ನಮಸ್ತೆ ಪ್ರಿಯ ಓದುಗರೇ, ಮಲಬದ್ಧತೆ ಅನ್ನುವುದು ಜೀರ್ಣಕ್ರಿಯೆಗೆ ಸಂಭಂದಪಟ್ಟ ಕಾಯಿಲೆಯಾಗಿದೆ. ಇದು ಚಿಕ್ಕವರಿಂದ ದೊಡ್ಡವರೆಗೆ ಎಲ್ಲರಲ್ಲಿಯೂ ಕೂಡ ಕಾಡುವ ಸಮಸ್ಯೆ ಆಗಿದೆ. ಕೆಲವರಿಗೆ ಈ ಸಮಸ್ಯೆ ಇದ್ದರೂ ಕೂಡ ಅವರು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಜೊತೆಗೆ ನಿರಾಕರಣೆ ಮಾಡುತ್ತಾರೆ. ಆದರೆ ನಮ್ಮ ಆಯುರ್ವೇದದಲ್ಲಿ ಮಲಬದ್ಧತೆಯೇ ಎಲ್ಲ ಕಾಯಿಲೆಗಳಿಗೆ ಸರ್ವ ರೋಗ ಕಾರಣ ಅಂತ ಹೇಳಲಾಗುತ್ತದೆ. ಸಾಮಾನ್ಯವಾಗಿ ಮಲಬದ್ಧತೆ ಅನ್ನುವುದು ನಾವು ಸೇವಿಸುವ ಆಹಾರದಲ್ಲಿ ನಾರಿನ ಅಂಶ ಕಡಿಮೆ ಇರುವುದರಿಂದ ಈ ಸಮಸ್ಯೆಯಿಂದ ನಾವು ಬಾಧೆ ಪಡಬೇಕಾಗುತ್ತದೆ. ಮಲಬದ್ಧತೆ ಅನ್ನುವ ಸಮಸ್ಯೆಯು ನಮ್ಮ ಜೀರ್ಣ ಕ್ರಿಯೆಯ ಪ್ರಕ್ರಿಯೆ ಸರಿಯಾಗಿ ಆಗದೆ ಇದ್ದಾಗ ಸೇವಿಸಿದ ಆಹಾರವು ದೊಡ್ಡ ಕರುಳಿನಲ್ಲಿ ಸಿಕ್ಕಿಕೊಂಡು ಮಲ ಅನ್ನುವುದು ಹೊರಗೆ ಸರಿಯಾಗಿ ಹೋಗುವುದಿಲ್ಲ. ಇದನ್ನು ನಾವು ಮಲಬದ್ಧತೆ ಅಂತ ಕರೆಯುತ್ತೇವೆ. ಮಲಬದ್ಧತೆ ಅನ್ನುವುದು ಇದು ದಿನನಿತ್ಯದ ಕರ್ಮಗಳಲ್ಲಿ ಒಂದಾಗಿದೆ. ಕೆಲವರು ವಾರದಲ್ಲಿ ಮೂರು ದಿನಕ್ಕೆ ಮಲ ವಿಸರ್ಜನೆಗೆ ಹೋದರೆ, ಇನ್ನೂ ಕೆಲವರು ನಾಲ್ಕು ದಿನಕ್ಕೆ. ಹೀಗೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಅವರ ದೇಹಕ್ಕೆ ಅನುಗುಣವಾಗಿ ಅವರು ಸೇವಿಸಿದ ಆಹಾರದ ಮೇಲೆ ಅವಲಂಬಿತವಾಗಿ ಇರುತ್ತದೆ.
ಆದರೆ ಯಾವ ವ್ಯಕ್ತಿ ನಿತ್ಯವೂ ಮಲ ವಿಸರ್ಜನೆಗೆ ಹೋಗುತ್ತಾನೆ ಅವನು ತುಂಬಾನೇ ಆರೋಗ್ಯವಾಗಿ ಇರುತ್ತಾನೆ ಅಂತ ವೈದ್ಯರು ಹೇಳುತ್ತಾರೆ. ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡದೇ ಇದ್ದರೆ ಇನ್ಯಾವ ಸಮಸ್ಯೆಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಇನ್ನೂ ಈ ಮಲಬದ್ಧತೆ ಸಮಸ್ಯೆ ಅನ್ನುವುದು ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಅಂದರೆ ವಯಸ್ಸಾದವರಲ್ಲಿ, ಮಹಿಳೆಯರಲ್ಲಿ, ಜೀರ್ಣಕ್ರಿಯೆ ತೊಂದರೆ ಇದ್ದವರಿಗೆ, ದೈಹಿಕ ಚಟುವಟಿಕೆ ಹೊಂದಿಲ್ಲದೆ ಇರುವವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ಹಣ್ಣು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳಬಹುದು ಅಂತ ತಿಳಿಯೋಣ. ದೈವ ನಿರ್ಮಿತವಾದ ಹಣ್ಣುಗಳು ಮಲಬದ್ಧತೆಗೆ ಹೇಗೆ ಪರಿಹಾರ?ನಮ್ಮ ದೇಹವು ವಾತ ಪಿತ್ತ ಕಫ ಈ ಮೂರು ಕಾರಕ ಅಥವಾ ದೋಷಗಳಿಂದ ಕೂಡಿದೆ. ಈ ಮೂರು ಅಂಶಗಳನ್ನು ಒಳಗೊಂಡಿರುವ ಹಣ್ಣುಗಳನ್ನು ನಾವು ತಿನ್ನುವುದರಿಂದ ಮಲಬದ್ಧತೆ ಅನ್ನುವುದು ನಿವಾರಣೆ ಆಗುತ್ತದೆ. ಆ ಹಣ್ಣುಗಳಲ್ಲಿ ಮೊದಲನೆಯ ಹಣ್ಣು ಪೇರಲೆ ಹಣ್ಣು. ಇದನ್ನು ಸೀಬೆ ಹಣ್ಣು, ಪ್ಯಾರಲೆ ಹಣ್ಣು ಕೆಲವರು ಗೋವ್ವಾ ಅಂತ ಕೂಡ ಇದನ್ನು ಕರೆಯುತ್ತಾರೆ. ಈ ಹಣ್ಣನ್ನು ನೀವು ರಾತ್ರಿ ಮಲಗುವ ವೇಳೆಗೆ ಸೇವನೆ ಮಾಡಬೇಕು. ಇದರಿಂದ ನಿಮಗೆ ಮಾರನೆಯ ದಿನ ಮಲ ಬೇಗನೆ ಹೊರಗೆ ಹೋಗುತ್ತದೆ.
ನಿಮ್ಮ ಹೊಟ್ಟೆ ಮತ್ತು ನಿಮ್ಮ ಕರುಳು ಪೂರ್ತಿಯಾಗಿ ಸ್ವಚ್ಛವಾಗುತ್ತದೆ. ಹೊಟ್ಟೆ ಖಾಲಿಯಾಗಿ ಸ್ವಚ್ಛವಾಗಿ ಇದ್ದರೆ ನೀವು ಉಲ್ಲಾಸದಾಯಕವಾಗಿ ಕೆಲಸಗಳನ್ನು ಮಾಡಬಹುದು. ಇದರಿಂದ ನಿಮಗೆ ಇನ್ನಷ್ಟು ಬರುವ ಕಾಯಿಲೆಗಳು ಕೂಡ ನಿಮ್ಮ ಹತ್ತಿರ ಬರುವುದಿಲ್ಲ. ಮಲ ವಿಸರ್ಜನೆ ಸರಿಯಾಗಿ ಆದರೆ ನಾವು 196 ಕಾಯಿಲೆಯಿಂದ ಮುಕ್ತಿಯನ್ನು ಪಡೆಯಬಹುದು. ಇನ್ನೂ ಎರಡನೆಯದು ಬೆಳಗಿನ ಜಾವದಲ್ಲಿ ನೀವು ಒಂದು ಪೂರ್ತಿ ಪಪ್ಪಾಯಿ ಹಣ್ಣು ತಿನ್ನಬೇಕು. ತದ ನಂತರ ಒಂದು ಅಥವಾ ಎರಡು ಗಂಟೆ ಬಿಟ್ಟು ನೀವು ಉಪಹಾರ ಮಾಡಬೇಕು. ಹೀಗೆ ನೀವು 21 ದಿನಗಳವರೆಗೆ ಮಾಡುತ್ತಾ ಬಂದರೆ ನಿಮಗೆ ಮಲಬದ್ಧತೆ ಸಮಸ್ಯೆ ಅನ್ನುವುದು ಸೂಕ್ತ ನಿವಾರಣೆಗೆ ಒಳ ಪಡುತ್ತದೆ. ಆದರೆ ಈ ರೀತಿ ನೀವು ಮಾಡುವಾಗ ಯಾವುದೇ ಬೇಕರಿ ಉತ್ಪನ್ನಗಳನ್ನು,ಕರಿದ ತಿಂಡಿಗಳನ್ನು, ಪಿಜ್ಜಾ, ಬರ್ಗರ್, ಬಜ್ಜಿ, ಬೋಂಡಾ ಇನ್ನಿತರ ಪದಾರ್ಥಗಳನ್ನು ತಿನ್ನಬಾರದು. ನಾವು ನಮ್ಮ ಅರೋಗ್ಯದ ಬಗ್ಗೆ ಕಾಳಜಿಯನ್ನು ಮಾಡುವುದು ತುಂಬಾನೇ ಮುಖ್ಯ. ಈ ಹಣ್ಣುಗಳ ಜೊತೆಗೆ ನೀವು ಹೆಚ್ಚು ಹೆಚ್ಚು ನೀರು ಕುಡಿಯುತ್ತಾ ಬನ್ನಿ. ಇದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ಅನ್ನುವುದು ಸಂಪೂರ್ಣವಾಗಿ ನಾಶವಾಗುತ್ತದೆ. ಶುಭದಿನ.