ನೋಡಲು ಪುಟ್ಟ ಎಲೆ ಆದರೂ ಕೂಡ ಇದರಲ್ಲಿ ಅಗಾಧವಾದ ಲಾಭಗಳು ಅಡಗಿವೆ. ಅದುವೇ ಒಂದೆಲಗ ಸಸ್ಯ…..

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ,ದೀರ್ಘಕಾಲದವರೆಗೆ ಬದುಕಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಉತ್ತಮವಾದ ಆರೋಗ್ಯದ ಜೊತೆಗೆ ದೀರ್ಘಾಯುಷ್ಯದಿಂದ ಬದುಕಲು ಅನೇಕ ದಾರಿಗಳನ್ನು ಆಯುರ್ವೇದದಲ್ಲಿ ತಿಳಿಸಿದ್ದಾರೆ. ಒಂದೆಲಗ ಬ್ರಾಹ್ಮೀ ಸರಸ್ವತಿ ಎಂದು ಕರೆಸಿಕೊಳ್ಳುವ ಈ ಸಸ್ಯವು ಬಹಳಷ್ಟು ಉಪಯೋಗಕ್ಕೆ ಬರುತ್ತದೆ ಇದರ ಹೆಸರು ಒಂದೆಲಗ. ಹೆಸರೇ ಸೂಚಿಸುವಂತೆ ಒಂದೇ ಒಂದು ಎಲೆಯನ್ನು ಹೊಂದಿರುವಂತೆ ಕಂಗೊಳಿಸುತ್ತದೆ. ಈ ಸಸ್ಯವನ್ನು ನಾವು ಅಡಿಕೆ ತೋಟದಲ್ಲಿ ಭತ್ತದ ಗದ್ದೆಗಳಲ್ಲಿ ನೀರು ತೇವಾಂಶ ಹೆಚ್ಚಿರುವ ಜಾಗದಲ್ಲಿ ಈ ಸಸ್ಯವು ನಾವು ಅಧಿಕವಾಗಿ ಕಾಣಬಹುದು. 3-4 ಇಂಚು ಎತ್ತರ ಬೆಳೆಯುತ್ತಿದ್ದು ಭೂಮಿಯ ಮಡಿಲಲ್ಲಿ ಬಳ್ಳಿಯಂತೆ ಹರಡುತ್ತದೆ. ಇದರ ಎಲೆಗಳು ವೃತ್ತಾಕಾರದಲ್ಲಿ ಇರುತ್ತದೆ. ಇದನ್ನು ಹೊರ ದೇಶದಲ್ಲಿ ಹೆಚ್ಚಾಗಿ ಔಷಧ ರೂಪದಲ್ಲಿ ಬಳಕೆ ಮಾಡುತ್ತಾರೆ. ಹಿಂದಿ ಭಾಷೆಯಲ್ಲಿ ಬ್ರಾಹ್ಮೀ ಎಂದು ಕರೆಯುತ್ತಾರೆ.

 

ಒಂದೆಲಗ ಸಸ್ಯದಲ್ಲಿ ಆರೋಗ್ಯಕರ ಲಕ್ಷಣಗಳನ್ನು ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಒಂದೆಲದ ಸಸ್ಯದಲ್ಲಿ ಇರುವ ಕೆಲವು ಅಂಶಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನರಗಳಿಗೆ ದಿವ್ಯ ಔಷಧ ಎಂದು ಪರಿಗಣಿಸುತ್ತಾರೆ. ಇದರ ಉಲ್ಲೇಖ ವೇದಗಳಲ್ಲಿ ಕೂಡ ಇದೆ. ಎರಡು ಸಾವಿರ ವರ್ಷಗಳ ಹಿಂದೆಯೇ ಬ್ರಾಹ್ಮೀ ಅನ್ನು ಬಳಕೆ ಮಾಡುತ್ತಿದ್ದರಂತೆ. ಹಿಂದಿನ ಕಾಲದ ಋಷಿ ಮುನಿಗಳು ಇದರ ಮಹತ್ವವನ್ನು ಬಹಳ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಇದರಲ್ಲಿ ಇರುವ ಪ್ರಮುಖವಾದ ಅಂಶಗಳು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಆಯಸ್ಸು ವೃದ್ಧಿಸುತ್ತದೆ. ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಅದ್ಭುತ ಸೊಪ್ಪು ಅಂತ ಹೀಗಾಗಲೇ ಗೊತ್ತಿರುವ ಸಂಗತಿ. ಅದಕ್ಕಾಗಿ ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ವೃದ್ಧಿ, ಕಲಿಕೆಯ ಶಕ್ತಿ ಹೆಚ್ಚಿಸಲು, ದೊಡ್ಡವರಲ್ಲೂ ಮಾನಸಿಕ ಒತ್ತಡದ ನಿವಾರಣೆಗೆ ಇದು ಸಹಾಯಕಾರಿ.

 

ಬ್ರಾಹ್ಮೀ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಬ್ರಾಹ್ಮಿ ಉತ್ತಮ ಪರಿಹಾರ. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿ ಮೆದುಳಿನ ಕಾರ್ಯವನ್ನು ಉತ್ತಮಪಡಿಸುತ್ತದೆ. ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಮಲಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಬಹುದು. ಬ್ರಾಹ್ಮಿ ತಿಂದರೆ ಅದರಿಂದ ಪರಿಹಾರ ಪಡೆಯಬಹುದು. ಇದರಲ್ಲಿ ಒತ್ತಡ ನಿವಾರಕ ಹಾಗೂ ಖಿನ್ನತೆ ದೂರ ಮಾಡುವ ಲಕ್ಷಣಗಳು ಇವೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು. ಬ್ರಾಹ್ಮಿಯನ್ನು ನಿತ್ಯವೂ ಸೇವನೆ ಮಾಡಿದರೆ ಅದರಿಂದ ಮೆದುಳಿನ ಅಂಗಾಂಶಗಳಿಗೆ ಶಕ್ತಿ ಸಿಗುವುದು. ಬ್ರಾಹ್ಮಿ ಗಿಡಮೂಲಿಕೆಯ ಕ್ಯಾಪ್ಸೂಲ್ ನ್ನು ನೀವು ಸೇವನೆ ಮಾಡಬಹುದು.ಚಿಕ್ಕಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಈ ಎಲೆ ಹೆಚ್ಚು ಉಪಯುಕ್ತವಾಗಿದೆ.ಒಂದೆಲಗವನ್ನು ನಿತ್ಯವೂ ಬಳಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಲವಾರು ನಾಟಿ ಔಷಗಳಲ್ಲಿ ಕೂಡ ಒಂದೆಲಗವನ್ನು ಬಳಸಲಾಗುತ್ತದೆ.

Leave a Reply

Your email address will not be published. Required fields are marked *