ರೈತರಿಗೆ ಬೋರ್ ವೆಲ್ ಪಾಯಿಂಟ್ ಗುರುತಿಸಿ ಕೊಡಲು ಬಂದಿದೆ ಹೊಸ ಜರ್ಮನಿ ತಂತ್ರಜ್ಞಾನ. ಗದ್ದೆಯಲ್ಲಿ ಪಕ್ಕ ನೀರು ಬೀಳುತ್ತೆ

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ನಮ್ಮ ರೈತರು ಮುಖ್ಯವಾಗಿ ಎದುರಿಸುತ್ತಿರುವ ಸಮಸ್ಯೆ ಅಂದರೆ ಅದು ನೀರಿನ ಸಮಸ್ಯೆ. ಅನೇಕ ರೈತರು ಬೆಳೆಗಳು ಚೆನ್ನಾಗಿ ಬೆಳೆಯಲು ಕೃಷಿ ಭೂಮಿಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಬೋರವೆಲ್ ಗಳನ್ನು ತೆಗಿಸುತ್ತಾರೆ ಆದರೆ ಅವರು ಅಸಫಲರು ಆಗುತ್ತಾರೆ. ಹಾಗಾಗಿ ನಾವಿಂದು ನಿಮಗೆ ಗುಲ್ಬರ್ಗದ ಮೆಹತಾಬ್ ಪುಡುಚೇರಿ ಎನ್ನುವವರು ಜರ್ಮನಿ ತಂತ್ರಜ್ಞಾನವನ್ನು ಬಳಸಿಕೊಂಡು ಜಮೀನಿನಲ್ಲಿ ನೀರು ಎಲ್ಲಿದೆ ಎಂಬುದನ್ನು ಹೇಗೆ ಗುರುತಿಸಿಕೊಡುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೊದಲಿನ ಕಾಲದ ಜನರು ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡು ಕೃಷಿ ಭೂಮಿಯಲ್ಲಿ ನೀರು ಎಲ್ಲಿದೆ ಅಂತ ಪತ್ತೆ ಹಚ್ಚುತ್ತಿದ್ದರು. ಆದರೆ ಅವರ ಅದೃಷ್ಟವೋ ದುರದೃಷ್ಟವೋ ನೀರು ಒಮ್ಮೆ ಸಿಗುತ್ತಿತ್ತು ಒಮ್ಮೆ ಸಿಗದೇ ಕೂಡ ಇರುತ್ತಿತ್ತು. ಹೀಗೆ ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಖರ್ಚು ಮಾಡಿ ಬೋರವೆಲ್ ಹಾಕಿದರು ಕೂಡ ನೀರು ದೊರೆಯದೇ ಇದ್ದರೆ ಎಲ್ಲ ಹಣವೂ ವ್ಯರ್ಥವಾಗುತ್ತಿತ್ತು. ಸಾವಿರ ಹಣ ನಷ್ಟವಾಗುತ್ತಿತ್ತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಕೃಷಿಯನ್ನು ಮಾಡಬೇಕು ಅಂದರೆ ನಮಗೆ ಮುಖ್ಯವಾಗಿ ಬೇಕಾಗಿರುವುದು ನೀರು. ಹಾಗಾಗಿ ಸರಿಯಾಗಿ ನೀರು ಯಾವ ಸ್ಥಳದಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುದಕ್ಕೆ ಜರ್ಮನಿಯ ತಂತ್ರಜ್ಞಾನ ಬಹಳ ಉಪಯುಕ್ತವಾಗಲಿದೆ.

ಮೇಹತಾಬ್ ಎಂಬ ವ್ಯಕ್ತಿ ಈ ನೀರು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಕಳೆದ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಇವರು ನೀರು ಇರುವಿಕೆಯನ್ನು ಜರ್ಮನಿ ದೇಶದ ತಂತ್ರಜ್ಞಾನ ಉಪಯೋಗಿಸಿ ನೀರು ಇರುವುದನ್ನು ಪತ್ತೆ ಹಚ್ಚಿ ಕೊಡುತ್ತಾರೆ. ಅಷ್ಟೇ ಅಲ್ಲದೇ ಇವರ ಮಾರ್ಗದರ್ಶನದ ಮೇರೆಗೆ ಕೆಲವರು ಕೃಷಿ ಭೂಮಿಯಲ್ಲಿ ಬೋರ್ ವೆಲ್ ಗಳನ್ನು ಕೂಡ ತೆಗೆದುಕೊಂಡಿದ್ದಾರೆ. ಕೆಲವರು ತೆಂಗಿನಕಾಯಿ ಇಂದ ನೀರನ್ನು ಪತ್ತೆ ಹಚ್ಚುತ್ತಾರೆ. ಆದರೆ ಇದು ಎಲ್ಲ ಬಾರಿಯೂ ಯಶಸ್ವಿ ಆಗುವುದಿಲ್ಲ. ಆದರೆ ಈ ವ್ಯಕ್ತಿ ನಿಮ್ಮ ಜಮೀನಿನಲ್ಲಿ ಯಾವುದೇ ಸ್ಥಳದಲ್ಲಿ ನೀರಿನ ಪಾಯಿಂಟ್ ಅನ್ನು ಪತ್ತೆ ಹಚ್ಚಿ ಕೊಡುತ್ತಾರೆ.

