ನಮಸ್ತೇ ಪ್ರಿಯ ಸ್ನೇಹಿತರೆ, ಗೆಲುವಿನ ಮೊದಲ ಹೆಜ್ಜೆಯೇ ಆತ್ಮವಿಶ್ವಾಸ. ಆತ್ಮವಿಶ್ವಾಸ ಒಂದಿದ್ದರೆ ಎಂತಹ ಗುರಿಯನ್ನು ಕೂಡ ಸಾಧಿಸಬಹುದು. ಈ ಆತ್ಮವಿಶ್ವಾಸ ಅನ್ನುವುದು ಸರಿಯಾದ ಮಾರ್ಗದಲ್ಲಿ ಬಳಕೆಯಾಗಲೂ ನಮಗೆ ಮುಖ್ಯವಾಗಿ ಬೇಕಾಗಿರುವುದು ವಿದ್ಯೆ. ವಿದ್ಯೆ ನಮ್ಮ ಹತ್ತಿರ ಇದ್ದರೆ ಇಡೀ ಜಗತ್ತನ್ನೇ ನಾವು ನಮ್ಮ ಕೈಯಲ್ಲಿ ಆಡಿಸಬಹುದು. ವಿದ್ಯೆ ಎಂಬ ಆಯುಧ ಜೀವನವನ್ನು ಹಸನಾಗಿಸುವಲ್ಲಿ ಒಂದಲ್ಲ ಸಾವಿರ ದಾರಿಗಳನ್ನು ತೋರಿಸುತ್ತದೆ. ಹೌದು ವಿದ್ಯೆ ಅಂದರೆ ಕೇವಲ ನಾಲ್ಕು ಅಕ್ಷರಗಳನ್ನು ಕಲಿತು ಜ್ಞಾನವನ್ನು ಬೆಳೆಸಿಕೊಳ್ಳಲು ಕಲಿಯುವುದು ಅಲ್ಲ ಗೆಳೆಯರೇ, ವಿದ್ಯೆಯೇ ಬೇರೆ? ವಿದ್ಯೆಯ ಲಕ್ಷಣಗಳು ಬೇರೆ, ಹೌದು ವಿದ್ಯೆಯ ಅದ್ಭುತವಾದ ವಿಶೇಷವಾದ ಗುಣವೆಂದರೆ ಅದು ವ್ಯಕ್ತಿಯ ಜೀವನವನ್ನೇ ಮಾತ್ರ ಬದಲಾಯಿಸುವುದರ ಜೊತೆಗೆ ಒಂದು ದೇಶದ ಬೆಳವಣಿಗೆ ಮತ್ತು ಸಂಸ್ಕಾರವನ್ನು ಒಳಗೊಂಡಿರುತ್ತದೆ. ವಿದ್ಯೆ ಎಂದರೆ ನಮ್ಮ ಬದುಕು ಹಾಗೂ ದೇಶದ ಸಂಪತ್ತು ಹಾಗೆಯೇ ಉತ್ತಮವಾದ ಸಂಸ್ಕಾರವೂ ಹೌದಾಗಿದೆ. ವಿದ್ಯೆಯ ತಾಯಿ ಸರಸ್ವತಿ ದೇವಿ ಎಲ್ಲರಿಗೂ ಒಂದೇ ಹಾಗೂ ಸಮಾನಳು. ವಿದ್ಯೆ ಕಲಿಯಲು ಯಾವುದೇ ಜಾತಿಯ ಅಂತರವಿಲ್ಲ, ಬಡವ ಶ್ರೀಮಂತ ಅನ್ನುವ ಬೇಧಭಾವ ಇಲ್ಲ ಗೆಳೆಯರೇ, ಕಲಿಯುವ ಛಲವಿದ್ದರೆ ಎಲ್ಲಿಯಾದರೂ ಸರಿಯೇ ಹೇಗಾದರೂ ಸರಿಯೇ ನಾನು ಕಲಿಯುತ್ತೇವೆ ಅನ್ನುವ ಭಾವನೆ ಮೂಡುತ್ತದೆ. ಅಂಥಹ ಅದ್ಭುತವಾದ ವ್ಯಕ್ತಿಗಳಲ್ಲಿ ಹಾಲು ಮಾರುವವನ ಮಗಳು ತನ್ನ ಆಸೆಗಳನ್ನು ಕನಸುಗಳನ್ನು ಪೂರೈಸಿಕೊಳ್ಳಲು ದನದ ಕೊಟ್ಟಿಗೆಯಲ್ಲಿ ಕುಳಿತು ಓದಿದ್ದಾಳೆ. ಅವಳ ಈ ಹರಸಾಹಸಕ್ಕೇ ಒಂದು ಮೆಚ್ಚುಗೆ ಇರಲಿ ಗೆಳೆಯರೇ. ಹಾಗಾದರೆ ಆಕೆಯ ಬಗ್ಗೆಯ ಸಂಪೂರ್ಣವಾದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಗೆಳೆಯರೇ ಬನ್ನಿ. ಈ ಮಹಿಳೆಯ ಮೂಲ ರಾಜಸ್ಥಾನದ ಉದಯಪುರ. ಈಕೆಯೂ ಹಾಲು ಮಾರುವವನ ಮಗಳಾಗಿ ಜನಸಿದ್ದು ತನ್ನ ಸ್ವಂತ ಸಾಮರ್ಥ್ಯದಿಂದ ಶಕ್ತಿಯಿಂದ ಉನ್ನತವಾದ ಹುದ್ದೆಯನ್ನು ಪಡೆಯಲು ಸಜ್ಜಾಗಿದ್ದಾರೆ.
ಈ ಯುವತಿಯ ಹೆಸರು ಸೋನಲ್ ಶರ್ಮಾ. ಇವರು 2018ರಲ್ಲಿ ರಾಜಸ್ಥಾನ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದು, ಈಗ ನ್ಯಾಯಾಧೀಶೆಯಾಗಲು ಹೊರಟಿದ್ದಾರೆ. ತನ್ನ ಎಳೆ ವಯಸ್ಸಿನಲ್ಲಿಯೇ ಅವರು ಸಾಕಷ್ಟು ಕಷ್ಟಗಳನ್ನು ಸಮಸ್ಯೆಗಳನ್ನು ಎದುರಿಸತ್ತಲೇ ಜೀವನವನ್ನು ಕಳೆದಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಕಷ್ಟಪಟ್ಟು ಓದಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಇವರು ಗೋಶಾಲೆಯಲ್ಲಿ ಕುಳಿತು ಬಿ, ಎ, ಎಲ್,ಎಲ್, ಬಿ ಮತ್ತು ಎಲ್.ಎಲ್.ಎಂ ಪದವಿಯನ್ನು ಓದಿದರು. ಪ್ರಥಮ ಸ್ಥಾನವನ್ನು ಕೂಡ ಪಡೆದು ಹೆಮ್ಮೆಯ ವಿಷಯಕ್ಕೆ ಪಾತ್ರರಾದರು. ಇವರು ಬರೆದ ನ್ಯಾಯಾಂಗದ ಫಲಿತಾಂಶವೂ ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಕಟವಾಗಿತ್ತು. ರಾಜಸ್ಥಾನದ ನ್ಯಾಯಾಲಯವೊಂದರಲ್ಲಿ ಸೋನಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗುತ್ತಿದ್ದಾರೆ. ಆದರೆ ಫೈನಲ್ ಲಿಸ್ಟ್ ನಲ್ಲಿ ಹೆಸರು ಇರಲಿಲ್ಲ. ಇವರನ್ನು ವೇಟಿಂಗ್ ಲಿಸ್ಟ್ನಲ್ಲಿ ಇರಿಸಲಾಗಿತ್ತು. ಏಕೆಂದರೆ ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆ ನೀಡಲಾಗಿತ್ತು. ಆದರೆ ಈ ಹಿಂದೆ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳು ಅವರ ಸರ್ವಿಸ್ ಗೆ ಹಾಜರು ಆಗಲಿಲ್ಲ.
ಆದ್ದರಿಂದ ಸೋನಲ್ ಗೆ ಉಳಿದಿರುವ ಸೀಟುಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಈ ಮಾಹಿತಿ ತಿಳಿದ ತಕ್ಷಣವೇ ಅವರು ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದರು ತದ ನಂತರ ಹೈಕೋರ್ಟ್ ಸೋನಲ್ ಅವರ ಹೆಸರನ್ನು ಫೈನಲ್ ಲಿಸ್ಟ್ ನಲ್ಲಿ ಹೆಸರು ಸೇರ್ಪಡೆ ಮಾಡಲಾಯಿತು ಸೋನಲ್ ಅವರ ಕುಟುಂಬ ತುಂಬಾನೇ ಆರ್ಥಿಕವಾಗಿ ಕಡುಬಡವರು ಆಗಿದ್ದರು. ಇವರಿಗೆ ಆಕೆಯ ಟ್ಯೂಷನ್ ಫೀಸ್ ಕೂಡ ಭರಿಸಲು ಆಗುತ್ತಿರಲಿಲ್ಲ. ಆದ್ದರಿಂದ ಈಕೆ ಸ್ವತಃ ಅಧ್ಯಯನವನ್ನು ಮಾಡಿದರು. ಈಕೆ ಕಾಲೇಜ್ ಗೆ ಸೈಕಲ್ ನಲ್ಲಿ ಹೋಗುತ್ತಿದ್ದಳು. ಮತ್ತು ಅಧ್ಯಯನ ಮಾಡುತ್ತಾ ಗೋಶಾಲೆಯಲ್ಲಿ ಇರುವ ದನಕರುಗಳ ಆರೈಕೆ ಮಾಡುತ್ತಾ ಕೆಲಸಗಳನ್ನು ಮಾಡುತ್ತಿದ್ದಳು. ಗೋಶಾಲೆ ಮೂಲೆಯಲ್ಲಿ ಪ್ಲ್ಯಾಸ್ಟಿಕ್ ಡಬ್ಬದ ಮೇಲೆ ಕುಳಿತು ಅಧ್ಯಯನವನ್ನು ನಡೆಸುತ್ತಿದ್ದರು. ಅವರ ತಂದೆ ಚಪ್ಪಲಿಗಳು ಸಗಣಿಯಿಂದ ಕೂಡಿದ್ದು ಅವರನ್ನು ಚೆನ್ನಾಗಿ ಓದಿಸಿರುವುದಕ್ಕೆ ನನ್ನ ತಂದೆ ತಾಯಿ ಕಾರಣ ಅಂತ ಹೆಮ್ಮೆಯಿಂದ ಸೋನಲ್ ಅವರು ಹೇಳುತ್ತಾರೆ. ಸಂಪನ್ಮೂಲಗಳ ಕೊರತೆ ಇದ್ದರೂ ಕೂಡ ಗುರಿಯತ್ತ ಸಾಗುವ ಪ್ರಯತ್ನದಲ್ಲಿ ಯಶಸ್ಸು ಪಡೆದಿರುವ ಸೋನಾಲ್ ಹಲವಾರು ಜನರಿಗೆ ಸ್ಪೂರ್ತಿ ಮಾರ್ಗದಾಯಕ.