ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಏರುಪೇರು ಆದರೆ ಧನ ಸಂಪತ್ತು ಆಗಮನವಾಗಲು ಈ ರೀತಿಯಾಗಿ ಮಾಡಿ ನೋಡಿ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಆತ್ಮೀಯ ಸ್ನೇಹಿತರೇ, ಧನ ಸಂಪತ್ತು ಆಗಮನ ನಿಮ್ಮ ಮನೆಯಲ್ಲಿ ವ್ಯಾಪಾರದಲ್ಲಿ ಹೆಚ್ಚಾಗ ಬೇಕೆಂದರೆ ಈ ಕೆಲವು ಉಪಾಯಗಳನ್ನು ಮಾಡಿ. ಇದರಿಂದ ನಿಮ್ಮ ಜೀವನವೂ ಹಣದಿಂದ ತುಂಬಿ ತುಳುಕುತ್ತದೆ ಜೊತೆಗೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ.ಹಣವಿಲ್ಲದೆ ನಾವು ಈ ಪ್ರಪಂಚದಲ್ಲಿ ಶೂನ್ಯ. ಹಣವಿಲ್ಲದೆ ನಾವು ಏನನ್ನು ಕೂಡ ಖರೀದಿಸಲು ಸಾಧ್ಯವಿಲ್ಲ ಅಷ್ಟೇ ಯಾಕೆ ಹಣವಿಲ್ಲದೆ ಬದುಕಲು ಆಗುವುದೇ ಇಲ್ಲ ಗೆಳೆಯರೇ. ಪ್ರತಿಯೊಬ್ಬರೂ ಹಣವನ್ನು ಗಳಿಸಲು ಕಷ್ಟ ಪಟ್ಟು ವ್ಯಾಪಾರ ಮಾಡುತ್ತಾರೆ ವ್ಯವಸಾಯ ಮಾಡುತ್ತಾರೆ. ನೌಕರಿಗಳನ್ನು ಮಾಡುತ್ತಾರೆ. ಬ್ಯುಸಿನೆಸ್ ಮಾಡುತ್ತಾರೆ. ಆದರೆ ಹಗಲು ರಾತ್ರಿ ಎಷ್ಟೇ ಕಷ್ಟ ಪಟ್ಟು ದುಡಿದರು ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಅನಾವಶ್ಯಕವಾದ ರೀತಿಯಲ್ಲಿ ಖರ್ಚು ಆಗುತ್ತಲೇ ಹೋಗುತ್ತದೆ.

ಕೆಲವು ಒಳ್ಳೇಯ ವ್ಯಾಪಾರ ವ್ಯವಹಾರ ಮಾಡುತ್ತಾರೆ ಇನ್ನೂ ಕೆಲವರು ಜನರಿಗೆ ಮೋಸ ಮಾಡಿ ಹಣವನ್ನು ಗಳಿಸುತ್ತಾರೆ. ಆದರೆ ನಾವು ಯಾವಾಗ್ಲೂ ಒಳ್ಳೆಯ ಮಾರ್ಗದಲ್ಲಿ ಹಣವನ್ನು ಗಳಿಸಬೇಕು. ಹಣವಿದ್ದರೆ ಜೀವನದಲ್ಲಿ ನಾವು ಆರಾಮವಾಗೀ ಇರಬಹುದು. ಸುಖವಾಗಿ ಸಂತೋಷವಾಗಿ ಜೀವನವನ್ನು ನಡೆಸಬಹುದು. ಬೇಕಾದ್ದನ್ನು ಇಷ್ಟವಾದದನ್ನು ತೆಗೆದುಕೊಳ್ಳಬಹುದು. ಧನ ಸಂಪತ್ತಿನ ಒಡತಿಯಾದ ತಾಯಿ ಲಕ್ಷ್ಮೀದೇವಿ ಅನ್ನು ನಾವು ಒಲಿಸಿಕೊಳ್ಳಬೇಕು. ಶಾಸ್ತ್ರದಲ್ಲಿ ಕೆಲವೊಂದು ಚಿಕ್ಕದಾದ ಉಪಾಯಗಳು ಇಂತಿವೆ ಇವುಗಳನ್ನು ನೀವು ಪ್ರಾಚೀನ ತಂತ್ರಗಳನ್ನು ಬಳಸಿ ಧನ ಆಗಮನ ಬೇಗನೆ ಮಾಡಿಕೊಳ್ಳಬಹುದು. ಹಾಗೂ ನಿಮ್ಮ ದುರ್ಭಾಗ್ಯವು ಸೌಭಾಗ್ಯದ ಕಡೆಗೆ ಸಾಗುತ್ತದೆ. ನಾವು ತಿಳಿಸುವ ಅನೇಕ ಉಪಾಯಗಳಲ್ಲಿ ನಿಮಗೆ ಸುಲಭ ಅನ್ನಿಸಿದ ಉಪಾಯವನ್ನು ನೀವು ಮಾಡಿದರೆ ನಿಮ್ಮ ವ್ಯಾಪಾರದಲ್ಲಿ ಧನ ಸಂಪತ್ತು ಆಗಮನ ಆಗಲು ಅಧಿಕವಾದ ಸಮಯ ಬೇಕಾಗಿಲ್ಲ ಗೆಳೆಯರೇ. ನಾವು ಯಾವುದೇ ಒಂದು ಪೂಜೆ ಪುರಸ್ಕಾರ ಆಗಲಿ ನಂಬಿಕೆ ಇಂದ ಮಾಡಬೇಕು. ಮಾತ್ರ ಅದರಿಂದ ಲಾಭ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ಮೊದಲಿನ ಸ್ಥಿತಿ ಇದ್ದ ಹಾಗೆಯೇ ಉಳಿದು ಬಿಡುತ್ತದೆ.

ಮೊದಲನೆಯ ಉಪಾಯ ಮುಂಜಾನೆ ಸಮಯದಲ್ಲಿ ನೀವು ಪೂಜೆ ಮಾಡಬೇಕಾದ್ರೆ ತಾಯಿ ಲಕ್ಷ್ಮೀದೇವಿ ಗೆ ಪ್ರತಿದಿನವೂ ಕೆಂಪು ಹೂವು ಅರ್ಪಣೆ ಮಾಡಬೇಕು. ಹಾಗೂ ಯಾವುದಾದ್ರೂ ಸಿಹಿ ಪದಾರ್ಥವನ್ನು ಮಾಡಿ ನೈವೇದ್ಯ ರೂಪದಲ್ಲಿ ದೇವರಿಗೆ ಅರ್ಪಣೆ ಮಾಡಬೇಕು. ಇದರಿಂದ ಬಡವನು ಶ್ರೀಮಂತ ಆಗುವ ದಾರಿಗಳು ಹತ್ತಿರ ಆಗುತ್ತಾ ಹೋಗುತ್ತದೆ. ಹಾಗೂ ಆ ಕ್ಷಣಗಳು ನಿಮ್ಮ ಹತ್ತಿರ ಆದಷ್ಟು ಬೇಗನೆ ಬರುತ್ತದೆ. ಹಾಗೂ ಇನ್ನೊಬ್ಬರಿಗೆ ದಾನವನ್ನು ಮಾಡುವಷ್ಟು ಆಗರ್ಭ ಸಿರಿವಂತ ಆಗುವೀರಿ. ಎರಡನೆಯ ಉಪಾಯ ಅಂದರೆ, ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಅದರ ಮೇಲೆ ರಾಮ ಅಂತ ಬರೆದು ಅದರ ಮೇಲೆ ಸಿಹಿ ಪದಾರ್ಥ ಇಟ್ಟು ಆಂಜನೇಯ ಸ್ವಾಮಿ ಗೆ ಅರ್ಪಣೆ ಮಾಡಬೇಕು. ಹಾಗೂ ದೇವರಲ್ಲಿ ಕೇಳಿಕೊಳ್ಳಬೇಕು, ಹೇ ಆಂಜನೇಯ ನನಗೆ ಹಣದ ಆಗಮನ ಆಗುವುದಕ್ಕೆ ದಾರಿ ಮಾಡಿ ಕೊಡು ಅಂತ ಭಕ್ತಿಯಿಂದ ನಮಿಸಬೇಕು.

ಆಂಜನೇಯ ಸ್ವಾಮಿ ನಿಮ್ಮ ಚಿಕ್ಕದಾದ ಭಕ್ತಿಗೆ ಕೂಡ ಆಶೀರ್ವಾದ ಮಾಡುವ ಸರಳ ದೇವಾನು ದೇವರು ಆಗಿದ್ದಾರೆ. ಇದರಿಂದ ನೀವು ಶ್ರೀಮಂತರು ಆಗುವೀರಿ. ಇನ್ನೂ ಮನೆಯಲ್ಲಿರುವ ಪೊರಕೆ. ಈ ಪೊರಕೆಯನ್ನು ನೀವು ಮನೆಗೆ ಬರುವ ಹೊಸ ವ್ಯಕ್ತಿಗೆ ಕಾಣದಂತೆ ಇಡಬೇಕು. ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ಗೆ ಹೋಲಿಕೆ ಮಾಡಲಾಗುತ್ತದೆ. ಅದನ್ನು ನೀವು ಕಾಲಿನಿಂದ ಎಂದಿಗೂ ಓದೆಯಬಾರದು. ಅದನ್ನು ಚೆನ್ನಾಗಿ ಸ್ವಚ್ಛವಾದ ಸ್ಥಳದಲ್ಲಿ ಇರಿಸಬೇಕು. ಇದರಿಂದ ತಾಯಿ ಲಕ್ಷ್ಮೀದೇವಿ ಕೃಪೆ ನಿಮ್ಮ ಮೇಲೆ ಸ್ವಲ್ಪವಾದರೂ ಬಿದ್ದು ನೀವು ಶ್ರೀಮಂತ್ರರು ಅಗುತ್ತೀರಿ.

Leave a Reply

Your email address will not be published. Required fields are marked *