ನಮಸ್ತೆ ಪ್ರಿಯ ಓದುಗರೇ, ಉಪ್ಪು ಬೆರೆಸಿದ ನೀರು ಆಯಸ್ಸು ನೂರು ಅನ್ನುವ ಗಾದೆಮಾತು ಇದೆ ಮಿತ್ರರೇ. ಸಾಮಾನ್ಯವಾಗಿ ರೋಗಗಳು ಬರುವುದು ಹೊಟ್ಟೆಯಿಂದಲೇ ಹೀಗಾಗಿ ನಾವು ಇದರ ಬಗ್ಗೆ ತುಂಬಾನೇ ಕಾಳಜಿ ವಹಿಸಬೇಕು. ನಿಮಗೆ ಒಂದು ತಿಳಿಸುವ ಸಂಗತಿ ಏನೆಂದರೆ ಜಪಾನ್ ದೇಶದಲ್ಲಿ ಜನರು ಬೆಳಿಗ್ಗೆ ಎದ್ದು ತಕ್ಷಣ ನಾಲ್ಕು ಲೋಟ ನೀರನ್ನು ಕುಡಿಯುತ್ತಾರೆ ಅಂತೆ ಮಿತ್ರರೇ. ಇದರಿಂದಾಗಿ ಅವರ ದೇಹದಲ್ಲಿ ಬೊಜ್ಜು ಇರುವುದಿಲ್ಲ. ಆ ದೇಶದಲ್ಲಿ ಬೊಜ್ಜು ಹೊಂದಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಅಂತ ಹೇಳಿದರೆ ತಪ್ಪಾಗಲಾರದು. ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಜನರು ಬೆಳಿಗ್ಗೆ ಎದ್ದು ತಕ್ಷಣ ನಿತ್ಯಕರ್ಮಗಳನ್ನು ಮಾಡಿ ನೇರವಾಗಿ ಆಹಾರವನ್ನು ಮಾಡಲು ಕುಳಿತುಕೊಳ್ಳುತ್ತಾರೆ. ಆದರೆ ಅವರಿಗೆ ಈ ಮಾಹಿತಿ ಗೊತ್ತೇ ಇಲ್ಲ. ಉಪಹಾರವನ್ನು ಮಾಡುವ ಮುನ್ನ ನಾವು ಬೆಳಿಗ್ಗೆ ಎದ್ದು ತಕ್ಷಣ ಎರಡು ಅಥವಾ ಮೂರು ಲೋಟ ನೀರು ಕುಡಿಯಬೇಕು ಅಂತ. ಹೀಗಾಗಿ ಅವರ ಆರೋಗ್ಯ ಹದಗೆಡುವುದರಲ್ಲಿ ಯಾವುದೇ ತಪ್ಪಿಲ್ಲ ಮಿತ್ರರೇ. ಹಾಗಾದರೆ ಇಂದಿನ ಲೇಖನದಲ್ಲಿ ಬೆಳಿಗ್ಗೆ ಎದ್ದು ತಕ್ಷಣ ನೀರು ಕುಡಿರುವುದರಿಂದ ಯಾವೆಲ್ಲ ರೋಗಗಳಿಗೆ ರಾಮಬಾಣ ಅಂತ ತಿಳಿದುಕೊಳ್ಳೋಣ ಬನ್ನಿ.
ನೀರನ್ನು ನಾವು ಜೀವಜಲ ಅಂತ ಕರೆಯುತ್ತೇವೆ ಏಕೆಂದರೆ ನಾವು ಆಹಾರವನ್ನು ಬಿಟ್ಟು ಬದುಕಬಹುದು ಆದರೆ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ದಿನವೂ ಸಾಕಷ್ಟು ನೀರು ಕುಡಿದರೂ ಕಡಿಮೆ ಅಂತ ಹೇಳುತ್ತಾರೆ ವೈದ್ಯರು. ಬೆಳಿಗ್ಗೆ ಎದ್ದು ತಕ್ಷಣ ನೀರು ಕುಡಿರುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿದುಕೊಂಡರೆ ನೀವು ಆಶ್ಚರ್ಯ ಚಕಿತರು ಆಗುತ್ತೀರಿ. ಮೊದಲಿಗೆ ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೊರಗೆ ಹಾಕುತ್ತದೆ. ಅಂದ್ರೆ ರಾತ್ರಿ ನಾವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ. ಹೀಗಾಗಿ ಬೆಳಿಗ್ಗೆ ಎದ್ದು ನೀರು ಕುಡಿಯುವುದರಿಂದ ಅದು ಮಲಮೂತ್ರ ವಿಸರ್ಜನೆ ಮೂಲಕ ಹೊರಗೆ ಹೋಗಿ ನಮ್ಮ ಜೀರ್ಣಾಂಗವ್ಯೂಹವನ್ನು ಸ್ವಚ್ಛ ಮಾಡುತ್ತದೆ. ಇದರಿಂದ ಮೈ ಮನಸ್ಸು ಮತ್ತು ಆರೋಗ್ಯ ತುಂಬಾನೇ ಚೆನ್ನಾಗಿ ಇರುತ್ತದೆ.ನಿತ್ಯವೂ ಬಹಳಷ್ಟು ನೀರು ಕುಡಿಯುವುದರಿಂದ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿ ಆಗುತ್ತದೆ. ಜೀವಕೋಶಗಳಿಗೆ ಸ್ನಾಯುಗಳಿಗೆ ಹೊಸ ಜೀವ ಬಂದಂತೆ ಆಗುತ್ತದೆ. ಒಳ್ಳೆಯ ಜೀರ್ಣ ಶಕ್ತಿ ಪಡೆಯಬೇಕಾದರೆ ನಿತ್ಯವೂ ಹೆಚ್ಚಾಗಿ ನೀರು ಕುಡಿಯುತ್ತಾ ಬನ್ನಿ. ಬೆಳಿಗ್ಗೆ ಎದ್ದು ನೀರು ಕುಡಿಯುವುದರಿಂದ ದೊಡ್ಡಕರುಳು ಆಹಾರವನ್ನು ಚೆನ್ನಾಗಿ ಹೀರಿಕೊಂಡು ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಇನ್ನೂ ನೀವು ನಿತ್ಯವೂ ಬೆಳಿಗ್ಗೆ ಎದ್ದು ನೀರು ಕುಡಿಯುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಅನಾವಶ್ಯಕವಾಗಿ ತಿಂದು ಬೊಜ್ಜು ಕೊಬ್ಬು ಬೆಳೆಸಿಕೊಳ್ಳುವವರಿಗೆ ಇದು ತುಂಬಾನೇ ಸುಲಭವಾದ ಮಾರ್ಗವಾಗಿದೆ. ಇನ್ನೂ ಬೆಳಿಗ್ಗೆ ಎದ್ದು ನೀರು ಕುಡಿಯುವುದರಿಂದ ಅಜೀರ್ಣತೆ ಇಂದ ಮುಕ್ತಿ ಸಿಗುತ್ತದೆ ಎದೆ ಉರಿ ಎಲ್ಲವೂ ಮಾಯವಾಗುತ್ತದೆ. ಇನ್ನೂ ಮೈ ಬಣ್ಣ ಮುಖದ ಬಣ್ಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದರೆ ಚರ್ಮವು ಸುಂಕು ಗಟ್ಟುತ್ತದೆ. ಇದಕ್ಕೆ ನೀವು ತುಂಬಾನೇ ನೀರು ಕುಡಿಯುವುದರಿಂದ ನಿಮ್ಮ ಚರ್ಮವು ಹೊಳೆಯುತ್ತದೆ. ಹಾಗೆಯೇ ಅಲ್ಲಲ್ಲಿ ಬೆಳೆಯುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ. ಮೈಯಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ಇದು ಕೂದಲಿನ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಇದರಿಂದ ಕೂದಲು ತುಂಬಾನೇ ಉದುರುತ್ತವೆ. ಇದಕ್ಕೆ ಪರಿಹಾರ ನಿತ್ಯವೂ ಸಾಕಷ್ಟು ಕನಿಷ್ಠ ಎಂಟು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ಕೂದಲಿಗೆ ಮರುಜೀವ ಬರುತ್ತದೆ. ಬೆಳಿಗ್ಗೆ ಎದ್ದು ತಕ್ಷಣ ನೀರು ಕುಡಿರುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಬಹುದು. ಅಷ್ಟೇ ಅಲ್ಲದೇ ಬೆಳಿಗ್ಗೆ ಎದ್ದು ತಕ್ಷಣ ನೀರು ಕುಡಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ನಾವು ತುಂಬಾನೇ ಶಕ್ತಿಯಾಗಿ ಬಲವಾಗಿ ಇರುತ್ತೇವೆ. ಎಷ್ಟೊಂದು ಲಾಭಗಳು ಇವೆ ಅಂತ ಗೊತ್ತಾಗಿದೆ ಅಲ್ವಾ ಮಿತ್ರರೇ. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.