ಮನೆಯಲ್ಲಿ ಅಥವಾ ಕೆಲಸ ಮಾಡುವಂತ ಕಚೇರಿಯಲ್ಲಿ ನೆಗೆಟಿವ್ ಎನರ್ಜಿ ಬಂದಾಗ ಇದಕ್ಕೆ ಕಾರಣವೇನು ಅನ್ನೋದು ತಿಳಿಯುವುದಿಲ್ಲ, ಇದೇ ಕಾರಣವೆಂದು ಹೇಳೋದು ಕಷ್ಟ, ಯಾವುದೋ ನೆಗಟಿವ್ ಎನರ್ಜಿ ಮನೆ ಅಥವಾ ಕಚೇರಿಯಲ್ಲಿದೆ ಎನ್ನಲಾಗುತ್ತದೆ.
ಮನೆಯಲ್ಲಿರುವ ಕರ್ಟನ್, ಬಟ್ಟೆಗಳು ಹಾಗೂ ಜನರಲ್ಲಿಯೂ ಈ ಋಣಾತ್ಮಕ ಶಕ್ತಿ ಅಡಗಿ ಕುಳಿತಿರಬಹುದು. ಅದು ಹೇಗೆ, ಏಕೆ ಬರುತ್ತೆ ಎನ್ನೋ ಕಾರಣ ಹುಡುಕೋಕೆ ಆಗೋಲ್ಲ. ಆದರೆ, ಮನೆಯಲ್ಲಿ ಸೇರಿಕೊಂಡ ಬೇಡದ ಪ್ರಭಾವಗಳನ್ನು ಆಗಾಗ ತೆಗೆದು ಹಾಕಬೇಕು. ಆಗ ಮಾತ್ರ ಮನೆ ಮಂದಿ ಸಾಮರಸ್ಯದಿಂದ ಬಾಳೋದು ಸಾಧ್ಯ.
ಮನೆಯಲ್ಲಿನ ಕೆಟ್ಟ ಲಹರಿಗಳನ್ನು ಹಾಗು ದುಷ್ಟ ಶಕ್ತಿಗಳನ್ನು ನಿವಾರಿಸಲು ಹಲವು ಬಗೆಯ ಪ್ರಯತ್ನಗಳನ್ನು ಮಾಡುತ್ತೇವೆ ಆದ್ರೆ ಅವೆಲ್ಲವುದಕ್ಕಿಂತ ಮಿಗಿಲಾಗಿ ಹರಳುಪ್ಪಿನ ಹೊಗೆ ಹಾಕೋದ್ರಿಂದ ಮನೆಯಲ್ಲಿ ಧನಾತ್ಮಕ ಪ್ರಭಾವನ್ನು ಸೃಷ್ಟಿಸಬಹುದು. ಆದರೆ, ಈ ಹೊಗೆ ಹಾಕುವಾಗ ತುಸು ಕೇರ್‌ಫುಲ್ ಆಗಿರೋದು ಅಗತ್ಯ.
ಹೌದು ಮನೆಯಲ್ಲಿ ಅರಳುಪ್ಪಿನ ಹೋಗೆ ಹಾಕುವಾಗ ತುಂಬಾನೇ ಎಚ್ಚರವಹಿಸಬೇಕು ಅದು ಹೇಗೆ ಅನ್ನೋದನ್ನ ತಿಳಿಸುತ್ತೇವೆ ನೋಡಿ, ಕೈ ಸುಡದಂಥ ಪಾತ್ರೆ ಹಿಡಿದು, ಮನೆ ಪೂರ್ತಿ ಹೊಗೆ ಆವರಿಸುವಂತೆ ಹೊಗೆ ಹಾಕಿದರೊಳಿತು. ಜ್ವಾಲೆ ಹೆಚ್ಚಾಗದಂತೆ ಗಮನ ಹರಿಸಿ.
ಹೊಗೆಯನ್ನು ಮನೆ ತುಂಬಾ ಪಸರಿಸುವಂತೆ ಮಾಡಿ ನಂತರ ಹೋಗೆ ಹಾಕಿದಂತ ಉಪ್ಪನ್ನು ಬಚ್ಚಲು ಮನೆಯಲ್ಲಿ ಅಥವಾ ಟಾಯ್ಲೆಟ್ ಹಾಕಬೇಕು, ಫ್ಲಷ್ ಮಾಡೋ ಮೂಲಕ ಋಣಾತ್ಮಕ ಶಕ್ತಿಯನ್ನು ಹೊರ ಹಾಕಬೇಕು. ಈ ಪ್ರಕ್ರಿಯೆಯಿಂದ ತಕ್ಷಣವೇ ಮನೆಯಲ್ಲಿದ್ದ ನೆಗಟಿವ್ ಪ್ರಭಾವ ಕಡಿಮೆಯಾಗುವ ಅಂಶ ನಿಮಗೆ ಕಂಡುಬರುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.