ಇಂಥಹ ಸಮಸ್ಯೆಗಳು ನಿಮ್ಮಲ್ಲಿ ಕಾಡುತ್ತಿದ್ದರೆ ಬಾಳೆಹಣ್ಣು ಸೇವನೆ ಮಾಡಲು ಹೋಗಬೇಡಿ. ಯಾವೆಲ್ಲ ಕಾಯಿಲೆಗಳು ಗೊತ್ತೇ????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಬಾಳೆಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇಂತಹ ಅನಾರೋಗ್ಯದ ಸಮಸ್ಯೆಗಳು ನಿಮಗಿದ್ದರೆ ಖಂಡಿತವಾಗಿ ಬಾಳೆಹಣ್ಣು ತಿನ್ನಬೇಡಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಕಾರಣಕ್ಕೆ ಬಾಳೆಹಣ್ಣು ಸೇವನೆ ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಬಾಳೆಹಣ್ಣು ಸೇವನೆ ಮಾಡಿದ್ರೆ ನಮಗೆ ಊಹಿಸಲಾಗದಷ್ಟು ಲಾಭಗಳು ಸಿಗುತ್ತವೆ ಆದರೆ ಇಂತಹ ಸಮಸ್ಯೆಗಳು ಇದ್ದವರು ಬಾಳೆ ಹಣ್ಣಿನ ಸೇವನೆ ಇಂದ ದೂರವಿರುವುದು ಒಳ್ಳೆಯದು ಅಂತ ವೈದ್ಯರು ತಿಳಿಸಿದ್ದಾರೆ. ಮೊದಲನೆಯದು ಮಧುಮೇಹಿಗಳು ಬಾಳೆಹಣ್ಣು ಸೇವನೆ ಮಾಡುವುದು ಸೂಕ್ತವಲ್ಲ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಎಂಬ ಕಾಯಿಲೆ ಎಲ್ಲೆಡೆ ಹರಡಿದ್ದು ಪ್ರತಿಯೊಬ್ಬರ ಮನೆಯಲ್ಲಿ ಸಕ್ಕರೆ ಕಾಯಿಲೆ ರೋಗಿಗಳು ಇರುತ್ತಾರೆ. ಅವರಿಗೆ ಸಿಹಿ ಪದಾರ್ಥವನ್ನು ಆಹಾರಗಳನ್ನು ಏನು ಸೇವನೆ ಮಾಡುವಂತಿಲ್ಲ ಅದರಲ್ಲಿ ಈ ಬಾಳೆಹಣ್ಣು ಕೂಡ ಒಂದಾಗಿದೆ. ಬಾಳೆಹಣ್ಣು ರುಚಿಯಲ್ಲಿ ಸಿಹಿಯಾಗಿ ಇರುತ್ತದೆ. ಇದರ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಬೀರುತ್ತದೆ.

 

