ಸೆಪ್ಟೆಂಬರ್ 30, 2022, ಶುಕ್ರವಾರದ ಶುಭದಿನದಂದು ನಿಮ್ಮ ದಿನ ಭವಿಷ್ಯ ಹೇಗಿರಲಿದೆ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ,ಇಂದು ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿನಾಯಿನೆ ಭಾದ್ರಪದ ಮಾಸ, ಆಶ್ವೀಜ ಮಾಸ, ಶುಕ್ಲ ಪಕ್ಷ. ಇಂದು ಸೆಪ್ಟೆಂಬರ್ 30 ನೆ ತಾರೀಕು. ಇಂದು ವಿಶಾಖ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ಇಂದು ಎಲ್ಲರಲ್ಲಿ ನೀವು ಗುರುವನ್ನು ನೋಡುತ್ತೀರಿ. ಇದರಿಂದ ನಿಮ್ಮ ಪ್ರೀತಿ ಪಾತ್ರರು ಬ್ಯುಸಿನೆಸ್ ಪಾರ್ಟನರ್. ಲೈಫ್ ಪಾರ್ಟ್ನರ್ ಎಲ್ಲರಲ್ಲಿ ಕೂಡ ನೀವು ಇವತ್ತು ಉಪದೇಶ ಕೇಳುತ್ತೀರಿ. ಮತ್ತು ನೀವು ಉಪದೇಶ ಕೊಡುತ್ತೀರಿ. ಇವತ್ತು ಬಹಳ ಜೀವನದ ಬಗ್ಗೆ ಆಳವಾಗಿ ಮಾತುಗಳನ್ನು ಎಲ್ಲರ ಜೊತೆ ಆಡುತ್ತಿರಿ. ಮನಸ್ಸಿಗೆ ನೆಮ್ಮದಿ. ವೃಷಭ ರಾಶಿಯವರಿಗೆ ಮಧ್ಯನದ ವರೆಗೆ ಸಾಮಾಜಿಕ ವ್ಯವಹಾರಗಳಲ್ಲಿ ಬಹಳ ಒಳ್ಳೇದು ಆಗುತ್ತೆ. ಇವತ್ತು ಬಹಳ ಒಳ್ಳೆಯ ಕೆಲಸಗಳನ್ನು ಸರಿಯಾದ ಕೆಲಸಗಳನ್ನು ಮಾಡುವುದರಿಂದ ಇಂದು ಅತೀ ಹೆಚ್ಚು ಯಶಸ್ಸು ಕಾಣುತ್ತೀರಿ. ಮಧ್ಯಾನ ನಂತ್ರ ನೀವು ನಿಮ್ಮ ಎಲ್ಲಾ ಶತ್ರುಗಳನ್ನು ನಿಮ್ಮ ಒಳ್ಳೆಯತನಡಿಂದ ಮೆಟ್ಟು ನಿಲ್ಲುತೀರಿ. ಮಿಥುನ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ನೆಮ್ಮದಿ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು ದಾಂಪತ್ಯದಲ್ಲಿ ಯಶಸ್ಸು. ಕಲಾವಿದರಿಗೆ ತುಂಬಾ ಒಳ್ಳೆಯ ದಿನ. ನಿಮ್ಮ ಕಾರ್ಯ ಪ್ರಬುದ್ಧತೆಗೆ ಇಂದು ಬಹಳ ಒಳ್ಳೆಯ ರೀತಿಯಲ್ಲಿ ಯಶಸ್ಸು ಪಡಿಥಿರಿ.

 

ಬೇರೆಯವರಿಂದ ನೀವು ಹೊಗಳಿಕೆ ಪಡೆದು ನೀವು ಗುರು ಸನ್ಮಾನ ಸ್ಥಾನ ಪಡೆಯುತ್ತೀರಿ. ಕರ್ಕಾಟಕ ರಾಶಿಗೆ ಇವತ್ತು ಮನೆಯಲ್ಲಿ ನೆಮ್ಮದಿ ಕಡಿಮೆ ಆದಂತೆ ಭಾಸವಾಗುತ್ತದೆ. ಅನೇಕ ವಿಷಯಗಳಲ್ಲಿ ಸರಿಯಾದ ರೀತಿಯಲ್ಲಿ ನಿಮ್ಮ ನಿಲುವನ್ನು ಹೇಳಿ ಬೇರೆಯವರನ್ನು ಸಮಾಧಾನ ಮಾಡಿ ಬೇರೆಯವರಿಗೆ ಮಾರ್ಗದರ್ಶನ ಮಾಡುವ ಆಸೆ ಪ್ರಾಪ್ತಿ ಆಗುತ್ತೆ. ಸಿಂಹ ರಾಶಿಯವರಿಗೆ ಇಂದು ನೀವು ನಿಮ್ಮ ಮಿತ್ರರು ಮತ್ತು ನಿಮ್ಮ ಸಹೋದರ ಸಹೋದರಿ ಜೊತೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡು ಅವರ ಮನಸ್ಸಿಗೆ ನೆಮ್ಮದಿ ಕೊಡುತ್ತೀರಿ. ಹಾಗೂ ಅವರಿಗೆ ಗುರು ಸಮಾನರಾಗಿ ಅನೇಕ ಬೋಧನೆ ಮಾಡುತ್ತಿರಿ. ಕನ್ಯಾ ರಾಶಿಗೆ ಇಂದು ಮನಸ್ಸಿನಲ್ಲಿ ಅತಿ ಹೆಚ್ಚಿನ ನೆಮ್ಮದಿ. ಸಂಸಾರದಲ್ಲಿ ಬಹಳ ಒಳ್ಳೆಯ ವಾತಾವರಣ ಇರುತ್ತೆ. ಬಹಳ ಭಕ್ತಿಯಿಂದ ದೇವರನ್ನು ಎಲ್ಲರೂ ಒಟ್ಟಿಗೆ ಪ್ರಾರ್ಥನೆ ಮಾಡುತ್ತಿರಿ. ಹಾಗೂ ಪರಸ್ಪರ ಒಳ್ಳೆಯ ಭಾಂದವ್ಯ ಮೂಡುತ್ತೆ. ತುಲಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ಹಿಂದೆ ಎರಡು ದಿನಗಳಲ್ಲಿ ಇದ್ದಂಥ ಮನಸ್ಸಿನಲ್ಲಿ ಇದ್ದ ಕಿರಿಕಿರಿ ಇಂದು ಮಾಯವಾಗಿ. ನಿಮಗೆ ವಿಶೇಷವಾದ ಸಿದ್ಧಿ ನನಗೆ ಪ್ರಾಪ್ತಿ ಆಗಿದೆ ಎನ್ನುವ ಭಾವನೆ ಇರುತ್ತೆ. ಅದು ನಿನ ಕೂಡ. ವೃಶ್ಚಿಕ ರಾಶಿಗೆ ಇಂದು ಸ್ವಲ್ಪ ಮನಸ್ಸಿಗೆ ಕಡಿಮೆ ಆದಂತೆ ಭಾಸವಾಗುತ್ತದೆ.

