ನಮಸ್ತೆ ಪ್ರಿಯ ಓದುಗರೇ, ತಲೆನೋವು ಬಂದರೆ ಇದು ಯಾಕಾದರೂ ಬಂತು ಅಂತ ತುಂಬಾನೇ ಚಿತ್ರಹಿಂಸೆ ಆಗುತ್ತದೆ. ಕೆಲವರಿಗೆ ಪೂರ್ತಿಯಾಗಿ ತಲೆ ನೋವು ಶುರು ಅದರೆ ಇನ್ನುಳಿದ ಜನರಿಗೆ ಅರ್ಧಭಾಗ ತಲೆನೋವು ಬರುತ್ತಿರುತ್ತದೆ. ಈ ತಲೆನೋವು ನರಮಂಡಲದಲ್ಲಿ ಉಂಟಾಗುವ ಒಂದು ಆರೋಗ್ಯ ಬಾಧೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುವ ಒಂದು ಆರೋಗ್ಯ ಸಮಸ್ಯೆಯಾಗಿದೆ. ಈ ತಲೆನೋವಿಗೆ ಇಂಗ್ಲಿಷ್ ನಲ್ಲಿ ಮೈಗ್ರೆನ್ ಅಂತ ಕರೆಯುತ್ತಾರೆ. ಇದನ್ನು ಸಹಿಸಲು ತುಂಬಾನೇ ಕಷ್ಟ ಆಗುತ್ತದೆ. ಅದಕ್ಕಾಗಿ ಜನರು ಏನು ಮಾಡುತ್ತಾರೆ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ ನಮಗೆ ತಲೆನೋವಿನಿಂದ ವಿಶ್ರಾಂತಿ ಸಿಗುವಂತೆ ಮಾಡಿದರು ಕೂಡ ಈ ಮಾತ್ರೆಗಳ ಅಡ್ಡ ಪರಿಣಾಮಗಳೂ ಮುಂದಿನ ಭವಿಷ್ಯದಲ್ಲಿ ನಾವು ತೀರ ಗಂಭೀರವಾಗಿ ಎದುರಿಸಬೇಕಾಗುತ್ತದೆ. ಹಾಗಾದ್ರೆ ಇನ್ನೂ ತಲೆ ನೋವಿಗೆ ಏನು ಮಾಡಬೇಕು?
ಇದಕ್ಕೆ ಮಾತ್ರೆ ಮಾತ್ರ ಪರಿಹಾರ ಏನು? ಅಲ್ಲ ಮಿತ್ರರೇ ನಾವು ಈ ಮಾತ್ರೆಗಳು ಎಲ್ಲದಕ್ಕೂ ಎಲ್ಲ ರೋಗಗಳಿಗೆ ಉಪಶಮನ ಅಂತ ಅಂದುಕೊಳ್ಳಬಾರದು. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ತಲೆನೋವಿಗೆ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು ಅಂತ ಎರಡು ಮನೆಮದ್ದುಗಳ ಮೂಲಕ ತಿಳಿಸಿಕೊಡುತ್ತೇವೆ ಬನ್ನಿ. ನಾವು ತಿಳಿಸುವ ಈ ಮನೆಮದ್ದುಗಳು ತುಂಬಾನೇ ಪರಿಣಾಮಕಾರಿಯಾಗಿವೆ ಇವುಗಳಿಂದ ನಿಮಗೆ ಯಾವುದೇ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ಇದರಿಂದ ನಿಮಗೆ ಎಂಥಹ ತಲೆನೋವು ಇದ್ದರೂ ಕೂಡ ಅದು ತಕ್ಷಣವೇ ನಿವಾರಣೆ ಆಗುತ್ತದೆ. ಹಾಗೆಯೇ ಈ ಮನೆಮದ್ದುಗಳನ್ನೂ ಬಳಕೆ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ಮಂಗಮಾಯವಾಗುತ್ತದೆ. ಇದರಿಂದ ನಿಮಗೆ ಉತ್ತಮವಾದ ನಿದ್ದೆ ಬರುತ್ತದೆ. ಜೊತೆಗೆ ಜ್ಞಾಪಕ ಶಕ್ತಿ ಕೂಡ ಹೆಚ್ಚಿಸುತ್ತದೆ. ಮತ್ತು ಡಿಪ್ರೆಷನ್ ನಿಂದ ನಿಮ್ಮನ್ನು ಮುಕ್ತಿ ಮಾಡುತ್ತದೆ.
