ಹಳ್ಳಿ ಕಡೆ ಹಲವಾರು ಗಿಡ ಮೂಲಿಕೆಗಳನ್ನು ಬಳಸುವುದರ ಮೂಲಕ ಹಲವಾರು ರೋಗಗಳನ್ನು ಗುಣಪಡಿಸುತ್ತಾರೆ ಅದೇ ರೀತಿ ಈ ನೆಗ್ಗಿಲ ಮುಳ್ಳಿನ ಗಿಡ ಕೂಡ ಅಂತಹುದರಿಂದ ಹೊರತಾಗಿಲ್ಲ , ಹಾಗಾದರೆ ಈ ಗಿಡದಲ್ಲಿ ಯಾವ ರೋಗವನ್ನು ವಸಿ ಮಾಡುವ ಗುಣವಿದೆ ಎಂಬುದನ್ನು ತಿಳಿಯೋಣ,
ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಸಕ್ಕರೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಮೂತ್ರ ಮಾಡುವಾಗ ನೋವಿದ್ದರೆ ನೋವು ನಿವಾರಣೆಯಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ನೀರು ತುಂಬಿ ಊತ ಇದ್ದರೆ ನೆಗ್ಗಿಲ ಮುಳ್ಳಿನ ಪುಡಿಯನ್ನು ನೀರಿನ ಜತೆ ಕಷಾಯ ಮಾಡಿ ಕುಡಿದರೆ ಊತ ಕಡಿಮೆಯಾಗುತ್ತದೆ.
ಮೇಕೆ ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಿದರೆ ಕಿಡ್ನಿ ಕಲ್ಲು ಕರಗುತ್ತದೆ. ದೇಹದಲ್ಲಿ ಗಾಯವಾಗಿದ್ದರೆ ನೆಗ್ಗಿಲ ಮುಳ್ಳಿನ ಎಲೆಗಳನ್ನು ಪೇಸ್ಟ್ ಮಾಡಿ ಕಟ್ಟಿದರೆ, ಗಾಯ ಬೇಗ ಮಾಯುತ್ತದೆ.
ನೆಗ್ಗಿಲ ಮುಳ್ಳಿನ ಪುಡಿಗೆ ಶುಂಠಿ ಹಾಕಿ ಕಷಾಯ ಮಾಡಿ ಸೇವಿಸಿದರೆ ಮಂಡಿ ಊತ ಮತ್ತು ನೋವು ನಿವಾರಣೆಯಾಗುತ್ತದೆ. ಕೆಮ್ಮು, ದಮ್ಮು ಹೆಚ್ಚಿದ್ದರೆ, ನೆಗ್ಗಿಲ ಮುಳ್ಳಿನ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ, ಕೆಮ್ಮು ಶಮನವಾಗುತ್ತದೆ.
ಒಣ ಕೆಮ್ಮು ಇದ್ದಲ್ಲಿ ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ, ಅಶ್ವಗಂಧ ಪುಡಿ ಮತ್ತು ಹಸುವಿನ ತುಪ್ಪ ಸೇರಿಸಿ ಕುಡಿದರೆ ಕೆಮ್ಮು ಶಮನವಾಗುತ್ತದೆ. ಗರ್ಭಿಣಿಯರಿಗೆ ಮೂತ್ರ ಸರಿಯಾಗಿ ಆಗದಿದ್ದರೆ ನೆಗ್ಗಿಲ ಮುಳ್ಳಿನ ಕಷಾಯಕ್ಕೆ ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿದರೆ ಈ ಸಮಸ್ಯೆಯಿಂದ ದೂರ ಉಳಿಯಬಹುದು.
ನೆಗ್ಗಿಲ ಮುಳ್ಳಿನ ಪುಡಿ, ಅಮೃತಬಳ್ಳಿ ಪುಡಿ ಮತ್ತು ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಅರ್ಧ ಚಮಚ ತುಪ್ಪ ಹಾಗೂ ಕಾಲು ಚಮಚ ಜೇನುತುಪ್ಪದ ಜತೆ ಕಲಸಿ ಸೇವಿಸವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.