ನಿಂಬೆ ಹಣ್ಣಿನ ರಸವನ್ನು ಅತಿಯಾಗಿ ಸೇವನೆ ಮಾಡಿದರೆ ನಿಮ್ಮ ಮೂತ್ರಕೋಶ ಹಿಗ್ಗುತ್ತದೆ. ಎಚ್ಚರವಿರಿ!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ನಿಂಬೆ ಹಣ್ಣು ನೋಡಲು ಚಿಕ್ಕದಾಗಿ ದುಂಡಾಗಿ ಇದ್ದರೂ ಇದರ ಪರಿಮಳ ಎಲ್ಲರ ಗಮನ ಸೆಳೆಯುತ್ತದೆ. ಹೌದು ನಿಂಬೆ ಹಣ್ಣು ಆರೋಗ್ಯಕ್ಕೆ ಮಾತ್ರ ಆರೋಗ್ಯದಾಯಕ ಅಲ್ಲದೇ ಇದನ್ನು ಇನ್ನಿತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಳಕೆ ಮಾಡುತ್ತಾರೆ. ಅಷ್ಟೊಂದು ಈ ನಿಂಬೆ ಬನ್ನಿ ಶಕ್ತಿಯನ್ನು ಹೊಂದಿದೆ. ಹಾಗಾದರೆ ಇಂದಿನ ಲೇಖನದಲ್ಲಿ ನಿಂಬೆ ಹಣ್ಣು ಹೇಗೆ ನಮ್ಮ ಆರೋಗ್ಯಕ್ಕೆ ಅಡ್ಡ ಪರಿಣಾಮ ಬೀರುತ್ತದೆ ಅಂತ ತಿಳಿಯೋಣ ಬನ್ನಿ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಅಂಶವು ಹೇರಳವಾಗಿದೆ. ಈ ಸಿಟ್ರಿಕ್ ಅಂಶವು ನಮ್ಮ ಆರೋಗ್ಯಕ್ಕೆ ನಿಜಕ್ಕೂ ಬಹಳ ಒಳ್ಳೆಯದು ಅದಕ್ಕೆ ಜನರು ಹಿಂದೆ ಮುಂದೆ ಯೋಚನೆ ಮಾಡದೆ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುತ್ತಾರೆ. ಅಥವಾ ನಿಂಬೆ ಹಣ್ಣಿನ ರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯುತ್ತಾರೆ. ನಿಂಬೆ ಹಣ್ಣಿನಲ್ಲಿ ಉರಿ ಊತ ಶಮನ ಮಾಡುವ ಗುಣವನ್ನೂ ಹೊಂದಿದೆ. ಇದರಿಂದ ಬೆನ್ನು ನೋವಿನ ಸಮಸ್ಯೆಗಳು ಕೂಡ ಬರುವುದು ಕಡಿಮೆ ಆಗುತ್ತದೆ. ಆದರೆ ನಿಂಬೆ ರಸ ಮೂಳೆಗಳಿಗೆ ಹಾನಿ ಉಂಟು ಮಾಡುತ್ತದೆ.

 

ನಿಂಬೆ ಹಣ್ಣಿನ ಜ್ಯೂಸ್ ಅಥವಾ ರಸವನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಮತ್ತು ಕೂದಲಿನ ಆರೋಗ್ಯಕ್ಕೆ ಚರ್ಮಕ್ಕೆ ಒಳ್ಳೆಯದೇ ಆದರೆ ಅತಿಯಾಗಿ ಬಳಕೆ ಮಾಡಿದರೆ ಹಾಗೂ ಹೇಗೆ ಬಳಕೆ ಮಾಡಬೇಕು ಅನ್ನುವುದರ ಬಗ್ಗೆ ಅರಿವು ಇಲ್ಲದೇ ಹೋದರೆ ನಿಜಕ್ಕೂ ತೊಂದರೆಗಳು ಆಗುವುದು ಕಡ್ಡಾಯ. ಮೊದಲಿಗೆ ಆಗುವ ತೊಂದರೆ ಏನೆಂದರೆ, ಕೂದಲಿಗೆ ನಿಂಬೆ ಹಣ್ಣಿನ ರಸವನ್ನೂ ಬಳಕೆ ಮಾಡಿದರೆ, ಕೂದಲು ಬೆಳ್ಳಗೆ ಆಗುತ್ತವೆ ಮತ್ತು ಕೂದಲು ಒಣಗುತ್ತವೆ. ನಿಂಬೆ ಹಣ್ಣಿನಲ್ಲಿ ಇರುವ ಆಮ್ಲಿಯ ಗುಣಗಳು ನಿಮ್ಮ ಕೂದಲಿನ ಸೌಂದರ್ಯ ಕೆಟ್ಟದಾಗಿ ಕಾಣುವಂತೆ ಮಾಡುತ್ತವೆ. ಅನೇಕ ಜನರು ತಲೆ ಹೊಟ್ಟಿನ ಸಮಸ್ಯೆಗೆ ಈ ನಿಂಬೆ ರಸದ ಪ್ರಯೋಗವನ್ನು ಮಾಡುತ್ತಾರೆ. ಆದರೆ ಇದನ್ನು ನೇರವಾಗಿ ಕೂದಲಿಗೆ ಹಚ್ಚುವುದು ಬಹಳ ಅಪಾಯಕಾರಿ. ಅದಕ್ಕಾಗಿ ನೀವು ಇದನ್ನು ಮೆಹಂದಿ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿಕೊಂಡು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಬಹಳ ಉತ್ತಮ.ಇನ್ನೂ ಕೆಲವು ಜನರು ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸದಲ್ಲಿ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯುತ್ತಾರೆ. ತೂಕ ಇಳಿಯುತ್ತದೆ ಎಂದು ಆದರೆ ಇದರ ಅಧಿಕ ಸೇವನೆ ಹೊಟ್ಟೆ ನೋವಿಗೆ ಕಾರಣ ಆಗುತ್ತದೆ.

 

ಅಷ್ಟೇ ಅಲ್ಲದೇ ಇದರಲ್ಲಿ ಇರುವ ಅಸಿಡಿಕ್ ಆಮ್ಲವು ನಿಂಬೆ ರಸವನ್ನು ಕುಡಿದಾಗ ಹಲ್ಲುಗಳಿಗೆ ಜುಂ ಅನ್ನಿಸಬಹುದು. ನಂತ್ರ ಇದು ಹಲ್ಲು ನೋವಿನ ಸಮಸ್ಯೆಗೆ ಕಾರಣ ಆಗಬಹುದು. ಆಮೇಲೆ ಹಲ್ಲುಗಳ ಸವೆತವನ್ನು ದೂರ ಮಾಡಲು ನಿಂಬೆ ಹಣ್ಣು ಸಿಟ್ರಿಕ್ ಅಂಶವು ಇರುವ ವಸ್ತುಗಳನ್ನು ಉಪಯೋಗ ಮಾಡದೇ ಇರುವುದು ಒಳ್ಳೆಯದು. ಇನ್ನೂ ನಿಂಬೆ ರಸವು ನಿಮ್ಮ ಚರ್ಮವೂ ಒಣಗುವಂತೆ ಮಾಡುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ಇರುವವರು ನಿಂಬೆ ರಸವನ್ನು ಬಳಕೆ ಮಾಡಬಹುದು. ಒಂದು ವೇಳೆ ನಿಮ್ಮ ಚರ್ಮವೂ ಒಣಗಿದ ಚರ್ಮ ಇದ್ದರೆ ನೀವು ನಿಂಬೆ ರಸವನ್ನು ಕುಡಿಯುತ್ತಿದ್ದರೆ ನಿಮ್ಮ ಚರ್ಮವೂ ಇನ್ನಷ್ಟು ಒಣಗುತ್ತದೆ. ಹೀಗಾಗಿ ನೀವು ಕುರೂಪಿ ಆಗಿ ಕಾಣಲು ಶುರು ಆಗುತ್ತದೆ. ಮೊಡವೆಗಳು ಕೆರೆತ ಶುರು ಆಗುತ್ತದೆ ಆದ್ದರಿಂದ ಒಣ ಚರ್ಮ ಇದ್ದವರು ಆದಷ್ಟು ನಿಂಬೆ ರಸವನ್ನು ಉಪಯೋಗಿಸಬೇಡಿ.
ಬಳಸಬೇಕಾದ ಸಂದರ್ಭ ಬಂದರೆ ಇತರ ಸಾಮಗ್ರಿಗಳ ಜೊತೆಗೆ ಸೇರಿಸಿ ಬಳಕೆ ಮಾಡಿ. ಇನ್ನೂ ಅತಿಯಾದ ನಿಂಬೆ ರಸದ ಸೇವನೆ ನಿಮ್ಮ ಮೂತ್ರಕೋಶವನ್ನು ಹಿಗ್ಗಿಸುತ್ತದೆ.
ಅದಕ್ಕಾಗಿ ನೀವು ನಿಂಬೆ ರಸವನ್ನು ಕುಡಿದರೆ ಆಗಾಗ ನೀರು ಕುಡಿಯುವುದು ಒಳ್ಳೆಯದು. ಇದರಿಂದ ದೇಹವು ನಿರ್ಜಲೀಕರಣ ಆಗುವುದು ತಡೆಯುತ್ತದೆ.

Leave a Reply

Your email address will not be published. Required fields are marked *