ವೀಳ್ಯದೆಲೆ ಹೀಗೆ ಬಳಸುವುದರಿಂದ ಈ ಆರು ಸಮಸ್ಯೆಗಳು ಮಾಯ????????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ ವೀಳ್ಯದೆಲೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ಹಾಗೂ ಪ್ರಾಮುಖ್ಯತೆಯನ್ನು ಪಡೆದಿದೆ. ವೀಳ್ಯದೆಲೆ ಔಷಧಿಯ ಮಹಾಪೂರವೇ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು ಇದನ್ನು ನಾವು ಮನೆಮದ್ದು ಗಳಾಗಿ ಕೂಡ ಬಳಕೆ ಮಾಡುತ್ತೇವೆ ಎಂದು ತಿಳಿದು ಬಂದಿದೆ. ದಕ್ಷಿಣ ಭಾರತೀಯರು ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ. ಮದುವೆಯಲ್ಲಿ ವೀಳ್ಯದೆಲೆ ಎಂದು ಎಲ್ಲರಿಗೂ ನೀಡಿ ವೀಳ್ಯದೆಲೆ ದಿನ ಎಂದು ಸಂಭ್ರಮ ಪಡುತ್ತಾರೆ. ಇನ್ನೂ ಮಹಿಳೆಯರಿಗೆ ಬಾಗಿನ ಕೊಡಬೇಕಾದರೆ ವೀಳ್ಯದೆಲೆ ಇಲ್ಲದೆ ಅದು ಅಪರಿಪೂರ್ಣ ಅಂತ ಹೇಳಬಹುದು. ಅತಿಥಿ ಸತ್ಕಾರ ಮಾಡುವಾಗ ಊಟವಾದ ಮೇಲೆ ವೀಳ್ಯದೆಲೆ ಕೊಡುವ ಸಂಪ್ರದಾಯ ಇದೆ ಗೆಳೆಯರೇ. ಹಾಗೂ ತಾಂಬೂಲವನ್ನು ನೀಡುವಾಗ ವೀಳ್ಯದೆಲೆ ಇದ್ದರೆ ಅದಕ್ಕೆ ಶೋಭೆ ಎಂದು ತಿಳಿದು ಬಂದಿದೆ. ವೀಳ್ಯದೆಲೆ ನೋಡಲು ಹಸಿರು ಬಣ್ಣದಲ್ಲಿ ಇದ್ದು ಇದರ ಆಕರವೂ ಹೃದಯಾಕರದಲ್ಲಿ ಇರುತ್ತದೆ. ಇದು ಗಿಡವಾಗಿ ಬೆಳೆಯುವುದಿಲ್ಲ ಬದಲಾಗಿ ಬಳ್ಳಿಯಾಗಿ ಹಬ್ಬುತ್ತದೆ.

 

ವೀಳ್ಯದೆಲೆ ಯಲ್ಲಿ ಇರುವ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವಂತೆ ಮಾಡುತ್ತದೆ.ವೀಳ್ಯದೆಲೆ ಬಾಯಿಯ ಆರೋಗ್ಯಕ್ಕೆ ಸಹಕಾರಿ ಆಗಿದೆ. ಇದರ ಸೇವನೆ ಇಂದ ಬಾಯಿಯ ದುರ್ವಾಸನೆಯನ್ನು ತಡೆಯಬಹುದು. ಅದಕ್ಕಾಗಿ ಊಟವಾದ ಮೇಲೆ ವೀಳ್ಯದೆಲೆ ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇನ್ನೂ ರಕ್ತಸ್ರಾವ ಆಗುವ ಒಸಡುಗಳಿಗೆ ದಿವ್ಯ ಔಷಧ. ಈ ವಿಲ್ಯದೇಳೆ ಸ್ವಲ್ಪ ಬಿಸಿ ಮಾಡಿ ಪೇಸ್ಟ್ ಮಾಡಿ ಒಸಡುಗಳನ್ನು ಮಸಾಜ್ ಮಾಡಿದರೆ ಒಸಡುಗಳಲ್ಲಿ ಆಗುವ ರಕ್ತಸ್ರಾವ ನಿಂತು ಹೋಗುತ್ತದೆ. ಹೀಗೆ ರಾತ್ರಿ ವೇಳೆಗೆ ಮಾಡಬೇಕು.ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಬಳಸಲು ಆಯುರ್ವೇದ ಕೂಡ ಶಿಫಾರಸ್ಸು ಮಾಡುತ್ತದೆ. ಎಳ್ಳು ಅಥವಾ ತೆಂಗಿನ ಎಣ್ಣೆಯಿಂದ ವೀಳ್ಯದ ಎಲೆಯನ್ನು ರುಬ್ಬಿ, ಆ ಪೇಸ್ಟ್ ಅನ್ನು ನೆತ್ತಿಗೆ, ಕೂದಲಿನ ಬುಡಕ್ಕೆ ಹಚ್ಚಿ. ಕನಿಷ್ಠ ಒಂದು ಗಂಟೆಯಾದರೂ ಬಿಡಿ. ನಂತರ ಶಾಂಪೂವಿನಿಂದ ತೊಳೆಯಿರಿ. ಹೀಗೆ ಮಾಡಿದ್ರೆ ನಿಮ್ಮ ಕೂದಲು ಉದುರುವುದಿಲ್ಲ ದಟ್ಟವಾಗಿ ಸೊಂಪಾಗಿ ಬೆಳೆಯುತ್ತದೆ. ಇನ್ನೂ ವೀಳ್ಯದೆಲೆ ಸೇವನೆ ಇಂದ ಮಲ ವಿಸರ್ಜನೆ ಸರಾಗವಾಗಿ ನಡೆಯುತ್ತದೆ ಜೊತೆಗೆ ಮಲಬದ್ಧತೆಯ ಸಮಸ್ಯೆಗಳು ಬರುವುದಿಲ್ಲ.

 

ನಿಮಗೇನಾದರೂ ಕೈ ಕಾಲುಗಳು ಬಾವು ಬಂದಿದ್ದರೆ ವೀಳ್ಯದೆಲೆ ಅರಿದು ಸ್ವಲ್ಪ ಪೇಸ್ಟ್ ಮಾಡಿ ಅದರಲ್ಲಿ ಕರಿ ಮೆಣಸು ಪುಡಿ ಮಾಡಿ ಹಾಕಿ ಮಿಕ್ಸ್ ಮಾಡಿ ಬಾವು ಬಂದ ಜಾಗಕ್ಕೆ ಹಚ್ಚಿದರೆ ಬಾವು ಕಡಿಮೆ ಆಗುತ್ತದೆ. ಜೊತೆಗೆ ಉಸಿರಾಟದ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ ಹಾಗೂ ಕೆಮ್ಮು ಹೋಗಲಾಡಿಸಲು ಅದ್ಭುತವಾಗಿ ಕಾರ್ಯವನ್ನು ಮಾಡುತ್ತದೆ. ವೀಳ್ಯದೆಲೆಗಳಲ್ಲಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಮುಖದ ಮೇಲಿರುವ ಮೊಡವೆಗಳನ್ನು ಸುಲಭವಾಗಿ ತೆಗೆದುಹಾಕಲು ವೀಳ್ಯದ ಎಲೆ ಬಳಸಲಾಗುತ್ತದೆ. ಮುಖವನ್ನು ವೀಳ್ಯದ ಎಲೆ ಕಷಾಯದಿಂದ ತೊಳೆಯುವುದರಿಂದ ಅಥವಾ ವೀಳ್ಯದ ಎಲೆಗಳು ಮತ್ತು ಅರಿಶಿನದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ತೊಳೆಯುವುದರಿಂದ ತ್ವಚೆ ಕಲೆ ಮುಕ್ತವಾಗುವುದಲ್ಲದೆ, ಮೊಡವೆಗಳು ನಿವಾರಣೆಯಾಗುತ್ತವೆ.
ಅಷ್ಟೇ ಅಲ್ಲದೇ ಮಧುಮೇಹವನ್ನು ಕೂಡ ತಡೆಗಟ್ಟುತ್ತದೆ. ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೆ ವೀಳ್ಯದೆಲೆ ಅನ್ನು ಕೂಡ ಗಟ್ಟಿಯಾಗಿ ಹಿಡಿದರೆ ಖಂಡಿತವಾಗಿ ರಕ್ತಸ್ರಾವ ನಿಲ್ಲುತ್ತದೆ ಜೊತೆಗೆ ನೋವು ಕಡಿಮೆ ಆಗುತ್ತದೆ ತಲೆನೋವು ಕೂಡ ನಿವಾರಣೆ ಆಗುತ್ತದೆ. ಒಂದು ವಿಲ್ಯದೆಳೆ ಅನ್ನು ತಲೆ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಉಪಶಮನ ಆಗುತ್ತದೆ. ಶುಭದಿನ.

Leave a Reply

Your email address will not be published. Required fields are marked *