 

ಅನೇಕ ವಿಷಯಗಳಲ್ಲಿ ನೀವು ಕುಳಿತು ಒಂದೆರಡು ಹೆಜ್ಜೆ ಹಿಂದೆ ಇಟ್ಟು ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಬೇಕಾಗುತ್ತದೆ. ಮತ್ತು ಈಶ್ವರನ ಧ್ಯಾನ ಮಾಡುವುದರಿಂದ ವಿಶೇಷವಾದ ನೆಮ್ಮದಿ ನೀವು ಪಡೆಯುತ್ತೀರಿ. ಧನಸ್ಸು ರಾಶಿಗೆ ಇವತ್ತು ಬಹಳ ಒಳ್ಳೆಯ ದಿನ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಗುಂಪುಗಳಿಂದ ನೆಮ್ಮದಿ. ಧನಾಗಮ. ಇಷ್ಟಾರ್ಥ ಸಿದ್ಧಿ. ಎಲ್ಲರ ಜೊತೆ ಚೆನ್ನಾಗಿ ಮಾತನಾಡಿ. ಮಕರ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಅತಿ ಹೆಚ್ಚಿನ ಯಶಸ್ಸು. ಗುರು ಸ್ಥಾನವನ್ನು ನೀವೇ ನೀವಾಗಿ ಪಡೆದುಕೊಳ್ಳಬೇಕು. ಬೇರೆಯವರು ನಿಮ್ಮ ಮಾರ್ಗದರ್ಶನಕ್ಕೆ ಕಾಯುತ್ತಾ ಇರ್ತಾರೆ. ಯಾವುದೇ ರೀತಿ ಮನಸ್ಸಿಗೆ ನೋವಾಗುವಂತೆ ಮಾಡಿಕೊಳ್ಳಬೇಡಿ. ಯಾಕಂದ್ರೆ ಬೇರೆಯವರು ನಿಮ್ಮ ಮೇಲೆ ಇಂದು ಅವಲಂಬಿತ ಆಗಿರುತ್ತಾರೆ. ಕುಂಭ ರಾಶಿಗೆ ಇವತ್ತು ಭಾಗ್ಯೋದಯ ಆಗುತ್ತೆ. ಮನಸ್ಸಿಗೆ ನೆಮ್ಮದಿ. ಅನೇಕ ವಿಷಯಗಳಲ್ಲಿ ಯಶಸ್ಸು ನೆಮ್ಮದಿ ಕಾಣುತ್ತೀರಿ. ಇವತ್ತು ದೊಡ್ಡವರ ಯತೆಚ್ಯವಾದ ಆಶೀರ್ವಾದ ಪಡೆಯಿರಿ. ಮೀನಾ ರಾಶಿಗೆ ಸ್ವಲ್ಪ ಮನಸ್ಸಿಗೆ ನೆಮ್ಮದಿ ಕಡಿಮೆ ಆದಂತೆ ಭಾಸವಾಗುತ್ತದೆ. ಬಹಳ ಅಸಹಾಯಕತೆ ಕಾಡುತ್ತೆ. ಅದು ನಿಜ ಅಲ್ಲ ಎರಡು ದಿನಗಳ ನಂತರ ಎಲ್ಲವೂ ಬದಲಾಗುತ್ತೆ. ಬಹಳ ಒಳ್ಳೆಯ ರೀತಿಯಲ್ಲಿ ಮುಂದೆ ಹೋಗುತ್ತೀರಿ. ಶುಭದಿನ.

Leave a Reply

Your email address will not be published. Required fields are marked *