ಪದೇ ಪದೇ ಕಾಡುವ ಬೆನ್ನು ನೋವಿಗೆ ಇಲ್ಲಿದೆ ಸರಳವಾದ ಸುಲಭವಾದ ಮನೆಮದ್ದುಗಳು…..

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಮೊದಲಿನ ಕಾಲದಲ್ಲಿ ಬೆನ್ನು ನೋವು ಅನ್ನುವುದು ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ವಯಸ್ಸಿನ ಅಂತರವಿಲ್ಲದೇ ಹಾಗೂ ಹೆಣ್ಣು ಗಂಡು ಬೇಧಭಾವ ಇಲ್ಲದೆ ಎಲ್ಲರನ್ನೂ ಕಾಡುತ್ತಿದೆ ಎಂದು ಹೇಳಬಹುದು. ಹೌದು ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಅಂತ ಹೇಳಬಹುದು. ಆಫೀಸ್ ನಲ್ಲಿ ಗಂಟೆ ಗಟ್ಟಲೇ ಒಂದೇ ಸ್ಥಳದಲ್ಲಿ ಕುಳಿತುಕೊಂಡು ಕೆಲಸವನ್ನು ಮಾಡುವವರಿಗೆ ಈ ಬೆನ್ನು ನೋವಿನ ಸಮಸ್ಯೆಯನ್ನು ಕೇಳುವ ಹಾಗಿಲ್ಲ ಗೆಳೆಯರೇ. ಪದೇ ಪದೇ ಕಾಡುತ್ತಲೇ ಇರುತ್ತದೆ. ಹಾಗಾದರೆ ಪ್ರತಿನಿತ್ಯವೂ ಕೆಲಸವನ್ನು ಮಾಡುವವರಿಗೆ ಇದಕ್ಕೆ ಪರಿಹಾರ ಇಲ್ಲವೇ ಎಂದು ಯೋಚನೆ ಮಾಡುವುದಾದರೆ ಖಂಡಿತವಾಗಿ ಇದೆ ಗೆಳೆಯರೇ, ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೆಲವೊಂದು ಮನೆಮದ್ದುಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ.

 

ಒಂದು ಅಂದಾಜಿನ ಪ್ರಕಾರ, ಶೇಕಡಾ 80% ರಷ್ಟು ಬೆನ್ನು ನೋವಿನಿಂದ ಬಳಲುತ್ತಿದ್ದರೆ. ಕೆಲವರಿಗೆ ದೀರ್ಘಕಾಲದ ಬೆನ್ನು ನೋವು ಇದ್ದರೆ ಇನ್ನೂ ಕೆಲವರಿಗೆ ತಾತ್ಕಾಲಿಕವಾಗಿರುತ್ತದೆ. ಬೆನ್ನು ನೋವು ಕಾಡಲು ಅನೇಕ ಬಗೆಯ ಕಾರಣಗಳು ಇರಬಹುದು. ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತು ಕೊಂಡು ಕೆಲಸವನ್ನು ಮಾಡುವುದು, ಅತಿ ಶ್ರಮವಾದ ಕೆಲಸವನ್ನು ಮಾಡುವುದು ಹಾಗೂ ಭಾರವಾದ ವಸ್ತುಗಳನ್ನು ಎತ್ತುವುದರಿಂದ ವಾಹನ ಚಾಲನೆ ಅಧಿಕವಾಗಿ ಮಾಡುವುದರಿಂದ ಹಾಗೂ ಕ್ಯಾಲ್ಷಿಯಂ ಕೊರತೆ ಇಂದ ಬೆನ್ನು ನೋವು ಬರುತ್ತದೆ. ಈ ಸಮಸ್ಯೆಯನ್ನು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಬಹುದು. ಮೂಳೆಗಳಲ್ಲಿ ಸವೆತದಿಂದ ಬೆನ್ನು ನೋವು ಬರಬಹುದು. ಈ ಬೆನ್ನು ನೋವು ನಿವಾರಣೆ ಮಾಡಲು ಸಾಂಪ್ರದಾಯಿಕ ಮನೆಮದ್ದು ಗಳು ಇವೆ. ಪ್ರತಿನಿತ್ಯವೂ 7-8 ಲೋಟ ನೀರನ್ನು ಕುಡಿಯುವುದರಿಂದ ಈ ಬೆನ್ನು ನೋವಿನ ಸಮಸ್ಯೆಯಿಂದ ಪಾರಾಗಬಹುದು. ನೀರು ಎಲ್ಲ ಮಾತ್ರೆಗಳಿಗಿಂತ ಔಷಧಗಿಂತ ದಿವ್ಯ ಔಷಧ ಅಂತ ಹೇಳಿದರೆ ತಪ್ಪಾಗಲಾರದು.

