ಬಾಳೆಹಣ್ಣಿನ ಗಿಡದ ಹೂವನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ?????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಬಾಳೆ ಗಿಡ ಅಂದ ತಕ್ಷಣ ನಮಗೆ ಬಾಳೆಹಣ್ಣು ನೆನಪಿಗೆ ಬರುತ್ತದೆ. ಬಾಳೆಹಣ್ಣು ಇಷ್ಟ ಪಡದೆ ಇರುವ ಜನರಿಲ್ಲ. ಚಿಕ್ಕವರಿನಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಇಷ್ಟ ಪಡುವ ಹಣ್ಣು ಇದಾಗಿದೆ. ಅಷ್ಟೇ ಅಲ್ಲದೇ ಈ ಹಣ್ಣು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಉತ್ತಮ ಅಂತ ಕೂಡ ತಿಳಿದು ಕೊಂಡಿದ್ದೇವೆ. ಆದರೆ ಕೇವಲ ಬಾಳೆಹಣ್ಣಿನಲ್ಲಿ ಮಾತ್ರವಲ್ಲದೇ ಬಾಳೆ ಹೂವಿನಲ್ಲಿ ಕೂಡ ಆರೋಗ್ಯಕರ ಪ್ರಯೋಜನಗಳು ಅಡಗಿವೆ. ಬಾಳೆ ಗಿಡದ ಹೂವನ್ನು ಬಾಳೆ ಹಣ್ಣಿನ ಹೃದಯ ಎಂದು ಕರೆಯುತ್ತಾರೆ. ಇದರಲ್ಲಿ ಉತ್ತಮವಾದ ಪೋಷಕಾಂಶಗಳು ರಂಜಕ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಸತು ಕ್ಯಾಲ್ಷಿಯಂ ಎಲ್ಲ ಬಗೆಯ ಅಂಶಗಳನ್ನು ಒಳಗೊಂಡಿದೆ. ನಮ್ಮ ದೇಹಕ್ಕೆ ಬಹಳ ಒಳ್ಳೆಯದು ಹಾಗೂ ಉತ್ತಮವಾದದ್ದು ಮತ್ತು ಅನೇಕ ಬಗೆಯ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಬಾಳೆ ಗಿಡದ ಹೂವಿನ ಬಳಕೆ ಇಂದ ಯಾವೆಲ್ಲ ರೋಗಗಳನ್ನು ತಡೆಗಟ್ಟಬಹುದು ಅಂತ ತಿಳಿಯೋಣ ಬನ್ನಿ.

 

ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದಾಗಿ ಪ್ರತಿಯೊಬ್ಬರ ಮನೆಯಲ್ಲಿ ಮಧುಮೇಹಿಗಳು ಒಬ್ಬರಾದರೂ ಇದ್ದೇ ಇದ್ದಾರೆ. ಹೀಗಾಗಿ ಅವರಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚುತ್ತದೆ ಹಾಗೂ ಗ್ಲೂಕೋಸ್ ಮಟ್ಟವು ಕೂಡ ಹೆಚ್ಚುತ್ತದೆ. ಆಹಾರವನ್ನು ಸೇವನೆ ಮಾಡುವ ಇನ್ಸುಲಿನ್ ಎಂಬ ಅಂಶವು ಜೀವಕೋಶಗಳಿಗೆ ತಲುಪಿಸಲು ಸಹಾಯ ಮಾಡುತ್ತವೆ ಆದರೆ ರಕ್ತದಲ್ಲಿ ಸಕ್ಕರೆಯ ಮಟ್ಟವೂ ಹೆಚ್ಚುವುದರಿಂದ ದೇಹದ ಅನೇಕ ಭಾಗಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ಮಧುಮೇಹಿಗಳು ತಮ್ಮ ಆಹಾರದ ಮೇಲೆ ತೀವ್ರವಾದ ಕಾಳಜಿಯನ್ನು ವಹಿಸುವುದು ಅಗತ್ಯ. ಅವರು ಸೇವನೆ ಮಾಡುವ ಆಹಾರ ಮತ್ತು ಕುಡಿಯುವಿಕೆ ಎಲ್ಲವೂ ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ರಕ್ತದಲ್ಲಿ ಸಕ್ಕರೆಯ ಅಂಶವು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೂ ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಹೆಚ್ಚಾದರೆ ಕಣ್ಣಿನ ಸಮಸ್ಯೆ ಮೂತ್ರಪಿಂಡ ಸಮಸ್ಯೆ ನರಗಳಿಗೆ ಹಾನಿ ಉಂಟು ಮಾಡುತ್ತದೆ.ಅದಕ್ಕಾಗಿ ನೀವು ಮನೆಯಲ್ಲಿ ಅಥವಾ ನೈಸರ್ಗಿಕವಾಗಿ ದೊರೆಯುವ ಗಿಡ ಮೂಲಿಕೆಗಳನ್ನು ಬಳಕೆ ಮಾಡಿಕೊಂಡು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹಾಗಾದರೆ ಮಧುಮೇಹಿಗಳು ಬಾಳೆ ಗಿಡದ ಹೂವನ್ನು ಯಾವ ರೀತಿಯಾಗಿ ಬಳಕೆ ಮಾಡಬಹುದು ಅಂತ ಹೇಳುವುದಾದರೆ, ಬಾಳೆ ಗಿಡದ ಹೂವನ್ನು ತಂದು ಅದನ್ನು ಚೆನ್ನಾಗಿ ತೊಳೆದು, ಕತ್ತರಿಸಿ ನೀವು ಬೇರೆ ಪಲ್ಯವನ್ನು ಮಾಡುವಾಗ ಇದನ್ನು ಸೇರಿಸಿ ಮಾಡಿಕೊಂಡು ಸೇವನೆ ಮಾಡಬಹುದು.

 

ಅಥವಾ ಸಲಾಡ್ ರೂಪದಲ್ಲಿ ಸೇವನೆ ಮಾಡಬಹುದು. ಇನ್ನೂ ಇದು ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ. ಬಾಳೆ ಹಣ್ಣಿನ ಹೂವಿನಲ್ಲಿ ಇರುವ ಪೌಷ್ಟಿಕಾಂಶಗಳು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಇದನು ನೀವು ಸೂಪ್ ಮಾಡಿಕೊಂಡು ಅಥವಾ ಇನ್ನಿತರ ಸಲಾಡ್ ಮಾಡಿಕೊಂಡು ಸೇವನೆ ಮಾಡಬಹುದು. ಅಷ್ಟೇ ಅಲ್ಲದೇ ದೇಹದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮಾನಸಿಕ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಇದರಲ್ಲಿ ಇರುವ ಮ್ಯಾಗ್ನಿಷಿಯಂ ಖಿನ್ನತೆಯನ್ನು ಉಂಟು ಮಾಡುವುದನ್ನು ತಡೆಯುತ್ತದೆ. ಬಾಳೆ ಹಣ್ಣಿನ ಹೂವು ರೋಗ ನಿರೋಧಕ ಹಾಗೂ ಉತ್ಕರ್ಷಕ ನಿರೋಧಕ ಗುಣಗಳನ್ನು ಹೊಂದಿವೆ. ಹಾಗೂ ಅಲ್ಜೈಮರ್ ರೋಗವು ಬರದಂತೆ ತಡೆಯುತ್ತದೆ.ಇದರಲ್ಲಿ ಇರುವ ಫೈಬರ್ ಅಂಶವು ಹೊಟ್ಟೆಗೆ ಸಂಭಂದಿಸಿದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೂ ಆಹಾರವನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ನಮ್ಮ ಚರ್ಮದ ರಕ್ಷಣೆಗೆ ಸೂಕ್ತ. ಚರ್ಮದ ಮೇಲೆ ಆಗುವ ಸೋಂಕುಗಳನ್ನು ತಡೆಯುತ್ತದೆ. ಶುಭದಿನ.

Leave a Reply

Your email address will not be published. Required fields are marked *