ಸೆಪ್ಟೆಂಬರ್ 28, ಬುಧವಾರದ ಶುಭದಿನದಂದು ನಿಮ್ಮ ದಿನ ಭವಿಷ್ಯ ಹೇಗಿರಲಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭ ಕ್ರುತ್ ನಾಮ ಸಂವತ್ಸರ, ದಕ್ಷಿನಯಿಣೆ ಶರದ್ ಋತು ಆಶ್ವೀಜ ಮಾಸ ಶುಕ್ಲ ಪಕ್ಷ. ಇಂದು ಸೆಪ್ಟೆಂಬರ್ 28 ನೆ ತಾರೀಕು. ಬುಧವಾರ. ಇಂದಿನ ದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಇಂದು ಚಿತ್ತ ನಕ್ಷತ್ರ. ಮೇಷ ರಾಶಿಗೆ ಮಧ್ಯಾನದ ವರೆಗೂ ಕೂಡ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ಹುರುಪು, ಉತ್ಸಾಹ ಇರುತ್ತೆ. ಈ ಉತ್ಸಾಹ ಎಲ್ಲವೂ ಮಧ್ಯಾನದ ನಂತರ ನಿಮ್ಮ ಪ್ರೀತಿ ಪಾತ್ರರ ಕಡೆ ತಿರುಗುತ್ತ. ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಯಶಸ್ಸು. ಎಲ್ಲಾ ವ್ಯವಹಾರಗಳಲ್ಲಿ ಯಶಸ್ಸು. ವೃಷಭ ರಾಶಿಯವರಿಗೆ ಮಧ್ಯಾನದ ವರೆಗೂ ಮನಸ್ಸಿಗೆ ನೆಮ್ಮದಿ ಆಹ್ಲಾದ. ಸಾಮಾಜಿಕ ವಾಥವರಣಗಳಲ್ಲಿ ಬಹಳ ಒಳ್ಳೆಯ ಒಡನಾಟ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು. ಮಧ್ಯಾನದ ನಂತ್ರ ನಿಮ್ಮ ಉತ್ಸಾಹ ಇನ್ನೂ ಜಾಸ್ತಿ ಆಗುತ್ತೆ. ಶತ್ರು ನಾಶ ಅನೇಕ ರೀತಿಯಲ್ಲಿ ಮುಂದೆ ಹೋಗುತ್ತೀರಿ. ಸಾಹಸದಿಂದ ನಿಮ್ಮ ಯಶಸ್ಸನ್ನು ನಿಮ್ಮ ಕೈಯಿಂದ ನೀವು ಪಡಿತಿರಾ. ಮಿಥುನ ರಾಶಿಯವರಿಗೆ ಮಧ್ಯಾನದ ವರೆಗೂ ಮನಸ್ಸಿಗೆ ಕಳವಳ ಇತ್ಯಾದಿ ಕಾಡ್ತಾ ಇರುತ್ತೆ. ಮಧ್ಯಾನದ ನಂತ್ರ ಎಲ್ಲವೂ ಸುಧಾರಿಸುತ್ತದೆ. ಮಂಜಿನಂತೆ ನಿಮ್ಮ ಎಲ್ಲಾ ಯೋಚನೆ ಕರಗಿ ಹೋಗುತ್ತೆ. ಮಧ್ಯಾನದ ಮೇಲೆ ಸಂಜೆ ತನಕ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ಮಿತ್ರರಿಂದ ಮತ್ತು ಪ್ರೀತಿ ಪಾತ್ರರೊಂದಿಗೆ ಆಹ್ಲಾದ ಅಕ್ಕರೆ ಪಡಿತಿರ. ಹಣಕಾಸಿನ ವಿಚಾರದಲ್ಲಿ ಗುಡ್ ನ್ಯೂಸ್ ಸಂಜೆಯ ಮೇಲೆ.

 

ಕರ್ಕಾಟಕ ರಾಶಿಗೆ ಮಧ್ಯಾನದ ವರೆಗೂ ಕೂಡ ಬಹಳ ಪರಾಕ್ರಮದಿಂದ ಎಲ್ಲಾ ಕೆಲಸಗಳನ್ನೂ ಮಾಡ್ತಾ ಇರ್ತಾರೆ. ಜೀವನದಲ್ಲಿ ಏನೋ ತೊಂದರೆ ಇಲ್ಲ ಎನ್ನುವ ಧೋರಣೆಯಲ್ಲಿ ಮುಂದೆ ಹೋಗ್ತಾ ಈರ್ಥಿರಿ. ಮಧ್ಯಾನದ ಮೇಲೆ ಸ್ವಲ್ಪ ಜವಾಬ್ದಾರಿಗಳಿಂದ ನಿಮ್ಮ ಶಕ್ತಿ ಕಡಿಮೆ ಆದಂತೆ ಆಗುತ್ತೆ. ಬೇಗ ಬೇಗ ಕೆಲಸಗಳನ್ನು ಮುಗಿಸಿ ಮನಸ್ಸಿಗೆ ಸಂತೋಷ ಪಡೆದುಕೊಳ್ಳಿ. ಸಿಂಹ ರಾಶಿಯವರಿಗೆ ನಿಮ್ಮ ಪ್ರೀತಿ ಪಾತ್ರರು ನಿಮ್ಮ ಕುಟುಂಬದವರ ಬಗ್ಗೆ ಅನೇಕ ರೀತಿಯಲ್ಲಿ ಕಾಳಜಿ ವಹಿಸಿ ಬಹಳ ಒಳ್ಳೆಯ ಸಮಯವನ್ನು ಅವರ ಜೊತೆ ಕಳೆಯುತ್ತಿರಿ. ಅವರೊಂದಿಗೆ ನಿಮಗೆ ನೆಮ್ಮದಿ ಪ್ರಾಪ್ತಿ ಆಗುತ್ತೆ. ಮಧ್ಯಾನದ ನಂತ್ರ ಅದೇ ನೆಮ್ಮದಿಯನ್ನು ನೀವು ಅಣ್ಣ ತಮ್ಮಂದಿರು ಅಕ್ಕ ತಂಗಿಯರ ಜೊತೆ ಹಂಚಿಕೊಳ್ಳುತ್ತಿರಿ. ನಿಮ್ಮ ಪರಾಕ್ರಮದಿಂದ ಅನೇಕ ರೀತಿಯ ಒಳ್ಳೆಯ ಕೆಲಸಗಳನ್ನು ಮಧ್ಯಾನದ ಮೇಲೆ ಇನ್ನೂ ಮೂರು ದಿನಗಳ ಕಾಲ ಮಾಡ್ತಾ ಇರ್ಥೀರಿ. ಕನ್ಯಾ ರಾಶಿಗೆ ಮಧ್ಯಾನದ ವರೆಗೂ ಕೂಡ ಮನಸ್ಸಿಗೆ ಕಳವಳ ತಳಮಳ ಇದ್ದಂತೆ ಭಾಸವಾಗುತ್ತದೆ. ಮಧ್ಯಾನದ ನಂತ್ರ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ ನಿಮ್ಮ ಪ್ರೀತಿ ಪಾತ್ರರು ಮತ್ತು ಸಾಮಾಜಿಕ ವಿಷಯಗಳಲ್ಲಿ ಸಂಸಾರದ ವಿಷಯಗಳಲ್ಲಿ ಬಹಳ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ. ಮನಸ್ಸಿಗೆ ನೆಮ್ಮದಿ ಕಾಣುತ್ತೀರಿ. ತುಲಾ ರಾಶಿಗೆ ಮಧ್ಯಾನದ ವರೆಗೂ ಸ್ವಲ್ಪ ನೆಮ್ಮದಿ ಕಡಿಮೆ ಆದಂತೆ ಭಾಸವಾಗುತ್ತದೆ. ಅನೇಕ ರೀತಿಯ ಯೋಚನೆಗಳು ಬರ್ತಾ ಇರುತ್ತೆ. ಮುಂದೆ ಏನು ಮಾಡಬೇಕು ಗೊತ್ತಾಗದೆ ನೀವು ಯೋಚನೆ ಮಾಡ್ತಾ ಕುತಿರಬಹುದು. ಮಧ್ಯನಾದ ಮೇಲೆ ಎಲ್ಲವೂ ಸುಧಾರಿಸಿ. ನೆಮ್ಮದಿ ಕಾಣುತ್ತೀರಿ.

 

ವೃಶ್ಚಿಕ ರಾಶಿಗೆ ಮಧ್ಯಾನದ ವರೆಗೂ ಬಹಳ ಆತುರ ಕಾತುರದಿಂದ ದಿನವನ್ನು ಕಲೆಯುತ್ತಿರಿ. ತುಂಬಾ ಜನ ನಿಮ್ಮನ್ನು ಮಾತನಾಡಿಸಲು ಪ್ರಯತ್ನ ಮಾಡ್ತಾ ಇರುತ್ತಾರೆ. ಅನೇಕ ರೀತಿಯಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸುತ್ತ ಹೋಗುತ್ತೀರಿ. ಇದಾದ ನಂತರ ಮಧ್ಯಾನದ ಮೇಲೆ ಸ್ವಲ್ಪ ರೆಸ್ಟ್ ತೋಗೊಳ್ಳೋಣ. ಸಾಕು ಬಹಳ ಹೆಚ್ಚಿನ ಕೆಲಸ ಮಾಡಿ ಆಯ್ತು. ಸ್ವಲ್ಪ ರೆಸ್ಟ್ ಮಾಡೋಣ ಅಂದುಕೊಳ್ಳುತ್ತಿರಿ. ಧನಸ್ಸು ರಾಶಿಗೆ ಮಧ್ಯಾನದ ವರೆಗೂ ಕೂಡ ಕಾರ್ಯಕ್ಷೇತ್ರದ ಜವಾಬ್ದಾರಿಗಳಿಂದ ಬಹಳ ಹೆಚ್ಚಿನ ಕೆಲಸಗಳನ್ನು ನಿಭಾಯಿಸುತ್ತಿರಿ. ಮಧ್ಯಾನದ ಮೇಲೆ ನಿಮ್ಮ ಮಿತ್ರರ ಜೊತೆ ಬಹಳ ಒಳ್ಳೆಯ ಮೋಜು ಮಸ್ತಿ ಮಾಡುತ್ತಿರಿ. ಧನಾಗಮ ಇಷ್ಟಾರ್ಥ ಸಿದ್ಧಿ. ಮಕರ ರಾಶಿಗೆ ಮಧ್ಯನದ ವರೆಗೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ಕಡಿಮೆ ಆದಂತೆ ಭಾಸವಾಗುತ್ತದೆ. ಕೆಲಸಗಳನ್ನು ಯಾವ ರೀತಿ ಮಾಡುವುದು ಹೇಗೆ ಮಾಡುವುದು ಎಂದು ಗೊತ್ತಾಗದೆ ಇರಬಹದು.ಮಧ್ಯಾನದ ಮೇಲೆ ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು. ಬಹಳ ಒಳ್ಳೆಯ ರೀತಿಯಲ್ಲಿ ಯಶಸ್ಸು ಸಾಧಿಸುತ್ತೀರಿ.ಕುಂಭ ರಾಶಿಗೆ ಇದು ಬಹಳ ಒಳ್ಳೆಯ ದಿನ. ಮಧ್ಯಾನದ ವರೆಗೂ ಮನಸ್ಸಿನಲ್ಲಿ ಗಲಿಬಿಲಿ ಕಿರಿಕಿರಿ ಇರಬಹುದು. ಮಧ್ಯಾನದ ಮೇಲೆ ಭಾಗ್ಯೋದಯ ಆಗುತ್ತೆ. ಇದರಿಂದ ಎಲ್ಲಾ ಸಮಸ್ಯೆಗಳಿಗೂ ತುರಂತ ಪರಿಹಾರ ನೀವೇ ಕಂಡುಕೊಂಡು ಬಹಳ ಸಂತೋಷ ಕಾಣುತ್ತೀರಿ. ಮೀನಾ ರಾಶಿಗೆ ಮಧ್ಯಾನದ ವರೆಗೂ ಕೂಡ ನಿಮ್ಮ ಪ್ರೀತಿ ಪಾತ್ರರು ಬೇರೆಯವರು ಮುಖ್ಯ ಆಗ್ತಾರೆ. ಮಧ್ಯಾನದ ಮೇಲೆ ಸರಿಯಾದ ಹೆಜ್ಜೆ ಇಟ್ಟು ಬಹಳ ಪ್ರಬುದ್ಧತೆಯಕಡೆಗೆ ಕೆಲಸ ಮಾಡಬೇಕಾಗುತ್ತೆ. ಶುಭದಿನ.

Leave a Reply

Your email address will not be published. Required fields are marked *