ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ನೀರಾ ಪಾನೀಯ ನೀರಾ ಆರೋಗ್ಯಕರ ಪೇಯ. ಕೊಲೆಸ್ಟ್ರಾಲ್ ಮುಕ್ತ, ಮಧುಮೇಹ ನಿಯಂತ್ರಕ, ಮೂಳೆಗಳ ಸದೃಢತೆ, ಕಣ್ಣಿನ ಆರೋಗ್ಯಕ್ಕೆ ಹಿತಕರ ಎಂಬ ಸದಾಭಿಪ್ರಾಯಗಳನ್ನು ವೈದ್ಯರು ದೃಢಪಡಿಸಿದ್ದಾರೆ. ಅದಕ್ಕಾಗಿಯೇ ನೀರಾ ರುಚಿ ಒಮ್ಮೆ ನೋಡಿದವರು ಮತ್ತೆ ಕುಡಿಯಲು ಇಷ್ಟ ಪಡುತ್ತಾರೆ. ನೀರಾವನ್ನು ಸಾಮಾನ್ಯವಾಗಿ ಪುರುಷರು ಮಾತ್ರವಲ್ಲ ಮಹಿಳೆಯರೂ ಇಷ್ಟಪಡುತ್ತಾರೆ. ಆಗಷ್ಟೇ ತೆಂಗಿನ ಮರದಿಂದ ಇಳಿಸಿದ ನೀರಾ ಕುಡಿಯಲು ರುಚಿಯಾಗಿರುತ್ತದೆ. ಆರೋಗ್ಯಕ್ಕೆ ಅಂತು ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಏನಿದು ನೀರಾ: ನೀರಾವನ್ನು ತೆಂಗಿನ ಮರ ಹಾಗೂ ಈಚಲು ಮರದಿಂದ ನೀರಾ ತೆಗೆಯಲಾಗುವುದು. ಬೆಳಗ್ಗೆ ಹೊತ್ತಿನಲ್ಲಿ ಇದನ್ನು ತೆಗೆಯಲಾಗುವುದು, ನೀರಾ ತೆಗೆದ ತಕ್ಷಣ ಕುಡಿದರೆ ಅದರಲ್ಲಿ ಯಾವುದೇ ಮದ್ಯದ ಅಂಶ ಇಲ್ಲದ ಕಾರಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಯುರ್ವೇದದಲ್ಲಿ ಔಷಧಿಯಾಗಿ ನೀರಾ ಬಳಕೆ ಮಾಡುತ್ತಾರೆ. ನೀರಾದಲ್ಲಿ ವಿಟಮಿನ್ ಸಿ, ಬಿ1, ಬಿ2, ಬಿ3 ಮತ್ತು ಬಿ6, ಸಕ್ಕರೆ, ಪ್ರೊಟೀನ್, ಕಾರ್ಬೋಹೈಡ್ರೇಟ್ಸ್ ಮುಂತಾದ ಅಂಶಗಳಿವೆ. ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಬಳಸಲಾಗುವುದು.
ನೀರಾ ಕುಡಿದರೆ ನಶೆ ಆಗುತ್ತಾ: ನೀರಾ ಕುಡಿದರೆ ಕಿಕ್ ಕೂಡ ಹತ್ತುವುದಿಲ್ಲ, ಆದರೆ ನೀರಾ ತುಂಬಾ ಹೊತ್ತು ಇಟ್ಟು ಕುಡಿದರೆ ನಶೆ ಏರುತ್ತದೆ. ನೀರಾ ನಶೆ ಏರಿಸುವ ವಸ್ತುವೇ ಅಗಿದ್ದರೂ ಹೆಂಡದಂತೆ ಆರೋಗ್ಯಕ್ಕೆ ಅಪಾಯಕಾರಿಯಾದ ವಸ್ತುವಲ್ಲ. ಇದನ್ನು ಕುಡಿಯುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ನೀರ ಇತರ ಮದ್ಯದ ರೀತಿ ಅಲ್ಲ, ಊರು ಕಡೆ ಸಿಗುತ್ತಿದ್ದ ನೀರಾ ಇದೀಗ ಬೆಂಗಳೂರಿನಲ್ಲಿ ಸಿಗುತ್ತಿದ್ದು, ಇದಕ್ಕೆ ಉತ್ತಮ ಬೇಡಿಕೆಯಿದೆ. ನೀರಾವನ್ನು ಕೆಲವರು ಮದ್ಯವೆಂದು ದೂರವಿಡುತ್ತಾರೆ. ನೀರಾ ಕುಡಿದರೆ ಕಿಕ್ ಆಗುವುದು, ಆದರೆ ಇದು ಮದ್ಯದ ರೀತಿಯಲ್ಲಿ ಸ್ಪಿರಿಟ್ ಅಲ್ಲ. ಇದರಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ.
ರೈತರಿಗೆ ವರವಾಗುತ್ತಾ ನೀರಾ: ಕೋಕನಟ್ ಫೆಡರೇಷನ್‌ಗಳ ಮೂಲಕ ಸರಕಾರ ನೀರಾ ಘಟಕಗಳನ್ನು ಉತ್ತೇಜಿಸಿ 2017ರಲ್ಲಿ 3 ಕೋಟಿ ರೂ. ಅನುದಾನ ಘೋಷಿಸಿತು. ಅದರ ಅನ್ವಯ, ತೋಟಗಾರಿಕೆ ಇಲಾಖೆಯ ಅನ್ವಯ ಆಸಕ್ತರಿಗೆ ತರಬೇತಿ ನೀಡುವುದು, ನೀರಾ ಸಂಸ್ಕರಣಾ ಘಟಕ ಸ್ಥಾಪಿಸಲು ರಾಜ್ಯ ಸರಕಾರದಿಂದ ಒಟ್ಟು ಘಟಕ ವೆಚ್ಚದ ಶೇ. 25% ಅಂದರೆ ಗರಿಷ್ಠ 50 ಲಕ್ಷ ರೂ. ಮೀರದಂತೆ ಸಹಾಯಧನ ನೀಡುವುದಾಗಿ ಪ್ರಕಟಿಸಿತು. ತಾಂತ್ರಿಕ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಜಿಲ್ಲಾ ಮತ್ತು ರಾಜ್ಯ ಸಮಿತಿಗಳನ್ನು ನೇಮಿಸಿತು. ಇದರ ಅನ್ವಯ ಸಿಪಿಸಿ ನೀರಾ ಸಂಸ್ಕರಣಾ ಘಟಕ ಸ್ಥಾಪಿಸಲು ಅಬಕಾರಿ ಇಲಾಖೆಯಿಂದ ಪ್ರಾಥಮಿಕ ಹಂತದ ಅನುಮತಿ ಪತ್ರ, ಪಡೆದುಕೊಂಡು ತಯಾರಿಸಬೇಕು. ಪ್ರಸ್ತುತ ಈ ಎಲ್ಲಾ ನಿಯಮಾವಳಿಗಳು ಸರಕಾರಿ ಸುತ್ತೋಲೆಯಲ್ಲಿ ಇವೆಯೇ ಹೊರತು ಜಾರಿಗೊಂಡಿಲ್ಲ.
ನೀರಾದ ಪ್ರಯೋಜನಗಳು: ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಮಾಡುವುದು. ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಎದೆ ಹಾಲುಣಿಸುವ ತಾಯಂದಿರಿಗೂ ಒಳ್ಳೆಯದು. ಎದೆ ಹಾಲುಣಿಸುವ ತಾಯಂದಿರಿಗೂ ಒಳ್ಳೆಯದು.ಎದೆ ಹಾಲು ಹೆಚ್ಚಾಗುವುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.