ಮೊದಲನೆಯ ಮನೆಮದ್ದು. ಈ ತಲೆನೋವು ಹೋಗಲಾಡಿಸಲು ಬೇಕಾದ ಮೊದಲ ಸಾಮಗ್ರಿ ಹಸುವಿನ ಶುದ್ಧವಾದ ತುಪ್ಪ ಬೇಕಾಗುತ್ತದೆ. ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ವೈರಲ್ ಮತ್ತು ಇನ್ನಿತರ ಆಸಿಡ್ ಗಳಿಂದ ಇದು ಸಮೃದ್ಧಿಯನ್ನು ಹೊಂದಿದೆ. ಇದರಲ್ಲಿ ಕೆ2 ಎಂಬ ಪೋಷಕಾಂಶ ಇದ್ದು ಇದು ತಲೆನೋವಿಗೆ ಪರಿಣಾಮಕಾರಿ. ಹೀಗಾಗಿ ನೀವು ಎರಡು ಚಮಚ ತುಪ್ಪ ತೆಗೆದುಕೊಂಡು ಮೂಗಿನ ಎರಡು ಹೊಳ್ಳೆಗಳಿಗೆ ಹಾಕಿ. 3-4 ಹನಿಗಳು ಮಾತ್ರ ಹಾಕಿಕೊಂಡು ಮೂಗಿನ ಸುತ್ತಲೂ ಸವರಿ. ಇದರಿಂದ ನಿಮಗೆ ಇರುವ ಮೈಗ್ರೆನ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತದೆ. ಇನ್ನೂ ಈ ತಲೆನೋವು ಸಮಸ್ಯೆ ಬಂದಾಗ ಕೆಲವರಿಗೆ ಪಾದದಲ್ಲಿ ಉರಿ ಬರುತ್ತಿರುತ್ತದೆ ಆಗ ಅವರು ಈ ತುಪ್ಪವನ್ನು ಹಚ್ಚಿ ಚೆನ್ನಾಗಿ ಸವರಿಕೊಳ್ಳಿ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಕೂಡ ಬರುತ್ತದೆ. ಪಾದಗಳ ಉರಿ ಕೂಡ ಕಡಿಮೆ ಆಗುತ್ತದೆ. ಆದರೆ ಮಿತ್ರರೇ ಯಾವುದೇ ಕಾರಣಕ್ಕೂ ಕಡಿಮೆ ಬೆಲೆಯುಳ್ಳ ಅಥವಾ ಮಿಶ್ರಿತ ತುಪ್ಪವನ್ನು ಬಳಕೆ ಮಾಡಬೇಡಿ ಶುದ್ಧವಾದ ಹಸುವಿನ ತುಪ್ಪವನ್ನು ಬಳಕೆ ಮಾಡಿ. ಎರಡನೆಯ ಮನೆಮದ್ದು, ಕೆಲವು ಜನರಿಗೆ ತಲೆನೋವು ಅಪರೂಪಕ್ಕೆ ಕಾಣಿಸಿಕೊಂಡರೆ ಇನ್ನೂ ಕೆಲವು ಜನರಿಗೆ ದಿನವೂ ಕಾಡುತ್ತದೆ ಈ ದಾರಿದ್ರ್ಯ ತಲೆನೋವು ಅಂತ ಬೇಸರ ವ್ಯಕ್ತ ಪಡಿಸುತ್ತಾರೆ.
ಹಾಗಾದ್ರೆ ನೀವು ಇದಕ್ಕೆ ಏನು ಮಾಡಬೇಕು ಗೊತ್ತೇ? ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಬೇಕು ಬೆಳಗ್ಗೆ ಎದ್ದು ತಕ್ಷಣ ಅಥವಾ ರಾತ್ರಿ ಮಲಗುವ ಮುಂಚೆ ಈ ಎಣ್ಣೆಯನ್ನು ಮೂರ್ನಾಲ್ಕು ಹನಿ ನಿಮ್ಮ ಮೂಗಿನೊಳಗೆ ಹಾಕಿಕೊಳ್ಳಬೇಕು. ಇದರಿಂದ ನಿಮ್ಮ ತಲೆನೋವು ತಲೆಭಾರ ಭಾರ ಪಾದಗಳ ಉರಿ ಎಲ್ಲವೂ ನಿವಾರಣೆ ಆಗುತ್ತದೆ. ಶುಭದಿನ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.