ನೀರಿನಲ್ಲಿ ಕರ್ಪೂರವನ್ನು ಹಾಕಿ ಸ್ನಾನವನ್ನು ಮಾಡಿದರೆ ಆಗುವ ಲಾಭಗಳು ಗೊತ್ತೇ?? ಒಮ್ಮೆ ಟ್ರೈ ಮಾಡಿ ನೋಡಿ!!!

ಉಪಯುಕ್ತ ಮಾಹಿತಿ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಸಾಮಾನ್ಯವಾಗಿ ಪೂಜೆಗಾಗಿ ಕರ್ಪೂರವನ್ನು ಎಲ್ಲರ ಮನೆಯಲ್ಲಿ ಬಳಕೆ ಮಾಡುತ್ತಾರೆ. ಕರ್ಪೂರ ಅಂದರೆ ಸಾಕು ನಮಗೆ ಮೊದಲಿಗೆ ನೆನಪಿಗೆ ಬರುವುದು ಅದರ ಸುವಾಸನೆ. ಈ ಒಂದು ಅದ್ಭುತವಾದ ಗುಣ ದಿಂದಲೇ ಇದು ಎಲ್ಲರ ಮನಸ್ಸನ್ನೂ ಸೆಳೆದಿದೆ ಅಂತ ಹೇಳಿದರೆ ತಪ್ಪಾಗಲಾರದು. ಕರ್ಪೂರವನ್ನು ಮನೆಯಲ್ಲಿ ಬಳಸುತ್ತಾರೆ ಏಕೆಂದರೆ ಇದು ವಾಸ್ತು ದೋಷ ಮತ್ತು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂದು. ಈ ಕಾರಣದಿಂದ ಕರ್ಪೂರವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಈ ಕರ್ಪೂರ ಕೇವಲ ಪೂಜೆಗೆ ಮಾತ್ರವಲ್ಲದೇ ನಮ್ಮ ಒಟ್ಟಾರೆ ದೇಹದ ಆರೋಗ್ಯಕ್ಕೆ ಒಳ್ಳೆಯದು. ಅದು ಹೇಗೆ ಅಂತೀರಾ ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಕರ್ಪೂರವನ್ನು ನೀವು ಸ್ನಾನವನ್ನು ಮಾಡುವ ನೀರಿನಲ್ಲಿ ಹಾಕಿ ಸ್ನಾನವನ್ನು ಮಾಡಿದರೆ, ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತವೆ. ಕರ್ಪೂರವನ್ನು ನೀರಿನಲ್ಲಿ ಹಾಕಿ ಸ್ನಾನವನ್ನು ಮಾಡಿದರೆ ನಮ್ಮ ದೇಹವು ಸೋಂಕು ತಗುಲದಂತೆ ತಡೆಯುತ್ತದೆ.

 

ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಅಷ್ಟೇ ಅಲ್ಲದೇ ಇದು ನಮ್ಮ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕರ್ಪೂರದಿಂದ ಬರುವ ಸುವಾಸನೆ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡುತ್ತದೆ. ನಮ್ಮಲ್ಲಿ ಇರುವ ಹೆಚ್ಚು ಒತ್ತಡ ಖಿನ್ನತೆಯನ್ನು ನಿವಾರಣೆ ಮಾಡುವಲ್ಲಿ ಬಹಳ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಇದರ ಜೊತೆಗೆ ನಿಮ್ಮ ದೇಹವು ತುರಿಕೆ ಇಂದ ತತ್ತರಿಸಿ ಹೋಗಿದ್ದರೆ ಸ್ನಾನದ ನೀರಿನಲ್ಲಿ ಕರ್ಪೂರವನ್ನು ಹಾಕಿ ಸ್ನಾನವನ್ನು ಮಾಡಿರಿ. ಇದರಿಂದ ತುರಿಕೆ ಕಡಿಮೆ ಆಗುತ್ತದೆ. ಇನ್ನೂ ಮೊದಲಿನ ಕಾಲದ ಹಿರಿಯರು ತಲೆಯಲ್ಲಿ ಹೊಟ್ಟು ಆದರೆ ಅಥವಾ ತಲೆಯಲ್ಲಿ ಹೇನು ಆದರೆ ಕರ್ಪೂರವನ್ನು ಬಳಕೆ ಮಾಡುತ್ತಿದ್ದರು. ಹೌದು ನಿಮಗೇನಾದರೂ ತಲೆಯಲ್ಲಿ ಹೊಟ್ಟು ಸೀರೂ ಹೇನುಗಳು ಆದರೆ, ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರಲ್ಲಿ ಕರ್ಪೂರವನ್ನು ಹಾಕಿ ಕರಗಿಸಿ ನಂತ್ರ ಸ್ವಲ್ಪ ನಿಂಬೆ ರಸವನ್ನು ಹಾಕಿ ತಲೆ ತುಂಬಾ ಹಚ್ಚಿಕೊಂಡು ಪೂರ್ತಿ ರಾತ್ರಿ ಬಿಟ್ಟು ಮರುದಿನ ಬೆಳಿಗ್ಗೆ ತಲೆಸ್ನಾನ ಮಾಡಿ.

 

ಬಳಿಕ ಬಾಚನಿಕೆ ಇಂದ ಬಾಚಿದರೆ ತಲೆ ಹೇನುಗಳು ಸತ್ತು ಹೋಗುತ್ತವೆ ತಲೆ ಹೊಟ್ಟು ನಿವಾರಣೆ ಆಗುತ್ತದೆ. ನಿಮ್ಮ ಕೂದಲಿನ ಬೆಳವಣಿಗೆ ಕೂಡ ಆಗುತ್ತದೆ. ತಲೆಯ ಕೆರೆತ ಕೂಡ ನಿವಾರಣೆ ಆಗುತ್ತದೆ. ಮತ್ತು ಈ ವಿಧಾನವನ್ನು ವಾರದಲ್ಲಿ ಒಂದು ಬಾರಿ ಆದರೂ ಮಾಡಿ ನೋಡಿ ಖಂಡಿತವಾಗಿ ಫಲಿತಾಂಶ ಸಿಗುತ್ತದೆ.ಎಷ್ಟೋ ಜನರಿಗೆ ತಲೆ ಹೊಟ್ಟು ಆಗಿ ತಲೆ ಕೆರೆತ ತೀವ್ರವಾಗಿ ಕಾಡುತ್ತದೆ. ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇನ್ನೂ ಉಗುರು ಬೆಚ್ಚಗಿನ ನೀರಿನಲ್ಲಿ ಕಹಿಬೇವು ಮತ್ತು ಕರ್ಪೂರವನ್ನು ಹಾಕಿ ಮನೆ ತುಂಬಾ ಸಿಂಪಡಣೆ ಮಾಡಿದರೆ ಕ್ರಿಮಿ ಕೀಟಗಳು ನಾಶವಾಗುತ್ತವೆ. ಇನ್ನೂ ಪಾದಗಳಲ್ಲಿ ಬಿರುಕು ಬಿಟ್ಟಿದ್ದರೆ ಉಗುರು ಬೆಚ್ಚಗಿನ ನೀರಿನಲ್ಲಿ ಕರ್ಪೂರವನ್ನು ಹಾಕಿ ಹದಿನೈದು ನಿಮಿಷಗಳ ಕಾಲ ಹಾಗೆ ನಿಮ್ಮ ಕಾಲುಗಳನ್ನು ಅದರಲ್ಲಿಡಿ. ಹೀಗೆ ಮಾಡುವುದರಿಂದ ಖಂಡಿತವಾಗಿ ನಿಮ್ಮ ಪಾದಗಳು ಬಿರುಕು ಬಿಟ್ಟಿದ್ದರೇ ಪಾದಗಳು ಮೃದು ಆಗುತ್ತವೆ ಮುಚ್ಚಿಕೊಳ್ಳುತ್ತದೆ ಸುಂದರವಾಗಿ ಕಾಣುತ್ತವೆ. ಶುಭದಿನ.

Leave a Reply

Your email address will not be published. Required fields are marked *