ಸಕ್ಕರೆ ಕಾಯಿಲೆ ಇದ್ದವರು ಕುಂಬಳಕಾಯಿ ಬೀಜವನ್ನು ಸೇವನೆ ಮಾಡಿದರೆ ಸಾಕು ಏನಾಗುತ್ತದೆ ಗೊತ್ತೇ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ,ಪ್ರತಿನಿತ್ಯವೂ ಬಳಕೆ ಮಾಡುವ ಆಹಾರಗಳು, ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಕಾಪಾಡುತ್ತವೆ. ನಮ್ಮ ಪ್ರಕೃತಿಯಲ್ಲಿ ಆಹಾರಗಳು ವಿಧವಾಗಿ ಸಿಗುತ್ತವೆ. ಅಂದರೆ ಬೀಜಗಳ ರೂಪದಲ್ಲಿ ಸೊಪ್ಪುಗಳ ರೂಪದಲ್ಲಿ ಸಿಗುತ್ತದೆ. ಆದರೆ ನಾವು ಆಹಾರಗಳನ್ನು ತಿಂದು ಬೀಜಗಳನ್ನು ಬಿಸಾಡಿ ಬಿಡುತ್ತೇವೆ. ನಿಮಗೆ ಗೊತ್ತೇ ಆಹಾರಗಳಿಗಿಂತ ಅದರಲ್ಲಿರುವ ಬೀಜಗಳು ಬಹಳಷ್ಟು ಆರೋಗ್ಯದಾಯಕ ಆಗಿರುತ್ತವೆ. ಅದರಲ್ಲಿ ಕುಂಬಳ ಕಾಯಿ ಕೂಡ ಒಂದು. ಕುಂಬಳಕಾಯಿ ತೆರುಳನ್ನು ತೆಗೆದು ಒಳಗಡೆ ಭಾಗವನ್ನು ಮಾತ್ರ ಉಪಯೋಗಿಸಿ ಅದರ ಬೀಜಗಳನ್ನು ಬಿಸಾಡುವ ಜನರ ಸಂಖ್ಯೆಯೇ ಹೆಚ್ಚು. ಇದರಲ್ಲಿ ಅನೇಕ ಬಗೆಯ ಆರೋಗ್ಯಗಕರ ಗುಣಗಳು ಅಡಕವಾಗಿವೆ. ನಿಮಗೇನಾದರೂ ಈ ಬೀಜಗಳ ಮಹತ್ವದ ಬಗ್ಗೆ ಅರಿವು ಆದರೆ ಖಂಡಿತವಾಗಿ ನೀವು ಅವುಗಳನ್ನು ಶೇಖರಣೆ ಮಾಡಿ ಇಟ್ಟು ಕೊಳ್ಳುತ್ತೀರಿ. ಕುಂಬಳಕಾಯಿ ಅನ್ನು ಅನೇಕ ಬಗೆಯಲ್ಲಿ ತಯಾರಿಸಬಹುದು, ಪಲ್ಯ ಚಟ್ನಿ ಸಾಂಬಾರ ಮಾಡಿಕೊಂಡು ತಿನ್ನಬಹುದು. ಅದರ ಜೊತೆಗೆ ಇದರಲ್ಲಿರುವ ಬೀಜಗಳನ್ನು ಹಸಿಯಾಗಿ ಕೂಡ ತಿನ್ನಬಹುದು.

 

ಆದರೆ ಈ ಬೀಜಗಳು ಬಹಳ ಉಷ್ಣದಾಯಕ. ಇದನ್ನು ಗರ್ಭಿಣಿಯರು ಸೇವನೆ ಮಾಡುವ ಮುನ್ನವೆ ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಹಾಗಾದರೆ ಇಂದಿನ ಲೇಖನದಲ್ಲಿ ಕುಂಬಳಕಾಯಿ ಯಾವೆಲ್ಲ ಆರೋಗ್ಯಕರ ಗುಣಗಳನ್ನು ಹೊಂದಿವೆ ಎಂಬುದನ್ನು ತಿಳಿಯೋಣ ಬನ್ನಿ. ಕುಂಬಳಕಾಯಿ ಮ್ಯಾಂಗನೀಸ್ ಮತ್ತು ಖನಿಜಗಳು ವಿಟಮಿನ್ ಜೀವಸತ್ವಗಳನ್ನು ಹೊಂದಿದೆ. ಈ ಎಲ್ಲ ಅಂಶಗಳು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಸತುವಿನ್ ಅಂಶವನ್ನು ಹೊಂದಿದ್ದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ರೋಗ ರುಜಿನಗಳು ಹಾಗೂ ವೈರಸ್ ಗಳ ವಿರುದ್ಧ ಹೋರಾಡುತ್ತದೆ. ಇನ್ನೂ ಕುಂಬಳಕಾಯಿ ಅಲ್ಲಿ ಮ್ಯಾಗ್ನಿಷಿಯಂ ಅಂಶ ಹೇರಳವಾಗಿ ಇರುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಹಾಗೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮಧುಮೇಹವನ್ನು ಕಂಟ್ರೋಲ್ ಗೆ ತರಲು ಇದೊಂದು ದಿವ್ಯ ಔಷಧವಾಗಿದೆ. ಅದಕ್ಕಾಗಿ ಕುಂಬಳಕಾಯಿ ಬೀಜವನ್ನು ಜ್ಯೂಸ್ ಅಥವಾ ಪಲ್ಯವನ್ನು ಮಾಡಿ ಸೇವನೆ ಮಾಡಬಹುದು ಅಷ್ಟೇ ಅಲ್ಲದೇ, ಕುಂಬಳಕಾಯಿ ಬೀಜಗಳು ಅನೇಕ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿವೆ. ರೋಗ ಉಂಟು ಮಾಡುವ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಕುಂಬಳಕಾಯಿ ಬೀಜದಲ್ಲಿ ಹೇರಳವಾಗಿ ಫೈಬರ್ ಅಂಶ ಇದೆ.

 

ಈ ಕಾರಣದಿಂದ, ಊರಿ ಊತ ಯಕೃತ್ ಆರೋಗ್ಯ ಕರುಳು ಮತ್ತು ಕೀಲುಗಳಲ್ಲಿ ನೋವು ಎಲ್ಲವನ್ನು ಹತೋಟಿಯಲ್ಲಿ ಇಡುತ್ತದೆ. ಅಷ್ಟೇ ಅಲ್ಲದೇ, ಮಲಗುವ ಮುನ್ನ, ಸೇವನೆ ಮಾಡಿ ಮಲಗುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಈ ಬೀಜಗಳು ನಿದ್ದೆಯನ್ನು ಉತ್ತೇಜನ ಮಾಡುತ್ತವೆ. ಇದರಲ್ಲಿ ಇರುವ ಸತು ರಂಜಕ ಸೆಲೆನಿಯಮ್ ಅಂಶಗಳು ನಿದ್ದೆಯ ಮೇಲೆ ಭಾರೀ ಪರಿಣಾಮ ಬೀರಬಹುದು.ಇದರಲ್ಲಿ ಇರುವ ಮ್ಯಾಗ್ನಿಶಿಯಂ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ಕುಂಬಳಕಾಯಿ ಬೀಜವು ನಿದ್ರಾಹೀನತೆಗೆ ಸಹಾಯಕಾರಿ ಅಂತ ಹೇಳಿದರೆ ತಪ್ಪಾಗಲಾರದು. ಸ್ತನ ಕ್ಯಾನ್ಸರ್ ಹಾಗೂ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ ಅಷ್ಟೊಂದು ಅಗಾಧವಾದ ಆರೋಗ್ಯಕರವಾದ ಗುಣಗಳನ್ನು ಹೊಂದಿದೆ. ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕೇವಲ ಕುಂಬಳಕಾಯಿ ಬೀಜವಲ್ಲ ಇನ್ನಿತರ ಯಾವುದೇ ಬೀಜಗಳನ್ನು ಬಿಸಾಡುವ ಮೊದಲು ಅವುಗಳ ಲಾಭಗಳನ್ನು ಚೆನ್ನಾಗಿ ಅರಿತುಕೊಂಡು ಉಪಯೋಗಿಸಿ.
ಕುಂಬಳಕಾಯಿ ಬೀಜಗಳನ್ನು ಚೆನ್ನಾಗಿ ಹುರಿದುಕೊಂಡು ಸಲಾಡ್ ರೀತಿಯಲ್ಲಿ ಸೇವನೆ ಮಾಡಬಹುದು.

ಶುಭದಿನ.

Leave a Reply

Your email address will not be published. Required fields are marked *