ಆವರಿಕೇ ಅಥವಾ ತಂಗಡಿ ಗಿಡದ ನೂರೆಂಟು ಲಾಭಗಳು. ಅವು ಯಾವುವು ಅಂತೀರಾ?????

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಆವರಿಕೆ ಗಿಡದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಮೇಲೆ ಹೇಳಿದ ಹೆಸರಿನ ಗಿಡ ಕೇವಲ ಹೊಲ ಗದ್ದೆಗಳಲ್ಲಿ ಕೆಲಸವನ್ನು ಮಾಡುವವರಿಗೆ ಹಾಗೂ ಹೊಲದಲ್ಲಿ ವಾಸ ಮಾಡುವ ಜನರಿಗೆ ಇದು ಬಹಳ ಚಿರ ಪರಿಚಿತ ಅಂತ ಹೇಳಬಹುದು. ಈ ಗಿಡವನ್ನು ತಂಗಡಿ ಗಿಡ ಎಂದು ಕೂಡ ಕರೆಯುತ್ತಾರೆ. ಸಾಮಾನ್ಯವಾಗಿ ನೀವು ನೋಡಿರಬಹುದು ಎಲ್ಲ ಬಗೆಯ ಗಿಡಗಳನ್ನು ಅಥವಾ ಸಸ್ಯಗಳನ್ನು ಅವುಗಳ ಬೀಜವನ್ನು ಹಾಕಿ ಸಸ್ಯಗಳನ್ನು ಬೆಳೆಯುತ್ತಾರೆ ಆದರೆ ಈ ಆವರಿಕೆ ಗಿಡವನ್ನು ಯಾರು ಕೂಡ ಬೀಜವನ್ನು ಹಾಕಿ ಬೆಳೆಸುವುದಿಲ್ಲ ಇದು ತನ್ನಿಂದ ತಾನಾಗಿಯೇ ಬೆಳೆಯುತ್ತದೆ. ಹಾಗೂ ಇದನ್ನು ನಾವು ಹೆಚ್ಚಾಗಿ ಉತ್ತರ ಕರ್ನಾಟಕದ ಕಡೆಗೆ ಹೊಲ ಗದ್ದೆಗಳಲ್ಲಿ ಕಾಣಬಹುದು. ಇದರ ಎಲೆಗಳು ನೋಡಲು ಹುಣಸೆ ಮರದ ಹಾಗೆಯೇ ಕಾಣಸಿಗುತ್ತದೆ. ಹಾಗೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈ ಗಿಡವೂ ಹೂವುಗಳನ್ನು ನೀಡುತ್ತವೆ 3-4 ಅಡಿ ಎತ್ತರ ಬೆಳೆಯುತ್ತಿದ್ದು ಈ ಗಿಡದ ಎಲೆಗಳ ತುದಿಯಲ್ಲಿ ಅರಿಶಿನ ಬಣ್ಣದ ಸುಂದರವಾದ ಹೂವುಗಳ ಗೊಂಚಲ ಜೋತು ಬಿದ್ದಿರುತ್ತದೆ.

 

ಈ ಗಿಡದ ಎಲ್ಲ ಭಾಗಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಏಕೆಂದ್ರೆ ಇವುಗಳಲ್ಲಿ ಔಷಧೀಯ ಗುಣಗಳು ಅಡಗಿವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. ನೀವೇನಾದರೂ ಬಿದ್ದು ಗಾಯವನ್ನು ಮಾಡಿಕೊಂಡಿದ್ದರೆ ಈ ಗಿಡದ ಎಲೆಗಳನ್ನು ಮೊದಲಿಗೆ ಹುರಿದುಕೊಳ್ಳಬೇಕು. ನಂತರ ಗಾಯವಾದ ಸ್ಥಳಕ್ಕೆ ಕೊಬ್ಬರಿ ಎಣ್ಣೆಯನ್ನೂ ಹಚ್ಚಿಕೊಳ್ಳಬೇಕು ಮೇಲೆ ಈ ಹೂವನ್ನು ಲೇಪಿಸಬೇಕು. ಹೀಗೆ ಮಾಡುವುದರಿಂದ ಖಂಡಿತವಾಗಿ ಗಾಯವು ಮಾಯವಾಗುತ್ತದೆ. ಇನ್ನೂ ನಿಮಗೇನಾದರೂ ಹೊಟ್ಟೆಯಲ್ಲಿ ಜಂತು ಹುಳಗಳು ಆಗಿದ್ದರೆ ಈ ಗಿಡದ ಕಷಾಯವನ್ನು ಮಾಡಿ ಕುಡಿಯಿರಿ. ಖಂಡಿತವಾಗಿ ನಿಮಗೆ ಜಂತು ಹುಳಗಳ ಸಮಸ್ಯೆಯು ಬೇಗನೆ ನಿವಾರಣೆ ಆಗುತ್ತದೆ. ಇನ್ನೂ ಈ ತಂಗಡಿ ಗಿಡದ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ಹಾಲಿನಲ್ಲಿ ಬೆರೆಸಿ ಸೇವನೆ ಮಾಡುವುದರಿಂದ ಪುರುಷರಲ್ಲಿ ಕಾಡುವ ಗುಪ್ತಚರ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇನ್ನೂ ಈ ಗಿಡದ ಕಾಯಿಗಳನ್ನು ಜಜ್ಜಿ ಪುಡಿ ಮಾಡಿ ಹಾಲಿನಲ್ಲಿ ಕುಡಿದರೆ ಸಾಕು ದೇಹಕ್ಕೆ ಚೈತನ್ಯ ತುಂಬುತ್ತದೆ.

 

ಇನ್ನೂ ನಿಮ್ಮ ಮುಖದಲ್ಲಿ ಕಪ್ಪು ಕಲೆಗಳು ಆಗಿದ್ದರೆ ಮೊಡವೆಗಳು ಆಗಿದ್ದರೆ ಈ ಗಿಡ ಒಂದು ದಿವ್ಯ ಔಷಧ ಆಗಿ ಕೆಲಸವನ್ನು ಮಾಡುತ್ತದೆ. ಅದಕ್ಕಾಗಿ ಈ ಗಿಡದ ಹೂವುಗಳನ್ನು ತೆಗೆದುಕೊಂಡು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಂಡು ಕೊಬ್ಬರಿ ಎಣ್ಣೆ ಯಲ್ಲಿ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ ಇದರಿಂದ ಮೊಡವೆಗಳು ಕಪ್ಪು ಕಲೆಗಳು ಕಣ್ಮರೆ ಆಗುತ್ತವೆ. ಇನ್ನೊಂದು ಈ ಗಿಡದ ಉಪಯೋಗ ಏನೆಂದರೆ ಈ ಗಿಡದ ಹೂವುಗಳನ್ನು ಬಳಕೆ ಮಾಡಿಕೊಂಡು ಟೀ ಮಾಡಿ ಕುಡಿಯುವುದರಿಂದ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗುತ್ತದೆ. ಅಷ್ಟೇ ಅಲ್ಲದೇ ಇದು ನಮ್ಮ ದೇಹವನ್ನು ಆದಷ್ಟು ತಂಪಾಗಿ ಇಡಲು ಸಹಾಯ ಮಾಡುತ್ತದೆ. ಈ ಗಿಡದ ಬಳಕೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲದೇ ಇದ್ದರೂ ಕೂಡ ಗೆಳೆಯರೇ ಗರ್ಭಿಣಿಯರು ಹಾಲುಣಿಸುವ ತಾಯಂದಿರು ಆಪರೇಶನ್ ಮಾಡಿಕೊಂಡಿರುವ ಜನರು ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಇದನ್ನು ಸೇವನೆ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಶುಭದಿನ.

Leave a Reply

Your email address will not be published. Required fields are marked *