ಅಂಜೂರ ಹಣ್ಣು ಕಾಸ್ಟಲಿ ಆದರೂ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಫುಡ್ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ಇದನ್ನು ತಿಂದ್ರೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಮ್ಮ ಹಿರಿಯರಿಗೆ ಈ ಹಣ್ಣು ಬಹಳ ಚಿರಪರಿಚಿತ. ನಮ್ಮ ಮನೆಯಲ್ಲಿರುವ ಜನರು ಈ ಹಣ್ಣಿನ ಬಗ್ಗೆ ಯಾವಾಗಲೂ ಜಪ ಮಾಡುತ್ತಲೇ ಇರುತ್ತಾರೆ. ಹಾಗೂ ನಮಗೂ ಕೂಡ ಈ ಹಣ್ಣಿನ ಬಗ್ಗೆ ಹೇಳಿ ಪರಿಚಯ ಮಾಡುತ್ತಾರೆ. ಈಗಿನ ಕಾಲದ ಜನರಿಗೆ ಅಂತೂ ಈ ಹಣ್ಣಿನ ಬಗ್ಗೆ ಸ್ವಲ್ಪವೂ ಅರಿವೇ ಇಲ್ಲ. ಅಂಥಹ ಹಣ್ಣು ಯಾವುದು ಅಂದರೆ ಅದುವೇ ಅಂಜೂರದ ಹಣ್ಣು. ನಮ್ಮ ಹಿರಿಯರು ಅವರು ಚಿಕ್ಕವರಿದ್ದಾಗ ಈ ಹಣ್ಣನ್ನು ಒಂದಲ್ಲ ಒಂದು ಆರೋಗ್ಯದ ತೊಂದರೆಗೆ ಬಳಕೆ ಮಾಡಿದ್ದಾರೆ. ಅಂಜೂರ ಹಣ್ಣು ನಮಗೆ ಸಾಮಾನ್ಯವಾಗಿ ಗ್ರಂಥಿ ಅಂಗಡಿಯಲ್ಲಿ ಒಣಗಿದ ರೂಪದಲ್ಲಿ ಹಾಗೂ ಹಸಿ ರೂಪದಲ್ಲಿ ಸಿಗುತ್ತದೆ. ನಿಮಗೆ ಗೊತ್ತೇ ಈ ಹಣ್ಣು ಹೇಗೂ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಅಂಜೂರ ಹಣ್ಣಿನ ಆರೋಗ್ಯಕರ ಲಾಭಗಳನ್ನು ತಿಳಿಯೋಣ. ಅಂಜೂರ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಇವೆ ಎಂದು ಅನೇಕ ಆರೋಗ್ಯ ತಜ್ಞರು ಹೇಳಿದ್ದಾರೆ. ದಿನಕ್ಕೆ ಒಂದೆರಡು ಅಂಜೂರ ಹಣ್ಣುಗಳನ್ನು ತಿಂದರೆ ಸಾಕು ಅನೇಕ ಸಮಸ್ಯೆಗಳು ಬರುವುದಿಲ್ಲ. ಇನ್ನೂ ಮಕ್ಕಳು ಆಗದೇ ಇದ್ದವರು ತಮ್ಮ ಆಹಾರದಲ್ಲಿ ಅಂಜೂರ ಹಣ್ಣನ್ನು ಸೇರಿಸಿಕೊಳ್ಳಿ.

ಇದರಿಂದ ಮಕ್ಕಳು ಬಯಸುವವರಿಗೆ ಮಕ್ಕಳು ಆಗುವ ಭಾಗ್ಯ ಲಭಿಸುತ್ತದೆ. ಅಂಜೂರ ಹಣ್ಣಿನಲ್ಲಿ ಕರಗುವ ಮತ್ತು ಕರಗದಿರುವ ನಾರಿನ ಅಂಶಗಳು ಹೆಚ್ಚು ಶೇಖರಣೆ ಆಗಿರುತ್ತದೆ. ಹಾಗಾಗಿ ಇವುಗಳನ್ನು ಸೇವನೆ ಮಾಡಿದ ಸಂದರ್ಭದಲ್ಲಿ ಮಲಬದ್ಧತೆ ಸಮಸ್ಯೆಗೆ ಹೋಗಲಾಡಿಸುವ ಎಲ್ಲ ಅಂಶಗಳನ್ನು ಹೊಂದಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಅಂಜೂರದಲ್ಲಿ ಮ್ಯಾಗ್ನಿಷಿಯಂ, ಜಿಂಕ್, ಖನಿಜಗಳು, ಲವಣಗಳು ಪೊಟ್ಯಾಶಿಯಂ ಕ್ಯಾಲ್ಷಿಯಂ ಅಂಶಗಳನ್ನು ಒಳಗೊಂಡಿದೆ. ಹಾಗೂ ಸಂತಾನ ವೈಪಲ್ಯತೆಯನ್ನು ಸಹಕರಿಸಲು ಅಂಜೂರ ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದು. ಅಧಿಕ ರಕ್ತದೊತ್ತಡ ಅಥವಾ ಹೈ ಬಿಪಿ ಗೆ ಅಂಜೂರ ಹಣ್ಣು ಹೇಳಿ ಮಾಡಿಸಿದ ಸೂಪರ್ ಫುಡ್ ಆಗಿದೆ. ಹೈಪಿಗೆ ಸೂಕ್ತವಾದ ಹಣ್ಣು ಅಂದರೆ ಅಂಜೂರ ಹಣ್ಣು. ನಿಮ್ಮ ಆಹಾರದಲ್ಲಿ ಅಂಜೂರ ಹಣ್ಣು ಇರುವಂತೆ ನೋಡಿಕೊಳ್ಳಿ. ನಿಜಕ್ಕೂ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಒಣಗಿದ ಅಂಜೂರ ಹಣ್ಣುಗಳು ಮನುಷ್ಯನ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಇವು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಹೃದಯದ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತವೆ.

ಅಂಜೂರದ ಎಲೆಗಳು ಕೂಡ ಹೃದಯದ ಆರೋಗ್ಯ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತವೆ ಎಂದು ಹೇಳಬಹುದು. ಅಂಜೂರ ಹಣ್ಣಿನಲ್ಲಿ ಇರುವ ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶಗಳು ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ. ಅಂಜೂರ ಹಣ್ಣಿನಲ್ಲಿ ನಾರಿನ ಅಂಶ ಹೇರಳವಾಗಿದೆ. ಹೀಗಾಗಿ ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ನಾರಿನ ಅಂಶ ಶೇಕಡಾ ಪ್ರಮಾಣದಲ್ಲಿ ಸಿಗುತ್ತದೆ. ಈ ನಾರಿನ ಅಂಶ ಪದಾರ್ಥಗಳನ್ನು ಒಳಗೊಂಡಿರುವ ಅಂಜೂರ ಹಣ್ಣು ತಿನ್ನುವುದರಿಂದ ಜೀರ್ಣ ವ್ಯವಸ್ಥೆ ಶುದ್ಧವಾಗುತ್ತದೆ ಹಾಗೂ ಅದರ ಕಾರ್ಯ ವೈಖರಿ ಕೂಡ ಚೆನ್ನಾಗಿ ನಡೆಯುತ್ತದೆ. ಇದರಿಂದ ನಿಮ್ಮ ದೇಹದ ಜೀರ್ಣ ಕ್ರಿಯೆ ಸಂಪೂರ್ಣವಾಗಿ ಸರಿಯಾಗಿ ನಡೆಯುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಮಹಿಳೆಯರು ನಿತ್ಯವೂ ಅಂಜೂರವನ್ನು ಹಣ್ಣು ತಿನ್ನುವುದರಿಂದ ರಕ್ತಹೀನತೆ ಮಾಯವಾಗುತ್ತದೆ. ಇನ್ನೂ ಚಿಕ್ಕ ಮಕ್ಕಳಲ್ಲಿ ಅಧಿಕವಾಗಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದ್ದರಿಂದ ಅವರಿಗೆ ಒಂದೆರಡು ಅಂಜೂರ ಹಣ್ಣು ತಿನ್ನಿಸುವುದರಿಂದ ಈ ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಕಂಡು ಬರುವುದಿಲ್ಲ. ಅಂಜೂರ ಹಣ್ಣು ತಿನ್ನುವುದರಿಂದ ಹೊಟ್ಟೆ ತುಂಬಿದ ಹಾಗೆ ಭಾಸವಾಗುತ್ತದೆ. ಇದರಿಂದ ನಿಮಗೆ ಜಾಸ್ತಿ ಊಟ ಹೋಗುವುದಿಲ್ಲ. ಇದು ಒಳ್ಳೆಯ ಆಹಾರ ಪದ್ಧತಿ ತೂಕ ಇಳಿಸಿಕೊಳ್ಳಲು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *