ನೀವು ಲೇಬರ್ ಕಾರ್ಡ್ ಹೊಂದಿದ್ದೀರಾ ಹಾಗಾದರೆ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಬವುದು

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಕರ್ನಾಟಕ ಸರ್ಕಾರದಿಂದ ಕಟ್ಟದ ನಿರ್ಮಾಣ ಕಾರ್ಮಿಕರಿಗೆ ಹಾಗೂ ಇತರ ಕಾರ್ಮಿಕರಿಗೆ ಒಂದು ಅದ್ಭುತವಾದ ಅವಕಾಶವನ್ನು ಕಲ್ಪಿಸಿದ್ದಾರೆ. ಆ ಸಿಹಿ ಸುದ್ದಿ ಯಾವುದು ಅಂತ ನೀವು ತಿಳಿದುಕೊಂಡರೆ ನಿಜಕ್ಕೂ ನಿಮಗೆ ಆನಂದವಾಗುತ್ತದೆ. ಹೌದು ಅದುವೇ ಕಟ್ಟದ ನಿರ್ಮಾಣ ಕಾರ್ಮಿಕರಿಗೆ ಹಾಗೂ ಇತರ ಕಾರ್ಮಿಕರಿಗೆ ಅಥವಾ ಲೇಬರ್ ಕಾರ್ಡ್ ಮಾಡಿಸಿಕೊಂಡು ಕೂಲಿ ಕೆಲಸವನ್ನು ಮಾಡುವ ಎಲ್ಲಾ ಕಾರ್ಮಿಕರಿಗೆ ಅವರದೇ ಆದ ಸ್ವಂತ ಉದ್ಯೋಗವನ್ನು ಮಾಡಿಕೊಂಡು ಇನ್ನೊಬ್ಬರ ಮೇಲೆ ಅವಲಂಬಿತವಾಗದೆ ಅವರು ಸ್ವಂತ ಬಿಸಿನೆಸ್ ಮಾಡುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆಗಳನ್ನು ಸರ್ಕಾರವೂ ಜಾರಿಗೆ ತಂದಿದೆ. ಹೀಗಾಗಿ ಪ್ರತಿಯೊಬ್ಬ ಕೂಲಿ ಕಾರ್ಮಿಕರು ಇದರ ಫಲಾನುಭವ ಪಡೆಯಲು ಇದರ ಬಗ್ಗೆ ಇಂದಿನ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.

ಕಾರ್ಮಿಕ ಕಲ್ಯಾಣ ಮಂಡಳಿ ಇಲಾಖೆಯಿಂದ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೋಂದಾಯಿತ ಕಟ್ಟದ ನಿರ್ಮಾಣ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅವಲಂಬಿತರು ಸ್ವಉದ್ಯೋಗ ಮಾಡಲು ಅವರಿಗೆ ಸಹಾಯ ಆಗಲೆಂದು ಈ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಈ ಒಂದು ನಿರ್ಧಾರವನ್ನು ಕಾರ್ಮಿಕ ಕಲ್ಯಾಣ ಮಂಡಳಿ ಮಾಡಿದೆ. ನಮ್ಮ ಕಾರ್ಮಿಕ ಕಲ್ಯಾಣ ಮಂಡಳಿ ಸಚಿವರಾದ ಶಿವರಾಮ ಹೆಬ್ಬಾರ ಅವರು ಈ ಕುರಿತು ಮಾಹಿತಿಯನ್ನು ಸ್ಪಷ್ಟ ಪಡಿಸಿದ್ದಾರೆ. ಪ್ರತಿಯೊಬ್ಬ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಅಥವಾ ಕಾರ್ಮಿಕ ಕಾರ್ಡ್ ಹೊಂದಿರುವ ಜನರಿಗೆ ಸ್ವ ಉದ್ಯೋಗ ಮಾಡಲು ಅವರಿಗೆ ಉಚಿತವಾಗಿ ಯಂತ್ರಗಳನ್ನು ನೀಡುವುದಾಗಿ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ. ಈವರೆಗೂ ಕಾರ್ಮಿಕ ಕಾರ್ಡನ್ನು ಪಡೆಯುವುದಕ್ಕಾಗಿ 28,94,389 ಕಾರ್ಮಿಕರು ಇವರೆಗು ಅರ್ಜಿಯನ್ನು ಸಲ್ಲಿಸಿದ್ದಾರೆ.

ಈ ಒಂದು ಯೋಜನೆಯ ಉದ್ದೇಶಕ್ಕಾಗಿ ಹದಿನೈದು ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೊಲಿಗೆ ಯಂತ್ರಗಳನ್ನೂ ಉಚಿತವಾಗಿ ನೀಡುವುದರ ಜೊತೆಗೆ ಮತ್ತಷ್ಟು ಕೆಲವೊಂದು ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ ಎಂದು ಕಾರ್ಮಿಕ ಕಲ್ಯಾಣ ಮಂಡಳಿ ಸಚಿವರಾದ ಶಿವರಾಮ ಅವರು ತಿಳಿಸಿದ್ದಾರೆ ಕಾರ್ಮಿಕ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆ ಯೋಜನೆಗೆ ಎಪ್ಪತ್ತು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಜೊತೆಗೆ ಕಾರ್ಮಿಕರಿಗೆ ಸ್ವಸಾಮರ್ಥ್ಯ ಟೂಲ್ ಕಿಟ್ ಗಳ ವಿತರಣೆ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ನೂರು ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಾರೆ.

ಹೀಗಾಗಿ ಅವರ ಮಕ್ಕಳ ಬೆಳವಣಿಗೆಗೆ ಆರೋಗ್ಯದ ರಕ್ಷಣೆಗೆ ಮತ್ತು ಆರು ವರ್ಷದ ಚಿಕ್ಕ ಮಕ್ಕಳ ಪಾಲನೆ ಪೋಷಣೆಗೆ ಕಾರ್ಮಿಕರು ಇರುವ ಸ್ಥಳದಲ್ಲಿ ಶಿಶುಪಾಲನಾ ಕೇಂದ್ರಗಳನ್ನೂ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರಗಳನ್ನೂ ನಿರ್ಮಾಣ ಮಾಡಲು ಸರ್ಕಾರವೂ ಐವತ್ತು ಕೋಟಿ ರೂಪಾಯಿ ಹಣವನ್ನು ಅನುದಾನ ಮಾಡಿದೆ. ಎಂದು ಸಚಿವರು ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರವೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜೀವನ ನಡೆಸುವುದಕ್ಕೆ ಹಾಗೂ ಜೀವನವನ್ನು ಸರಾಗವಾಗಿ ನಡೆಸುವುದಕ್ಕೆ ಅವರಿಗೆ ಉಚಿತವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಿ ಕೊಡುತ್ತಿದ್ದೆ. ಹೌದು ಗ್ರಾಮೀಣ ಪ್ರದೇಶದ ಜನರಿಗೆ ಇದರ ಬಗ್ಗೆ ಅರಿವು ಇರದೇ ಇರುವ ಕಾರಣ ಇವುಗಳ ಲಾಭಗಳು ಅವರ ವರೆಗೆ ತಲುಪುತ್ತಿಲ್ಲ. ಹೀಗಾಗಿ ಇಂತಹ ಹಲವಾರು ಬಗೆಯ ಯೋಜನೆಗಳ ಲಾಭಗಳು ಪ್ರತಿಯೊಬ್ಬ ಕಾರ್ಮಿಕರಿಗೆ ಸಿಗಬೇಕು ಅಂತ ಆಶಿಸೋಣ. ನಮ್ಮ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಶುಭದಿನ.

Leave a Reply

Your email address will not be published. Required fields are marked *