ಈ ಗಿಡದ ಎಲೆಗಳನ್ನೂ ಬಳಸುವುದರಿಂದ ಸಕ್ಕರೆ ಕಾಯಿಲೆ ಹತ್ತಿರ ಕೂಡ ಸುಳಿಯುವುದಿಲ್ಲ. ಅದು ಯಾವುದು ಗೊತ್ತೇ????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮಾವಿನ ಹಣ್ಣು ಅಂದರೆ ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ. ಹಾಗೂ ಮಾವಿನ ಕಾಯಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಏಕೆಂದ್ರೆ ಇದರ ರುಚಿ ಬಹಳ ಅದ್ಭುತವಾಗಿರುತ್ತದೆ. ಎಲ್ಲರೂ ಇದನ್ನು ಇಷ್ಟ ಪಟ್ಟು ಸೇವನೆ ಮಾಡುತ್ತಾರೆ. ಹಾಗೂ ಮಾವಿನ ಹಣ್ಣು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ಲಾಭಗಳು ಕೂಡ ಸಿಗುತ್ತದೆ. ಆದರೆ ಮಾವಿನ ಎಲೆಗಳ ಸೇವನೆಯಿಂದ ಕೂಡ ನಮ್ಮ ಆರೋಗ್ಯಕ್ಕೆ ದುಪ್ಪಟ್ಟು ಲಾಭಗಳು ಸಿಗುತ್ತವೆ ಅಂತ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮಾವಿನ ಮರದ ಎಲೆಗಳನ್ನು ಸೇವನೆ ಮಾಡುವುದರಿಂದ ಆಗುವ ಲಾಭಗಳ ಪಟ್ಟಿಯನ್ನು ಪರಿಚಯ ಮಾಡಿ ಕೊಡುತ್ತೇವೆ ಬನ್ನಿ. ಮಾವಿನ ಎಲೆಯಲ್ಲಿ ಸಾಕಷ್ಟು ಮೆಡಿಸಿನ್ ಗುಣಗಳಿವೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ಮಾವಿನ ಎಲೆಗಳನ್ನು ಹಲವಾರು ಔಷಧೀಯಗಳನ್ನೂ ತಯಾರಿಸಲು ಬಳಕೆ ಮಾಡುತ್ತಾರೆ.

 

ಮಾವಿನ ಎಲೆಗಳಲ್ಲಿ ವಿಟಮಿನ್ ಎ ವಿಟಮಿನ್ ಬಿ, ಸಿ ಮತ್ತು ಖನಿಜಗಳು ಲವಣಗಳು ಕ್ಯಾಲ್ಷಿಯಂ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಕಾಫರ್ ಎಲ್ಲ ಅಂಶಗಳನ್ನು ಒಳಗೊಂಡಿದೆ. ಈ ಎಲ್ಲ ಅಂಶಗಳು ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ನಿಮಗೇನಾದರೂ ಸಕ್ಕರೆ ಕಾಯಿಲೆ ಇದ್ದರೆ ಅದನ್ನು ಹೋಗಲಾಡಿಸಲು ನೀವು ಮಾವಿನ ಗಿಡದ ಎಲೆಗಳನ್ನು ಬಳಸಬಹುದು ಅದು ಹೇಗೆ ಬಳಸಬೇಕೆಂದರೆ, ಮೊದಲಿಗೆ ಮಾವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆಯಬೇಕು ಅದರ ಮೇಲೆ ಇರುವ ಎಲ್ಲ ಧೂಳು ಹೋಗುವ ಹಾಗೆ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ನೀರು ಹಾಕಿ ಮಾವಿನ ಎಲೆಗಳನ್ನು ಕತ್ತರಿಸಿ ರಾತ್ರಿವಿಡಿ ನೆನೆಸಿಡಿ. ಮರುದಿನ ಬೆಳಿಗ್ಗೆ ಅದನ್ನು ಸೋಸಿಕೊಂಡು ಕುಡಿಯಬೇಕು ಹೀಗೆ ಮಾಡುವುದರಿಂದ ಸಕ್ಕರೆ ಕಾಯಿಲೆ ಖಂಡಿತವಾಗಿ ನಿಯಂತ್ರಣಕ್ಕೆ ಬರುತ್ತದೆ. ಇನ್ನೂ ಶ್ವಾಸಕೋಶದ ಸಮಸ್ಯೆಗಳಾದ ಅಸ್ತಮಾ ಉಸಿರಾಟದ ಸಮಸ್ಯೆಗಳನ್ನು ಹೋಗಲಾಡಿಸಲು ಮಾವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಅದು ತಣ್ಣಗಾದ ಮೇಲೆ ಅದರಲ್ಲಿ ಜೇನುತುಪ್ಪವನ್ನು ಹಾಕಿ ಕುಡಿಯಬೇಕು.

 

ಹೀಗೆ ಮಾಡುವುದರಿಂದ ಖಂಡಿತವಾಗಿ ಉಸಿರಾಟದ ಸಮಸ್ಯೆ ಶ್ವಾಸಕೋಶದ ಸಮಸ್ಯೆಗಳು ಅಸ್ತಮಾ ಎಲ್ಲವೂ ಕ್ರಮೇಣ ಉಪಶಮನ ಆಗುತ್ತದೆ. ಕೆಮ್ಮು ಕಫ ಎಲ್ಲವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ನೀವು ಈ ಕಷಾಯವನ್ನು ಮಾಡಿಕೊಂಡು ಕುಡಿಯಿರಿ. ಇನ್ನೂ ಮಾವಿನ ಎಲೆಗಳ ಕಷಾಯವನ್ನು ಮಾಡಿ ಅದರಲ್ಲಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಖಂಡಿತವಾಗಿ ಕಿಡ್ನಿ ಸ್ಟೋನ್ ಉಪಶಮನ ಆಗುತ್ತದೆ. ಚರ್ಮಕ್ಕೆ ಸಂಭಂದ ಪಟ್ಟ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ಮಾವಿನ ಎಲೆಗಳನ್ನು ಕುದಿಸಿ ಅದರ ನೀರನ್ನು ಸ್ನಾನ ಮಾಡುವ ನೀರಿಗೆ ಹಾಕಿ ಮಿಕ್ಸ್ ಮಾಡಿ ಸ್ನಾನವನ್ನು ಮಾಡಿದ್ರೆ ಚರ್ಮಕ್ಕೆ ಸಂಭಂದ ಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹೊಟ್ಟೆಗೆ ಸಂಭಂದ ಪಟ್ಟ ಸಮಸ್ಯೆಗಳು ಇದ್ದರೆ ರಾತ್ರಿ ಮಾವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಮರುದಿನ ದಿನ ಬೆಳಿಗ್ಗೆ ಕುಡಿದರೆ ಹೊಟ್ಟೆಗೆ ಸಂಭಂದ ಪಟ್ಟ ಎಲ್ಲ ಸಮಸ್ಯೆಗಳನ್ನೂ ಉಪಶಮನ ಮಾಡುವಲ್ಲಿ ಸಹಾಯ ಮಾಡುತ್ತವೆ.

Leave a Reply

Your email address will not be published. Required fields are marked *