ಏಕೆಂದ್ರೆ ಇದು ರುಚಿಯಲ್ಲಿ ಸಿಹಿಯಾಗಿರುವ ಕಾರಣ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹಿಗಳು ಆದಷ್ಟು ಬಾಳೆಹಣ್ಣು ಸೇವನೆ ಮಾಡುವುದನ್ನು ತಪ್ಪಿಸಬೇಕು. ಇನ್ನೂ ಎರಡನೆಯದು ತಲೆನೋವಿನ ಸಮಸ್ಯೆ ಹೆಚ್ಚಾಗಿ ಎದುರಿಸುತ್ತಿರುವ ಜನರು ಈ ಬಾಳೆಹಣ್ಣು ಅಧಿಕವಾಗಿ ಸೇವನೆ ಮಾಡಲು ಹೋಗಬಾರದು. ತಲೆ ನೋವಿಗೆ ಸಾವಿರಾರು ಕಾರಣಗಳಿದ್ದರೂ ಕೂಡ ಒತ್ತಡ ಟೆನ್ಷನ್ ಕೆಲಸದ ಹೆಚ್ಚಳತೆ ಇಂದಾಗಿ ನಿದ್ದೆ ಕಡಿಮೆ ಮಾಡಿದರೆ ತಲೆನೋವು ಬರುತ್ತದೆ ಅಂತ ಹೇಳಲಾಗುತ್ತದೆ. ಆದರೆ ಇಲ್ಲಿ ವೈದ್ಯರು ಹೇಳುವ ಪ್ರಕಾರ, ಬಾಳೆಹಣ್ಣು ಅತಿಯಾದ ತಲೆನೋವು ಇರುವವರು ಸೇವನೆ ಮಾಡಬಾರದು ಕಾರಣ, ಬಾಳೆಹಣ್ಣಿನಲ್ಲಿ ಇರುವ ಕೆಲವು ಅಂಶಗಳು ತಲೆನೋವನ್ನೂ ಮತ್ತಷ್ಟು ಹೆಚ್ಚಿಸುತ್ತದೆ. ಇನ್ನೂ ಮೂರನೆಯದು ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬಾಳೆಹಣ್ಣು ಸೇವನೆ ಮಾಡಬಾರದು. ಅತಿಯಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಹೊಟ್ಟೆ ಗಟ್ಟಿಯಾಗುತ್ತದೆ. ಹಾಗೂ ಹೊಟ್ಟೆಯೊಳಗೆ ಗ್ಯಾಸ್ ತುಂಬುತ್ತದೆ. ಹೀಗಾಗಿ ನಿಮಗೆ ಹೊಟ್ಟೆ ನೋವು ಹೊಟ್ಟೆ ಉಬ್ಬರ ಹೊಟ್ಟೆಗೆ ಸಂಭಂದ ಪಟ್ಟ ಸಮಸ್ಯೆಗಳು ಶುರು ಆಗುತ್ತದೆ ಮತ್ತಷ್ಟು ಕಿರಿಕಿರಿ ಆಗುತ್ತದೆ ಆದ್ದರಿಂದ ಆದಷ್ಟು ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಖಂಡಿತವಾಗಿ ಬಾಳೆಹಣ್ಣು ಮಿತವಾಗಿ ಸೇವನೆ ಮಾಡಿ.

 

ಇನ್ನೂ ಹೃದಯ ಸಂಬಂಧಿ ಕಾಯಿಲೆಗಳು ಅಥವಾ ಹೃದ್ರೋಗದ ಸಮಸ್ಯೆಗಳು ಇದ್ದವರು ಬಾಳೆಹಣ್ಣು ಅತಿಯಾಗಿ ಸೇವನೆ ಮಾಡಬೇಡಿ. ಇದು ಹೃದಯದಲ್ಲಿ ರಕ್ತವನ್ನು ಸಂಚಾರ ಮಾಡುವುದನ್ನು ಆದಷ್ಟು ತಡೆಹಿಡಿಯುತ್ತದೆ ಆದ್ದರಿಂದ ವಯಸ್ಸಾದವರಲ್ಲಿ ಹೃದ್ರೋಗದ ಸಮಸ್ಯೆಗಳು ಹೃದಯಾಘಾತ ಆಗುವ ಸಾಧ್ಯತೆಗಳು ಹೆಚ್ಚಿಗೆ ಇರುತ್ತವೆ. ಆದ್ದರಿಂದ ಅವರು ಬಾಳೆಹಣ್ಣು ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು. ಇನ್ನೂ ಕಿಡ್ನಿ ಅಲರ್ಜಿ ಸಮಸ್ಯೆ ಇರುವವರು ಕೂಡ ಬಾಳೆಹಣ್ಣು ಸೇವನೆ ಇಂದ ದೂರವಿರಬೇಕು. ಈ ಎಲ್ಲ ಸಮಸ್ಯೆಗಳನ್ನೂ ಒಳಗೊಂಡಿರುವವರು ಬಾಳೆಹಣ್ಣು ಅತಿಯಾಗಿ ಸೇವನೆ ಮಾಡಬಾರದು. ಇಲ್ಲವಾದರೆ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತದೆ. ಪರಿಸ್ಥಿತಿ ತುಂಬಾನೇ ಗಂಭೀರವಾಗುತ್ತದೆ. ಅನಾರೋಗ್ಯ ಪೀಡಿತರಾಗಿ ಬದುಕಬೇಕಾಗುತ್ತದೆ. ಆದ್ದರಿಂದ ಯಾವುದೇ ಹಣ್ಣುಗಳನ್ನು ತಿನ್ನುವ ಮೊದಲು ಅರ್ಥ ಮಾಡಿಕೊಂಡು ಸೇವನೆ ಮಾಡುವುದು ಬಹಳ ಒಳ್ಳೆಯದು. ಶುಭದಿನ.

Leave a Reply

Your email address will not be published. Required fields are marked *