ಅಕ್ಟೋಬರ್ 3, ಸೋಮವಾರದ ಶುಭದಿನದಂದು ನಿಮ್ಮ ಭವಿಷ್ಯ ಹೇಗಿರಲಿದೇ???

ಜ್ಯೋತಿಷ್ಯ

ನಮಸ್ತೆ ಪ್ರಿಯ ಓದುಗರೇ, ಇಂದು ಶ್ರೀ ಶುಭ ಕೃತ್ ನಾಮ ಸಂವತ್ಸರ, ಧಕ್ಷಿನಾಯಿನೇ, ಶರದ್ ಋತು, ಆಶ್ವೀಜ ಮಾಸ,ಶುಕ್ಲ ಪಕ್ಷ ಇಂದು ಅಕ್ಟೋಬರ್ 3 ನೇ ತಾರೀಕು, ಸೋಮವಾರ ಇಂದು ಪೂರ್ವಾಶಾಡ ನಕ್ಷತ್ರ. ಇಂದಿನ ಭವಿಷ್ಯವನ್ನು ಎಲ್ಲಾ ರಾಶಿಗಳಿಗೆ ತಿಳಿಯೋಣ. ಮೇಷ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ಭಾಗ್ಯೋದಯ ಆಗುತ್ತೆ. ದೊಡ್ಡವರ ಹಾಗೂ ದೇವರ ಆಶೀರ್ವಾದ ಪ್ರಾಪ್ತಿ ಆಗುತ್ತೆ. ಆದ್ದರಿಂದ ಒಳ್ಳೆಯದನ್ನು ಮಾಡಿದಷ್ಟೂ ಕೂಡ ಹೆಚ್ಚಿನ ಆಶೀರ್ವಾದ ಪ್ರಾಪ್ತಿ ಆಗುತ್ತೆ. ವೃಷಭ ರಾಶಿಯವರಿಗೆ ಸ್ವಲ್ಪ ಮನಸ್ಸಿಗೆ ಕಿರಿಕಿರಿ ಇರುತ್ತೆ. ನಿಮ್ಮ ಪ್ರೀತಿ ಪಾತ್ರರನ್ನೂ ಮಿಸ್ ಮಾಡಿಕೊಳ್ಳುತ್ತಿರ. ಹಾಗಾಗಿ ಇಂದು ಧ್ಯಾನ ಮಾಡಿ ನಿಮ್ಮ ಮನಸ್ಸನ್ನು ಬೇರೆ ಕಡೆ ಹರಿ ಬಿಡಿ. ಮಿಥುನ ರಾಶಿಯವರಿಗೆ ಇಂದು ನಿಮ್ಮ ಪಾರ್ಟ್ನರ್ ಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು. ಬ್ಯುಸಿನೆಸ್ ಪಾರ್ಟ್ನರ್ ಅಥವಾ ಜೀವನ ಸಂಗಾತಿ ಆಗಿರಬಹುದು ಅಥವಾ ಉದ್ಯೋಗದಲ್ಲಿ ಇರುವ ಸಂಗಾತಿಯ ರೂ ಮುಖ್ಯ ಆಗುತ್ತಾರೆ.

 

ಕರ್ಕಾಟಕ ರಾಶಿಗೆ ಇಂದು ಸಾಮಾಜಿಕ ವಾತಾವರಣದಲ್ಲಿ ನೀವು ಯಾವ ರೀತಿ ಮಿತ್ರರು ಹಾಗೂ ಶತ್ರುಗಳ ಜೊತೆ ನಿಮ್ಮ ವ್ಯವಹಾರ ನಿಭಾಯಿಸುತ್ತೀರಿ ಎನ್ನುವುದರ ಮೇಲೆ ಇವತ್ತಿನ ನಿಮ್ಮ ಸಂತೋಷ ಅವಲಂಬಿತ ಆಗಿರುತ್ತೆ. ಸಿಂಹ ರಾಶಿಯವರಿಗೆ ಇಂದು ಬಹಳ ಪ್ರಶಸ್ತ ದಿನ. ಪ್ರೇಮ ಪ್ರೀತಿ ಪ್ರಕರಣಗಳಲ್ಲಿ ಯಶಸ್ಸು ದಾಂಪತ್ಯದಲ್ಲಿ ನೆಮ್ಮದಿ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ. ಕಲಾವಿದರಿಗೆ ಬಹಳ ಒಳ್ಳೆಯ ದಿನ. ನಿಮ್ಮ ಕಲೆಯ ವಿಶಿಷ್ಟತೆ ಪರಾಕಾಷ್ಠೆ ತಲುಪುತ್ತದೆ. ಕನ್ಯಾ ರಾಶಿಗೆ ಮನೆಯ ಜವಾಬ್ದಾರಿಗಳು ಹೆಚ್ಚಾಗಿ ಕಾಣುತ್ತೆ. ಯಾಕೋ ತಲೆನೋವು ಆಗುವ ಭಾವನೆಗಳನ್ನು ನೀವು ಕಾಣುತ್ತ ಇರಬಹುದು. ಆದ್ರೆ ಎಲ್ಲವನ್ನು ನಿಭಾಯಿಸಿ ದಿನದ ಕೊನೆಯ ಹೊತ್ತಿಗೆ ಖಂಡಿತವಾಗಿ ಯಶಸ್ಸು ಕಾಣುತ್ತೀರಿ. ತುಲಾ ರಾಶಿಗೆ ಇಂದು ನಿಮ್ಮ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ಅನೇಕ ರೀತಿಯ ನಿಮ್ಮ ಸಮಯವನ್ನು ನಿಗದಿತವಾಗಿ ಕೊಡುವ ದಿನ ಇಂದಾಗಿದೆ. ಎಷ್ಟೊಂದು ಕಡೆ ಒಡಾಟಗಳು, ನಿಮ್ಮ ಪ್ರೀತಿ ಪಾತ್ರರು ಮಿತ್ರರು ಬಂಧುಗಳು ನಿಮ್ಮ ಸಹೋದರ ಸಹೋದರಿಯರು ಎಲ್ಲರೂ ನಿಮ್ಮ ಟೈಮ್ ಮೇಲೆ ಡಿಪೆಂಡ್ ಆಗಿರುತ್ತಾರೆ. ಹಾಗಾಗಿ ಇಂದು ಬ್ಯುಸಿ ದಿನ ಆಗಿರುತ್ತೆ. ಆತ್ಮವಿಶ್ವಾಸ ತುಂಬಾ ಚೆನ್ನಾಗಿದೆ.

 

ವೃಶ್ಚಿಕ ರಾಶಿಗೆ ಸಂಸಾರದಲ್ಲಿ ನೆಮ್ಮದಿ. ನಿಮ್ಮ ಮನೆಯಲ್ಲೂ ನೆಮ್ಮದಿ ಇಂದು ಕಾಣುತ್ತೀರಿ. ಎರಡು ದಿನಗಳಿಂದ ಸ್ವಲ್ಪ ಮನಸ್ಸಿಗೆ ಬೇಸರ ಇತ್ತು ಅದೆಲ್ಲ ಇಂದು ಮುಗಿದು ಸರಿಯಾದ ರೀತಿಯಲ್ಲಿ ಮುಂದೆ ಹೋಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ನೀವು ಮುಂದೆ ಹೋಗುವ ದಿನ. ಧನಸ್ಸು ರಾಶಿಗೆ ನೆಮ್ಮದಿ ಕಾಣುತ್ತೆ. ಹಿಂದಿನ ಎರಡು ದಿನಗಳಲ್ಲಿ ಸ್ವಲ್ಪ ಕಿರಿಕಿರಿ ಇತ್ತು ಆದ್ರೆ ಇಂದು ಅದೆಲ್ಲ ಮಾಯ ಆಗಿ ನಿಮ್ಮ ಮಿತ್ರರ ನಡುವೆ ಇದ್ದ ಒಡಕು ಸರಿ ಹೋಗುತ್ತೆ. ಮಕರ ರಾಶಿಗೆ ಸ್ವಲ್ಪ ಒಂದೆರಡು ಹೆಜ್ಜೆ ಹಿಂದೆ ಇಟ್ಟು ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುವ ದಿವಸ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಕುಂಭ ರಾಶಿಗೆ ಇವತ್ತು ಬಹಳ ಒಳ್ಳೆಯ ದಿನ. ನಿಮ್ಮ ಇಷ್ಟಾರ್ಥ ಸಿದ್ಧಿ. ಮಿತ್ರರಿಂದ ಮತ್ತು ಗುಂಪುಗಳಿಂದ ಇಷ್ಟಾರ್ಥ ಸಿದ್ಧಿ ಆಗುವುದರಿಂದ ಅವರ ಜೊತೆ ಸರಿಯಾಗಿ ವ್ಯವಹಾರ ಮಾಡುವ ದಿನ. ಧನಾಗಮ. ಮೀನಾ ರಾಶಿಗೆ ಇಂದು ಬಹಳ ಒಳ್ಳೆಯ ದಿನ. ನಿಮ್ಮ ಕಾರ್ಯಕ್ಷೇತ್ರದ ಜವಾಬ್ದಾರಿಗಳು ಹೆಚ್ಚಾಗಿ ನಿಮಗೆ ಇಂದು ಎಲ್ಲರಿಗೂ ನೀವೇ ಬೇಕು ಎನ್ನುವ ರೀತಿಯಲ್ಲಿ ಎಲ್ಲಾ ಜವಾಬ್ದಾರಿ ಹೇರುತ್ತಿದ್ದಾರೆ ಎನ್ನುವ ರೀತಿಯಲ್ಲಿ ಭಾವನೆ ಬರಬಹುದು ಆದ್ರೂ ಕೂಡ ಚೆನ್ನಾಗಿ ನಿಭಾಯಿಸುತ್ತರಿ. ಶುಭದಿನ.

Leave a Reply

Your email address will not be published. Required fields are marked *