ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆ ಸೊಪ್ಪು ಕೆಮ್ಮು ಹೋಗಲಾಡಿಸುವುದರ ಜೊತೆ ಈ ಏಳು ರೋಗಗಳಿಗೂ ರಾಮಬಾಣ

ಆರೋಗ್ಯ

ನುಗ್ಗೆ ಸೊಪ್ಪು ಮತ್ತು ನುಗ್ಗೆ ಸೊಪ್ಪಿನ ಜ್ಯೂಸ್ ದೇಹದ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿ ಯಾವ ರೀತಿ ಇದೆ ಎಂದು ತಿಳಿಯೋಣ. ದೇಹಕ್ಕೆ ನಿಯಮಿತವಾಗಿ ನುಗ್ಗೆ ಸೊಪ್ಪಿನ ಪಲ್ಯವನ್ನು ಸೇವಿಸುತ್ತಾ ಬಂದರೆ ದೇಹದಲ್ಲಿ ಬರುವ ಮೂಲವ್ಯಾದಿ ರೋಗದ ಸಮಸ್ಯೆ ಯಾವುದೇ ಕಾರಣಕ್ಖೂ ಬರುವುದಿಲ್ಲ. ನುಗ್ಗೆ ಸೊಪ್ಪನ್ನು ಮಕ್ಕಳು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುವುದರ ಜೊತೆಗೆ ಅವರಲ್ಲಿ ಕಾಡುವಂತಹ ಇರುಳುಗಣ್ಣು ರೋಗ ಸಹ ನಿವಾರಣೆಯಾಗುತ್ತದೆ. ಗರ್ಭಿಣಿ ಸ್ತ್ರೀಯರು ಹೆರಿಗೆ ನಂತರ ನುಗ್ಗೆ ಸೊಪ್ಪು ಸೇವಿಸುವುದರಿಂದ ತಾಯಿ ಎದೆ ಹಾಲು ಬಹಳ ಬೇಗ ಸಮೃದ್ಧವಾಗಿ ಉತ್ಪತ್ತಿಯಾಗುತ್ತದೆ.

ಚಮಚ ನುಗ್ಗೆ ಸೊಪ್ಪಿನ ರಸದ ಜೊತೆಗೆ 1 ಲೋಟ ಬೂದು ಗುಂಬಳಕಾಯಿಯ ರಸವನ್ನು ಸೇರಿಸಿ ಕುಡಿಯುವುದರಿಂದ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ. ನುಗ್ಗೆ ಸೊಪ್ಪಿನ ರಸದ ಜೊತೆಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿ ದೇಹಕ್ಕೆ ಸೇವಿಸುವುದರಿಂದ ಬಹಳ ಬೇಗ ಕೆಮ್ಮು ಗುಣವಾಗುತ್ತದೆ.

ಮುಖದ ಕಾಂತಿ ಹೆಚ್ಚಾಗುವುದಕ್ಕೆ ನುಗ್ಗೆ ಸೊಪ್ಪಿನ ರಸ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಸುಮಾರು 10 ನಿಮಿಷಗಳ ನಂತರ ನೀರಿನಲ್ಲಿ ತೊಳೆಯಬೇಕು. ಹೀಗೆ ವಾರದಲ್ಲಿ 3 ಬಾರಿಯಾದರೂ ಮಾಡಿದರೆ ನಿಮ್ಮ ಮುಖದ ಕಾಂತಿ ಬಹಳ ಬೇಗ ಹೆಚ್ಚಾಗುತ್ತದೆ.

ಆಮಶಂಕೆ ಭೇದಿಯನ್ನು ನಿವಾರಣೆ ಮಾಡಲು ನುಗ್ಗೆ ಸೊಪ್ಪಿನ ಪಾತ್ರ ಬಹಳ ಪ್ರಮುಖವಾಗಿದೆ. 1 ಚಮಚ ನುಗ್ಗೆ ಸೊಪ್ಪಿನ ರಸಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ಎಳನೀರನ್ನು ಬೆರೆಸಿ ದೇಹಕ್ಕೆ ನಿಯಮಿತವಾಗಿ ಸೇವಿಸುವುದರಿಂದ ಬಹಳ ಬೇಗ ಭೇದಿ ನಿಲ್ಲುತ್ತದೆ.

ಕಲ್ಲಂಗಡಿ ಬೀಜ, ಗಸಗಸೆ, ಬಾದಾಮಿಯನ್ನು ಚೆನ್ನಾಗಿ ಅರೆದು ಹಾಲು ಮತ್ತು ಕಲ್ಲು ಸಕ್ಕರೆಯ ಜೊತೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ತಂಪಾಗುವುದು ಹಾಗೆಯೇ ಹೃದಯದ ಕ್ರಿಯೆಗಳು ಚುರುಕಾಗುತ್ತವೆ. ಮಾವಿನ ಕಾಯಿಯ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನುವುದರಿಂದ ಹೃದಯ ಚಲನೆ ಚುರುಕಾಗಿ ಆರೋಗ್ಯವಾಗಿರುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *