ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳಲಾಗಿದೆ ಆದರೆ ಮಿತಿಯಾಗಿ ಕುಡಿದರೆ ಮಾತ್ರ!! ಅದು ಹೇಗೆ ಅಂತೀರಾ????

ಆರೋಗ್ಯ

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಈಗಿನ ಕಾಲದಲ್ಲಿ ಹುಡುಗ ಹುಡುಗಿ ಇಬ್ಬರು ಕೂಡ ಬಿಯರ್ ಅನ್ನು ಕುಡಿಯುತ್ತಾರೆ. ವಿದೇಶದಲ್ಲಿ ಇದು ಸಾಮಾನ್ಯವಾಗಿದ್ದರು ಕೂಡ ಈಗ ನಮ್ಮ ದೇಶದಲ್ಲಿ ಕೂಡ ಸಾಮಾನ್ಯವಾಗಿದೆ ಅಂತಾ ಹೇಳಬಹುದು. ಅದರಲ್ಲೂ ಪ್ರೀತಿ ವಿರಹದಲ್ಲಿ ಬೆಂದು ಹೋದವರಿಗೆ ಇದು ದಿವ್ಯ ಔಷಧ ಅಂತ ಹೇಳಬಹುದು. ಕೆಲವು ಪಾನೀಯಗಳು ನಮ್ಮ ದೇಹಕ್ಕೆ ತುಂಬಾನೇ ಪ್ರಯೋಜನಕಾರಿ ಅದರಲ್ಲಿ ಬಿಯರ್ ಕೂಡ ಒಂದು ಅಂತ ಹೇಳಿದರೆ ತಪ್ಪಾಗಲಾರದು. ಹೌದು ನಿಮಗೆ ಅಚ್ಚರಿ ಅನ್ನಿಸಬಹುದು ಗೆಳೆಯರೇ. ಆದರೆ ಇದು ಸತ್ಯ. ಬಿಯರ್ ನಲ್ಲಿ ಕೂಡ ಆರೋಗ್ಯಕರ ಲಾಭಗಳು ಇವೆ ಅಂದರೆ ನಿಮಗೆ ಆಶ್ಚರ್ಯ ಅನ್ನಿಸುವುದು ಸಹಜವೇ ಗೆಳೆಯರೇ. ಇದರಲ್ಲಿ ಆರೋಗ್ಯಕರ ಲಾಭಗಳು ಇವೆ ಅಂತ ವೈದ್ಯರು ಕೂಡ ಹೇಳಿದ್ದಾರೆ. ಹೌದು ಏಕೆಂದರೆ ಇದರಲ್ಲಿ ಹಣ್ಣುಗಳನ್ನು ಮತ್ತು ಧಾನ್ಯದ ರಸವನ್ನು ಉಪಯೋಗಿಸಿ ಜೊತೆಗೆ ಸ್ವಲ್ಪ ಆಲ್ಕೋಹಾಲ್ ಅನ್ನು ಮಿಕ್ಸ್ ಮಾಡಿ ತಯಾರಿಸುತ್ತಾರೆ. ದಿನಕ್ಕೆ ನಾವು 1.5 ಬಿಯರ್ ಕುಡಿದರೆ ಹೃದಯಾಘಾತವನ್ನು ಕೂಡ ತಪ್ಪಿಸಬಹುದು ಅಂತ ವೈದ್ಯರು ತಿಳಿಸಿದ್ದಾರೆ.ಬಿಯರ್ ಯುವಜನತೆಯ ಅದ್ಭುತವಾದ ಪಾನೀಯ ಅಂತ ಹೇಳಬಹುದು. ಹೌದು ಬೇಸಿಗೆ ಕಾಲದಲ್ಲಿ ತಂಪಾದ ಹಾಗೂ ಶೀತಲವಾದ ಬಿಯರ್ ಬೇಕೆ ಬೇಕಾಗುತ್ತದೆ.

 

ಆದರೆ ಗೆಳೆಯರೇ ಅತಿಯಾಗಿ ನೀವು ಕುಡಿಯಬಾರದು. ಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡರೆ ಖಂಡಿತವಾಗಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾಗುತ್ತದ್ದೆ. ಹಾಗಾದರೆ ಆ ಪ್ರಯೋಜಗಳನ್ನು ತಿಳಿಯೋಣ ಬನ್ನಿ. ಮೊದಲನೆಯದು, ಹೃದಯದ ಆರೋಗ್ಯಕ್ಕೆ ಸೂಕ್ತ ಮನೆಮದ್ದು ಅಂತ ಹೇಳಬಹುದು. 2021 ರಲ್ಲಿ ನಡೆಸಿದ ಸಂಶೋಧನೆಯಲ್ಲಿ ನಮಗೆ ತಿಳಿದು ಬಂದ ವಿಷಯ ಏನೆಂದರೆ, ಹೃದಯಾಘಾತದಿಂದ ಬಳಲುತ್ತಿರುವವರು 1 ರಿಂದ 1.5 ಬಿಯರ್ ಅನ್ನು ಸೇವಿಸುತ್ತಿದ್ದರಂತೆ ಗೆಳೆಯರೇ ಆಗ ಅವರ ಹೃದಯವು ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ತಿಳಿದು ಬಂದಿದೆ. ಇನ್ನೂ ನಿದ್ರಾ ಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಬಿಯರ್. ಹೌದು ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡದಿಂದ ಜನರು ನಿಜಕ್ಕೂ ನಿದ್ರಾಹೀನತೆ ಸಮಸ್ಯೆ ಇಂದ ನರಳಾಡುತ್ತಿದ್ದಾರೆ. ಅದಕ್ಕಾಗಿ ರಾತ್ರಿ ಊಟವನ್ನು ಮಾಡುವ ಮುನ್ನ ಸ್ವಲ್ಪ ಬಿಯರ್ ಕುಡಿದು ಊಟವನ್ನು ಮಾಡಿದರೆ ಖಂಡಿತವಾಗಿ ಮೆದುಳಿನ ಎಲ್ಲ ಜೀವಕೋಶಗಳು ಸಕ್ರೀಯವಾಗಿ ನೀವು ಬೇಗನೆ ನಿದ್ದೆಗೆ ಜಾರುವಂತೆ ಮಾಡುತ್ತದೆ. ಮಧುಮೇಹ ಅಥವಾ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ.

 

ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ ಬಿಯರ್ ನಲ್ಲಿ ಉತ್ತಮವಾದ ಸಿಲಿಕಾನ್ ಅಂಶ ಇರುವುದರಿಂದ ನಿಜಕ್ಕೂ ಇದು ಮೂಳೆಗಳಿಗೆ ಬೇಕಾದ ಸಿಲಿಕಾನ್ ಒದಗಿಸುತ್ತದೆ. ಇದರಿಂದ ಮೂಳೆಗಳು ಬಲವರ್ಧನೆಯನ್ನು ಪಡೆಯುತ್ತವೆ. ಇನ್ನೂ ಬಿಯರ್ ಕುಡಿಯುವುದರಿಂದ ಹಲ್ಲುಗಳಲ್ಲಿ ಆಗುವ ಹುಳುಕು ಕುಳಿಗಳು ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತದೆ. ಇನ್ನೂ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆ ಅಥವಾ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಈ ಬಿಯರ್. ಬಿಯರ್ ಕುಡಿಯುವುದರಿಂದ ಪದೆ ಪದೇ ಮೂತ್ರ ವಿಸರ್ಜನೆ ಹೆಚ್ಚುತ್ತದೆ. ಹೀಗಾಗಿ ಚಿಕ್ಕ ಚಿಕ್ಕ ಕಲ್ಲುಗಳು ಮೂತ್ರದ ಮೂಲಕ ಹೊರಗೆ ಹೋಗಿ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ಕೆಲವು ಅಧ್ಯಯನದ ಪ್ರಕಾರ, ಬಿಯರ್ ವೈನ್‌ಗಿಂತ ಹೆಚ್ಚು ಪ್ರೋಟೀನ್ ಮತ್ತು ವಿಟಮಿನ್ ಬಿ ಅನ್ನು ಹೊಂದಿರುತ್ತದೆ. ಜೊತೆಗೆ, ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಅಂದರೆ, ಬಿಯರ್ ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತದೆ.

Leave a Reply

Your email address will not be published. Required fields are marked *