ಆಧುನಿಕ ಬದಲಾವಣೆ ಹೇಗೆ ಆಗುತ್ತಿದೆಯೋ ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತವಾದ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ. ಆದರೆ ಮೂಢನಂಬಿಕೆ ಮೌಢ್ಯ ಅನ್ನುವುದು ನಮ್ಮಲ್ಲಿ ಈಗಲೂ ಹರಿಯುತ್ತದೆ. ಜಗತ್ತು ಎಷ್ಟೇ ಎತ್ತರಕ್ಕೆ ಬೆಳೆದರು ಕೂಡ ಮೂಢನಂಬಿಕೆ ಅನ್ನುವುದು ಮಾನವನನ್ನು ಬಿಟ್ಟಿಲ್ಲ ಬಿಡುವುದಿಲ್ಲ. ಅದು ಆತನಲ್ಲಿ ಬೆಳೆಯುತ್ತಾ ಬಂದಿದೆ. ಯಡಿಯೂರು ಸಿದ್ಧಲಿಂಗೇಶ್ವರ ಸಮೀಪದ ಹಳ್ಳಿಯಲ್ಲಿ ಒಬ್ಬ ಮಹಿಳೆಯು ಗರಿಕೆಯ ಸಹಾಯದಿಂದ ಕಣ್ಣಿನಲ್ಲಿ ಬಿದ್ದ ಕಸ ಕಡ್ಡಿಯನ್ನು ತೆಗೆಯುತ್ತೇನೆ ಎಂದು ಜನರಲ್ಲಿ ಸುಳ್ಳು ನಂಬಿಕೆ ಮೂಡಿಸಿದ್ದಳು. ಇದು ಆಕೆಯ ವ್ಯಾಪಾರ ಅಂತ ಹೇಳಿದರೆ ತಪ್ಪಾಗಲಾರದು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾನೇ ವೈರಲ್ ಆಗಿರುವ ಒಂದು ಸಂಗತಿಯಾಗಿದೆ ಮಿತ್ರರೇ ಆದರೆ ಇದು ನಿಜಕ್ಕೂ ಸತ್ಯವೇ. ಆಕೆ ಹೇಳುವುದು ಸತ್ಯವೇ ಇದಕ್ಕೆ ದೃಷ್ಟಿ ತಜ್ಞರು ಏನು ಹೇಳುತ್ತಾರೆ ಈ ವಿಷಯವಾಗಿ ವೈದ್ಯರ ಅಭಿಪ್ರಾಯ ಆದರೂ ಏನು. ಇದರಲ್ಲಿ ಮೂಢನಂಬಿಕೆ ಅಥವಾ ವೈಜ್ಞಾನಿಕತೆ ಯಾವುದು ಗೆಲ್ಲುತ್ತದೆ ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.
ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯಕ್ಕೆ ನೀವು ಏನಾದರೂ ಭೇಟಿ ನೀಡಲು ಹೋದರೆ ಅಲ್ಲಿ ಕಾಳಮ್ಮ ಅಂತ ಹೆಂಗಸಿನ ಬಗ್ಗೆ ನೀವು ಯಾರನ್ನಾದರೂ ಕೇಳಿದರೆ ಮಾಹಿತಿ ನೀಡುತ್ತಾರೆ. ಈಕೆ ಅಮ್ಮ ಕಣ್ಣಿನಲ್ಲಿ ಬಿದ್ದ ಕಸ ಕಡ್ಡಿ ಕಲ್ಲುಗಳನ್ನು ಕೇವಲ ಗರಿಕೆಯ ಸಹಾಯದಿಂದ ನಿಮಗೆ ಯಾವುದೇ ರೀತಿಯ ನೋವು ಆಗದಂತೆ ನಿಧಾನವಾಗಿ ತೆಗೆಯುತ್ತಾರೆ ಅಂತೆ. ಇದಕ್ಕೆ ಅವರು ಒಬ್ಬ ವ್ಯಕ್ತಿಗೆ ಒಂದು ನೂರು ರೂಪಾಯಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ ಅಂತೆ. ಆದರೆ ನೀವು ವೈದ್ಯರ ಹತ್ತಿರ ಹೋಗಿ ಅವರು ನಿಮ್ಮಿಂದ ತುಂಬಾನೇ ಹಣವನ್ನು ಕಿತ್ತುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಕಣ್ಣಿನಲ್ಲಿ ಯಾವುದೇ ರೀತಿಯ ಪೊರೆ ಬೆಳೆಯುವುದಿಲ್ಲ. ತಕ್ಷಣವೇ ನಿಮಗೆ ತಲೆನೋವು ಕಡಿಮೆ ಆಗುತ್ತದೆ. ತಲೆಭಾರ ಆಗುವುದು ನಿಂತೆ ಹೋಗುತ್ತದೆ ಅಂತ ಈ ಕಾಳಮ್ಮ ಹೇಳುತ್ತಾಳೆ.
