ಬೇಸಿಗೆ ಕಾಲದಲ್ಲಿ ಈ ಹಣ್ಣು ಸಿಕ್ಕರೆ ಬಿಡಬೇಡಿ. ಮನೆಗೆ ತಂದು ಸೇವನೆ ಮಾಡಿ.

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಇಂದು ಅದ್ಭುತವಾದ ಹಣ್ಣಿನ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಈ ಹಣ್ಣು ಮುಖ್ಯವಾಗಿ ನಮ್ಮ ಭಾರತ ದೇಶದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಕಂಡು ಬರುತ್ತದೆ. ಬೇಸಿಗೆ ಕಾಲ ಬಂತು ಅಂದರೆ ಇದರ ಪ್ರಾಮುಖ್ಯತೆ ಹಾಗೂ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಇದು ನೋಡಲು ಕಪ್ಪು ಬಣ್ಣದಲ್ಲಿ ಇರುತ್ತದೆ ಹಾಗೆಯೇ ಜೆಲ್ಲಿ ರೂಪದಲ್ಲಿ ನಮಗೆ ದೊರೆಯುತ್ತದೆ. ಇದರಲ್ಲಿರುವ ಆರೋಗ್ಯಕರ ಗುಣಗಳನ್ನು ಪಡೆಯಲು ಈ ಹಣ್ಣು ಹೇಳಿ ಮಾಡಿಸಿದ ಸೂಪರ್ ಫ್ರೂಟ್ ಅಂತ ಹೇಳಿದರೆ ತಪ್ಪಾಗಲಾರದು. ಆ ಹಣ್ಣು ಯಾವುದು ಅಂತ ಯೋಚನೆ ಮಾಡುತ್ತೀದ್ದೀರಾ? ಅದುವೇ ತಾಳೆ ಹಣ್ಣು. ಇದರಲ್ಲಿ ತಂಪುಕಾರಕ ಗುಣಗಳಿದ್ದು ಇದನ್ನು ಐಸ್ ಆ್ಯಪಲ್ ಎಂದು ಕರೆಯುತ್ತಾರೆ. ಇದನ್ನು ಬೇಸಿಗೆ ಹಣ್ಣು ಎಂದು ಕರೆಯುತ್ತಾರೆ. ನೋಡಲು ತೆಂಗಿನಕಾಯಿ ಹಾಗೆಯೇ ಹೋಲುತ್ತದೆ. ಇದು ತಂಪಾಗಿ ಇರುವ ಕಾರಣ ಇದನ್ನು ನೀವು ಮಧ್ಯಾಹ್ನ ಸಮಯದಲ್ಲಿ ಸೇವನೆ ಮಾಡಿದರೆ ಬಹಳ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ತಾಳೆ ಹಣ್ಣು ನಮ್ಮ ಆರೋಗ್ಯಕ್ಕೆ ಯಾವ ರೀತಿಯಾಗಿ ಸಹಾಯ ಮಾಡುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಮೊದಲನೆಯದು ಇದರಲ್ಲಿ ಉತ್ತಮ ಪ್ರಮಾಣದ ಪೌಷ್ಟಿಕಾಂಶಗಳು ಇದ್ದು ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಮತ್ತಷ್ಟು ಪೌಷ್ಟಿಕತೆ ಅಂಶಗಳು ದೊರೆಯುತ್ತದೆ ಜೊತೆಗೆ ನಿಶ್ಯಕ್ತಿ ಬಳಲುವ ಜನರಿಗೆ ಹಾಗೂ ಶಕ್ತಿಯನ್ನು ಕಳೆದು ಕೊಂಡಿರುವವರಿಗೆ ಶಕ್ತಿಯನ್ನು ಮರುದುಂಬಿಸಿ ಶಕ್ತಿಯುತ ರನ್ನಾಗಿ ಮಾಡುತ್ತದೆ ಕೆಲಸವನ್ನು ಮಾಡಿ ಮಾಡಿ ಸುಸ್ತು ಆಗಿದ್ದರೆ ಹಾಗೂ ದಣಿವು ಆಗಿದ್ದರೆ ಈ ಹಣ್ಣು ಸೇವನೆ ಮಾಡಿ. ಇದರಿಂದ ನಿಮ್ಮ ದಣಿವು ನಿಶ್ಯಕ್ತಿ ಆಯಾಸ ಸುಸ್ತು ಎಲ್ಲವೂ ಕಡಿಮೆ ಆಗುತ್ತದೆ. ಇನ್ನೂ ಕೆಲವರು 12 ತಿಂಗಳ ಕಾಲ ಬೆವರುತ್ತಾರೆ. ಅಂಥವರಿಗೆ ಈ ತಾಳೆ ಹಣ್ಣು ರಾಮಬಾಣ ಇದ್ದಂತೆ. ಇನ್ನೂ ವಿವಿಧ ರೀತಿಯ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳಿಗೆ ದಿವ್ಯ ಔಷಧವಾಗಿ ಕೆಲಸವನ್ನು ಮಾಡುತ್ತದೆ ಇದು ನೈಸರ್ಗಿಕವಾಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ. ಈ ಹಣ್ಣಿನ ಮತ್ತೊಂದು ಅದ್ಭುತವಾದ ಪ್ರಯೋಜನ ಏನೆಂದರೆ, ಈ ಹಣ್ಣು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಪ್ರೊಟೀನ್ ವಿಟಮಿನ್ ಪೌಷ್ಟಿಕತೆ ಖನಿಜಗಳನ್ನು ಸರಿಯಾದ ಪ್ರಮಾಣದಲ್ಲಿ ಸಮತೋಲನದಲ್ಲಿ ಇಡುವಂತೆ ಈ ಹಣ್ಣು ಸಹಾಯ ಮಾಡುತ್ತವೆ.

 

ಇನ್ನೂ ತೂಕವನ್ನು ಇಳಿಸಿಕೊಳ್ಳಲು ಇಷ್ಟ ಪಡುವವರು ವ್ಯಾಯಾಮದ ಜೊತೆಗೆ ಈ ಹಣ್ಣು ಸೇವನೆ ಮಾಡಿದರೆ ಖಂಡಿತವಾಗಿ ನಿಮ್ಮ ತೂಕ ಕಡಿಮೆ ಆಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಹೊಟ್ಟೆಯ ಸುತ್ತಲೂ ಇರುವ ಬೊಜ್ಜು ಕರಗಿಸಲು ಸಹಾಯ ಮಾಡುತ್ತವೆ. ಹಸಿವು ನೀಗಿಸುತ್ತದೆ ಇನ್ನೂ ನಿಮ್ಮ ದೇಹದ ಮೇಲೆ ಕೆಂಪು ಗುಳ್ಳೆಗಳು ಕಲೆಗಳು ಆಗುತ್ತಿದ್ದರೆ ಈ ತಾಳೆ ಹಣ್ಣು ರಾಮಬಾಣ. ಏಕೆಂದರೆ ಇದರಲ್ಲಿ ಇರುವ ವಿಟಮಿನ್ ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ರಂಜಕ ಅಂಶಗಳು ಅಡಗಿವೆ ಅದರಿಂದ ಇದನ್ನು ಸೇವನೆ ಮಾಡುವುದು ಬಹಳ ಅತ್ಯುತ್ತಮ. ಇನ್ನೂ ಚಿಕನ್ ಪಾಕ್ಸ್ ನಿಂಡ ನೀವು ನರಲಾಡುತ್ತಿದ್ದರೆ ಅದನ್ನು ಕೂಡ ಈ ತಾಳೆ ಹಣ್ಣಿನ ಸೇವನೆ ಇಂದ ತಡೆಯಬಹುದು. ತುರಿಕೆಯನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕೂಡ ತಡೆಯುತ್ತದೆ.

Leave a Reply

Your email address will not be published. Required fields are marked *