ನಿಮ್ಮ ಕುತ್ತಿಗೆ ಕಪ್ಪಾಗಿದೆಯೇ ಚರ್ಮದ ಅಸಹ್ಯವಾದ ಕಪ್ಪು ತೇಪೆಗಳು ನಿಮಗೆ ಬೇಸರ ಉಂಟು ಮಾಡುತ್ತಿದೆಯೇ. ಹಾರ್ಮೋನುಗಳ ಅಸಮತೋಲನ, ಬೊಜ್ಜು, ಟೈಪ್ 2 ಡಯಾಬಿಟಿಸ್ ಮಾತ್ರೆಗಳ ಬಳಕೆಯಿಂದಲೂ ಕುತ್ತಿಗೆಯ ಮೇಲೆ ಚರ್ಮವು ಕಪ್ಪಾಗಲು ಕಾರಣವಾಗಬಹುದು. ಅಪರೂಪದ ಸಂದರ್ಭಗಳಲ್ಲಿ, ಡಾರ್ಕ್ ನೆಕ್ ಪ್ಯಾಚ್’ಗಳು ಕ್ಯಾನ್ಸರ್ ಅನ್ನು ಸಹ ಸೂಚಿಸಬಹುದು.
ಕೆಲವು ಆವಕಾಡೊವನ್ನು ಮ್ಯಾಶ್ ಮಾಡಿ. ಇದನ್ನು ನಿಮ್ಮ ಕುತ್ತಿಗೆಯಲ್ಲಿ ಕಪ್ಪಾದ ಭಾಗಗಳಲ್ಲಿ ಹಚ್ಚಿ.ಇದು ನಿಮ್ಮ ಚರ್ಮದಲ್ಲಿನ ಮೆಲಾನಿನ್ ಮಟ್ಟವನ್ನು ಹೆಚ್ಚಿಸಿ, ಚರ್ಮ ಬೆಳ್ಳಗಾಗುವಂತೆ ಮಾಡುತ್ತದೆ.
ದ್ರಾಕ್ಷಿ ಬೀಜದ ಎಣ್ಣೆಯನ್ನು ಹಚ್ಚಿದರೆ, ನಿಮ್ಮ ಕುತ್ತಿಗೆಯ ಮೇಲೆ ಹಚ್ಚುತ್ತಿರಿ. ಈ ದ್ರಾಕ್ಷಿ ಬೀಜದ ಎಣ್ಣೆ ಲಿನೋಲಿಕ್ ಆಮ್ಲದ ಸಮೃದ್ಧ ಮೂಲವಾಗಿದೆ. ಸಂಶೋಧನೆಯ ಪ್ರಕಾರ, ಹೈಪರ್ಪಿಗ್ಮೆಂಟೇಶನ್ ಚಿಕಿತ್ಸೆಯಲ್ಲಿ ಲಿನೋಲಿಕ್ ಆಮ್ಲವು ಪರಿಣಾಮಕಾರಿಯಾಗಿದೆ.
ಲೈಕೋರೈಸ್ ಮಾಸ್ಕ್ ಬಳಸಿ. ಲೈಕೋರೈಸ್ ಪೌಡರ್ ಆಯುರ್ವೇದದ ಅಂಗಡಿಗಳಲ್ಲಿ ದೊರೆಯುತ್ತದೆ. ಇದನ್ನು ಮಾಸ್ಕ್ ರೀತಿ ತಯಾರಿಸಿಕೊಳ್ಳಲು, ಹಾಲಿನಲ್ಲಿ ಓಟ್ಸ್ ಸೇರಿಸಿ, ಬೇಯಿಸಿ. ಇದಕ್ಕೆ ಲಾಕೋರೈಸ್ ಪಾಜರ್ ಹಾಕಿ ಮಿಕ್ಸ್ ಮಾಡಿ. ಇದನ್ನು ಕಪ್ಪು ಕಲೆಗಳಿರುವ ಜಾಗದಲ್ಲಿ ಹಚ್ಚಿ, ಸ್ವಲ್ಪ ಸಮಯದ ನಂತರ ನೀರಿನಲ್ಲಿ ತೊಳೆಯಿರಿ. ಇದು ಒಣ ಚರ್ಮದ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಅಲೋವೆರಾ ಹೈಪರ್ಪಿಗ್ಮೆಂಟೇಶನ್ ಅನ್ನು ಎದುರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಆಲೋವೆರಾ ಎಲೆಯಾಗಿ ಕತ್ತರಿಸಿ ಒಳಗೆ ಜೆಲ್ ಅನ್ನು ಹೊರತೆಗೆಯಿರಿ. ಈ ಜೆಲ್ ಅನ್ನು ದಿನಕ್ಕೆ ಎರಡು ಬಾರಿ ಸುಮಾರು 30 ನಿಮಿಷಗಳ ಕಾಲ ನಿಮ್ಮ ಕುತ್ತಿಗೆಗೆ ಹಚ್ಚಿರಿ. ಸುಮಾರು 2 ವಾರಗಳಲ್ಲಿ ಸುಧಾರಣೆಯನ್ನು ನೋಡಬೇಕು.
ನಿಂಬೆ ರಸ ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ ಕಪ್ಪು ಚರ್ಮವನ್ನು ತೊಡೆದುಹಾಕಬಹುದು. ನಿಂಬೆ ರಸವು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದು ಮೆಲನಿನ್ ರಚನೆಯನ್ನು ತಡೆಯುತ್ತದೆ. ಅಡುಗೆ ಸೋಡಾ ನಿಮ್ಮ ಚರ್ಮದಲ್ಲಿನ ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ. ಸ್ವಲ್ಪ ಅಡಿಗೆ ಸೋಡಾವನ್ನು ಒಂದು ಚಮಚ ನಿಂಬೆ ರಸ ಮತ್ತು ಕೆಲವು ಹನಿ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಕುತ್ತಿಗೆಗೆ ಹಚ್ಚಿ. ಸುಮಾರು ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತೊಳೆಯಿರಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.