ಆದರೆ ನಮ್ಮ ನೇತ್ರ ತಜ್ಞರಾದ ಡಾ, ಹರೀಶ್ ಅವರ ಅಭಿಪ್ರಾಯವನ್ನು ಈ ವಿಷಯವಾಗಿ ನಾವು ಈಗ ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಗಾಳಿ ಮಳೆ ಧೂಳು ಬಂದಾಗ ಕಸ ಕಡ್ಡಿ ಕಲ್ಲುಗಳು ಕಣ್ಣಲ್ಲಿ ಬೀಳುವುದು ಸಹಜವಾಗಿದೆ. ಆಗ ನಾವು ತಕ್ಷಣವೇ ಕಣ್ಣುಗಳನ್ನು ಉಜ್ಜದೆ ನೀರಿನಲ್ಲಿ ಕಣ್ಣುಗಳನ್ನು ಚೆನ್ನಾಗಿ ತೊಳೆದುಕೊಂಡರೆ ಕಣ್ಣಿನಲ್ಲಿ ಇರುವ ಕಸ ಕಡ್ಡಿ ಕಲ್ಲುಗಳು ಎಲ್ಲವೂ ಹೊರಗೆ ಬರುತ್ತದೆ. ವೈದ್ಯರು ಏನು ಹೇಳುತ್ತಾರೆ ಅಂದ್ರೆ ಕಣ್ಣಿನಲ್ಲಿ ಯಾವುದೇ ವಸ್ತು ಬಿದ್ದರು ಕೂಡ ತಕ್ಷಣವೇ ಕಣ್ಣಿನಲ್ಲಿ ನೀರು ಬಂದು ಆ ವ್ಯಕ್ತಿ ಕಣ್ಣುಗಳನ್ನು ತಕ್ಷಣವೇ ಮುಚ್ಚಿಕೊಳ್ಳುತ್ತಾನೆ. ಆದರೆ ಈ ಕಾಳಮ್ಮ ಗರಿಕೆಯ ಸಹಾಯದಿಂದ ಕಣ್ಣಿನಲ್ಲಿ ಬಿದ್ದ ವಸ್ತುಗಳನ್ನು ತೆಗೆದರೆ ಕಣ್ಣಿಗೆ ಹಾನಿ ಆಗುವುದಿಲ್ಲವೇ, ಕಣ್ಣಿಗೆ ನೋವು ಆಗುವುದಿಲ್ಲವೇ. ಅನ್ನುವುದು ವೈದ್ಯರ ಪ್ರಶ್ನೆ ಆಗಿದೆ. ಇದಕ್ಕೆ ಉತ್ತರ ಏನೆಂದರೆ ಕಣ್ಣಿನಲ್ಲಿ ಎರಡು ಭಾಗಗಳಿಗೆ ಬಿಳಿ ಗುಡ್ಡೆ, ಕಪ್ಪು ಗುಡ್ಡೆ ಅಂತ. ಬಿಳಿ ಗುಡ್ಡೆಯ ಭಾಗಕ್ಕೆ ಸ್ಪರ್ಶ ಜ್ಞಾನ ತುಂಬಾನೇ ಕಡಿಮೆ ಇರುತ್ತದೆ. ಆದರೆ ಕಪ್ಪು ಗುಡ್ಡೆ ಭಾಗ ತುಂಬಾನೇ ಸೂಕ್ಷ್ಮವಾದದ್ದು.
ಈಕೆ ಏನು ಮಾಡುತ್ತಾಳೆ ಅಂದರೆ ವ್ಯಕ್ತಿಗೆ ಕಣ್ಣನ್ನು ಮೇಲೆ ಕೆಳಗೆ ಮಾಡು ಅಂತ ಹೇಳುವ ಮೂಲಕ ಕಪ್ಪು ಗುಡ್ಡೆಗೆ ತಾಗಿಸದೆ ಕೇವಲ ಬಿಳಿ ಗುಡ್ಡೆಗೆ ಗರಿಕೆಯನ್ನೂ ಸ್ಪರ್ಶ ಮಾಡಿ ಕಣ್ಣಿನಲ್ಲಿ ಬಿದ್ದ ಕಲ್ಲನ್ನು ತೆಗೆಯುತ್ತಾರೆ. ವೈದ್ಯ ಶಾಸ್ತ್ರದ ಪ್ರಕಾರ ಕಣ್ಣಿನಲ್ಲಿ ಅಷ್ಟೊಂದು ಕಲ್ಲುಗಳು ಇರುವುದಿಲ್ಲ ಇದ್ದರೂ ಕೂಡ ವ್ಯಕ್ತಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ. ಕಣ್ಣಿಗೆ ಏನಾದರೂ ಗಾಯವಾದರೆ ಹಾನಿಯಾದರೆ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲು ತುಂಬಾನೇ ಸಮಯ ಬೇಕಾಗುತ್ತದೆ ಇದು ಒಂದು ವೇಳೆ ಸರಿ ಹೋದರು ದೃಷ್ಟಿ ಮಾಂದ್ಯತೆ ಬರುತ್ತದೆ. ಅಷ್ಟೇ ಅಲ್ಲದೆ ಗರಿಕೆಯಿಂದ ಕಣ್ಣಿನಲ್ಲಿ ಬಿದ್ದ ಕಲ್ಲನ್ನು ತೆಗೆಯುವುದು ವೈದ್ಯಕೀಯ ಶಾಸ್ತ್ರ ಒಪ್ಪುವುದಿಲ್ಲ ಇದು ಇನ್ಫೆಕ್ಷನ್ ಆಗಿ ಪರಿವರ್ತನೆ ಆಗುತ್ತದೆ. ಹಾಗಾಗಿ ಕಣ್ಣಿನ ಬಗ್ಗೆ ನಾವು ತುಂಬಾನೇ ಸೂಕ್ಷ್ಮವಾದ ಜಾಗೃತೆ ತೆಗೆದುಕೊಳ್ಳಬೇಕು. ಶುಭದಿನ.