ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಮ್ಮ ಸುತ್ತ ಮುತ್ತಲೂ ಇರುವ ಬೀಜಗಳಲ್ಲಿ ಎಂಥಹ ಅರೋಗ್ಯ ಅಡಕವಾಗಿದೆ ಗೊತ್ತೇ. ನಾವು ಸಾಮಾನ್ಯವಾಗಿ ಏನು ಮಾಡುತ್ತೇವೆ ಎಂದರೆ, ಹಣ್ಣುಗಳನ್ನು ತಿಂದು ಬಿಸಾಡುತ್ತೆವೆ ಆದರೆ ಅದರಲ್ಲಿಯೇ ಅಗಾಧವಾದ ಆರೋಗ್ಯಕರ ಲಾಭಗಳು ಪ್ರಯೋಜನಗಳು ಅಡಗಿವೆ ಎಂದು ನಾವು ಮರೆತು ಬಿಡುತ್ತೇವೆ. ಒಂದು ಗಿಡವೂ ಹೆಮ್ಮರವಾಗಿ ನಮಗೆ ಹಣ್ಣುಗಳನ್ನು ನೀಡಲು ನಮಗೆ ಬೀಜವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಬೀಜ ಇದ್ದಾಗಲೇ ಮರವಾಗುವುದು ಅಂತ ದೊಡ್ಡವರು ಆಗಾಗ ಬುದ್ದಿ ಮಾತು ಹೇಳುತ್ತಾರೆ. ಸಾಮಾನ್ಯವಾಗಿ ಹಣ್ಣು ತರಕಾರಿಗಳಲ್ಲಿ ಬೀಜಗಳು ಇರುತ್ತವೆ ಇಂತಹ ಒಂದು ಅದ್ಭುತವಾದ ಬೀಜದ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ನಾವು ತಿಳಿಸುವ ಈ ಬೀಜವನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇಮ್ಯುಣಿಟಿ ಬೂಸ್ಟ್ ಮಾಡುತ್ತದೆ. ಇನ್ನೂ ನಿಮಗೆ ದೇಹದಲ್ಲಿ ಪ್ರೊಟೀನ್ ಕ್ಯಾಲ್ಷಿಯಂ ಕಡಿಮೆ ಆದರೆ ಈ ಬೀಜಗಳ ಸೇವನೆ ಇಂದ ಭರಿಸಬಹುದು. ಆ ಬೀಜ ಯಾವುದು ಅಂದರೆ ಹಲಸಿನ ಬೀಜ. ಈ ಹಲಸಿನ ಕಾಯಿಯನ್ನು ಪಲ್ಯ ಮಾಡಿಕೊಂಡು ಸೇವನೆ ಮಾಡುತ್ತಾರೆ ಇನ್ನೂ ಕೆಲವರು ಇದನ್ನು ಹಣ್ಣಾಗಲು ಬಿಟ್ಟು ನಂತರ ಸೇವನೆ ಮಾಡುತ್ತಾರೆ.
