ಯಾವ ವ್ಯಕ್ತಿ ತನ್ನ ಜೀವನದಲ್ಲಿ ಭೂಮಿ ಮತ್ತು ವಾಹನವನ್ನು ಖರೀದಿಸುವ ಯೋಗವಿದೆಯೇ ಗೊತ್ತಾ

ಜ್ಯೋತಿಷ್ಯ ಧಾರ್ಮಿಕ

ಪ್ರತಿಯೊಬ್ಬರಿಗೂ ಜೀವನದಲ್ಲಿ ಭೂಮಿ ಸ್ವಂತಕ್ಕೆ ಒಂದು ಮನೆ ಮತ್ತು ವಾಹನಗಳನ್ನು ಕರೀದಿಸಬೇಕು ಎನ್ನುವ ಹಾಸೆ ಇದ್ದೆ ಇರುತ್ತದೆ ಆದರೆ ಎಷ್ಟೇ ಕಷ್ಟ ಪಟ್ಟು ದುಡಿದರು ಇನ್ನೂ ಯೋಗವಿಲ್ಲ ಅಥವಾ ಎಲ್ಲಾ ಇದ್ದರು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಯೋಚಿಸುವಿರಿ.

ಜಾತಕದಲ್ಲಿ ಭೂಮಿ ವಾಹನಗಳ ಬಗ್ಗೆ ತಿಳಿಯಬೇಕೆಂದರೆ ಲಗ್ನದಿಂದ ನಾಲ್ಕನೇ ಮನೆಯನ್ನು ನೋಡಿದರೆ ಆ ವ್ಯಕ್ತಿಗೆ ಭೂಮಿ ವಾಹನ ಗಳನ್ನು ತೆಗೆದುಕೊಳ್ಳುವ ಯೋಗವಿದೆಯೋ ಇಲ್ಲವೋ ಯವಾಗ ಈ ಯೋಗ ಬರುವುದು ಎಂಬುದರ ಬಗ್ಗೆ ತಿಳಿಯಬಹುದು.

ಲಗ್ನದಿಂದ ಚತುರ್ಥ (ನಾಲ್ಕನೇ) ಮನೆಯಲ್ಲಿ ಯಾವ ಗ್ರಹಗಳಿದ್ದರೆ ಯಾರಿಗೆ ಭೂ ವಾಹನಗಳ ಲಾಭ
ಚತುರ್ಥದಲ್ಲಿ ರವಿ ಗ್ರಹವು ಶುಭನಾಗಿದ್ದರೆ ಆ ವ್ಯಕ್ತಿ ರಾಜನಂತೆ ಭೂಮಿ ವಾಹನಗಳ ವಿಚಾರದಲ್ಲಿ ಯೋಗವಂತನಾಗುತ್ತಾರೆ. ಚತುರ್ಥದಲ್ಲಿ ಚಂದ್ರ ಗ್ರಹವು ಶುಭನಾಗಿದ್ದು ವಾಹನಸೌಖ್ಯ, ಭೂಮಿಯಿಂದ ಒಳ್ಳೆಯ ಫಲ ಸಿಗುತ್ತದೆ.

ಚತುರ್ಥದಲ್ಲಿ ಕುಜನಿದ್ದರೆ ವಾಹನಗಳನ್ನು ತೆಗೆದುಕೊಂಡರು ಅದರಿಂದ ತೊಂದರೆಗಳೇ ಹೆಚ್ಚು ಅಪಘಾತ ಭೂಮಿಯಲ್ಲಿ ಬೆಳೆ ಬಂದರೂ ಕೈಹತ್ತುವುದಿಲ್ಲ. ಚತುರ್ಥದಲ್ಲಿ ಬುಧನಿದ್ದರೆ ಭೂಸಂಪಾದನೆ ಅನುಕೂಲವಾಗುತ್ತದೆ ವಾಹನಗಳಿಂದ ಲಾಭ. ಚತುರ್ಥದಲ್ಲಿ ಗುರುವಿದ್ದರೆ ವಾಹನಸೌಖ್ಯ ಭೂಮಿಯ ವಿಷಯದಲ್ಲಿ ಒಳ್ಳೆಯ ಲಾಭವಾಗುತ್ತದೆ.

ಚತುರ್ಥದಲ್ಲಿ ಶುಕ್ರನಿದ್ದರೆ ಅತಿಯಾದ ಭೂಮಿ ವಾಹನಗಳ ಲಾಭ ಮೇಲಿಂದ ಮೇಲೆ ಭೂ ವಾಹನ ಲಾಭ ಬರುವುದು. ಚತುರ್ಥದಲ್ಲಿ ಶನಿ ಇದ್ದರೆ ವಾಹನ ಭೂಮಿ ಗಳನ್ನು ಕಷ್ಟ ಪಟ್ಟು ತೆಗೆದುಕೊಳ್ಳುವರು ಆದರೆ ಅದರಿಂದ ತೊಂದರೆಗಳು ಹೆಚ್ಚು, ನಷ್ಟ. ಚತುರ್ಥದಲ್ಲಿ ರಾಹುವಿದ್ದರೆ ಭೂಮಿ ಮತ್ತು ವಾಹನಗಳಿಂದನೇ ನಷ್ಟ ಮನಸ್ಸಿಗೆ ಅಶಾಂತಿ ಬರುತ್ತದೆ.

ಚತುರ್ಥದಲ್ಲಿ ಕೇತುವಿದ್ದರೆ ವಾಹನ ಮತ್ತು ಭೂಮಿಯ ಸುಖ ಕಡಿಮೆ ಅಪಘಾತಗಳು, ಕಳ್ಳರಿಂದ ತೊಂದರೆಗಳು ಆಗಬಹುದು. ಕೇವಲ ಇಷ್ಟೆ ಅಲ್ಲದೇ ಗ್ರಹಗಳ ಉಚ್ಚಕ್ಷೇತ್ರ ನೀಚಕ್ಷೇತ್ರ, ಗ್ರಹಗಳ ಶತ್ರುತ್ವ ಮಿತ್ರತ್ವ ಶುಭ ಗ್ರಹಗಳ ದೃಷ್ಟಿಗಳನ್ನು ಜಾತಕದಲ್ಲಿ ನೋಡಿ ಭೂಮಿ ವಾಹನಗಳ ಲಾಭ ನಷ್ಟಗಳ ಬಗ್ಗೆ ತಿಳಿಯಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *