ಇಂತಹ ಕಾಯಿಲೆಗಳು ನಿಮ್ಮಲ್ಲಿ ಇದ್ದರೆ ಖಂಡಿತವಾಗಿ ಬಾಳೆಹಣ್ಣು ತಿನ್ನಬೇಡಿ. ನಿಜಕ್ಕೂ ಅಚ್ಚರಿ ಆದರೆ ತಿಳಿದುಕೊಳ್ಳಿ!!!

ಆರೋಗ್ಯ

ನಮಸ್ತೇ ನಾಡಿನ ಸಮಸ್ತ ಕನ್ನಡಿಗರೇ ಬಾಳೆಹಣ್ಣು, ಬಾಳೆಹಣ್ಣು ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಇಷ್ಟವಾದ ಹಣ್ಣು ಅಂತ ಹೇಳಬಹುದು. ಇದು ಕಾಲಕ್ಕೆ ತಕ್ಕಂತೆ ಅಲ್ಲದೇ ವರ್ಷವಿಡೀ ಸಿಗುವ ಹಣ್ಣು ಆಗಿದೆ. ಈ ಹಣ್ಣನ್ನು ಎಲ್ಲರೂ ಇಷ್ಟ ಪಡುತ್ತಾರೆ ನಿಜ ಮಿತ್ರರೇ ಆದರೆ ಇಂತಹ ಕೆಲವು ಕಾಯಿಲೆಗಳು ನಿಮ್ಮಲ್ಲಿ ಕಂಡು ಬಂದಿದ್ದಾರೆ ಖಂಡಿತವಾಗಿ ಎಂದಿಗೂ ಬಾಳೆಹಣ್ಣು ಸೇವನೆ ಮಾಡಬೇಡಿ. ತುಂಬಾನೇ ಅಗ್ಗದ ಬೆಲೆಗೆ ಸಿಗುವ ಈ ಹಣ್ಣು ನಿಜಕ್ಕೂ ಅನೇಕ ಬಗೆಯ ಪೋಷಕಾಂಶಗಳನ್ನು ಮತ್ತು ಆರೋಗ್ಯಕರ ಗುಣಗಳನ್ನು ಹೊಂದಿದೆ. ಅನೇಕ ರೀತಿಯಲ್ಲಿ ಬಾಳೆಹಣ್ಣು ಔಷಧ ರೂಪದಲ್ಲಿ ಬಳಕೆ ಮಾಡಬಹುದು. ಅಷ್ಟೇ ಅಲ್ಲದೇ ಇದು ಹಸಿವನ್ನು ನೀಗಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಬಾಳೆಹಣ್ಣು ತಿನ್ನುವುದರಿಂದ ಕೆಲವೊಂದು ಅನಾರೋಗ್ಯದ ಸಮಸ್ಯೆಗಳಾದ ಮಲಬದ್ಧತೆ ಅಜೀರ್ಣತೆ ಅಸಿಡಿಟಿ ಗ್ಯಾಸ್ಟ್ರಿಕ್ ರಕ್ತದೊತ್ತಡ ರಕ್ತಹೀನತೆ ಸಮಸ್ಯೆಯಿಂದ ದೂರವಿರಬಹುದು.

 

ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ರಾತ್ರಿ ವೇಳೆಗೆ ಬಾಳೆಹಣ್ಣು ತಿನ್ನಬಹುದೇ? ಇದರಿಂದ ಆರೋಗ್ಯ ಹೆಚ್ಚುತ್ತದೆಯೇ ಅಥವಾ ಅನಾರೋಗ್ಯ ಹೆಚ್ಚುತ್ತದೆ ಅಂತ ತಿಳಿಯೋಣ ಬನ್ನಿ. ರಾತ್ರಿ ಊಟವಾದ ಮೇಲೆ ಒಂದು ಗಂಟೆ ಆದ ನಂತರ ಬಾಳೆಹಣ್ಣು ತಿನ್ನುವುದು ಒಳ್ಳೆಯದು ಇದರಿಂದ ತಿಂದ ಆಹಾರವೂ ಜೀರ್ಣವಾಗುತ್ತದೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ರಾತ್ರಿ ತಡವಾಗಿ ಬಾಳೆಹಣ್ಣು ತಿನ್ನಬಾರದು ಅಂದ್ರೆ ಊಟಕ್ಕೂ ಮುನ್ನವೇ ಬಾಳೆಹಣ್ಣು ತಿಂದ್ರೆ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ಅಷ್ಟೇ ಅಲ್ಲದೇ ಇದು ಬೇಗನೆ ಅರಗಿಸಿಕೊಳ್ಳಲು ಜೀರ್ಣ ಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ರಾತ್ರಿ ವೇಳೆಗೆ ಜೀರ್ಣಕ್ರಿಯೆಗೆ ರಸಾಯನ ಕ್ರಿಯೆಗೆ ಕಡಿಮೆ ಕೆಲಸವಿರುತ್ತದೆ. ಅದಕ್ಕಾಗಿ ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಹೊಟ್ಟೆ ತುಂಬಿದ ಹಾಗೆ ಆಗುತ್ತದೆ ಅದಕ್ಕಾಗಿ ತಿನ್ನಬೇಡಿ. ತಜ್ಞರು ಹೇಳುವ ಪ್ರಕಾರ ಯಾರಿಗೆ ಶೀತ ನೆಗಡಿ ಕೆಮ್ಮು ಇರುತ್ತದೆಯೋ ಅಂಥವರು ಸಿಟ್ರಿಕ್ ಅಂಶ ಇರುವ ಯಾವುದೇ ಹಣ್ಣುಗಳನ್ನು ತಿನ್ನಬಾರದು ಅಂತ ತಿಳಿಸಿದ್ದಾರೆ. ಇದರಿಂದ ರಾತ್ರಿವೇಳೆ ಗೆ ಸೋಂಕು ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಮಸ್ಯೆಗಳು ಇದ್ದವರು ಎಂದಿಗೂ ಬಾಳೆಹಣ್ಣು ತಿನ್ನಬೇಡಿ. ರಾತ್ರಿ ವೇಳೆ ಜೀರ್ಣ ಕ್ರಿಯೆ ತುಂಬಾನೇ ನಿಧಾನವಾಗಿ ನಡೆಯುತ್ತದೆ ಅದಕ್ಕಾಗಿ ನೀವು ರಾತ್ರಿ ಕಡಿಮೆ ಆಹಾರವನ್ನು ಸೇವಿಸಬೇಕು.

 

ಹಾಗೆಯೇ ರಾತ್ರಿ ಊಟದ ಮಧ್ಯ ಮತ್ತು ನಿದ್ದೆಯ ಮಧ್ಯೆ ಅಂತರ ಇಟ್ಟುಕೊಂಡರೆ ಉತ್ತಮ.ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿರುವ ಕಾರಣ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಇರುವುದರಿಂದ ದೇಹವು ಕಳೆದುಕೊಂಡ ಎಲ್ಲ ಶಕ್ತಿಯನ್ನು ಪೌಷ್ಟಿಕತೆ ಅನ್ನು ಮರಳಿ ನೀಡುತ್ತದೆ. ಚಿಕ್ಕ ಪುಟ್ಟ ಸಮಸ್ಯೆಗಳಾದ ನೆಗಡಿ ಶೀತ ಗಂಟಲು ಕಟ್ಟಿದ ಹಾಗೆ ಆಗುವುದು ಎಲ್ಲವನ್ನು ಕಡಿಮೆ ಮಾಡುತ್ತದೆ. ನೆಗಡಿ ಶೀತ ಜ್ವರ ಬಂದು ಎದೆಯಲ್ಲಿ ಕಫ ತುಂಬಿದ್ದರೆ ಖಂಡಿತವಾಗಿ ಬಾಳೇಹಣ್ಣು ತಿನ್ನಬೇಡಿ. ಇದರಿಂದ ದೂರವಿರಿ. ವೈದ್ಯರು ಹೇಳುವ ಪ್ರಕಾರ ಕಫದ ಸಮಸ್ಯೆ ಇದ್ದವರು ಬಾಳೇಹಣ್ಣು ಸೇವನೆ ಮಾಡಿದರೆ ಕಫ ಎದೆಯಲ್ಲಿ ಕಟ್ಟಿ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ ಅಂತ ತಿಳಿಸಿದ್ದಾರೆ ಆದ್ದರಿಂದ ಯಾರಿಗೆ ಕಫದ ಸಮಸ್ಯೆ ಇರುತ್ತದೆ ಅಂಥವರು ಎಂದಿಗೂ ಬಾಳೆಹಣ್ಣು ಹತ್ತಿರ ಕೂಡ ಸುಳಿಯಬೇಡಿ. ರಾತ್ರಿ ಬಾಳೇಹಣ್ಣು ತಿನ್ನುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಇದರಲ್ಲಿ ಇರುವ ನಾರಿನ ಅಂಶವೂ ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ ಜೊತೆಗೆ ಜೀರ್ಣಶಕ್ತಿ ಅನ್ನು ವೃದ್ಧಿಸುತ್ತದೆ. ಇದರಲ್ಲಿರುವ ಮ್ಯಾಗ್ನಿಷಿಯಂ ಅಂಶವು ಸೂಕ್ತವಾದ ಸುಖವಾದ ನಿದ್ರೆಗೆ ಪ್ರೇರೇಪಿಸುತ್ತದೆ. ಇದರಲ್ಲಿ ನೈಸರ್ಗಿಕವಾದ ಸಕ್ಕರೆಯ ಮಟ್ಟ ಇರುವುದರಿಂದ ಶುಗರ್ ಹೆಚ್ಚುತ್ತದೆ ಎಂಬ ಭಯವಿಲ್ಲ. ಆದರೆ ಶೀತ ನೆಗಡಿ ಸಮಸ್ಯೆ ಇದ್ದವರು ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ. ಶುಭದಿನ.

Leave a Reply

Your email address will not be published. Required fields are marked *