ಪುರುಷರೇ ಎಚ್ಚರ ನಿಮಗೂ ಈ ಸಮಸ್ಯೆಗಳು ಇದ್ದರೆ ಅಪ್ಪಿತಪ್ಪಿಯೂ ಇವುಗಳನ್ನು ನಿರ್ಲಕ್ಷಿಸಬೇಡಿ

ಆರೋಗ್ಯ

ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವ ಅರೋಗ್ಯ ಸಮಸ್ಯೆಗಳು ಜೀವನದಲ್ಲಿ ಕಿರೀಕಿರಿ ತರುತ್ತೇವೆ ಅದರಂತೆ, ಪುರುಷರಲ್ಲಿ ಕೆಲವು ಅರೋಗ್ಯ ಸಮಸ್ಯೆಗಳು ಕಾಡುತ್ತೇವೆ ಏಕೆಂದರೆ, ಹೆಚ್ಚು ಹವ್ಯಾಸವನ್ನು ರೂಡಿಸಿಕೊಂಡ ಪುರುಷರು ಇಂತಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತೆ. ಕೆಲವು ಸಮಸ್ಯೆಗಳು ಅಂತು ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡು ಬಂದರು ದೊಡ್ಡ ಪರಿಣಾಮವನ್ನೇ ಬಿರುತ್ತೇವೆ. ಅಷ್ಟೇಅಲ್ಲದೆ ಅಂತಹ ಪುರುಷರಿಗೆ ಆರೋಗ್ಯದ ಸಮಸ್ಯೆಯಿಂದ ಏನಾದರೂ ಹೆಚ್ಚು ಕಡಿಮೆಯಾದರೇ, ಅವರೊಬ್ಬರಿಗೆ ಮಾತ್ರವಲ್ಲ ಅವರ ಇಡೀ ಕುಟುಂಬವೇ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ಬರುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ.

ಪುರುಷರಿಗೆ ಬರುವ ಆರೋಗ್ಯ ಸಮಸ್ಯೆಗಳು ಇಲ್ಲಿವೆ ನೋಡಿ: ಹೃದ್ರೋಗ ಸಮಸ್ಯೆಗಳು ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ ಪ್ರತಿ ಮೂರು ಪುರುಷರಲ್ಲಿ ಒಬ್ಬರಿಗೆ ಹೃದ್ರೋಗ ಸಮಸ್ಯೆ ಇರುತ್ತದೆಯಂತೆ. ಅಂದಾಜು 2.8 ಮಿಲಿಯನ್ ಪುರುಷರು ಹೃದಯಾಘಾತದ ಅನುಭವವನ್ನು ಪಡೆದಿದ್ದಾರಂತೆ ಹಾಗೂ ಅಧಿಕ ರಕ್ತದೊತ್ತಡದ ಅನುಭವವು ಯುವಕರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಆಗಾಗ ನಿಯಮಿತವಾಗಿ ಹೃದಯದ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ನಿಮ್ಮನ್ನು ನೀವು ಈ ಸಮಸ್ಯೆಯಿಂದ ಕಾಪಾಡಿಕೊಳ್ಳಬಹುದು.

ಶ್ವಾಸಕೋಶದ ಸಮಸ್ಯೆಗಳು: ಬಹುತೇಕ ಗಂಡಸರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಅಮೇರಿಕನ್ ಲಂಗ್ ಅಸೋಸಿಯೇಶನ್ ತಿಳಿಸಿದೆ. ಇದಕ್ಕೆ ಧೂಮಪಾನವೇ ಪ್ರಮುಖ ಕಾರಣವಾದರೂ, ಧೂಮಪಾನ ಮತ್ತು ಕಲುಷಿತ ಗಾಳಿ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಇರುವ ಕಾರಣ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಮೂತ್ರನಾಳದ ಸೋಂಕು: ಮೂತ್ರನಾಳದ ಸೋಂಕುಗಳು ಪುರುಷರಲ್ಲಿ ಅಪರೂಪವಾಗಿದ್ದರೂ,ಅವು ತಗುಲಿದಾಗ ಸಾಕಷ್ಟು ಗಂಭೀರವಾಗಿರುತ್ತವೆ. ಇವು ಸಾಮಾನ್ಯವಾಗಿ ಪ್ರಮುಖ ಮೂತ್ರಪಿಂಡ ಸಮಸ್ಯೆಗಳನ್ನು ಸೂಚಿಸುತ್ತವೆ. ಬ್ಯಾಕ್ಟೀರಿಯಾಗಳು ಮೂತ್ರ ವಿಸರ್ಜನಾ ನಾಳವನ್ನು ಪ್ರವೇಶಿಸಿ ಮತ್ತು ಬಳಿಕ ಮೂತ್ರಪಿಂಡಕ್ಕೆ ಸಾಗಿದಾಗ ಈ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಪದೇ ಪದೇ ಮೂತ್ರವಿಸರ್ಜನೆಯ ಅವಸರದಂತಹ ಮೂತ್ರಸಂಬಂಧಿ ತೊಂದರೆಗಳು ಮಧುಮೇಹದ ಸಾಮಾನ್ಯ ಲಕ್ಷಣಗಳಾಗಿವೆ.

ತಲೆಗೂದಲು ಉದುರುವಿಕೆ: ತಲೆಗೂದಲು ಉದುರುವುದು ಮಧ್ಯವಯಸ್ಕ ಪುರುಷರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ತೀವ್ರ ಮಾನಸಿಕ ಒತ್ತಡಗಳಲ್ಲಿರುವ ಅಥವಾ ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪುರುಷರಲ್ಲಿ ತಲೆಗೂದಲು ಕಡಿಮೆಯಾಗಬಹುದು. ಇದರ ಜೊತೆಗೆ ತಲೆಗೂದಲು ಉದುರುವುದು ಚರ್ಮಕ್ಷಯದಂತಹ ಸ್ವರಕ್ಷಿತ ಕಾಯಿಲೆಗಳು ಮತ್ತು ಸಿಫಿಲಿಸ್‌ನಂತಹ ಸೋಂಕು ರೋಗಗಳು ಹಾಗೂ ಥೈರಾಯ್ಡಿ ಸಮಸ್ಯೆಗಳಂತಹ ಹೆಚ್ಚು ಗಂಭೀರ ವೈದ್ಯಕೀಯ ಸ್ಥಿತಿಗಳ ಎಚ್ಚರಿಕೆಯ ಸಂಕೇತವೂ ಆಗಿದೆ.

ಖಿನ್ನತೆ ಮತ್ತು ಆತ್ಮಹತ್ಯೆ: ಪುರುಷರು ಮಹಿಳೆಯರಿಗಿಂತ ಭಿನ್ನವಾಗಿ ಖಿನ್ನತೆಯನ್ನು ಅನುಭವಿಸುತ್ತಾರೆ. ಇವರು ಸುಸ್ತು ಮತ್ತು ಕಿರಿಕಿರಿ ಸಮಸ್ಯೆಗಳು ನಮ್ಮನ್ನು ಹೆಚ್ಚು ಕಾಡುತ್ತವೆ ಎಂದು ದೂರುತ್ತಾರೆ. ಇನ್ನೂ ಒಂದು ದೊಡ್ಡ ಸಮಸ್ಯೆಯೇನೆಂದರೆ, ಇವರು ತಮಗೆ ಇರುವ ಸಮಸ್ಯೆಗಳನ್ನು ಬಹುತೇಕ ಸಂದರ್ಭದಲ್ಲಿ ಹೇಳಿಕೊಳ್ಳುವುದಿಲ್ಲ. ಆದರೂ ಹೆಂಗಸರು ಆತ್ಮ-ಹತ್ಯೆಗೆ ಅತಿ ಹೆಚ್ಚು ಬಾರಿ ಪ್ರಯತ್ನ ಪಡುತ್ತಾರೆ. ಆದರೆ ಪುರುಷರು, ಆತ್ಮ-ಹತ್ಯೆ ಮಾಡಿಕೊಂಡು ಸಾಯುವುದು ಹೆಚ್ಚು.

ಒತ್ತಡ: ನೀವು ಖುಷಿ ಪಡುತ್ತಿದ್ದ ವಿಷಯಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದರೆ ಅಥವಾ ತೀವ್ರ ವಿಷಾದದ ಭಾವನೆಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಮಾನಸಿಕ ಒತ್ತಡವು ಭಾವನಾತ್ಮಕವಾಗಿ ಅಲ್ಲ, ದೈಹಿಕವಾಗಿಯೂ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ, ಹೃದ್ರೋಗಗಳು,ಅಸ್ತಮಾ,ಮಧುಮೇಹ,ಜಠರಗರುಳಿನ ಸಮಸ್ಯೆಗಳು ಮತ್ತು ಅಲ್ಝೀಮರ್ಸ್ ಕಾಯಿಲೆ ಇವು ಒತ್ತಡಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ರೋಗಗಳಾಗಿವೆ.

ಮಚ್ಚೆಗಳು: ಮಚ್ಚೆಗಳು ಚರ್ಮದ ಮೇಲಿನ ಕಂದು ಅಥವಾ ಕಪ್ಪು ಬಣ್ಣದ ಬೆಳವಣಿಗೆಗಳಾಗಿದ್ದು, ಹೆಚ್ಚಾಗಿ ನಿರಪಾಯಕಾರಿಯಾಗಿರುತ್ತವೆ. ಹೆಚ್ಚಿನ ಮಚ್ಚೆಗಳು ಬಾಲ್ಯದಲ್ಲಿ ಮತ್ತು ವ್ಯಕ್ತಿಯ ಬದುಕಿನ ಮೊದಲ 20 ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮಚ್ಚೆಗಳು ಕ್ಯಾನ್ಸರ್‌ನ ಲಕ್ಷಣಗಳೂ ಆಗಬಹುದು. ಮಚ್ಚೆಗಳಿದ್ದಾಗ ಚರ್ಮ ಕ್ಯಾನ್ಸರ್‌ನ ಗಂಭೀರ ರೂಪವಾಗಿರುವ ಮೆಲನೋಮಾ(ಚರ್ಮಕೋಶಗಳಲ್ಲಿ ಗಂತಿಗಳು ಉಂಟಾಗುವ ಸ್ಥಿತಿ)ಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಿಮ್ಮ ಮೈಮೇಲಿರುವ ಮಚ್ಚೆಗಳ ಆಕಾರ ಅಥವಾ ಬಣ್ಣದಲ್ಲಿ ಏನಾದರೂ ಬದಲಾವಣೆಯಿದೆಯೇ ಎನ್ನುವುದನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *