ಹೆಂಗಸರಿಗೆ ಎಂದಿಗೂ ಈ ಹೆಸರುಗಳನ್ನು ಇಡಬೇಡಿ ಇಟ್ಟರೆ ಅವರು ಜೀವನದ ಪರ್ಯಂತ ನೋವುಗಳನ್ನೆ ಅನುಭವಿಸುತ್ತಾರೆ

ಜ್ಯೋತಿಷ್ಯ ಧಾರ್ಮಿಕ

ನಮಸ್ತೆ ಪ್ರಿಯ ಓದುಗರೇ, ಕೇವಲ ಹಿಂದೂ ಸಂಪ್ರದಾಯದಲ್ಲಿ ಮಾತ್ರವಲ್ಲದೆ ಇಡೀ ಮನುಕುಲದ ಮನೆಯಲ್ಲಿ ಮಕ್ಕಳು ಜನಿಸಿದರೆ ಅವರನ್ನು ಗುರುತಿಸಲು ಅವರಿಗೆ ಪ್ರತ್ಯೇಕವಾದ ಹೆಸರುಗಳನ್ನು ಇಡಲಾಗುತ್ತದೆ. ಈ ಹೆಸರುಗಳಿಂದಲೇ ಅವರನ್ನು ಈ ಸಮಾಜವು ಗುರುತಿಸುತ್ತದೆ. ಕೆಲವು ಹೆಸರುಗಳಲ್ಲಿ ತುಂಬಾನೇ ವಿಶೇಷತೆ ಅಡಗಿರುತ್ತದೆ ಹಾಗೆಯೇ ಈ ವಿಶೇಷವಾದ ಹೆಸರುಗಳಲ್ಲಿ ಹಿಂದಿನ ಇತಿಹಾಸವೇ ಅಡಗಿರುತ್ತದೆ. ಪ್ರತಿ ಹೆಸರಿಗೂ ತನ್ನದೇ ಆದ ಒಂದು ವೈಶಿಷ್ಟ್ಯ ಇರುತ್ತದೆ. ಈಗಿನ ಕಾಲದ ತಂದೆ ತಾಯಿಗಳು ಹುಟ್ಟಿದ ಮಕ್ಕಳಿಗೆ ಯಾವ ಬಗೆಯ ಹೆಸರುಗಳನ್ನು ಇಟ್ಟರೆ ಜನರು ತುಂಬಾನೇ ಇಷ್ಟ ಪಡುತ್ತಾರೆ ಅಂತ ಯೋಚನೆ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಕಿ ಹುಡುಕಿ ಮಕ್ಕಳಿಗೆ ಹೆಸರುಗಳನ್ನು ಇಡುತ್ತಿದ್ದಾರೆ. ಇದರ ಉದ್ದೇಶ ಮಕ್ಕಳಿಗೆ ಇಟ್ಟ ಹೆಸರುಗಳನ್ನು ಮಾತ್ರ ಇಷ್ಟ ಪಡುವುದಲ್ಲದೆ ಈ ಹೆಸರುಗಳಿಂದ ಅವರ ಜೀವನದಲ್ಲಿ ಯಾವುದೇ ಕಷ್ಟಗಳು ಬರಬಾರದು ಅಂತ ಇಡುತ್ತಾರೆ. ಹೆಸರುಗಳಲ್ಲಿ ಕೂಡ ತುಂಬಾ ವಿಶೇಷತೆ ಇದೆ ಅಂದರೆ ಒಳ್ಳೆಯ ಹೆಸರುಗಳನ್ನು ಇಟ್ಟರೆ ಅವರ ಜೀವನ ಚೆನ್ನಾಗಿ ಇರುತ್ತದೆ, ಸುಖವಾಗಿ ಇರುತ್ತಾರೆ, ಇಲ್ಲವಾದರೆ ಕೆಟ್ಟ ಹೆಸರನ್ನು ಇಟ್ಟರೆ ಅವರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಹೆಣ್ಣು ಮಕ್ಕಳಿಗೆ ಅಪ್ಪಿತಪ್ಪಿಯೂ ಕೂಡ ನಾವು ಈ ಲೇಖನದಲ್ಲಿ ತಿಳಿಸುವ ಹೆಸರುಗಳನ್ನು ಇಡಬಾರದು.

ಬನ್ನಿ ಹಾಗಾದರೆ ಆ ಹೆಸರುಗಳು ಯಾವುವು ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಮೊದಲನೆ ಹೆಸರು ಗಾಂಧಾರಿ, ಈಕೆ ಅಪ್ರತಿಮ ಸುಂದರಿ ರಾಜ ಕುಟುಂಬದಲ್ಲಿ ರಾಜಕುಮಾರಿ ಆಗಿ ಬೆಳೆದು ಬಂದವಳು. ಚಿಕ್ಕ ವಯಸ್ಸಿನಿಂದ ರಾಜಭೋಗವನ್ನು ಅನುಭವಿಸುವ ಈಕೆ ರಾಜ ಕುಟುಂಬದ ಸೊಸೆಯಾಗಿ ಹೋದಾಗ ಈಕೆ ಪಟ್ಟ ಕಷ್ಟಗಳು ಒಂದೇ ಎರಡೇ. ತನ್ನ ಜೀವನದಲ್ಲಿ ಬಾರಿ ಕಷ್ಟಗಳನ್ನೇ ಅನುಭವಿಸುತ್ತಾ ಬಂದಳು. ಹುಟ್ಟಿನಿಂದ ಮದುವೆ ಆಗುವವರೆಗು ತನ್ನ ಸಹೋದರನ ಪ್ರೀತಿ ತಂದೆ ತಾಯಿ ಪ್ರೀತಿ ರಾಜ ವೈಭೋಗದಲ್ಲಿ ಸುಖ ಸುಪತ್ತಿನಲ್ಲಿ ಬೆಳೆದ ಈಕೆ ಮದುವೆ ಆಗಿ ರಾಜ ಕುಟುಂಬದಲ್ಲಿ ಹೋದಾಗ ತನ್ನ ಗಂಡನಿಂದ ಮತ್ತು ಮಕ್ಕಳಿಂದ ತುಂಬಾನೇ ಕಷ್ಟಗಳನ್ನು ಅನುಭವಿಸಿದಳು. ಆದ್ದರಿಂದ ಈ ಹೆಸರನ್ನು ಹೆಣ್ಣು ಮಕ್ಕಳಿಗೆ ಎಂದಿಗೂ ಇಡಬಾರದು. ಇನ್ನೂ ಎರಡನೆಯದು ಕೈಕೆ, ಈಕೆ ಕಷ್ಟಗಳನ್ನು ಎದುರಿಸಿದ ಮಹಿಳೆಯಲ್ಲ. ಈಕೆ ಕಷ್ಟಗಳನ್ನು ಇನ್ನೊಬ್ಬರಿಗೆ ಕೊಟ್ಟವಳು ಅಂತ ಹೇಳಿದರೆ ತಪ್ಪಾಗಲಾರದು. ಈ ಮಹಾತಾಯಿ ಮಾಡಿದ ಒಂದು ಚಿಕ್ಕ ಬೇಧಭಾವದಿಂದ ತನ್ನ ಇಡೀ ಕುಟುಂಬವೇ ಕಷ್ಟದಲ್ಲಿ ಮುಳುಗಿ ಹೋಗುವ ಪರಿಸ್ಥಿತಿಯನ್ನು ಈ ತಾಯಿ ತಂದೊಡ್ಡಿದಳು. ಆದ್ದರಿಂದ ಈ ಹೆಸರನ್ನು ನೀವು ಅಪ್ಪಿ ತಪ್ಪಿಯೂ ಯಾವ ಹೆಣ್ಣಿಗೂ ಕೂಡ ಇಡಬೇಡಿ.

ಇನ್ನೂ ಮೂರನೆಯ ಹೆಸರು ಮೊಂಡೋದರಿ. ಈ ಹೆಸರಿನ ಮಹಿಳೆಯು ಬೇರೆ ಯಾರೂ ಅಲ್ಲ ಅವಳೇ ರಾವಣನ ಧರ್ಮಪತ್ನಿ. ಈಕೆಯೂ ಕೂಡ ದೊಡ್ಡದಾದ ರಾಜ ಕುಟುಂಬದ ವ್ಯಕ್ತಿಯನ್ನು ಮದುವೆಯಾಗಿದ್ದರು ತನ್ನ ಗಂಡನ ವಿಷಯದಲ್ಲಿ ತುಂಬಾನೇ ನೋವುಣ್ಣುತ್ತಾಳೆ. ಆದ್ದರಿಂದ ಈ ಹೆಸರನ್ನು ಕೂಡ ಎಂದಿಗೂ ಇಡಬಾರದು. ಇನ್ನೂ ನಾಲ್ಕನೆಯ ಹೆಸರು ದ್ರೌಪದಿ. ದ್ರೌಪದಿ ಮಹಾಭಾರತದಲ್ಲಿ ಬರುವ ಪ್ರಮುಖವಾದ ಪಾತ್ರವಾಗಿದೆ. ಈಕೆಯ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ ಮಿತ್ರರೇ, ಈಕೆ ತುಂಬಾನೇ ಸುಂದರವಾಗಿ ಇದ್ದರೂ ಕೂಡ ತನ್ನ ಚಿಕ್ಕ ವಯಸ್ಸಿನಲ್ಲಿ ತಂದೆ ಇಂದ ಕಷ್ಟಗಳನ್ನು ಅನುಭವಿಸಿದ ಈಕೆ ಮದುವೆ ಆದ ಮೇಲೆ ತನ್ನ ಪಂಚ ಪಾಂಡವರಿಂದ, ತನ್ನ ಮಕ್ಕಳಿಂದ ಕೌರವರ ಹೀನಾದಾಯಕ ವರ್ತನೆಯಿಂದ ತುಂಬಾನೇ ಕಷ್ಟವನ್ನು ಅನುಭವಿಸಿದ್ದಾರೆ ಆದ್ದರಿಂದ ಈ ಹೆಸರನ್ನು ಕೂಡ ಎಂದಿಗೂ ಹುಡುಗಿಯರಿಗೆ ಇಡಬಾರದು. ಇನ್ನೂ ಕೊನೆಯ ಹೆಸರು ಶುರ್ಪನಿಕಿ. ಈಕೆ ಒಬ್ಬಳು ರಾಕ್ಷಸಿ ಆಗಿದ್ದು ರಾವಣನ ತಂಗಿ ಕೂಡ ಆಗಿದ್ದಳು. ಇವಳು ಕೂಡ ತನ್ನ ಜೀವನದಲ್ಲಿ ತುಂಬಾನೇ ನೋವನ್ನು ಕಷ್ಟಗಳನ್ನು ಎದುರಿಸಿದ್ದಾಳೆ ಆದ್ದರಿಂದ ಈ ಹೆಸರು ಕೂಡ ಇಡುವುದು ಉಚಿತವಲ್ಲ. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *