಗೆ ಮಧ್ಯಾನ ಮತ್ತು ಸಂಜೆ ಸಮಯದಲ್ಲಿ ಅನ್ನ ದಾಸೋಹ ವ್ಯವಸ್ಥೆ ಇದೆ. ತ್ರಿಮೂರ್ತಿ ರೂಪ ದತ್ತಾತ್ರೇಯ ತ್ರಿಗುಣ ತೀತ ದತ್ತಾತ್ರೇಯ ಅನಸೂಯ ತನಯ ದತ್ತಾತ್ರೇಯ ಎಂದೆಲ್ಲ ಕರೆಯುವ ಈ ದತ್ತಾತ್ರೇಯ ಕ್ಷೇತ್ರ ವನ್ನ ಸಾಧ್ಯವಾದರೆ ನೀವೂ ಒಮ್ಮೆ ದರ್ಶನ ಮಾಡಿ. “ಜಾತಾಧರಂ ಟಾ ಪಾಂಡುರಂಗ ಶೂಲ ಹಸ್ತಂ ಕೃಪಾ ನಿಧಿಂ ಸರ್ವ ರೋಗ ಹರಂ ದೇವಂ ದತ್ತಾತ್ರೇಯ ಮಹಂ ಭಜೆ” ಎಂದು ಭಕ್ತಿಯಿಂದ ಪೂಜಿಸುವ ಎಲ್ಲರನ್ನೂ ಸಂಕಷ್ಟಗಳಿಂದ ದೂರ ಮಾಡ್ತಾನೆ ಈ ದತ್ತಾತ್ರೇಯ ಸ್ವಾಮಿ. ಕಲಬುರ್ಗಿ ಇಂದ ೪೦ ಕಿಮೀ ದೂರದಲ್ಲಿ ಗಾಣಗಾಪುರ ಕ್ಷೇತ್ರ ಇದ್ದು, ಕಲಬುರ್ಗಿ ಗುಲ್ಬರ್ಗ ಮತ್ತು ಸೊಲ್ಲಾಪುರ ದಿಂದ ಸಾಕಷ್ಟು ಸರ್ಕಾರಿ ಬಸ್ ಗಳು ದೇವಸ್ಥಾನಕ್ಕೆ ಹೋಗಲು ಸಿಗುತ್ತವೆ. ಶುಭದಿನ.