108 ಸಂಖ್ಯೆಯಲ್ಲಿ ಅಂತಹದ್ದು ಏನಿದೆ?

ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಕೆಲವರು ಈಗೀಗ 108 ಕಾಯಿಲೆ ಸ್ವಾಮಿ. ಅದೊಂದು ಒಳ್ಳೆಯ ಕೆಲಸ ಮಾಡೋಕೆ 108 ವಿಘ್ನ ಅಂತ ಹೇಳ್ತಾ ಇರ್ತಾರೆ. ಹಾಗೆ ನೋಡಿದ್ರೆ ಹಿಂದೂಗಳು ಜಪ ಮಾಡುವ ಸರದಲ್ಲಿ ಇರುವುದು 108 ಕಾಯಿ ಅಥವಾ ಮಣಿ. ಅಷ್ಟೇ ಅಲ್ಲ ಯಾವುದಾದರೂ ಮಂತ್ರ ಜಪ ಮಾಡುವಾಗ 108 ಬಾರಿ ಜಪಿಸಬೇಕು ಎಂಬ ಸಲಹೆ. 108 ಬಾರಿ ಸೂರ್ಯ ನಮಸ್ಕಾರ ಮಾಡುವುದು ಸೂಕ್ತ. ಹೀಗೆ ಧಾರ್ಮಿಕ ಕ್ರಿಯೆಗಳಿಗೆ ಸಂಬಂಧಿಸಿದ ಆಚರಣೆಗಳಲ್ಲಿ 108 ಸಂಖ್ಯೆಯನ್ನು ಬಹಳಷ್ಟು ಬಾರಿ ಬಳಕೆ ಮಾಡಲಾಗುತ್ತೆ. ಆಚರಣೆಗಳಿಗೆ ಹಾಗೂ ಈ 108 ಸಂಖ್ಯೆಗೆ ಇರುವ ನಂಟೇನು? ಅದರ ಮಹತ್ವವನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಸನಾತನ ಧರ್ಮದಲ್ಲಿ 108 ರ ಮಹತ್ವ ವೇದ ವಿಜ್ಞಾನ ಗಣಿತದಲ್ಲಿ ಉತ್ತರ ಇದೆ.

 

ವೇದಗಳ ಪ್ರಕಾರ 108 ಸಂಖ್ಯೆ ಇಡೀ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ ಹಾಗೂ ಹಿಂಬಾಲಿಸಿ ಹೋದಷ್ಟು ಬ್ರಹ್ಮಾಂಡ ಅಸ್ತಿತ್ವವನ್ನು ಕೂಡ ವಿವರಿಸುತ್ತದೆ. ಆಚರಣೆಗಳ ವಿಷಯಕ್ಕೆ ಬಂದ್ರೆ ಭಾರತದಲ್ಲಿ 108 ಪವಿತ್ರ ಕ್ಷೇತ್ರ ಇವೆ. ಜ್ಞಾನದ ವಿಷಯಕ್ಕೆ ಬಂದ್ರೆ ನಾಲ್ಕು ವೇದಗಳ ಸಾರವನ್ನು ಹೊಂದಿರುವ ಉಪನಿಷತ್ತು ಗಳ ಸಂಖ್ಯೆ 108. ಇನ್ನೂ ಸೌರ ಮಂಡಲದ ಮೂಲಕವೂ 108 ರ ಮಹತ್ವವನ್ನು ತಿಳಿಯಬಹುದು. ಋಗ್ವೇದ ದ ಸೂತ್ರಗಳ ಮೂಲಕ ಸೂರ್ಯ ಭೂಮಿಯಿಂದ ಸೂರ್ಯನ ವ್ಯಾಸದ 108 ರಷ್ಟು. ಮತ್ತು ಚಂದ್ರನ ವ್ಯಾಸದ 108 ರಷ್ಟರ ದೂರದಲ್ಲಿದೆ ಎಂದು ತಿಳಿಯುತ್ತೆ. ಇನ್ನೂ ಮನುಷ್ಯನ ಹೊರ ಭಾಗಕ್ಕೆ ಕಾಣುವ ದೇಹಕ್ಕೂ ಒಳಗಿರುವ ಆತ್ಮಕ್ಕೂ 108 ಯೂನಿಟ್ ಗಳಷ್ಟು ಅಂತರ ಇರುವುದನ್ನು ಋಷಿಗಳು ಕಂಡು ಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಅದರಿಂದಲೇ ಆತ್ಮ ಜ್ಞಾನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸುವವರು 108 ಮನಿಗಳ ಮಾಲೆಯನ್ನು ಹಿಡಿದು ಜಪಿಸಿತ್ತಾರೆ. 108 ಮಣಿಗಳು ಮನುಷ್ಯನ ಮೋಕ್ಷ ಸಾಧಿಸುವುದಕ್ಕೆ ಮುಂಚಿನ ಹಂತಗಳನ್ನು ಪ್ರತಿನಿಧಿಸುತ್ತವೆ.

 

ಹಾಗೂ 108 ಮಣಿಗಳನ್ನು ಹೊಂದಿರುವ ಮಾಲೆಯ ಮೂಲಕ ಜಪ ಮಾಡಿದ್ರೆ ಮನುಷ್ಯ ಆಂತರಿಕವಾಗಿ ಸದೃಢ ಆಗ್ತಾನೆ ಎನ್ನುವ ನಂಬಿಕೆ ಇದೆ. ಇನ್ನೂ ಬ್ರಹ್ಮಾಂಡ ದ ಶಕ್ತಿಯನ್ನು ಪ್ರತಿನಿಧಿಸುವ ಶಿವನ ತಾಂಡವ ನೃತ್ಯ ಇದೀಯಲ್ಲ ಅದಕ್ಕೂ ಹಾಗೂ ನರ್ಥನಕ್ಕೊ ಸಾಮ್ಯತೆ ಇದೆ. ಇಂತಹ ನಟರಾಜನ ನಾಟ್ಯ ಭಂಗಿಯೋ 108 ಆಗಿದೆ. ಅದರಿಂದಲೇ ಶಿವನನ್ನು ಪ್ರತಿನಿಧಿಸುವ ರುದ್ರಾಕ್ಷಿ ಮಾಲೆಯಲ್ಲಿ ರುದ್ರಾಕ್ಷಿಗಳು ಸಹ 108 ಇರುತ್ತವೆ. ವೈಜ್ಞಾನಿಕ ದೃಷ್ಟಿಯಿಂದ ಹಿಡಿದು ದೈವಿಕ ದೃಷ್ಟಿ ವರೆಗೂ 108 ಸಂಖ್ಯೆ ಸನಾತನ ಧರ್ಮದೊಂದಿಗೆ ಅವಿನಾಭಾವ ನಂಟು ಹೊಂದಿದೆ. 108 ಅನ್ನುವುದು ಮಂಗಳಕರ ಸಂಖ್ಯೆ ಎಂದು ನಂಬಿಕೆ ಇದೆ. ಅದರಿಂದ ಜಪಗಳನ್ನ ಮಾಡುವಾಗ 108 ಮಾಡ್ಬೇಕು. ಹಾಗೆ ಮಾಡಿದ್ರೆ ಉತ್ತಮ ಎನ್ನುವುದು ಇದೆ. ಸನಾತನ ಧರ್ಮದಲ್ಲಿ 108 ರ ಮಹತ್ವ್ ಗೊತ್ತಾಯಿತು ಅಲ್ವಾ? ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *