ಅಕ್ಟೋಬರ್ 2, ಭಾನುವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿರಲಿದೇ!!!

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭಾಕ್ರುತ್ಥ್ ನಾಮ ಸಂವತ್ಸರ, ದಕ್ಷಿನಾಯಿಣೇ ಶರದ್ ಋತು ಆಶ್ವೀಜ ಮಾಸ ಶುಕ್ಲ ಪಕ್ಷ ಇಂದು ಅಕ್ಟೋಬರ್ 2 ನೇ ತಾರೀಕು ಭಾನುವಾರ. ಇಂದು ಮೂಲ ನಕ್ಷತ್ರ. ಇಂದಿನ ದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ಉತ್ತಮ ದಿನ. ಎಲ್ಲಾ ಕೆಲಸಗಳಲ್ಲಿ ಜಯವನ್ನು ಸಾಧಿಸುತ್ತೀರಿ. ದೊಡ್ಡವರ ದೇವರ ಆಶೀರ್ವಾದ ಇವತ್ತು ಯಥೇಚ್ಛವಾಗಿ ಇಂದು ನಿಮ್ಮ ಮೇಲಿದೆ. ಭಾಗ್ಯೋದಯ ಆಗುತ್ತೆ. ವೃಷಭ ರಾಶಿಯವರಿಗೆ ಇಂದು ಮನಸ್ಸಿನಲ್ಲಿ ಖೇದ ಇರುವ ದಿನ. ನಿಮ್ಮ ಅತಿ ಹೆಚ್ಚಿನ ಪ್ರೀತಿ ಪಾತ್ರರು ನಿಮಗೆ ಸಿಗದೆ ಹೋಗಬಹುದು. ಅಥವಾ ಹೇಳಿದ ಮಾತಿಂದ ನಿಮಗೆ ಬೇಕಾದಂಥ ಸಮಾಧಾನ ಸಿಗದೆ ಹೋಗಬಹುದು. ಎರಡು ದಿನಗಳ ಕಲ್ಲ ಎಲ್ಲವನ್ನು ಮರೆತು ನಿಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿಬಿಡಿ. ಅದಾದ ನಂತರ ಎಲ್ಲವೂ ಸರಿ ಹೋಗುತ್ತೆ. ನಿಮ್ಮ ಪರವಾಗಿ ತಿರುಗುತ್ತದೆ. ಮಿಥುನ ರಾಶಿಯವರಿಗೆ ಇಂದು ಬಹಳ ಒಳ್ಳೆಯ ದಿನ. ಬೇರೆಯವರು ಮುಖ್ಯ ಆಗುತ್ತಾರೆ. ಹಾಗಾಗಿ ಬೇರೆಯವರೊಂದಿಗೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಿ. ಬೇರೆಯವರ ಸಂತೋಷ ಬೇರೆಯವರ ಯಶಸ್ಸು ನಿಮ್ಮ ಕೈಯಲ್ಲಿ ಇದೆ. ಹಾಗೆ ನಿಮ್ಮ ಯಶಸ್ಸು ಅವರ ಕೈಲಿದೆ. ಹಾಗಾಗಿ ಇಂದು ಸಹಯೋಗದಿಂದ ಇಂದು ಕೆಲಸ ಸಾಧಿಸಿ. ಕರ್ಕಾಟಕ ರಾಶಿಗೆ ಸಾಮಾಜಿಕ ವಾತಾವರಣದಲ್ಲಿ ಬಹಳ ಒಳ್ಳೆಯ ಆತ್ಮವಿಶ್ವಾಸ ಕಾಣುತ್ತ ಇರುತ್ತೆ. ಆತ್ಮವಿಶ್ವಾಸ ನ ಅತಿ ಹೆಚ್ಚು ಮಾಡಿಕೊಳ್ಳಬೇಡಿ. ಇದರಿಂದ ಬೇರೆಯವರಿಗೆ ತೊಂದರೆ ಆಗದಂತೆ ಮಾಡಬೇಡಿ. ಇಂದು ಸುಗಮವಾದ ದಿನ.

 

ಸಿಂಹ ರಾಶಿಯವರಿಗೆ ಬಹಳ ಒಳ್ಳೆಯ ದಿನ. ವೈವಾಹಿಕ ಜೀವನದಲ್ಲಿ ಮತ್ತು ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು ದಾಂಪತ್ಯ ಜೀವನದಲ್ಲಿ ಯಶಸ್ಸು ನೆಮ್ಮದಿ. ಹಾಗೂ ಹಣಕಾಸಿನ ವಿಚಾರದಲ್ಲಿ ನೆಮ್ಮದಿ. ನಿಮ್ಮ ಕ್ರಿಯಾತ್ಮಕತೆ ಇಡೀ ತಿಂಗಳಲ್ಲಿ ಹೆಚ್ಚಾಗಿರುವಿದರಿಂದ ಅನೇಕ ಕೆಲಸಗಳನ್ನೂ ಲೀಲಾಜಾಲವಾಗಿ ಸಾಧಿಸುತ್ತೀರಿ. ಕಲಾವಿದರಿಗೆ ಬಹಳ ಒಳ್ಳೆಯ ದಿನ. ಕನ್ಯಾ ರಾಶಿಗೆ ಇಂದು ಮನೆಯ ಜವಾಬ್ದಾರಿಗಳು ಬರುವುದರಿಂದ ಮನಸ್ಸಿಗೆ ಸ್ವಲ್ಪ ಕಡಿಮೆ ಆದಂತೆ ಭಾಸವಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಕೆಲಸಗಳು ತುಂಬಾ ಜಾಸ್ತಿ ಆದಂತೆ ಭಾಸ ಆಗುತ್ತೆ. ಆದ್ರೆ ಎರಡು ದಿನಗಳ ನಂತರ ಎಲ್ಲವೂ ಸರಿ ಹೋಗುತ್ತೆ ಯಾರ ಮೇಲೆ ಕೂಗಾಡಲು ಅಥವಾ ಕಾರ್ಯಕ್ಷೇತ್ರದಲ್ಲಿ ತೊಂದರೆ ಮಾಡಿಕೊಳ್ಳಬೇಡಿ. ರಿಯಲ್ ಎಸ್ಟೇಟ್ ಆಟೋ ಮೊಬೈಲ್ ಇತ್ಯಾದಿ ವ್ಯವಹಾರದಲ್ಲಿ ಇರುವವರಿಗೆ ಇಂದು ಬಹಳ ಒಳ್ಳೆಯ ದಿನ. ತುಲಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಸಹೋದರ ಸಹೋದರಿ ಇಂದ ಸಂತೋಷ ನೆಮ್ಮದಿ ಕಾಣುತ್ತೀರಿ. ನಿಮ್ಮ ಅತ್ತ್ಮವಿಶ್ವಸ ಇಡೀ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ನಿಮ್ಮ ಕೈಯಲ್ಲಿ ಸಾಧ್ಯವಾಗಲ್ಲ ಎನ್ನುವಂಥ ಕೆಲಸಗಳನ್ನು ಸಾಧಿಸುತ್ತೀರಿ. ವೃಶ್ಚಿಕ ರಾಶಿಗೆ ಬಹಳ ಮುಖ್ಯ ದಿನ. ಕುಟುಂಬದವರ ಜೊತೆ ಸರಿಯಾದ ರೀತಿಯಲ್ಲಿ ಸಮಯ ಕಳೆಯಲು ಇದೆ ಒಳ್ಳೆಯ ದಿನ. ಮಿತ್ರರ ಜೊತೆ ನಿಮ್ಮ ಪ್ರೀತಿ ಪ್ರೇಮ ಹಂಚಿಕೊಳ್ಳಿ. ಅವರೊಂದಿಗೆ ಸರಸ ಸಲ್ಲಾಪ ದಿಂದ ಸಮ್ಮಯ್ಯ ಕಳೆಯುವ ದಿನ ಇದಾಗಿದೆ. ಇಡೀ ತಿಂಗಳಲ್ಲಿ ನಿಮ್ಮ ಕುಟುಂಬದವರ ಮನಸ್ಸು ಗೆಲ್ಲಲು ಬಹಳ ಒಳ್ಳೆಯ ದಿನ. ಧನಸ್ಸು ರಾಶಿಗೆ ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಮನಸ್ಸಿಗೆ ಅತಿ ಹೆಚ್ಚಿನ ನೆಮ್ಮದಿ. ಹಿಂದೆಯಿದ್ದ ಅನೇಕ ದಿನಗಳಿಂದ ಮನಸ್ಸಿನಲ್ಲಿ ಖೇದ ಎಲ್ಲವೂ ಮಾಯವಾಗಿದೆ. ಮುಂದೆ ಏನು ಮಾಡಬೇಕು ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಧ್ಯಾನ ಮಾಡಿ.

