ಸಕ್ಕರೆ ಕಾಯಿಲೆ ಹಾಗೂ ಹೃದ್ರೋಗದ ಸಮಸ್ಯೆ ಇದ್ದವರು ಬೀಟ್ರೂಟ್ ತಿನ್ನಬಹುದೇ???ಅಥವಾ ಬೇಡವೇ ಅನ್ನುವುದರ ಬಗ್ಗೆ ತಿಳಿದುಕೊಳ್ಳಿ!!!

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲೇ ಇವೆ. ಉತ್ತಮವಾದ ಆಹಾರದ ಜೊತೆಗೆ ದೈಹಿಕ ವ್ಯಾಯಾಮ ಇಲ್ಲದೇ ಇದ್ದರೆ ಅನಾರೋಗ್ಯವು ಹಾಳಾಗುತ್ತದೆ. ಹಾಗೆಯೇ ಈಗಿನ ಆಧುನಿಕ ಕಾಲದಲ್ಲಿ ಆರೋಗ್ಯವೂ ಬಹಳ ಬೇಗನೆ ಹದಗೆಡುತ್ತದೆ ಅದರಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆ ರೋಗವು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.. ಅದಕ್ಕಾಗಿ ನಾವು ಸರಿಯಾದ ಆಹಾರ ಪದ್ಧತಿ ಜೀವನ ಶೈಲಿಯನ್ನು ಅನುಸರಣೆ ಮಾಡಿಕೊಳ್ಳಬೇಕು. ಇದರಿಂದ ಆರೋಗ್ಯದ ಜೊತೆಗೆ ನಮ್ಮ ಜೀವನದ ಅಭಿವೃದ್ದಿ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ. ಜೊತೆಗೆ ಹೃದ್ರೋಗದ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ಜೊತೆಗೆ ನೀವು ಕಡಿಮೆ ಕ್ಯಾಲೋರಿ ಹಾಗೂ ಎಣ್ಣೆ ಅಂಶವುಳ್ಳ ಆಹಾರವನ್ನು ಮತ್ತು ಬಿಳಿ ಸಕ್ಕರೆಯನ್ನು ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಸೇವನೆ ಮಾಡುವುದು ಬಹಳ ಒಳ್ಳೆಯದು.

 

ಇದರಿಂದ ಮುಖ್ಯವಾಗಿ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಬೀಟ್ರೂಟ್ ನಮ್ಮ ಹೃದಯದ ಆರೋಗ್ಯಕ್ಕೆ ಹೇಗೆ ಸೂಕ್ತವಾದದ್ದು ಇದನ್ನು ಅಧಿಕ ರಕ್ತದೊತ್ತಡ ಹಾಗೂ ಶುಗರ್ ಪೇಷಂಟ್ ಗಳು ಸೇವನೆ ಮಾಡಬಹುದೇ ಅಥವಾ ಬೇಡವೇ ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಬೀಟ್ರೂಟ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೈಟ್ರೇಟ್ ಅಂಶವು ಅಧಿಕವಾಗಿ ಕಾಡುವುದರಿಂದ ದೇಹದಲ್ಲಿ ರಕ್ತಸಂಚಾರ ಉತ್ತಮಗೊಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇಂತಹ ಆಹಾರವನ್ನು ನಾವು ನಿರಾಕರಿಸಿದರೆ ನಮ್ಮ ಆರೋಗ್ಯಕ್ಕೆ ನಾವೇ ಪೋಷಕಾಂಶಗಳು ದೊರೆಯದಂತೆ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಬೀಟ್ರೂಟ್ ಸೇವನೆ ಅನ್ನು ನಾವು ಎಂದಿಗೂ ನಿರಾಕರಣೆ ಮಾಡಲೇ ಬಾರದು. ಹೌದು ಅದಕ್ಕಾಗಿ ನಿಮ್ಮ ಉಪಹಾರದಲ್ಲಿ ಆದಷ್ಟು ಬೀಟ್ರೂಟ್ ಇರುವಂತೆ ನೋಡಿಕೊಳ್ಳಿ. ಹಾಗಾದರೆ ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

 

ಬೀಟ್ರೂಟ್ ನಲ್ಲಿ ಇರುವ ನೈಟ್ರೇಟ್ ಅಂಶವು ದೇಹದಲ್ಲಿ ರಕ್ತದ ಸಂಚಾರವೂ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ರಕ್ತವೂ ಸುಗಮವಾಗಿ ದೇಹ ಪೂರ್ತಿ ಸರಬರಾಜು ಆಗಲು ಸಹಾಯ ಮಾಡುತ್ತವೆ.ಅಷ್ಟೇ ಅಲ್ಲದೇ ರಕ್ತನಾಳಗಳನ್ನು ಹಿಗ್ಗಿಸಿ ರಕ್ತದ ಹರಿವು ಸರಿಯಾಗಿ ಆಗುವಂತೆ ಮಾಡುತ್ತದೆ. ಇದರಿಂದ ಹೃದಯದ ಬಡಿತ ಅಂದ್ರೆ ಹೃದಯದ ಪಂಪಿಂಗ್ ಅನ್ನು ಉತ್ತಮಗೊಳಿಸುತ್ತದೆ.ಅದರಲ್ಲೂ ನಿತ್ಯವೂ ಬೀಟ್ರೂಟ್ ರಸ ಕುಡಿಯುವುದರಿಂದ ಹೈ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ರಕ್ತದಲ್ಲಿ ಆಗುವ ಏರುಪೇರು ಅನ್ನು ಕೂಡ ತಡೆಹಿಡಿದು ಹೃದಯಕ್ಕೆ ಯಾವುದೇ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಇನ್ನೂ ಬೀಟ್ರೂಟ್ ನಲ್ಲಿ ವಿಟಮಿನ್ ಸಿ ವಿಟಮಿನ್ ಬೀ6 ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಸೋಡಿಯಂ ಖನಿಜಗಳು ಲವಣಗಳು ನಾರಿನ ಅಂಶ ಹಲವಾರು ಬಗೆಯ ಪೌಷ್ಟಿಕಾಂಶಗಳು ಹೇರಳವಾಗಿ ಅಡಗಿವೆ. ಅದಕ್ಕಾಗಿ ಪ್ರತಿದಿನ ಬೀಟ್ರೂಟ್ ಅನ್ನು ರಸ ಸೇವನೆ ಮಾಡುವುದನ್ನು ರೂಢಿಸಿ ಕೊಂಡರೆ ನಮ್ಮ ಹೃದಯಕ್ಕೆ ಕೂಡ ಉತ್ತಮ. ಹೃದಯಾಘಾತ ಸಮಸ್ಯೆಗಳು ಎಂದಿಗೂ ಬರುವುದಿಲ್ಲ. ಅಷ್ಟೇ ಅಲ್ಲದೇ ನೈಸರ್ಗಿಕವಾಗಿ ರಕ್ತವೂ ತೆಳು ಆಗುತ್ತದೆ ಹಾಗೂ ಶುದ್ಧೀಕರಣ ಆಗುತ್ತದೆ. ಇದರಿಂದ ದೇಹದಲ್ಲಿ ಶೇಖರಣೆ ಆದ ಕೆಟ್ಟ ಕಲ್ಮಶಗಳನ್ನು ಹೊರಗೆ ಹಾಕುತ್ತದೆ. ಅಲ್ಲದೆ ಚಿಕ್ಕ ವಯಸ್ಸಿನಲ್ಲಿ ಕಾಡುವ ಚರ್ಮದ ಸಮಸ್ಯೆಯನ್ನು ಕೂಡ ಹೋಗಲಾಡಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *