ಮೀನು ಸೇವನೆ ಮಾಡುವುದು ಬಹಳ ಉತ್ತಮ ಅಂತ ವೈದ್ಯರು ಯಾಕೆ ಹೇಳುತ್ತಾರೆ ಗೊತ್ತೇ???

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮೆದುಳು ನಮ್ಮ ದೇಹದ ಪ್ರಮುಖವಾದ ಅಂಗಗಳಲ್ಲಿ ಒಂದಾಗಿದೆ. ಇದು ಸ್ವಲ್ಪ ವಿಶ್ರಾಂತಿಯನ್ನು ಕೂಡ ತೆಗೆದುಕೊಳ್ಳದೆ ಸತತವಾಗಿ 24 ಗಂಟೆಗಳ ಕಾಲ ಕೆಲಸವನ್ನು ಮಾಡುತ್ತದೆ. ಮೆದುಳು ಮಾನವನ ದೇಹದ ಪ್ರಮುಖವಾದ ಅಂಗಗಳಲ್ಲಿ ಒಂದಾಗಿದೆ. ಮೆದುಳು ಕಾರ್ಯವನ್ನು ಮಾಡುವುದನ್ನು ನಿಲ್ಲಿಸಿದರೆ ಖಂಡಿತವಾಗಿ ಮನುಷ್ಯನ ದೇಹದ ಎಲ್ಲಾ ಕಾರ್ಯಗಳು ನಿಂತು ಹೋಗುತ್ತದೆ ಅದಕ್ಕಾಗಿ ಮೆದುಳಿನ ಉತ್ತಮವಾದ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಮೆದುಳು ಸರಿಯಾಗಿ ಕಾರ್ಯವನ್ನು ಮಾಡಲು ಹಾಗೂ ಮೆದುಳಿಗೆ ರಕ್ತವೂ ಸತತವಾಗಿ ಸಂಚಾರ ಆಗಲು ನಾವು ಸರಿಯಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಮೆದುಳಿಗೆ ಮುಖ್ಯವಾಗಿ ಬೇಕಾಗಿರುವ ಅಂಶಗಳು ಅಂದರೆ ಆಂಟಿ ಆಕ್ಸಿಡೆಂಟ್ ಅಂಶಗಳು ಒಮೆಗಾ ತ್ರಿ ಫ್ಯಾಟಿ ಆಸಿಡ್ ಇರುವ ಅಂಶಗಳು ಇರುವ ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಕೆಲವು ಆಹಾರಗಳು ಮೆದುಳಿಗೆ ಬೇಕಾಗುವ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೂ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡಿ ಅನುಕೂಲವನ್ನು ಮಾಡಿ ಕೊಡುತ್ತದೆ.ಮೊದಲನೆಯದು ಮೊಟ್ಟೆ. ಮೊಟ್ಟೆ ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಬಗೆಯ ಪೌಷ್ಟಿಕತೆಯನ್ನು ಒದಗಿಸುತ್ತದೆ.

 

ಜೊತೆಗೆ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.
ಕೆಲವು ಜನರು ಮೊಟ್ಟೆಯ ಬಿಳಿ ಭಾಗ ಒಳ್ಳೆಯದು ಹಾಗೂ ಹಳದಿ ಭಾಗ ಕೆಟ್ಟದ್ದು ಅಂತ ಮೂಗು ಮುರಿಯುತ್ತಾರೆ ಆದರೆ ಇಲ್ಲಿ ನಿಜವಾದ ಸಂಗತಿ ಏನೆಂದರೆ ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಇರುತ್ತದೆ ಆದರೆ ಇದನ್ನು ಸೇವನೆ ಮಾಡಲೇ ಬಾರದು ಅಂದೆನಂತಿಲ್ಲ ಗೆಳೆಯರೇ. ಅದಕ್ಕಾಗಿ ಎರಡು ದಿನಕ್ಕೆ ಒಮ್ಮೆ ಆದರೂ ಮೊಟ್ಟೆಯನ್ನು ಸೇವನೆ ಮಾಡಿ.ಇನ್ನೂ ಎರಡನೆಯದು ಬಾದಾಮಿ. ಕೆಲವರು ಮಾತ್ರವಲ್ಲದೆ ವೈದ್ಯರು ಕೂಡ ಮೆದುಳಿನ ಉತ್ತಮವಾದ ಕಾರ್ಯ ಚಟುವಟಿಕೆ ಗಳಿಗೆ ಬಾದಾಮಿ ತಿನ್ನಿ ಎಂದು ಸಲಹೆಯನ್ನು ನೀಡುವುದನ್ನು ನಾವು ಕೇಳಿಯೇ ಇರುತ್ತೇವೆ. ಹೌದು ದಿನಕ್ಕೆ ನೆನೆಸಿದ ಒಂದೆರಡು ಬಾದಾಮಿಯನ್ನು ಸೇವನೆ ಮಾಡಿದರೆ ಮೆದುಳು ಚುರುಕಾಗಿ ಕೆಲಸವನ್ನು ನಿರ್ವಹಿಸುತ್ತದೆ. ಬಾದಾಮಿಯಲ್ಲಿ ಉತ್ತಮವಾದ ಕರಗುವ ನಾರು ವಿಟಮಿನ್ ಇ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಪ್ರೊಟೀನ್ ಕ್ಯಾಲ್ಷಿಯಂ ಒಳಗೊಂಡಿದೆ. ಇದೇ ಕಾರಣಕ್ಕೆ ಇದನ್ನು ನೀವು ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ. ಬೆಲೆಯಲ್ಲಿ ದುಬಾರಿ ಆದರೂ ಅಷ್ಟೇ ಪ್ರಮಾಣದ ಬೆಲೆಯುಳ್ಳ ಆರೋಗ್ಯವನ್ನು ವೃದ್ಧಿಸುತ್ತದೆ ಅಂತ ಹೇಳಿದರೆ ತಪ್ಪಾಗಲಾರದು. ಇದರಿಂದ ಮೆದುಳಿನ ಆರೋಗ್ಯವನ್ನು ಹೆಚ್ಚುತ್ತದೆ. ಇನ್ನೂ ಸೊಪ್ಪು ಹಸಿರು ತರಕಾರಿಗಳು ಅಧಿಕವಾದ ಪೌಷ್ಟಿಕತೆಯನ್ನು ಹೊಂದಿರುತ್ತವೆ.

 

ಅದಕ್ಕಾಗಿ ನಿತ್ಯವೂ ಹಸಿರು ಸೊಪ್ಪು ತರಕಾರಿಗಳು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೂಪ್ ಸಲಾಡ್ ಜ್ಯೂಸ್ ವಿವಿಧ ರೀತಿಯಲ್ಲಿ ನೀವು ಬಳಕೆ ಮಾಡಿಕೊಳ್ಳಬಹುದು. ಇದರಿಂದ ದೇಹಕ್ಕೆ ಬೇಕಾಗುವ ಹಾಗೂ ಮೆದುಳಿಗೆ ಬೇಕಾಗುವ ಜೀವಸತ್ವಗಳು ದೊರೆಯುತ್ತವೆ. ಅದಕ್ಕಾಗಿ ಹಸಿರು ಸೊಪ್ಪು ತರಕಾರಿಗಳು ಸೇವನೆ ಮಾಡಿ. ಇನ್ನೂ ಕರಾವಳಿ ಪ್ರದೇಶಕ್ಕೆ ಹೋದರೆ ಮೀನುಗಳ ರಾಜ್ಯವನ್ನೇ ಕಾಣಬಹುದು ಅಲ್ಲಿಯ ಜನರು ಚಿಕನ್ ಮಟನ್ ಮಾಂಸಾಹಾರವನ್ನು ಸೇವನೆ ಮಾಡುವುದಕ್ಕಿಂತ ಹೆಚ್ಚಾಗಿ ಅವರು ಮೀನುಗಳ ಸೇವನೆ ಹೆಚ್ಚಾಗಿ ಮಾಡುತ್ತಾರೆ ಅಂತ ಹೇಳಬಹುದು. ಹೌದು ಮಿತವಾಗಿ ಮೀನು ಸೇವನೆ ಮಾಡಿದರೆ ಖಂಡಿತವಾಗಿ ಆರೋಗ್ಯಕ್ಕೆ ಲಾಭಗಳು ಸಿಗುತ್ತವೆ. ಮೀನಿನಲ್ಲಿ ಇರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ದೇಹದಲ್ಲಿ ಶೇಖರಣೆ ಆದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಮತ್ತು ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಮೀನು ಸೇವನೆ ಮಾಡುವುದನ್ನು ನೀಡಿದರೆ ಮಕ್ಕಳ ಬುದ್ದಿ ಶಕ್ತಿ ಹೆಚ್ಚುತ್ತದೆ. ಇದರಿಂದ ಮೆದುಳಿನ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯುತ್ತವೆ. ಶುಭದಿನ.

Leave a Reply

Your email address will not be published. Required fields are marked *