ಶುಕ್ರ ದೇವರು ಅಂದ್ರೆ ಸಕಲ ಸಂಪತ್ತನ್ನು ನೀಡುವವನು ಹಾಗು ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರದೆಸೆ ಇರುತ್ತದೆಯೋ ಅಂತಹ ವ್ಯಕ್ತಿಗೆ ಎಲ್ಲವು ಶುಭವಾಗುವುದು ಅಷ್ಟೇ ಅಲ್ಲದೆ ಆ ವ್ಯಕ್ತಿ ಮುಟ್ಟಿದಲ್ಲ ಚಿನ್ನವಾಗುವುದು ಅಂದ್ರೆ, ಮಾಡುವಂತ ಪ್ರತಿ ಕೆಲಸದಲ್ಲಿಯೂ ಯಶಸ್ಸು ಲಭಿಸುವುದು ಎಂದರ್ಥ.
ಶುಕ್ರ ದೇವನ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು ಗೊತ್ತಾ: ಕೆಲ ಪಂಡಿತರು ಹೇಳುವ ಪ್ರಕಾರ ಶುಕ್ರ ದೇವನ ಕೃಪೆ ನಮ್ಮ ಮೇಲಿರಲು ಬೆಳ್ಳಿಯ ಉಂಗುರಗಳನ್ನು ಕೈ ಬೆರಳುಗಳಿಗೆ ಧರಿಸಬೇಕಂತೆ, ಹಾಗು ಡಯಟ್ ಮಾಡುವ ಸಮಯದಲ್ಲಿ ಸಾಬೂದಾನ ಕಿಚಡಿ ಮಾಡಿ ಸೇವಿಸುವುದು ಹಾಗು ಹಾಲಿನ ಪದಾರ್ಥ ಸೇವಿಸುವುದರಿಂದಲೂ ಶುಕ್ರ ಬಲಾಢ್ಯನಾಗುತ್ತಾನೆ ಎಂಬುದನ್ನು ಹೇಳಲಾಗುತ್ತದೆ.
ಅಷ್ಟೇ ಅಲ್ಲದೆ ಪ್ರತಿದಿನ ಧ್ಯಾನ ಮಾಡುವುದು ಹಾಗು ಪ್ರಶಾಂತ ವಾತಾವರಣದಲ್ಲಿ ಸಂಗೀತವನ್ನು ಆಲಿಸುವುದು ಕೊಳಲು, ಸಿತಾರ್ ವಾದ್ಯಗಳನ್ನು ಕೇಳುವುದರಿಂದ ಶುಕ್ರನ ಕೃಪೆ ನಿಮ್ಮ ಮೇಲಿರುತ್ತದೆ. ಹಾಗು ಪ್ರತಿ ಶುಕ್ರವಾರ ಉಪ್ಪು ಸೇವಿಸಬಾರದು ಪತಿ ಪತ್ನಿ ಪರಸ್ಪರರನ್ನು ಗೌರವಿಸಿ, ಸಂಗಾತಿಯ ಜೊತೆಗೆ ಸಮಯ ಕಳೆಯುವುದರಿಂದ ಶುಕ್ರದೇವನ ಕೃಪೆ ನಿಮ್ಮ ಮೇಲಿರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.