 

ಸೌಂದರ್ಯವನ್ನು ಹೆಚ್ಚಿಸಿ ಕೊಳ್ಳಲು ನೀರು ಎಷ್ಟು ಅಗತ್ಯವೋ ಅಷ್ಟೇ ಬೆನ್ನು ನೋವು ಕಡಿಮೆ ಮಾಡಿಕೊಳ್ಳಲು ನಿತ್ಯವೂ ಎಂಟು ಲೋಟ ನೀರು ಕುಡಿಯುವುದು ಸೂಕ್ತ. ಅಷ್ಟೇ ಅಲ್ಲದೇ ನೀರು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಅದಕ್ಕಾಗಿ ನಾವು ಹೆಚ್ಚು ಹೆಚ್ಚು ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇನ್ನೂ ಬೆನ್ನು ನೋವು ಪದೇ ಪದೇ ಕಾಡುತ್ತಿದ್ದರೆ ಅಂದರೆ ಕ್ಯಾಲ್ಷಿಯಂ ಕೊರತೆ ಇಂದ ಬರುವ ಬೆನ್ನು ನೋವಿಗೆ ನಿತ್ಯವೂ ಬೆಳಿಗ್ಗೆ ಮತ್ತು ರಾತ್ರಿ ಒಂದು ಲೋಟ ಹಾಲು ಕುಡಿಯುವುದು ಸೂಕ್ತ. ಇದರಿಂದ ನಮ್ಮ ಮೂಳೆಗಳಿಗೆ ಕ್ಯಾಲ್ಷಿಯಂ ಸಿಗುತ್ತದೆ. ಹಾಗೂ ಮೂಳೆಗಳು ಬಲಗೊಳ್ಳುತ್ತವೆ. ಇದರಿಂದ ಬೆನ್ನು ನೋವು ನಿವಾರಣೆ ಆಗುತ್ತದೆ. ಇನ್ನೂ ಧೂಮಪಾನ ಮಾಡುವುದರಿಂದ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಧೂಮಪಾನ ಬಿಡುವುದರಿಂದ ಖಂಡಿತವಾಗಿ ಬೆನ್ನು ನೋವು ಬರುವುದಿಲ್ಲ. ಕಚೇರಿಯಲ್ಲಿ ಕೆಲಸವನ್ನು ಮಾಡುವವರು ಬಿಡುವಿನ ಸಮಯದಲ್ಲಿ ಸ್ವಲ್ಪ ಎದ್ದು ವಿಶ್ರಾಂತಿ ತೆಗೆದುಕೊಳ್ಳಿ. ಆಗಾಗ ಮಧ್ಯ ಒಡಾಡುತ್ತೀರಿ. ಬೆನ್ನು ನೋವಿಗೆ ನೀಲಗಿರಿ ಎಣ್ಣೆ ಇಂದ ಮಸಾಜ್ ಮಾಡಿ. ಇದು ನಿಮ್ಮ ಬೆನ್ನು ನೋವು ಕಡಿಮೆ ಮಾಡುತ್ತದೆ. ಶುಭದಿನ.

Leave a Reply

Your email address will not be published. Required fields are marked *