ನಿತ್ಯವೂ ಎರಡು ಲವಂಗ ತಿನ್ನಿ. ಅದರಿಂದ ಆಗುವ ಚಮತ್ಕಾರ ನೋಡಿ. ಅಚ್ಚರಿ ಆಗುತ್ತದೆ.!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಿತ್ಯವೂ ಎರಡು ಲವಂಗ ತಿಂದು ನೋಡಿ. ಅದರಿಂದ ಚಮತ್ಕಾರವನ್ನು ನೋಡಿ ಶಾಕ್ ಅಗುತ್ತೀರಿ. ಲವಂಗದ ಇತಿಹಾಸವನ್ನು ಕೆದಕಿದರೆ ಇದನ್ನು ತುಂಬಾ ಹಿಂದಿನಿಂದಲೂ ಮಾನವರು ಉಪಯೋಗಿಸುತ್ತಾ ಬಂದಿದ್ದರು ಎಂಬುದು ತಿಳಿದು ಬರುತ್ತದೆ. ಹಾಗಾದರೆ ಬನ್ನಿ ಮಸಾಲೆ ಪದಾರ್ಥ ಗಳಲ್ಲಿ ಸ್ಥಾನವನ್ನು ಪಡೆದಿರುವ ಲವಂಗವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳನ್ನು ತಿಳಿಯೋಣ. ಮಸಾಲೆ ಆಹಾರ ಪದಾರ್ಥಗಳಲ್ಲಿ ಪ್ರಸಿದ್ಧಿ ಪಡೆದಿರುವ ಲವಂಗವನ್ನು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಬಳಸಲಾಗುತ್ತದೆ, ಆದರೆ ಇದು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಬಹುದು. ಆಯುರ್ವೇದದಲ್ಲಿ ಲವಂಗಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಅಡುಗೆಯ ಸ್ವಾದವನ್ನು ಹೆಚ್ಚಿಸುವುದಲ್ಲದೆ ಮನೆಮದ್ದು ಆಗಿ ಬಳಕೆ ಮಾಡಬಹುದು. ಈ ಪುಟ್ಟ ಸಾಂಬಾರ ಪದಾರ್ಥದಲ್ಲಿ ಅಂದರೆ ಲವಂಗದಲ್ಲಿ ಅದೆಷ್ಟೋ ಪೋಷಕಾಂಶಗಳು ಅಡಕವಾಗಿದ್ದು ರುಚಿ ಹೆಚ್ಚಿಸುವುದಕ್ಕಿಂತಲೂ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ.

 

ಪ್ರತಿನಿತ್ಯವೂ ಎರಡು ಲವಂಗವನ್ನು ತಿನ್ನುವುದರಿಂದ ನಮ್ಮ ಆರೋಗ್ಯವೂ ವೃದ್ಧಿ ಆಗುತ್ತದೆ ಜೊತೆಗೆ ನಮ್ಮ ಎಲ್ಲ ಅನಾರೋಗ್ಯದ ಸಮಸ್ಯೆಗಳು ರೋಗ ರುಜಿನಗಳು ದೂರ ಆಗುತ್ತದೆ.ಮೊದಲನೆಯ ಪ್ರಯೋಜನ ಏನು ಎಂದರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ.ಪ್ರತಿನಿತ್ಯವೂ ರಾತ್ರಿ ಮಲಗುವ ಮುನ್ನ ಎರಡು ಲವಂಗವನ್ನು ನೀರಿನಲ್ಲಿ ಹಾಕಿ ಕುದಿಸಿ ತಣ್ಣಗಾದ ಮೇಲೆ ಕುಡಿಯಿರಿ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ಹಲ್ಲು ನೋವು ಆಗುತ್ತಿದ್ದರೆ ಲವಂಗದಲ್ಲಿ ಸ್ವಲ್ಪ ನಿಂಬೆ ರಸವನ್ನು ಹಾಕಿ ಹಲ್ಲುಗಳಲ್ಲಿ ಆಗುವ ನೋವಿನಲ್ಲಿ ಇಟ್ಟುಕೊಳ್ಳಿ. ಇದರಿಂದ ನೋವು ನಿವಾರಣೆ ಆಗುತ್ತದೆ. ಇನ್ನೂ ಬಾಯಿಯ ದುರ್ಗಂಧವನ್ನು ನಿವಾರಣೆ ಮಾಡುತ್ತದೆ. ಹೌದು ಅದಕ್ಕಾಗಿ ನೀವು ಲವಂಗ ಅಥವಾ ಏಲಕ್ಕಿ ಬಾಯಿಯಲ್ಲಿ ಹಾಕಿಕೊಂಡು ಜಗಿದು ತಿನ್ನಿ ಇದರಿಂದ ಬಾಯಿಯ ದುರ್ಗಂಧ ನಾಶವಾಗುವುದು ಉಂಟು.ಇನ್ನೂ ನಿಮಗೆ ಬಾಯಿ ಹುಣ್ಣು ಆಗಿದ್ದರೆ, ಲವಂಗವನ್ನು ಜಜ್ಜಿ ಹುಣ್ಣುಗಳ ಮೇಲೆ ಇಟ್ಟುಕೊಳ್ಳಿ.ಆದರೆ ಬಾಯಿಯಿಂದ ಬರುವ ಎಂಜಲು ಹೊರಗೆ ಹಾಕಿ. ಹೀಗೆ ಮಾಡುವುದರಿಂದ, ಹುಣ್ಣು ಮಾಯವಾಗುತ್ತದೆ ನೋವು ನಿವಾರಣೆ ಆಗುತ್ತದೆ.

 

ಲವಂಗವನ್ನು ಸೇವಿಸುವುದರಿಂದ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ಅದನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ತೊಂದರೆಗೊಳಿಸಬಹುದು, ಆದ್ದರಿಂದ ಲವಂಗವನ್ನು ನಿಯಮಿತವಾಗಿ ಸೇವನೆ ಮಾಡುವುದು ಸೂಕ್ತ.ಹದವಾದ ಬಿಸಿ ನೀರಿಗೆ ಲವಂಗದ ಎಣ್ಣೆಯನ್ನು ಹಾಕಿ ಕುಡಿದರೆ, ಖಂಡಿತವಾಗಿ ಶೀತ ನೆಗಡಿ ಕೆಮ್ಮು ಕಫ ಎಲ್ಲವೂ ಕಡಿಮೆ ಆಗುತ್ತದೆ. ಅಥವಾ ತುಳಸಿ ಎಲೆಗಳನ್ನು ಸ್ವಲ್ಪ ಲವಂಗವನ್ನು ನೀರಿನಲ್ಲಿ ಹಾಕಿ ಕುದಿಸಿ ತಣ್ಣಗಾದ ಮೇಲೆ ಜೇನುತುಪ್ಪವನ್ನು ಹಾಕಿ ಕುಡಿದರೆ ಜ್ವರ ಕಡಿಮೆ ಆಗುತ್ತದೆ. ಇನ್ನೂ ನಿಮಗೆ ಕತ್ತು ನೋವು ಬರುತ್ತಿದ್ದರೆ ಲವಂಗವನ್ನು ಜಜ್ಜಿ ಸಾಸಿವೆ ಎಣ್ಣೆಯಲ್ಲಿ ಹಾಕಿ ಮಿಶ್ರಣ ಮಾಡಿ, ನಂತ್ರ ಕುತ್ತಿಗೆ ಭಾಗದಲ್ಲಿ ಹಚ್ಚಿ ಮಸಾಜ್ ಮಾಡಿ.ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೌದು ಹಾಗೆಯೇ ದೇಹವನ್ನು ಸಮ ಸ್ಥಿತಿಗೆ ತರುತ್ತದೆ.ಲವಂಗ ಪುದೀನಾ ಶುಂಠಿ ಏಲಕ್ಕಿ ಹಾಕಿ ಚಹಾ ಮಾಡಿ ಕುಡಿಯಿರಿ. ಇನ್ನೂ ವಾಕರಿಕೆಗೆ ನಿವಾರಣೆ ಈ ಲವಂಗ. ಕೆಲವು ಜನರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಆಗುತ್ತದೆ ಹಾಗೂ ಆಹಾರ ಜೀರ್ಣವಾಗದೇ ಪಿತ್ತವಾಗಿ ವಾಕರಿಕೆ ಆಗುತ್ತದೆ ಇದಕ್ಕೆ ಲವಂಗ ಸೇವನೆ ಮಾಡುವುದು ಉತ್ತಮವಾದ ಪರಿಹಾರ.

Leave a Reply

Your email address will not be published. Required fields are marked *