ಆದರೆ ಇದರಳೊಳಗೆ ಇರುವ ಬೀಜಗಳನ್ನು ಬಿಸಾಡಿ ಬಿಡುತ್ತೇವೆ. ಆದರೆ ಈ ಹಲಸಿನ ಬೀಜಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ನಾವೆಲ್ಲರೂ ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಇದರ ಬೀಜಗಳನ್ನು ಕೆಂಡದಲ್ಲಿ ಹಾಕಿ ಹುರಿದು ತಿನ್ನುತ್ತಿದ್ದೆವು. ಅಥವಾ ಬೇಯಿಸಿ ತಿನ್ನುತ್ತಿದ್ದೇವು. ಈ ಬೀಜಗಳನ್ನು ನೋಡಿದರೆ ತಕ್ಷಣವೇ ನಮಗೆ ನಮ್ಮ ಬಾಲ್ಯ ನೆನಪಿಗೆ ಬರುತ್ತದೆ. ಹಲಸಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ಚರ್ಮಕ್ಕೆ ಕೂದಲಿಗೆ, ಕಣ್ಣುಗಳಿಗೆ ಬಹಳ ಒಳ್ಳೆಯದು. ಅನಾರೋಗ್ಯದ ಸಮಸ್ಯೆಗಳು ದೇಹದಲ್ಲಿ ಪ್ರೊಟೀನ್ ಹಾಗೂ ಕ್ಯಾಲ್ಷಿಯಂ ಕೊರತೆ ಇಂದ ಬರುತ್ತದೆ. ಅದಕ್ಕಾಗಿ ನಾವು ಸಪ್ಲಿಮೆಂಟ್ ಗಾಗೀ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಅಂಥಹ ಎಲ್ಲ ಗುಣಗಳು ಈ ಹಲಸಿನ ಬೀಜದಲ್ಲಿದೆ. ಇದರಲ್ಲಿ ಕಾರ್ಭೋಹೈಡ್ರೆಟ್ ಇದೇ, ವಿಟಮಿನ್ ಬಿ, ಪೊಟ್ಯಾಶಿಯಂ, ಕ್ಯಾಲ್ಷಿಯಂ ಜಿಂಕ್ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಪ್ರೊಟೀನ್ ಮ್ಯಾಂಗನೀಸ್ ಕಾಫರ್ ಇದೆ. ವಿಟಮಿನ್ಸ್ ಗಳು ಮಿನರಲ್ಸ್ ಗಳು ಇವೆ. ನೈಸರ್ಗಿಕವಾಗಿ ಸಿಗುವ ಈ ಬೀಜಗಳನ್ನು ಸೇವನೆ ಮಾಡುವುದರಿಂದ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಹಾಗೂ ನಿಮ್ಮ ದೇಹದಲ್ಲಿ ಇಮ್ಯುಣಿಟಿ ಹೆಚ್ಚಿಸುತ್ತದೆ. ಮೂಳೆಗಳಿಗೆ ಕ್ಯಾಲ್ಷಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಗಳು ಮೂಳೆಗಳ ಬೆಳವಣಿಗೆಗೆ ಸಹಕಾರಿ.
ಹಾಗೂ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುತ್ತದೆ. ಡಯೆಟ್ ಫೈಬರ್ ಇರುವುದರಿಂದ ಇದು ತಿಂದ ಆಹಾರವೂ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗೂ ವಿಟಮಿನ್ ಎ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.ಹಾಗೂ ಈ ಬೀಜದಲ್ಲಿ ಆಂಟಿ ಏಜಿಂಗ್ ಇರುವುದರಿಂದ ತ್ವಚೆಯ ನೆರಿಗೆ ಆಗುವುದನ್ನು ತಡೆಯುತ್ತದೆ. ಈ ಬೀಜಗಳನ್ನು ನೀವು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ನಂತ್ರ ಪುಡಿ ಮಾಡಿ ಸೇವನೆ ಮಾಡಬಹುದು. ಹಾಗೂ ಇದರ ಪುಡಿಯನ್ನು ಗಟ್ಟಿಯಾಗಿ ಹಾಲಿನಲ್ಲಿ ಮಾಡಿಕೊಂಡು ಮುಖಕ್ಕೆ ಫೆಸ್ ಪ್ಯಾಕ್ ಆಗಿ ಕೂಡ ಬಳಕೆ ಮಾಡಬಹುದು. ಇದರಿಂದ ನಿಮಗೆ ನೇರಿಗೆ ಸುಕ್ಕು ಮೊಡವೆಗಳು ಕಣ್ಮರೆಯಾಗುತ್ತದೆ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಈ ಬೀಜಗಳನ್ನು ಸೇವನೆ ಮಾಡಬಾರದು. ಅಥವಾ ಆರೋಗ್ಯಕ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾದರೆ ಹಲಸಿನ ಬೀಜಗಳನ್ನು ಕುದಿಸುವಾಗ ಸ್ವಲ್ಪ ಅಜವಾಯಿನ್ ಹಾಕಿ ಕುದಿಸಿ ಇವುಗಳನ್ನು ಸೇವನೆ ಮಾಡಿದ್ರೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರುವುದಿಲ್ಲ. ಶುಭದಿನ.