ರಾತ್ರಿ ಮಲಗುವಾಗ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತದೆ ಗೊತ್ತೇ?

ಆರೋಗ್ಯ

ನಮಸ್ತೆ ಆತ್ಮೀಯ ಪ್ರಿಯ ಮಿತ್ರರೇ,ನಮ್ಮ ದೇಹವು ಆರೋಗ್ಯವಾಗಿ ಇರಬೇಕೆಂದರೆ ನಾವು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಕೊಡಬೇಕು. ಆಗ ಮಾತ್ರವೇ ನಮ್ಮ ದೇಹವು ಯಾವುದೇ ಸಮಸ್ಯೆಗಳಿಗೆ ಒಳಗಾಗದೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಾವು ಉತ್ತಮವಾದ ಆಹಾರವನ್ನು ಸೇವಿಸಬೇಕು. ಉತ್ತಮವಾದ ಜೀವನ ಶೈಲಿಗೆ ಹಾಗು ಅರೋಗ್ಯಕ್ಕೆ ಪ್ರಥಮವಾಗಿ ಆಹಾರ ಅಂದರೆ ಅದು ನೀರು. ಇದರ ಬಗ್ಗೆ ವೈದ್ಯರು ಸಾಕಷ್ಟು ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾತ್ರಿ ಅನೈಚ್ಚಿಕ ಕಾರ್ಯಗಳು ಮುಗಿದ ಬಳಿಕ ಮರುದಿನ ಬೆಳಿಗ್ಗೆ ಐಚ್ಚಿಕ ಕಾರ್ಯಗಳು ಸುಗಮವಾಗಿ ನೆರವೇರಲು ನೀರು ಬಹಳ ಮುಖ್ಯವಾಗಿ ಬೇಕಾಗುತ್ತದೆ. ತಂಪಾದ ನೀರು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳಲು ಆಗುವುದಿಲ್ಲ ಆದರೆ ಉಗುರು ಬೆಚ್ಚಗಿನ ನೀರು ತಂಪಾದ ನೀರಿಗಿಂತ ನಮ್ಮ ದೇಹಕ್ಕೆ ಬಹಳ ಒಳ್ಳೆಯದು ಅಂತ ಹೇಳಬಹುದು.

 

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ಏನೆಲ್ಲ ಆಗುತ್ತದೆ ಗೊತ್ತೇ? ಸಾಮಾನ್ಯವಾಗಿ ನಾವೆಲ್ಲರೂ ಪ್ರಯಾಣ ಮಾಡುವಾಗ ನೀರನ್ನು ಕುಡಿದರೆ ಹಾಗೂ ರಾತ್ರಿ ಮಲಗುವ ಮುನ್ನ ನೀರು ಕುಡಿದರೆ ಮೂತ್ರ ವಿಸರ್ಜನೆ ಆಗುತ್ತದೆ ಎಂದು ಸುಮಾರು ಜನರು ನೀರು ಕುಡಿಯುವುದಿಲ್ಲ. ಆದರೆ ಇದು ಬಹಳ ಉತ್ತಮ ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರು ಕುಡಿಯುವುದು ಬಹಳ ಉತ್ತಮ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳು ಆಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಕೆಲವು ಸಂಶೋಧನೆ ಪ್ರಕಾರ, ರಾತ್ರಿ ವೇಳೆಯಲ್ಲಿ ದೇಹದಲ್ಲಿ ನೀರು ಕಡಿಮೆ ಆದರೆ ಮಾನಸಿಕ ಒತ್ತಡ ಖಿನ್ನತೆ ಹಾಗೂ ಅಸಮತೋಲನ ಶುರು ಆಗುತ್ತದೆ. ಅಷ್ಟೇ ಅಲ್ಲದೇ ನಿದ್ದೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ನೀವೇನಾದರೂ ಮಲಗುವ ಮುನ್ನ ಸರಿಯಾಗಿ ಉಗುರು ಬೆಚ್ಚಗಿನ ನೀರು ಕುಡಿದರೆ ಸಾಕು ನಿಜಕ್ಕೂ ಖಿನ್ನತೆ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಹಾಗೂ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುವಂತೆ ಸಹಾಯ ಮಾಡುತ್ತವೆ ಮತ್ತು ಮಾನಸಿಕ ಕಲರವ ಎಲ್ಲವೂ ಕಳೆದು ಹೋಗುತ್ತದೆ. ದೇಹದಲ್ಲಿ ಆಗುವ ಕಾರ್ಯಗಳನ್ನು ಅಂದ್ರೆ ಮಲ ಮೂತ್ರ ವಿಸರ್ಜನೆ ಬೆವರು ಮೊದಲಾದ ಕಲ್ಮಶಗಳನ್ನು ಹೊರಗೆ ಹಾಕುತ್ತದೆ.

 

ಒಂದು ಲೋಟ ಉಗುರು ಬೆಚ್ಚಗಿನ ನೀರು ರಾತ್ರಿ ಎಲ್ಲ ಕಾರ್ಯಗಳನ್ನು ಸುಗಮ ರೀತಿಯಲ್ಲಿ ನಡೆಯುವಂತೆ ಮಾಡುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕುತ್ತದೆ. ದೇಹದ ತಾಪಮಾನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಉಗುರು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಉಗುರು ಬೆಚ್ಚಗಿನ ನೀರು ರಕ್ತವನ್ನು ಶುದ್ಧೀಕರಿಸುತ್ತದೆ. ಹಾಗೂ ಬೇಡವಾದ ವಿಷಕಾರಿ ಕಲ್ಮಶಗಳನ್ನು ಬೆವರು ಮತ್ತು ಮೂತ್ರದ ಮೂಲಕ ಹೊರಗೆ ಹಾಕುತ್ತದೆ ರಾತ್ರಿ ಮಲಗುವಾಗ ಉಗುರು ಬೆಚ್ಚಗಿನ ನೀರು ಕುಡಿದು ಮಲಗಿದರೆ ಆಹಾರವೂ ಸರಿಯಾಗಿ ಜೀರ್ಣವಾಗುತ್ತದೆ ಹಾಗೂ ಬೇಗನೆ ತೂಕವನ್ನು ಕಮ್ಮಿ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಸಾಮಾನ್ಯವಾದ ನೀರಿಗಿಂತ ಬೆಚ್ಚಗಿನ ನೀರಿನಲ್ಲಿ ಆಹಾರವೂ ಬೇಗನೆ ಕರಗುತ್ತದೆ. ಹೀಗಾಗಿ ರಾತ್ರಿ ಮಲಗುವಾಗ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಹೀಗೆಂದು ವೈದ್ಯರು ಕೂಡ ಸಾಬೀತು ಪಡಿಸಿದ್ದಾರೆ. ಇವತ್ತಿನಿಂದಲೇ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *