ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಸೋಂಪು ಕಾಳು ಯಾಕೆ ಇಟ್ಟಿರುತ್ತಾರೆ ಗೊತ್ತೇ. ಇದರ ಚಮತ್ಕಾರಿ ಲಾಭಗಳು ಇಲ್ಲಿವೆ ನೋಡಿ!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಊಟವಾದ ಮೇಲೆ ಸೋಂಪು ಕಾಳನ್ನು ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಆಗುತ್ತದೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಸಾಮಾನ್ಯವಾಗಿ ಹೋಟೆಲ್ ಗಳಿಗೆ ರೆಸ್ಟೋರೆಂಟ್ ಗಳಿಗೆ ಹೋದಾಗ ಮುಂದೆ ಬಡೆಸೊಪ್ ಅನ್ನು ಇಟ್ಟಿರುತ್ತಾರೆ. ಮೊದಲಿನ ಕಾಲದ ಹಿರಿಯರು ಊಟವಾದ ಮೇಲೆ ಎಲೆ ಅಡಿಕೆಯನ್ನು ಸೇವನೆ ಮಾಡುತ್ತಿದ್ದರು. ಜೊತೆಗೆ ಬಡೆಸೋಪು ಕೂಡ ತಿನ್ನುತ್ತಿದ್ದರು. ಏಕೆಂದರೆ ಇದು ನಮ್ಮ ಜೀರ್ಣ ಶಕ್ತಿಯನ್ನೂ ವೃದ್ಧಿಸುತ್ತದೆ ಎಂದು ಹಿರಿಯರು ಉತ್ತಮವಾದ ಆರೋಗ್ಯಕ್ಕೆ ಇದನ್ನು ಸೇವನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ಇರುವುದು ಒಂದು ಬಗೆಯ ಅನಾರೋಗ್ಯಕ್ಕೆ ಕಾರಣ ಆಗಿದೆ ಅಂತ ಹೇಳಬಹುದು. ಇದರಿಂದ ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳು ಅಸಿಡಿಟಿ ಗ್ಯಾಸ್ಟ್ರಿಕ್ ಹೊಟ್ಟೆ ನೋವು ಹೊಟ್ಟೆ ಉಬ್ಬರ ಸಮಸ್ಯೆಗಳು ಶುರು ಆಗುತ್ತವೆ.

 

ಹೌದು ನಿಮಗೂ ಕೂಡ ಮಲಬದ್ಧತೆ ಸಮಸ್ಯೆ ಅಸಿಡಿಟಿ ತೊಂದರೆ ಇದ್ದರೆ ಊಟವಾದ ಮೇಲೆ ಸೋಂಪು ಕಾಳನ್ನು ಸೇವನೆ ಮಾಡಿ ನೋಡಿ. ನಿಜಕ್ಕೂ ನಿಮ್ಮ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಅಷ್ಟೇ ಅಲ್ಲದೆ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಜೊತೆಗೆ ಅಜೀರ್ಣತೆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಸೋಂಪು ಕಾಳನ್ನು ಸೇವನೆ ಮಾಡುವುದರಿಂದ ಕೇವಲ ಬಾಯಿಯ ಕೆಟ್ಟ ದುರ್ವಾಸನೆ ಕೂಡ ನಿವಾರಣೆ ಆಗುತ್ತದೆ. ಬಾಯಿಯಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳು ನಾಶಗೊಳ್ಳುತ್ತವೆ. ಇನ್ನೂ ಸೋಂಪು ಕಾಳು ಕೇವಲ ಜೀರ್ಣ ಶಕ್ತಿಯನ್ನು ವೃದ್ಧಿಸುವುದಲ್ಲದೇ ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ. ಹೌದು ಸೋಂಪು ಕಾಳು ನಮ್ಮ ರಕ್ತವನ್ನು ಶುದ್ಧೀಕರಿಸಿ ತೆಳುವಾಗಿಸುವಂತೆ ಮಾಡುತ್ತದೆ. ದೇಹದಲ್ಲಿ ಇರುವ ಕೆಟ್ಟ ಕಲ್ಮಶವನ್ನು ತೆಗೆದು ಹಾಕಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಬಡೆಸೋಪು ಮೆದುಳಿನ ಆರೋಗ್ಯವನ್ನು ಉತ್ತಮಗೊಳಿಸುವ ಒಂದು ಅದ್ಭುತವಾದ ಆಹಾರಗಳಲ್ಲಿ ಒಂದಾಗಿದೆ. ಮೆದುಳು ಚುರುಕಾಗಿ ಕೆಲಸವನ್ನು ಮಾಡುವಂತೆ ಮಾಡಲು ಸಹಾಯ ಮಾಡುತ್ತದೆ ಈ ಸೋಂಪು ಕಾಳು.

 

ಇನ್ನೂ ಮಹಿಳೆಯರಲ್ಲಿ ಕಾಡುವ ಮುಟ್ಟಿನ ಸಮಸ್ಯೆಗೆ ಈ ಸೋಂಪು ಕಾಳನ್ನು ನೀರಿನಲ್ಲಿ ಹಾಕಿ ಕುದಿಸಿ ಅದರ ರಸವನ್ನು ಅಂದರೆ ಆ ನೀರನ್ನು ಆರಿಸಿ ಕುಡಿದರೆ ಖಂಡಿತವಾಗಿ ಮುಟ್ಟಿನ ಸಮಯದಲ್ಲಿ ಆಗುವ ನೋವನ್ನು ನಿವಾರಣೆ ಮಾಡುತ್ತದೆ. ಹಾಗೂ ಪೀರಿಯಡ್ ಕೂಡ ರೆಗ್ಯುಲರ್ ಆಗಿ ಬರಲು ತುಂಬಾನೇ ಸಹಾಯ ಮಾಡುತ್ತದೆ. ಇನ್ನೂ ಇದರಲ್ಲಿ ವಾತ ಪಿತ್ತ ದೋಷವನ್ನು ನಿವಾರಣೆ ಮಾಡುವ ಗುಣವನ್ನೂ ಹೊಂದಿದೆ. ಇದರಿಂದ ಅಧಿಕವಾದ ದೇಹದ ಭಾರವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಸಾಮಾನ್ಯವಾಗಿ ನೀವು ನೋಡಿರಬಹುದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬಡೆಸೋಪು ಚೀಟಿಗಳು ಸಿಗುತ್ತದೆ ಆದರೆ ಅವುಗಳ ದೇಹಕ್ಕೆ ಹಾನಿ ಉಂಟು ಮಾಡುತ್ತವೆ. ಅದಕ್ಕಾಗಿ ನೈಸರ್ಗಿಕವಾಗಿ ಸಿಗುವ ಸೋಂಪು ಕಾಳು ತಂದು ಅವುಗಳನ್ನು ತುಪ್ಪದಲ್ಲಿ ಹುರಿದು ಸೇವನೆ ಮಾಡಿದರೆ ಸಾಕಷ್ಟು ಲಾಭಗಳು ಸಿಗುತ್ತವೆ. ಆದ್ದರಿಂದ ಊಟವಾದ ಮೇಲೆ ಸ್ವಲ್ಪ ಸೋಂಪು ಕಾಳು ಸೇವನೆ ಮಾಡುವುದು ಬಹಳ ಉತ್ತಮ. ಈ ಆರೋಗ್ಯಕರ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ

Leave a Reply

Your email address will not be published. Required fields are marked *