ಕೇವಲ ಹಾಲು ಕುಡಿಯಬೇಡಿ. ಅದರಲ್ಲಿ ಏಲಕ್ಕಿ ಹಾಕಿ ಕುಡಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ.ಹೇಗೆ ಅಂತೀರಾ??????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ,
ನಾವು ಬಳಸುವ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಸಹ ಒಂದು. ಇದರಲ್ಲಿ ಅನೇಕ ಆರೋಗ್ಯದ ಲಾಭಗಳು ಸಿಗುತ್ತವೆ. ಕೆಲವರಿಗೆ ರಾತ್ರಿ ಮಲಗುವ ವೇಳೆಗೆ ಹಾಲನ್ನು ಕುಡಿದು ಮಲಗುವ ಅಭ್ಯಾಸ ಇರುತ್ತದೆ. ಇನ್ನೂ ಕೆಲವು ಜನರಿಗೆ ಊಟವಾದ ಮೇಲೆ ಒಂದು ಲೋಟ ಹಾಲನ್ನು ಕುಡಿಯುವ ರೂಢಿ ಇರುತ್ತದೆ. ಇನ್ನೂ ಕೆಲವು ಜನರು ಹಾಲಿನಲ್ಲಿ ಏನಾದ್ರೂ ಬೆರೆಸಿ ಕುಡಿಯುುವ ಅಭ್ಯಾಸ ಇರುತ್ತದೆ. ಉದಾಹರಣೆ ಗೆ ಹಾಲಿನಲ್ಲಿ ಅರಿಶಿಣ ಸಕ್ಕರೆ ಹಾಕಿಕೊಂಡು ಕುಡಿಯುತ್ತಾರೆ. ಆದರೆ ಯಾರೂ ಕೂಡ ಹಾಲಿನಲ್ಲಿ ಏಲಕ್ಕಿ ಹಾಕಿಕೊಂಡು ಕುಡಿಯುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಹಾಲಿನಲ್ಲಿ ಏಲಕ್ಕಿ ಹಾಕಿ ಕುಡಿದರೆ ಎಷ್ಟೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಹೌದು ಏಲಕ್ಕಿ ಹಾಕಿಕೊಂಡು ಹಾಲನ್ನು ಕುಡಿದರೆ ಖಂಡಿತವಾಗಿ ಚಮತ್ಕಾರಿ ಪ್ರಯೋಜನಗಳು ಆಗುತ್ತವೆ.

 

ಏಲಕ್ಕಿ ಒಂದು ಸ್ವಾದಿಷ್ಟ ಮತ್ತು ಮಸಾಲೆ ಯುಕ್ತ ಪದಾರ್ಥವಾಗಿದೆ. ಇದರ ಮೂಲತಃ ನಮ್ಮ ಭಾರತ ದೇಶವೇ ಆಗಿದೆ. ಹೀಗಾಗಿ ಇದನ್ನು ನಾವು ಮೂಲೇ ಮೂಲೆಯಲ್ಲಿಯೂ ಕಾಣಬಹುದು.ಏಲಕ್ಕಿ ಬೀಜವನ್ನು ಸೇವನೆ ಮಾಡುವುದರಿಂದ ಹಲವಾರು ಅನುಕೂಲಗಳು ಇವೆ. ಅವು ಯಾವುವು ಅಂತ ತಿಳಿಯೋಣ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ರಕ್ತದೊತ್ತಡವನ್ನು ನಿವಾರಣೆ ಮಾಡುತ್ತವೆ. ಏಲಕ್ಕಿ ಸೇವನೆ ಮಾಡುವುದರಿಂದ ಬಾಯಿಯ ದುರ್ವಾಸನೆಗೆ ದೂರವಾಗುತ್ತದೆ. ಅದಕ್ಕಾಗಿ ನೀವು ಪ್ರತಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಏಲಕ್ಕಿ ಹಾಕಿಕೊಂಡು ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿಯಿರಿ. ಇದರಿಂದ ಗುಪ್ತಚರ ಆಸಕ್ತಿ ಹೆಚ್ಚಿಸುತ್ತದೆ. ಏಲಕ್ಕಿಯಲ್ಲಿ ಕ್ಯಾನ್ಸರ್ ನಿವಾರಕ ಶಕ್ತಿ ಇದೆ. ಆಹಾರವನ್ನು ಸೇವನೆ ಮಾಡಿದ ನಂತರ ತಿಂದ ಆಹಾರವೂ ಸರಿಯಾಗಿ ಜೀರ್ಣವಾಗಲು ರಾತ್ರಿ ಒಂದು ಏಲಕ್ಕಿ ಅನ್ನು ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸಿ. ಇದರಿಂದ ನಿಮ್ಮ ಜೀರ್ಣ ಕ್ರಿಯೆಗೂ ಸಹಾಯ ಆಗುತ್ತದೆ. ಜೀರ್ಣ ಶಕ್ತಿ ವೃದ್ಧಿಸುತ್ತದೆ. ಏಲಕ್ಕಿ ಯಲ್ಲಿ ಇರುವ ರಾಸಾಯನಿಕ ಗುಣಗಳು ಗಂಟಲು ಬೇನೆ ಗಂಟಲು ಕಿರಿಕಿರಿ ಎಲ್ಲವನ್ನೂ ಕಡಿಮೆ ಮಾಡುತ್ತದೆ. ಹಾಗೂ ನಮ್ಮ ದೇಹದಲ್ಲಿ ಶೇಖರಣೆ ಆದ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ.

 

ಮತ್ತು ಫ್ರೀ ರಾಡಿಕಲ್ ನಿಂದಾ ನಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ. ಅಷ್ಟೇ ಅಲ್ಲದೇ ರಕ್ತವನ್ನು ಶುದ್ಧೀಕರಿಸುತ್ತದೆ. ಇದರ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲೂ ಸಹಾಯ ಮಾಡುತ್ತದೆ. ಇದರಿಂದ ಮಧುಮೇಹ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು.ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೀವು ರಾತ್ರಿ ಮಲಗುವಾಗ ಒಂದು ಲೋಟ ಹಾಲಿಗೆ ಏಲಕ್ಕಿ ಹಾಕಿ ಕುದಿಸಿ ಕುಡಿಯಿರಿ. ಏಲಕ್ಕಿ ಹಾಲಿನಲ್ಲಿ ಹಾಕಿ ನಿತ್ಯ ನಿಯಮಿತ ಸೇವನೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಹೃದಯ ಸ್ತಂಭನ ಸಮಸ್ಯೆಗಳು ಇಲ್ಲವಾಗುತ್ತವೆ. ಇದರಲ್ಲಿನ ಆಂಟಿ ಆಕ್ಸಿಡೆಂಟ್ ಅಂಶಗಳು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಪಡೆದಿವೆ ಇಷ್ಟೇ ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಶಕ್ತಿ ಪಡೆದಿದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತವಾಗಿ ಇಂದಿನಿಂದಲೇ ಏಲಕ್ಕಿ ಹಾಲು ಕುಡಿಯಿರಿ. ಶುಭದಿನ.

Leave a Reply

Your email address will not be published. Required fields are marked *