ಆಹಾರ ಸರಿಯಾಗಿ ಜೀರ್ಣವಾಗಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಗೊತ್ತೇ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ನಾವು ಸೇವಿಸಿದ ಆಹಾರವೂ ಚೆನ್ನಾಗಿ ಜೀರ್ಣವಾಗಬೇಕು. ಇಲ್ಲವಾದರೆ ಗ್ಯಾಸ್ಟ್ರಿಕ್ ಅಜೀರ್ಣತೆ ಅಸಿಡಿಟಿ ಸಮಸ್ಯೆಗಳು ಶುರು ಆಗುತ್ತವೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಆಹಾರಗಳನ್ನು ಸೇವನೆ ಮಾಡಿದರೆ ಚೆನ್ನಾಗಿ ಜೀರ್ಣವಾಗುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಇತ್ತೀಚಿನ ದಿನಗಳಲ್ಲಿ ಜನರು ಹಲವಾರು ಬಗೆಯ ಅನಾರೋಗ್ಯದ ಸಮಸ್ಯೆಗಳಿಂದ ನರಲಾಡುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಲಬದ್ಧತೆ. ಏಕೆಂದರೆ ಇದಕ್ಕೆ ಕಾರಣ ಅವರ ಆಹಾರ ಸೇವನೆ ಮಾಡುವ ಕ್ರಮ ಹಾಗೂ ತಿಂದ ಆಹಾರವೂ ಸರಿಯಾಗಿ ಜೀರ್ಣವಾಗದೇ ಇದ್ದಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳು ಕಾಡುತ್ತಿದ್ದರೆ ನಮ್ಮ ದೇಹವು ಮತ್ತಿತ್ತರ ಅನಾರೋಗ್ಯಕ್ಕೆ ತುತ್ತಾಗಿರುತ್ತದೆ ಎಂದು ಅರ್ಥವಾಗುತ್ತದೆ. ಮಲಬದ್ಧತೆ ಇಂದ ಸಾಕಷ್ಟು ರೋಗಗಳು ನಮ್ಮ ದೇಹವನ್ನು ಸೇರಬಹುದು. ಅದಕ್ಕಾಗಿ ನಾವು ಸೇವನೆ ಮಾಡುವ ಆಹಾರವೂ ಚೆನ್ನಾಗಿ ಜೀರ್ಣವಾಗಲು ನಾವು ಕೆಲವೊಂದು ನಿಯಮಾವಳಿ ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

 

ಇದರಿಂದ ನೀವು ಸೇವನೆ ಮಾಡಿದ ಆಹಾರವೂ ಚೆನ್ನಾಗಿ ಜೀರ್ಣವಾಗುತ್ತದೆ ಇದರ ಜೊತೆ ಜೊತೆಗೆ, ಮಲಬದ್ಧತೆ ಸಮಸ್ಯೆ ಬರುವುದಿಲ್ಲ ಹಾಗೆಯೇ ಅನಾರೋಗ್ಯದ ಸಮಸ್ಯೆಗಳು ಕೂಡ ಬರುವುದಿಲ್ಲ. ನಮ್ಮ ಆಹಾರವೂ ಸರಿಯಾಗಿ ಜೀರ್ಣವಾಗಬೇಕೆಂದರೆ ನಾವು ಅತಿಯಾಗಿ ಸೇವನೆ ಮಾಡುವುದನ್ನು ತಪ್ಪಿಸಬೇಕು. ಹೊಟ್ಟೆ ತುಂಬಿ ತುಳುಕುವವರೆಗೂ ಊಟವನ್ನು ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಮೂರು ನಾಲ್ಕು ಬಾರಿ ಊಟವನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದ ಮತ್ತಷ್ಟು ಅನಾರೋಗ್ಯದ ಸಮಸ್ಯೆಗಳು ಶುರು ಆಗಿವೆ. ಅತಿಯಾಗಿ ಸೇವನೆ ಮಾಡುವವರಿಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚುತ್ತವೆ ಸಾಮಾನ್ಯವಾಗಿ ನೀವು ಗಮನಿಸಿರಬಹುದು, ಕೆಲವು ಜನರಿಗೆ ಊಟವನ್ನು ಮಾಡಲು ದುಡ್ಡು ಕೂಡ ಇರುವುದಿಲ್ಲ ಅವರಿಗೆ ಯಾವುದೇ ರೀತಿಯ ಕಾಯಿಲೆಗಳು ಇರುವುದಿಲ್ಲ. ಇನ್ನೂ ನೀವು ಮೂರ್ನಾಲ್ಕು ಬಾರಿ ಜೊತೆಗೆ ಹೊಟ್ಟೆ ತುಂಬಿದ ಮೇಲೂ ಊಟವನ್ನು ಮಾಡುವುದನ್ನು ನಿಲ್ಲಿಸಬೇಕು. ಇನ್ನೂ ಆಹಾರವನ್ನು ಸೇವನೆ ಮಾಡುವಾಗ ಚೆನ್ನಾಗಿ ಜಗಿದು ತಿನ್ನಿ. ಮೊದಲು ಆಹಾರವನ್ನು ಸೇವನೆ ಮಾಡುವಾಗ ಟಿವಿ ಮೊಬೈಲ್ ಫೋನ್ ಲ್ಯಾಪ್ಟಾಪ್ ಅನ್ನು ಉಪಯೋಗಿಸಬೇಡಿ. ದೊಡ್ಡವರು ಹೇಳುವ ಹಾಗೆ ಒಂದೊಂದು ತುತ್ತು ಕೂಡ ಜಗಿದು ತಿನ್ನಿ.

 

ನಾವು ಸೇವನೆ ಮಾಡಿದ ಆಹಾರವೂ ಚೆನ್ನಾಗಿ ಜೀರ್ಣವಾಗಲು ನಾವು ಚೆನ್ನಾಗಿ ಆಹಾರವನ್ನು ಜಗಿದು ತಿನ್ನಬೇಕು. ಅವಸರವಾಗಿ ತಿಂದರೆ ಸೇವನೆ ಮಾಡಿದ ಆಹಾರವೂ ಚೆನ್ನಾಗಿ ಜೀರ್ಣವಾಗಲು ಸಾಧ್ಯಗುವಿದಿಲ್ಲ. ಇನ್ನೂ ಕೆಲವು ಜನರು ಊಟವಾದ ಮೇಲೆ ತಕ್ಷಣವೇ ನೀರು ಕುಡಿಯುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಊಟ ಮಾಡುವ ಅರ್ಧ ಗಂಟೆ ಮುನ್ನ ಹಾಗೂ ಊಟವಾದ ಮೇಲೆ ಒಂದು ಗಂಟೆ ನಂತರ ನೀರನ್ನು ಕುಡಿಯಬೇಕು. ಆಹಾರವನ್ನು ಸ್ವಲ್ಪ ಸಮಯ ಬಿಟ್ಟು ಬಿಟ್ಟು ಸೇವನೆ ಮಾಡಬೇಕು ಆದಷ್ಟು ಹೆಚ್ಚಿಗೆ ನಾರಿನ ಅಂಶವನ್ನು ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಬೇಕು. ಇದರ ಜೊತೆಗೆ, ಅತಿಯಾದ ತಂಪು ಮತ್ತು ಅತಿಯಾದ ಬಿಸಿ ಆಹಾರ ಮತ್ತು ನೀರು ಸೇವನೆ ಮಾಡಬೇಡಿ. ಆದಷ್ಟು ನಾರ್ಮಲ್ ತಾಪಮಾನದಲ್ಲಿ ಆಹಾರ ನೀರು ಸೇವನೆ ಮಾಡಿ. ಊಟವಾದ ಮೇಲೆ ಕಾಫಿ ಟೀ ಕುಡಿಯಬೇಡಿ ಇದರಿಂದ ಆಹಾರವೂ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರ ಜೊತೆಗೆ ಮಧ್ಯಪಾನ ಧೂಮಪಾನ ಸಿಗರೇಟ್ ಸೇವನೆ ಮಾಡುವುದು ತಪ್ಪಿಸಿ. ಊಟವಾದ ಮೇಲೆ ವ್ಯಾಯಾಮ ಯೋಗ ಧ್ಯಾನ ಮಾಡುವುದು ಹಾಗೂ ಸ್ನಾನವನ್ನು ಮಾಡುವುದನ್ನು ತಪ್ಪಿಸಬೇಕು.

Leave a Reply

Your email address will not be published. Required fields are marked *