ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾಯಿವವರ ಸಂಖ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಒತ್ತಡ ಜೀವನದ ಕ್ರಮಗಳೇ ಕಾರಣವೆಂದು ಹಲವರು ಹೇಳಿದರು ಇನ್ನು ವಾತಾವರಣದಲ್ಲಿ ಆಗುವ ಕೆಲವು ಬದಲಾವಣೆಗಳಿಂದ ಕೂಡ ಹೃದಯಾಘಾತ ಕಂಡು ಬರಬಹುದು ಇದಕ್ಕೆ ಮುಂಚಿತವಾಗಿ ಒಂದು ತಿಂಗಳ ಮೊದಲೇ ಕೆಲವೊಂದು ಸೂಚನೆಗಳು ಅಥವಾ ಲಕ್ಷಣಗಳು ಕಂಡು ಬರುತ್ತೇವೆ. ಎಂದು ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯಲ್ಲ ಎಂದು ಹೇಳಿದೆ. ಇನ್ನೂ ಹೃದಯಾಘಾತದಲ್ಲಿ ಸೂಚಿಸಿದಂತೆ ರೋಗಿಗಳು ಮುನ್ನೆಚ್ಚರಿಕೆ ವಹಿಸಿದರೆ ಅದೇ ಸೂಕ್ತವಾದ ಚಿಕಿತ್ಸೆ ಎಂದು ತಿಳಿಸಿದೆ. ಹಾಗಾದ್ರೆ ಯಾವ ರೀತಿಯಲ್ಲಿ ಮುನ್ಸೂಚನೆ ಕಂಡು ಬರುತ್ತೇವೆ ಎನ್ನುವುದು ಇಲ್ಲಿವೆ ನೋಡಿ.
ನಿಶ್ಯಕ್ತಿ ಕಾಡುವುದು: ಹೊಟ್ಟೆಗೆ ಬೇಕಾದದ್ದನ್ನೆಲ್ಲ ತಿಂದು ಗಟ್ಟಿ ಮುಟ್ಟಾಗಿರುವವರಿಗೆ ಒಮ್ಮೆಲೇ ನಿಶ್ಯಕ್ತಿ ತಾಣ ಕಾಡುತ್ತಿರುವುದು ಸಾಮಾನ್ಯ ಕಾರಣವಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ದೈಹಿಕ ಅಥವಾ ಮಾನಸಿಕ ಚಟುವಟಿಕೆಯು ಆಯಾಸಕ್ಕೆ ನಿಶ್ಯಕ್ತಿಗೆ ಕಾರಣವಲ್ಲ, ಮತ್ತು ಇದು ದಿನದ ಕೊನೆಯಲ್ಲಿ ಹೆಚ್ಚಾಗುತ್ತದೆ. ಈ ರೋಗಲಕ್ಷಣವು ತುಂಬಾ ಸ್ಪಷ್ಟವಾಗಿ ತೊಂದರೆ ನೀಡುತ್ತೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಈ ರೀತಿಯ ಸೂಚನೆಗಳು ಕಂಡು ಬಂದರೆ ವೈದ್ಯರನ್ನು ಕಾಣಿ.
ಒಮ್ಮೆಲೇ ಬೆವರುವುದು: ಸುಸ್ತಾಗಿ ಬೆವರುವುದು ಬೇರೆ ಆರಾಮಾಗಿದ್ದವರು ಬೆವರುವುದು ಬೇರೆ. ನೀವು ಆರಾಮಾಗಿ ಕುಳಿತಾಗ ಒಮ್ಮೆಲೇ ಜೋರಾಗಿ ಬೆವರುವುದು ಹೃದಯಾಘಾತ ಆಗುವ ಮತ್ತೊಂದು ಪ್ರಮುಖ ಲಕ್ಷಣ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯರಿ.
ಕಿಬ್ಬೊಟ್ಟೆಯ ನೋವು: ಹೃದಯಾಘಾತಕ್ಕೆ ಮುಂಚಿತವಾಗಿ ಕಂಡು ಬರುವ ಪ್ರಮುಖ್ಯ ಸೂಚನೆಗಳಲ್ಲಿ ಕಿಬ್ಬೊಟ್ಟೆಯ ನೋವು ಮುಖ್ಯವಾಗಿದೆ. ಈ ನೋವು ಕಂಡು ಬಂದರೆ ಉಪರಿತವಾದ ನೋವು, ವಾಕರಿಕೆ, ಹೊಟ್ಟೆ ಉಬ್ಬಿದಂತೆ ಆಗುವುದು. ಒಂದು ವೇಳೆ ಹಸಿವು ಇಲ್ಲದಂತೆ ಆಗುತ್ತೆ, ಹಸಿವು ಇದ್ದರು ಊಟ ಮಾಡಲು ಆಗುವುದಿಲ್ಲ ಅಂತಹ ಅನುಭವಗಳು ಕಂಡು ಬಂದರೆ ಹೃದಯಾಘಾತದ ಸೂಚನೆಗಳು ಎಂದು ತಿಳಿಯರಿ.
ನಿದ್ರಾಹೀನತೆ: ನಿದ್ರಾಹೀನತೆಯು ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ, ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿದೆ. ಇದರಿಂದ ಇತರೆ ಹಲವು ಮಾನಸಿಕ ತೊಂದರೆಗಳು ಕೂಡ ಕಂಡು ಬರುತ್ತೇವೆ. ಮುಖ್ಯವಾಗಿ ಹೃದಯಾಘಾತದ ಸೂಚನೆ ಎಂದು ತಿಳಿಯಬೇಕು.
ಉಸಿರಾಟದಲ್ಲಿ ತೊಂದರೆ: ನಿಮ್ಮ ಎದೆಯ ಭಾಗದಲ್ಲಿ ತೀವ್ರ ತೊಂದರೆ ವುಂಟಾದರೆ ಉಸುರಾಡುವುದೇ ಕಷ್ಟ ಅನಿಸುತ್ತೆ, ಕೆಲವರು ಕೆಲಸ ಮಾಡಿ ಸುಸ್ತಾಗಿರುವುದಕ್ಕೆ ಈ ರೀತಿಯಾಗಿರಬಹುದು ಎಂದು ನಿರ್ಲಕ್ಷಿಸುವುದುಂಟು ಇದನ್ನು ಯಾವತ್ತು ನಿರ್ಲಕ್ಷಿಸಬೇಡಿ ಕೂಡಲೇ ಆಸ್ಪತ್ರೆ ಹೋಗಿ ಚಿಕಿತ್ಸೆ ಪಡೆಯರಿ.
ಕೂದಲು ಉದುರುವುದು: ಹೃದಯಾಘಾತಕ್ಕೆ ಸೂಚನೆಗಳಲ್ಲಿ ಕೂದಲು ಉದುರುವುದು ಕೂಡ ಮುಖ್ಯವಾಗಿದೆ. ಇದು ಸಾಮಾನ್ಯವಾಗಿ 50 ರಷ್ಟು ಪುರುಷರಲ್ಲಿ ಕಂಡು ಬರುತ್ತದೆ. ಇದರಲ್ಲಿ ಕೆಲವೊಂದು ಮಹಿಳೆಯರು ಕೂಡ ಕಂಡು ಬರುತ್ತಾರೆ. ಏಕೆಂದರೆ ಮಾನುಷ್ಯನ ಆಳವಾದ ಯೋಚನೆಗಳು ತಮ್ಮ ಜೀವನದ ಮೇಲೆ ಪರಿಣಾಮ ಬೀರಿ ಅದೇ ಒತ್ತಡ ತಲೆ ಕೂದಲು ಉದುರಲು ಕಾರಣವಾಗುತ್ತೆ ಕೂದಲಿಗೆ ನೀಡಿದ ಒತ್ತಡ ಹೃದಯದ ಮೇಲೆ ಕಂಡು ಬರುತ್ತೆ, ಆದರಿಂದ ವಿಪರೀತ ಕೂದಲು ಉದುರಿದರೆ ಅದು ಹೃದಯಾಘಾತ ಎಂದು ಸೂಚಿಸುತ್ತೆ.
ಒಮ್ಮೆಲೇ ಬೆವರುವುದು: ಸುಸ್ತಾಗಿ ಬೆವರುವುದು ಬೇರೆ ಆರಾಮಾಗಿದ್ದವರು ಬೆವರುವುದು ಬೇರೆ. ನೀವು ಆರಾಮಾಗಿ ಕುಳಿತಾಗ ಒಮ್ಮೆಲೇ ಜೋರಾಗಿ ಬೆವರುವುದು ಹೃದಯಾಘಾತ ಆಗುವ ಮತ್ತೊಂದು ಪ್ರಮುಖ ಲಕ್ಷಣ.
ಅನಿಯಮಿತ ಹೃದಯ ಬಡಿತ: ಸ್ಕಿಪ್ಡ್ ಬೀಟ್ಸ್ ಅಥವಾ ಆರ್ರಿತ್ಮಿಯಾಗಳು ಸಾಮಾನ್ಯವಾಗಿ ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕ ಸೃಷ್ಟಿಸುತ್ತೇವೆ. ವಿಶೇಷವಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ. ಒಂದೇ ರೀತಿಯ ಭಯ ಮತ್ತು ಹೃದಯ ಬಡಿತ ಕಂಡು ಬರುತ್ತದೆ. ಹೀಗೆನಾದರು ಕಂಡು ಬಂದರೆ ತಕ್ಷಣ ವ್ಯದ್ಯರನ್ನು ಕಾಣುವುದು ಒಳ್ಳೆಯದು. ಅದಕ್ಕೆ ಬೇರೆ ಏನಾದರು ಯೋಚನೆ ಮಾಡಿ ಅಲಕ್ಷಿಸುವುದು ಹೃದಯ ಆಘಾತಕ್ಕೆ ಕಾರಣವಾಗುತ್ತೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.