ಇವರು ಬಳಸುವ ಯಂತ್ರದ ಜೊತೆಗೆ ಪೆಂಡಲಮ್ ತೆಂಗಿನಕಾಯಿಯನ್ನೂ ಕೂಡ ಬಳಕೆ ಮಾಡುತ್ತಾರೆ. ಜೊತೆಗೆ ಐದಾರು ವಿಧಗಳಲ್ಲಿ ನೀರು ಇದೆಯೋ ಇಲ್ಲವೋ ಎಂಬುದನ್ನು ತಿಳಿಸಿಕೊಡುತ್ತಾರೆ. ಮೊದಲಿಗೆ ನಿಮ್ಮ ಜಮೀನಿನ ಯಾವ ಪ್ರದೇಶದಲ್ಲಿ ನೀರು ಇದೆ ಅಂತ ಮೊದಲು ತಿಳಿಸಿಕೊಡುತ್ತಾರೆ. ನಂತರ ಯಂತ್ರವನ್ನು ಬಳಕೆ ಮಾಡಿ ನೀರು ಖಚಿತವಾಗಿ ಯಾವ ಸ್ಥಳದಲ್ಲಿ ಇದೆ ಎಂಬುದನ್ನು ಸೂಚಿಸುತ್ತದೆ. ತದ ನಂತರ ಮಾರ್ಗದರ್ಶನದ ಜೊತೆಗೆ ನೀರು ಇರುವ ಸ್ಥಳದಲ್ಲಿ ಯಂತ್ರ ತಿರುಗುತ್ತದೆ.
ಆಗ ಆ ಸ್ಥಳದಲ್ಲಿ ಎಲ್ ರಾಡ್ ತೆಂಗಿನಕಾಯಿ ಮತ್ತು ಪೆಂಡುಲಮ್ ಗಳನ್ನೂ ಬಳಸಿ ನೀರು ಇರುವಿಕೆಯನ್ನು ಪತ್ತೆ ಹಚ್ಚಿಕೊಡುತ್ತಾರೆ. ಬಳಿಕ ಬೋರ್ ವೆಲ್ ಪಾಯಿಂಟ್ ಗಳನ್ನು ಗುರುತಿಸಿ ಕೊಡುತ್ತಾರೆ.

ಆಗ ನೀವು ಸುಲಭವಾಗಿ ಅದೇ ಸ್ಥಳದಲ್ಲಿ ಬೋರ್ ವೆಲ್ ಹಾಕಿಕೊಳ್ಳಬಹುದು. ಅನೇಕ ಜನರು ಇವರನ್ನು ಕರೆಸಿಕೊಂಡು ಬೋರ್ ವೆಲ್ ಪಾಯಿಂಟ್ ಗುರುತಿಸಿಕೊಂಡು ಬೋರ್ ವೆಲ್ ಹಾಕಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಈ ಮೇಹತಾಬ್ ಎಂಬ ವ್ಯಕ್ತಿ ಕರ್ನಾಟಕದಲ್ಲಿ ಯಾವುದೇ ಜಿಲ್ಲೆಯವರು ಫೋನ್ ಮಾಡಿ ಬೋರ್ ವೆಲ್ ಪಾಯಿಂಟ್ ಗುರುತಿಸಿ ಕೊಡಿ ಅಂತ ಕೇಳಿಕೊಂಡರೆ ಖಂಡಿತವಾಗಿ ಬಂದು ಅವರು ಸಹಾಯ ಮಾಡುತ್ತಾರೆ ಹಾಗೂ ಇದಕ್ಕೆ ಸ್ವಲ್ಪ ದುಡ್ಡು ಚಾರ್ಚ್ ಮಾಡುತ್ತಾರೆ. ಹೌದು ಗೆಳೆಯರೇ ಆದರೆ ಅಷ್ಟೊಂದು ದುಡ್ಡು ಖರ್ಚು ಮಾಡಿ ಬೋರ್ ವೆಲ್ ಹಾಕಿ ನೀರು ಹತ್ತದೇ ಇದ್ದರೆ ಬಲು ಕಷ್ಟ. ಅದಕ್ಕಾಗಿ ಸ್ವಲ್ಪ ದುಡ್ಡು ಈ ವ್ಯಕ್ತಿಯ ಕೆಲಸಕ್ಕೆ ನೀಡಿ ಖಚಿತವಾಗಿ ನೀರು ಬರುವ ಸ್ಥಳದಲ್ಲಿ ಬೋರ್ ವೆಲ್ ಹಾಕಿಸಿಕೊಳ್ಳಬಹುದು.

Leave a Reply

Your email address will not be published. Required fields are marked *