ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದ್ರೆ ಜಾಯಿಕಾಯಿ ಬಳಸಿ ನೋಡಿ…..

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಜಾಯಿಕಾಯಿ ಬೀಜದಿಂದ ಕೂಡಿದ ಒಂದು ಮಸಾಲಾ ಪದಾರ್ಥವಾಗಿದೆ. ಅಷ್ಟೇ ಅಲ್ಲದೇ, ಜಾಯಿಕಾಯಿ ಪ್ರಕೃತಿ ನೀಡಿರುವ ಅಮೂಲ್ಯವಾದ ಕೊಡುಗೆ ಆಗಿದೆ. ವಾಣಿಜ್ಯ ವಾಗೀ ಪ್ರಾಮುಖ್ಯತೆ ಪಡೆದಿರುವ ವನಸ್ಪತಿ. ನೂರಾರು ವರ್ಷಗಳ ಹಿಂದೆ ಇದನ್ನು ಆಯುರ್ವೇದದಲ್ಲಿ ಮತ್ತು ಸಾಂಬಾರ ಪದಾರ್ಥಗಳಲ್ಲಿ ಇದನ್ನು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಜಾಯಿಕಾಯಿ ಮೂಲತಃ ಉಷ್ಣ ವಲಯದಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಸಾಮಾನ್ಯವಾಗಿ ಇಂಡೋನೇಷ್ಯಾ, ವೆಸ್ಟ್ ಇಂಡೀಸ್ ನಂತಹ ದೇಶಗಳಲ್ಲಿ ಬೆಳೆಯಲಾಗುತ್ತದೆ. ಇತ್ತೀಚೆಗೆ ಹಲವು ದೇಶಗಳಾದ ಮಲೇಶಿಯಾ, ಕ್ಯಾರಿಬಿಯನ್ ಹಾಗೂ ದಕ್ಷಿಣ ಭಾರತದಲ್ಲೂ ಕೂಡ ಬೆಳೆಯಲಾಗುತ್ತಿದೆ. ಅಷ್ಟೇ ಅಲ್ಲದೇ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ಇದನ್ನು ಆಮದು ಮಾಡಿಕೊಂಡು ಕರ್ನಾಟಕದಲ್ಲಿ ಕೂಡ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಹಲವಾರು ಜನರು ಇದನ್ನು ನೋಡಿರುವುದಿಲ್ಲ ಜೊತೆಗೆ ಇದರ ಲಾಭಗಳ ಬಗ್ಗೆ ಅರಿವು ಕೂಡ ಇರುವುದಿಲ್ಲ ಅಂತ ಹೇಳಿದರೆ ತಪ್ಪಾಗಲಾರದು. ಆದರೆ ಒಮ್ಮೆ ನೀವು ಇದರ ಬಗ್ಗೆ ತಿಳಿದು ಕೊಂಡರೆ ಖಂಡಿತವಾಗಿ ಇದರ ಬಳಕೆ ಮಾಡಿಯೇ ಮಾಡುತ್ತೀರಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಜಾಯಿಕಾಯಿ ಯಾವೆಲ್ಲ ರೋಗಗಳಿಗೆ ದಿವ್ಯ ಔಷಧ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

 

ಈ ಜಾಯಿಕಾಯಿಯಲ್ಲಿ ಇರುವ ಅಂಶಗಳು ಯಾವುದು ಅಂದರೆ ವಿಟಮಿನ್ ಖನಿಜಗಳು ಲವಣಗಳು ಕ್ಯಾಲ್ಷಿಯಂ ಪೊಟ್ಯಾಶಿಯಂ ವಿಟಮಿನ್ ಬೀ1 ಇದೆ ಹಾಗೆಯೇ ಉರಿ ಊತ ಶಮನ ಕಾರೀ ಗುಣಗಳು ಇವೆ ಬ್ಯಾಕ್ಟೀರಿಯಾ ವಿರೋಧಿ ಸೂಕ್ಷ್ಮಾಣು ಜೀವಿಗಳನ್ನು ನಾಶ ಪಡಿಸುವ ಅಂಶಗಳಿಗೆ.ರಕ್ತದೊತ್ತಡ ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ನೂ ನಿಮಗೆ ಒತ್ತಡ ಹೆಚ್ಚಾಗಿದ್ದರೇ ಇದರ ಸೇವನೆ ಇಂದಾಗಿ ನಿಮ್ಮ ಒತ್ತಡ ಆತಂಕ ಭಯ ಕಡಿಮೆ ಮಾಡುವ ಗುಣವನ್ನೂ ಜಾಯಿಕಾಯಿ ಹೊಂದಿದೆ. ಇನ್ನೂ ಯಾವೆಲ್ಲ ಕಾಯಿಲೆಗಳಿಗೆ ದಿವ್ಯ ಔಷಧ ಅಂತ ತಿಳಿಯುವುದಾದರೆ ಶೀತ ನೆಗಡಿ ಕೆಮ್ಮು ಆದಾಗ ಈ ಜಾಯಿಕಾಯಿ ರಸವನ್ನು ನಾಲಿಗೆಯ ಮೇಲೆ ಇಡುತ್ತಾರೆ. ಈ ರಸವನ್ನು ನುಂಗುವುದರಿಂದ ಶೀತ ನೆಗಡಿ ಕೆಮ್ಮು ಕಫ ಎಲ್ಲವೂ ಕಡಿಮೆ ಆಗುತ್ತದೆ. ಇನ್ನೂ ಕೆಲವು ಮಕ್ಕಳು ದೊಡ್ಡವರಾದರೂ ಕೂಡ ತೊದಲುತ್ತಾರೆ ಅಂಥವರಿಗೆ ಈ ಜಾಯಿಕಾಯಿ ಪುಡಿ ಅಥವಾ ರಸವನ್ನು ನಾಲಿಗೆ ಮೇಲೆ ಇಡುವುದರಿಂದ ಈ ತೋದಲ ನುಡಿಯಿಂದ ಪರಿಹಾರ ಕಾಣಬಹುದು. ಇನ್ನೂ ನೀವೇನಾದರೂ ನಿದ್ರಾಹೀನತೆ ಸಮಸ್ಯೆ ಇಂದ ಬಳಲುತ್ತಿದ್ದಾರೆ ಬಿಸಿ ಹಾಲಿಗೆ ಸ್ವಲ್ಪ ಜಾಯಿಕಾಯಿ ಪುಡಿ ಹಾಕಿಕೊಂಡು ಸ್ವಲ್ಪ ಬಾದಾಮಿ ಏಲಕ್ಕಿ ಪುಡಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಕುಡಿದು ಮಲಗಿದರೆ ಖಂಡಿತವಾಗಿ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗಬಹುದು.

 

ಜೊತೆಗೆ ಮನಸ್ಸಿನ ಆತಂಕ ಒತ್ತಡ ದೂರ ಮಾಡುತ್ತದೆ ಹಾಗೂ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ನೀಡುತ್ತದೆ. ಇನ್ನೂ ಈ ಜಾಯಿಕಾಯಿ ಪುಡಿಯನ್ನು ಬೆಲ್ಲದ ಜೊತೆಗೆ ಸೇವನೆ ಮಾಡಿದರೆ ಅಜೀರ್ಣತೆ ಬೇಧಿ ನಿಲ್ಲುತ್ತದೆ. ಇನ್ನೂ ಬಾಯಿಯ ದುರ್ಗಂಧವನ್ನು ದೂರ ಮಾಡಲು ಜಾಯಿಕಾಯಿ ಪುಡಿಯನ್ನು ನೀರಿನಲ್ಲಿ ಹಾಕಿ ಬಾಯಿಯನ್ನು ಮುಕ್ಕಳಿಸಿದರೆ ಖಂಡಿತವಾಗಿ ದುರ್ಗಂಧ ನಿಲ್ಲುತ್ತದೆ ಒಸಡುಗಳು ಗಟ್ಟಿ ಆಗುತ್ತದೆ. ಇನ್ನೂ ನಿಮಗೆ ಮೊಣಕಾಲು ನೋವು ಕೈಕಾಲು ನೋವು ಮಂಡಿ ನೀವು ಆಗುತ್ತಿದ್ದರೆ, ಈ ಜಾಯಿಕಾಯಿ ದಿವ್ಯ ಔಷಧ. ಅದಕ್ಕಾಗಿ ನೀವು ಈ ಜಾಯಿಕಾಯಿ ಪುಡಿಯ ಜೊತೆಗೆ ಸಾಸುವೆ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಬೆಚ್ಚಗೆ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ ಇದರಿಂದ ಕೈಕಾಲು ನೋವು ಮಂಡಿ ನೋವು ಎಲ್ಲವೂ ಕಡಿಮೆ ಆಗುತ್ತದೆ. ಆದರೆ ಜಾಯಿಕಾಯಿ ಅನ್ನು ಅಧಿಕವಾಗಿ ಉಪಯೋಗಿಸಬಾರದು. ದಿನಕ್ಕೆ 15 ಗ್ರಾಂ ಗಿಂತ ಹೆಚ್ಚು ಸೇವನೆ ಮಾಡಬಾರದು ಮಾಡಿದರೆ ವಾಕರಿಕೆ ತಲೇನೋವು ತಲೆ ಸುತ್ತುವಿಕೆ ಎಲ್ಲವೂ ಶುರು ಆಗುತ್ತದೆ ಆದ್ದರಿಂದ ತುಂಬಾನೇ ಎಚ್ಚರಿವಿರಲಿ ಗೆಳೆಯರೇ. ಶುಭದಿನ.

Leave a Reply

Your email address will not be published. Required fields are marked *