ನಿಮ್ಮ ಖಾತೆಯಿಂದ ಯಾರಿಗಾದರೂ ಅಪ್ಪಿ ತಪ್ಪಿ ಹಣ ವರ್ಗಾವಣೆ ಆದರೆ ಏನು ಮಾಡಬೇಕು ಮತ್ತು ಹಣವನ್ನು ನೀವು ಹೇಗೆ ವಾಪಾಸ್ ಪಡೆಯಬಹುದು ಅನ್ನೋದು ಇಲ್ಲಿದೆ ನೋಡಿ. ನಿಮ್ಮ ಅಕೌಂಟ್ ಹಣ ಬೇರೆಯವರ ಅಕೌಂಟ್ ಗೆ ವರ್ಗಾವಣೆಗೆ ಕಾರಣವಾಗುತ್ತದೆ. ಇಂತಹ ಹಣ ವರ್ಗಾವಣೆಯ ವೇಳೆ ಕೆಲ ಅಂಶಗಳನ್ನು ಗಮನದಲ್ಲಿರುವುದು ಅವಶ್ಯಕವಾಗಿದೆ. ಆದರೆ, ಒಂದು ವೇಳೆ ಅಪ್ಪಿತಪ್ಪಿ ನಿಮ್ಮ ಅಕೌಂಟ್ ಹಣ ನೀವು ಬಯಸದೆ ಇರುವವರ ಖಾತೆಗೆ ವರ್ಗಾವಣೆ ಆದರೆ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ನಮ್ಮ ಹಣವನ್ನು ಅವರಿಂದ ಹೇಗೆ ವಾಪಸ್ ಪಡೆಯಬೇಕು ಇಲ್ಲಿದೆ ಅದರ ಮಾಹಿತಿ.
ಈ ಕುರಿತು RBI ಮಾರ್ಗಸೂಚಿಗಳೇನು: ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಲಾಭಾರ್ಥಿಯ ಸೂಕ್ತ ಮಾಹಿತಿ ನೀಡುವುದು ಲಿಂಕ್ ಮಾಡುವವರ ಜವಾಬ್ದಾರಿಯಾಗಿದೆ. ಈ ವೇಳೆ ಲಿಂಕ್ ಮಾಡುವವರು ಯಾವುದೇ ಕಾರಣದಿಂದ ತಪ್ಪಾಗಿರುವ ಮಾಹಿತಿ ನೀಡಿದರೆ ಇದಕ್ಕೆ ಬ್ಯಾಂಕ್ ಹೊಣೆಯಲ್ಲ.
ನೀವು ನಿಮ್ಮ ಹಣವನ್ನು ವಾಪಸ್ ಪಡೆಯಬಹುದು: ಅಪ್ಪಿತಪ್ಪಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದ ಸಂದರ್ಭದಲ್ಲಿ ನಿಮ್ಮ ಹಣ ಮರಳಿ ಪಡೆಯಲು ಒಟ್ಟು ಎರರು ವಿಧಾನಗಳಿದ್ದು, ಇವುಗಳನ್ನು ಬಳಸಿ ನೀವು ನಿಮ್ಮ ಹಣ ವಾಪಸ್ ಪಡೆಯಬಹುದು. ಮೊದಲ ವಿಧಾನದಲ್ಲಿ ಈ ಕುರಿತು ನೀವು ನಿಮ್ಮ ಹೋಂ ಬ್ರಾಂಚ್ ಗೆ ಶೀಘ್ರದಲ್ಲಿ ಮಾಹಿತಿ ನೀಡಿ. ನೀವು ನೀಡಿದ ಸೂಚನೆಯ ಆಧಾರದ ಮೇಲೆ ನಿಮ್ಮ ಹೋಂ ಬ್ರಾಂಚ್ ಅಧಿಕಾರಿಗಳು ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ವ್ಯಕ್ತಿಯ ಹೋಂ ಬ್ರಾಂಚ್ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಆ ವ್ಯಕ್ತಿಯನ್ನು ಸಂಪರ್ಕಿಸಿ ನಿಮ್ಮ ಹಣ ಮರಳಿ ಹಿಂಪಡೆಯಲು ಅನುಮತಿ ಪಡೆಯಲಿದ್ದಾರೆ.
ಪ್ರಕರಣ ದಾಖಲಿಸಬಹುದು: ನೀವು ನಿಮ್ಮ ಹಣವನ್ನು ಕಾನೂನಿನ ಸಹಾಯ ಕೂಡ ಪಡೆದು ವಾಪಸ್ ಪಡೆಯಬಹುದಾಗಿದೆ. ಒಂದು ವೇಳೆ ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ಖಾತೆದಾರ ನಿಮ್ಮ ಹಣವನ್ನು ಮರಳಿ ನೀಡಲು ನಿರಾಕರಿಸಿದರೆ, ಆತನ ವಿರುದ್ಧ ನೀವು ನ್ಯಾಯಾಲಯದಲ್ಲಿ ದೂರು ಕೂಡ ದಾಖಲಿಸಬಹುದು. ಆದರೆ, ಹಣ ಹಿಂದಿರುಗಿಸದ ಪರಿಸ್ಥಿತಿಯಲ್ಲಿ ಈ ಅಧಿಕಾರ RBI ನಿಯಮಗಳ ಉಲ್ಲಂಘನೆ ಅಡಿ ಅವಕಾಶ ಇರಲಿದೆ.
ಬೇರೆ ವ್ಯಕ್ತಿ ಅಥವಾ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದ ಬಳಿಕ ಶೀಘ್ರವೇ ನೀವು ನಿಮ್ಮ ಬ್ಯಾಂಕ್ ಗೆ ಈ ಕುರಿತು ಸೂಚನೆ ನೀಡಬೇಕು. ಒಂದು ವೇಳೆ ನಿಮ್ಮ ಹಾಗೂ ಆ ವ್ಯಕ್ತಿಯ ಖಾತೆ ಒಂದೇ ಬ್ಯಾಂಕ್ ನಲ್ಲಿದ್ದರೆ ಈ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ. ನಿಮ್ಮ ಹಣ ಒಂದೆರಡು ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.