 

ಮಕರ ರಾಶಿಗೆ ಒಂದೆರಡು ಹೆಜ್ಜೆ ಹಿಂದೆ ಇಟ್ಟು ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುವ ದಿನ. ಮುಖ್ಯವಾದ ಕೆಲಸಗಳನ್ನು ಮಾಡಲು ಹೋಗಬೇಡಿ. ಮುಖ್ಯ ನಿರ್ಧಾರ ಬೇಡ. ಇನ್ನೂ ಎರಡು ದಿನಗಳಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ಬದಲಾಗುವುದರಿಂದ ಆಡಿದ ಮಾತು ತೆಗೆದುಕೊಂಡ ನಿರ್ಧಾರ ಆಮೇಲೆ ತಪ್ಪಾಗಬಹುದು. ಆದ್ದರಿಂದ ಇಂದು ಯಾವ ವಸ್ತುಗಳನ್ನು ವಿಷಯಗಳನ್ನು ಎಲ್ಲಿದೆಯೋ ಅಲ್ಲಿಯೇ ಇರಲು ಬಿಟ್ಟುಬಿಡಿ. ಕುಂಭ ರಾಶಿಗೆ ಇವತ್ತು ಬಹಳ ಸುಗಮವಾದ ದಿನ. ಧನಾಗಮ ಆಗುತ್ತೆ ಇಷ್ಟಾರ್ಥ ಸಿದ್ಧಿ. ಗುಂಪುಗಳು ಸಾಮಾಜಿಕ ವಾತಾವರಣದಲ್ಲಿ ಯಶಸ್ಸು. ಫೋನ್ ಕೆಳಗಿಡಲು ಆಗಲ್ಲ. ನಿಮ್ಮ ಕಾಂಟಾಕ್ಟ್ ಲಿಸ್ಟ್ ಬಹಳ ದೊಡ್ಡದಾಗಿ ಬೆಳೆಯುತ್ತೆ. ಅನೇಕರನ್ನು ಸಂಪರ್ಕ ಮಾಡುತ್ತಿರಿ.ಮೀನಾ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ ಆಗುತ್ತೆ. ಲೀಲಾಜಾಲವಾಗಿ ಎಲ್ಲಾ ಕೆಲಸಗಳನ್ನೂ ಮಾಡುತ್ತಿರಿ. ನಿಗದಿತ ಅವಧಿಯೊಳಗೆ ಕೆಲಸಗಳನ್ನು ಮಾಡಿದರೆ ಇಂದು ಸಂತೋಷ ಪ್ರಾಪ್ತಿ ಆಗುತ್ತೆ. ನಿಮ್ಮ ನೆಮ್ಮದಿ ನೀವೇ ಕಳೆದುಕೊಂಡಂತೆ ಆಗುತ್ತೆ.. ಶುಭದಿನ

Leave a Reply

Your email address will not be published. Required fields are marked *